For Quick Alerts
ALLOW NOTIFICATIONS  
For Daily Alerts

  ಎಡೆಬಿಡದೆ ಕಾಡುವ ಇಂತಹ ನೋವನ್ನು ಮಾತ್ರ ನಿರ್ಲಕ್ಷಿಸಬೇಡಿ!

  By manu
  |

  ಕೆಲವೊಮ್ಮೆ ನಮಗೆ ಅಸಾಧ್ಯವಾದ ತಲೆನೋವು ಅಥವಾ ದೇಹದ ಯಾವುದೋ ಒಂದು ಭಾಗದಲ್ಲಿ ತೀವ್ರತರದ ನೋವು ಕಾಣಿಸಿಕೊಳ್ಳುತ್ತದೆ. ತಕ್ಷಣಕ್ಕೆ ನಮಗೆ ನೆನಪಿಗೆ ಬರುವುದು ನೋವು ನಿವಾರಕ ಗುಳಿಗೆಗಳು. ನಾವೆಲ್ಲಾ ಒಂದು ಮಾತ್ರೆಯನ್ನು ತೆಗೆದುಕೊಂಡು ನೋವು ಕಡಿಮೆಯಾಗುತ್ತದೆಯೋ ಎಂದು ಕಾಯುತ್ತೇವೆ. ನೋವು ಕಡಿಮೆಯೇ ಆಗದಿದ್ದರೆ ಮಾತ್ರ ವೈದ್ಯರ ಬಳಿ ಧಾವಿಸುತ್ತೇವೆ. ನೋವು ಕಡಿಮೆಯಾದರೆ ಈ ಮಾತ್ರೆಯಿಂದಲೇ ಕಡಿಮೆಯಾಯಿತು, ಮತ್ತೇಕೆ ಸುಮ್ಮನೆ ವೈದ್ಯರ ಬಳಿ ಹೋಗುವುದು ಎಂಬ ಉದಾಸೀನದಿಂದ ಹಾಗೇ ಇದ್ದುಬಿಡುತ್ತೇವೆ.   ನೋವು ನಿವಾರಕ ಮಾತ್ರೆ ಪಕ್ಕಕ್ಕಿಡಿ, ಮನೆಮದ್ದು ಪ್ರಯತ್ನಿಸಿ

  ಒಂದು ವೇಳೆ ಈ ಮಾತ್ರೆಗೆ ಬಗ್ಗಿದ ಅದೇ ನೋವು ಮತ್ತೊಮ್ಮೆ ಬಂದರೆ? ಆಗಲೂ ಮಾತ್ರೆ ತಿಂದ ಬಳಿಕ ಕಡಿಮೆಯಾದರೂ ಮತ್ತೊಮ್ಮೆ ಮಗದೊಮ್ಮೆ ಮರುಕಳಿಸಿದರೆ? ಆಗ ಮಾತ್ರ ಈ ನೋವಿಗೆ ನಿಜವಾದ ಕಾರಣ ಅರಿಯಲು ವೈದ್ಯರ ಬಳಿ ಹೋಗುವುದು ಅನಿವಾರ್ಯ. ಏಕೆಂದರೆ ಈ ನೋವುಗಳೆಲ್ಲಾ ನಮ್ಮ ದೇಹದ ಯಾವುದೋ ಅಂಗದಲ್ಲಿ ಅಥವಾ ವ್ಯವಸ್ಥೆಯಲ್ಲಿ ಆಗಿರುವ ತೊಂದರೆಗಳ ಸೂಚನೆಗಳಾಗಿವೆ. ಅಷ್ಟಕ್ಕೂ ನೋವು ನಿವಾರಕಗಳ ಕೆಲಸವೇನು ಗೊತ್ತೇ?  ಆರೋಗ್ಯಕಾರಿ ಟಿಪ್ಸ್: ಕಾಡುವ ಮೈ ಕೈ ನೋವಿಗೆ ಅಕ್ಕಿ ರೆಸಿಪಿ!

  ಇವು ನೋವನ್ನು ಕಡಿಮೆ ಮಾಡುವುದಿಲ್ಲ, ಬದಲಿಗೆ ನೋವಿನ ಸೂಚನೆಗಳನ್ನು ಮೆದುಳಿಗೆ ಸಾಗಿಸದಂತೆ ಮಧ್ಯೆ ತಡೆಯುತ್ತವೆ ಅಷ್ಟೇ. ಆದರೆ ವೈದ್ಯರು ಇಂತಹ ನೋವುಗಳಿಗೆ ಸರಿಯಾದ ಕಾರಣಗಳನ್ನು ಊಹಿಸಬಲ್ಲರು. ಕೆಲವು ತಪಾಸಣೆಗಳ ಮೂಲಕ ಇದರ ಕಾರಣವನ್ನು ಖಚಿತಪಡಿಸಿಕೊಂಡು ಮುಂದಿನ ಚಿಕಿತ್ಸೆಗೆ ಸೂಕ್ತ ಔಷಧಿಗಳನ್ನು ವೈದ್ಯರೇ ಸೂಚಿಸುತ್ತಾರೆ. ಆದ್ದರಿಂದ ನಮಗೆ ಎದುರಾಗುವ ಕೆಲವು ನೋವುಗಳನ್ನು ಎಂದಿಗೂ ಕಡೆಗಣಿಸದೇ ಇದರ ಬಗ್ಗೆ ಚಿಕ್ಕದಾದರೂ ಸರಿ, ಎಲ್ಲಾ ಮಾಹಿತಿಗಳನ್ನು ಮತ್ತು ವಿವರಗಳನ್ನು ನೀಡಬೇಕು. ಬನ್ನಿ, ಇಂತಹ ಸಾಮಾನ್ಯ ಸೂಚನೆಗಳ ಬಗ್ಗೆ ಕೆಳಗಿನ ಸ್ಲೈಡ್ ಶೋ ಮೂಲಕ ಹೆಚ್ಚಿನ ಮಾಹಿತಿಯನ್ನು ಅರಿಯೋಣ...    ದೇಹದ ನೋವನ್ನು ಕಡಿಮೆ ಮಾಡುವ ಆಹಾರಗಳು

  ಅತೀವ ತಲೆನೋವು

  ಅತೀವ ತಲೆನೋವು

  ತಲೆನೋವು ಏಕಾಗಿ ಬರುತ್ತದೆ ಮತ್ತು ಹೇಗೆ ಆಗುತ್ತದೆ ಎಂಬುದಕ್ಕೆ ಇದುವರೆಗೆ ವೈದ್ಯರ ಬಳಿ ಸೂಕ್ತವಾದ ಉತ್ತರವಿಲ್ಲ. ಕೆಲವೊಮ್ಮೆ ನಿರ್ಜಲೀಕರಣ, ಮಾನಸಿಕ ಒತ್ತಡ, ಕುಹರ ಅಥವಾ ಸೈನಸ್ ಭಾಗದಲ್ಲಿ ಸೋಂಕು, ಮದ್ಯದ ಅಮಲು ಮೊದಲಾದವು ಇರಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

  ಅತೀವ ತಲೆನೋವು

  ಅತೀವ ತಲೆನೋವು

  ಒಂದು ವೇಳೆ ಸಾಮಾನ್ಯ ತಲೆನೋವಿನ ಮಾತ್ರೆಗಳಿಗೆ ಈ ನೋವು ಬಗ್ಗದಿದ್ದರೆ ಇದಕ್ಕೆ ಮೈಗ್ರೇನ್ ಅಥವಾ ಮೆದುಳಿನಲ್ಲಿ ಯಾವುದೋ ನರ ಒಡೆದು ಚಿಕ್ಕದಾಗಿ ರಕ್ತ ಜಿನುಗುವುರು ಅಥವಾ ನರಗಳಲ್ಲಿ ಸೋಂಕು ಮತ್ತಿತರ ಕಾರಣಗಳಿರಬಹುದು. ತಕ್ಷಣವೇ ತಲೆನೋವಿನ ಬಗ್ಗೆ ಎಲ್ಲಾ ವಿವರಗಳನ್ನು ವೈದ್ಯರ ಬಳಿ ತಿಳಿಸುವುದೇ ಕ್ಷೇಮ.ನೈಸರ್ಗಿಕವಾದ 10 ನೋವು ನಿವಾರಕ ಔಷಧಿಗಳು

  ಕಾಲುಗಳಲ್ಲಿ ನೋವು

  ಕಾಲುಗಳಲ್ಲಿ ನೋವು

  ಕೆಲವೊಮ್ಮೆ ಸುಮ್ಮನಿದ್ದಾಗಲೂ ಕಾಲುಗಳ ಒಳಭಾಗದಲ್ಲಿ ಉರಿದಂತೆ ನೋವಾಗುತ್ತದೆ. ಹಿರಿಯರು ಇದಕ್ಕೆ ಕಾಲುಗಳಲ್ಲಿ ಇರುವೆ ಹರಿದಾಡಿದಂತೆ ಎಂದು ಉಲ್ಲೇಖಿಸುತ್ತಾರೆ. ಈ ಸೂಚನೆ ಮಧುಮೇಹದ ನ್ಯೂರೋಪತಿ ಎಂಬ ಕಾಯಿಲೆಯ ಲಕ್ಷಣವಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

  ಕಾಲುಗಳಲ್ಲಿ ನೋವು

  ಕಾಲುಗಳಲ್ಲಿ ನೋವು

  ಒಂದು ವೇಳೆ ಇದು ಹೌದಾದರೆ ಚರ್ಮ ಒಣದಾಗಿ ತುರಿಕೆ ಉಂಟಾಗುವುದು, ಬಾಯಿ ಒಣಗುವುದು, ಗಾಯಗಳು ನಿಧಾನವಾಗಿ ಮಾಗುವುದು, ದೃಷ್ಟಿ ಮಂದವಾಗುವುದು, ಮೂತ್ರಕ್ಕೆ ಆಗಾಗ ಅವಸರವಾಗುವುದು ಮೊದಲಾದ ಸೂಚನೆಗಳು ಇವೆಯೇ ನೋಡಿ. ಯಾವುದಕ್ಕೂ ವೈದ್ಯರ ಬಳಿ ಸಾಗಿ ಆರೋಗ್ಯದ ತಪಾಸಣೆ ಮಾಡಿಸಿಕೊಂಡು ಸಲಹೆ ಪಡೆಯಿರಿ.

  ಅತಿಯಾದ ಬೆನ್ನುನೋವು

  ಅತಿಯಾದ ಬೆನ್ನುನೋವು

  ಬೆನ್ನುನೋವು ಅಂದರೆ ಸಾಮಾನ್ಯವಲ್ಲ. ಕೆಲವರಿಗೆ ಅನಿವಾರ್ಯವಾಗಿ ಘಂಟೆಗಳ ಕಾಲ ಕುರ್ಚಿಯಲ್ಲಿಯೇ ಕುಳಿತಿರಬೇಕಾಗಿರುತ್ತದೆ. ಇಂತಹವರಿಗೆ ಬೆನ್ನುನೋವು ಸಾಮಾನ್ಯವಾಗಿದೆ. ಆದರೆ ಆಗಾಗ ನಡೆದಾಡುತ್ತಿದ್ದರೆ ನೋವು ಇರುವುದಿಲ್ಲ. ಆದರೆ ಇದರ ಹೊರತಾಗಿಯೂ ಬೆನ್ನು ನೋವು ಕಾಡಿದರೆ ಇದಕ್ಕೆ ಬೇರೆಯೇ ಕಾರಣಗಳಿರಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

  ಅತಿಯಾದ ಬೆನ್ನುನೋವು

  ಅತಿಯಾದ ಬೆನ್ನುನೋವು

  ಚಿಕ್ಕಂದಿನಿಂದಲೂ ನಮಗೆ ಬೆನ್ನುಮೂಳೆ ನಟ್ಟಗಿರುವಂತೆ ಕುಳಿತುಕೊಳ್ಳಲು ಹೇಳಿದ್ದರೂ ನಾವೆಲ್ಲಾ ಉದಾಸೀನತೆಯಿಂದ ಬೆನ್ನು ಬಗ್ಗಿಸಿ ಕುಳಿತುಕೊಳ್ಳುತ್ತಿದ್ದೆವು. ಇದರ ಪರಿಣಾಮವಾಗಿ ಬೆನ್ನುಮೂಳೆಯ ನಡುವಣ ಸಂದುಗಳು ಕೊಂಚವೇ ಜರುಗಿ ಇದರ ನಡುವಣ ರಕ್ತನಾಳಗಳ ಮೇಲೆ ಒತ್ತಡ ಬಿದ್ದು, ಕೆಲವೊಮ್ಮೆ ರಕ್ತನಾಳ ಹರಿದು ರಕ್ತಹೊರಗೆ ಜಿನುಗುವುದೇ ನೋವಿಗೆ ಕಾರಣವಾಗಿರುತ್ತದೆ. ಇದಕ್ಕೆ ವೈದ್ಯರ ತಪಾಸಣೆಯಿಂದ ಮಾತ್ರ ಕಾರಣವನ್ನು ಪಡೆಯಲು ಸಾಧ್ಯ. ಪದೇ ಪದೇ ಕಾಡುವ ಬೆನ್ನು ನೋವಿನ ಸಮಸ್ಯೆಗೆ ಪರಿಹಾರವೇನು?

  ಮೀನಖಂಡದಲ್ಲಿ ಸತತ ನೋವು

  ಮೀನಖಂಡದಲ್ಲಿ ಸತತ ನೋವು

  ಮೀನಖಂಡ ಅಥವಾ ಕಾಲಿನ ಮೊಣಕಾಲಿನ ಕೆಳಗೆ ಹಿಂಭಾಗದಲ್ಲಿರುವ ಸ್ನಾಯು ಕೆಲವೊಮ್ಮೆ ಪೆಡಸಾಗಿಬಿಡುತ್ತದೆ. ಕಾಲು ಮಡಚಿ ಕುಳಿತಿರುವವರಿಗೆ ಇದು ಹೆಚ್ಚು ಕಾಡುತ್ತದೆ. ಆದರೆ ವಿನಾಕಾರಣ ಇಲ್ಲಿ ನೋವು ಸತತವಾಗಿ ಕಾಣಿಸಿಕೊಳ್ಳುತ್ತಿದ್ದರೆ ಇದು ನರದೊಳಗೆ ರಕ್ತ ಹೆಪ್ಪುಗಟ್ಟಿರುವ DVT (deep venous thrombosis) ಎಂಬ ತೊಂದರೆಯ ಸೂಚನೆಯಾಗಿರಬಹುದು. ಇದು ಒಂದು ಅಪಾಯಕಾರಿ ಸ್ಥಿತಿಯಾಗಿದ್ದು ತಕ್ಷಣವೇ ವೈದ್ಯರ ಚಿಕಿತ್ಸೆಯ ಅಗತ್ಯವಿದೆ.

  ವಿವರಿಸಲಾಗದ ನೋವುಗಳು

  ವಿವರಿಸಲಾಗದ ನೋವುಗಳು

  ದೇಹದ ಕೆಲವು ಭಾಗಗಳಲ್ಲಿ ಆಗಾಗ ನೋವು ಎದುರಾಗುತ್ತಿದ್ದು ಇದನ್ನು ವಿವರಿಸಲು ಸುಲಭವಾಗಿ ಸಾಧ್ಯವಾಗದಿದ್ದಲ್ಲಿ ಇದು ಮಾನಸಿಕ ಒತ್ತಡದ ಪರಿಣಾಮವಿರಬಹುದು. ಈ ನೋವುಗಳು ಎದುರಾದ ಸಮಯ, ಸಂದರ್ಭ, ತೀವ್ರತರತೆ, ಇದಕ್ಕೂ ಮುನ್ನ ಸೇವಿಸಿದ್ದ ಆಹಾರ, ಮಾನಸಿಕ ಸ್ಥಿತಿ ಮೊದಲಾದವುಗಳ ಬಗ್ಗೆ ಸಾಧ್ಯವಾದಷ್ಟು ವಿವರ ನೀಡಿದರೆ ಇದಕ್ಕೆ ಕಾರಣವನ್ನು ವೈದ್ಯರಿಗೆ ಊಹಿಸಲಿಕ್ಕೆ ಸಾಧ್ಯವಾಗುತ್ತದೆ.

  ಅಸಾಧ್ಯ ಹೊಟ್ಟೆನೋವು

  ಅಸಾಧ್ಯ ಹೊಟ್ಟೆನೋವು

  ಹೊಟ್ಟೆನೋವಿಗೆ ಪ್ರಮುಖ ಕಾರಣ ಅಜೀರ್ಣ. ಆದರೆ ಈ ನೋವು ತಾತ್ಕಾಲಿಕವಾಗಿದ್ದು ಮರುದಿನ ಇಲ್ಲವಾಗುತ್ತದೆ. ಆದರೆ ನೋವು ಹೊಟ್ಟೆಯ ಕೆಳಭಾಗದಲ್ಲಿದ್ದು ಅಸಾಧ್ಯವಾಗಿದ್ದರೆ ಇದು ಕರುಳಿನ ಹುಣ್ಣು, ಪಿತ್ತಕೋಶದ ತೊಂದರೆ, ಮೇದೋಜೀರಕ ಗ್ರಂಥಿಯ ಊತ ಮೊದಲಾದ ತೊಂದರೆಗಳ ಸೂಚನೆಯಾಗಿರಬಹುದು. ಆದ್ದರಿಂದ ಈ ನೋವು ಇನ್ನಷ್ಟು ಹೆಚ್ಚುವ ಮುನ್ನ ವೈದ್ಯರ ಬಳಿ ತಪಾಸಣೆಗೊಳಪಡುವುದು ಉತ್ತಮ.

  ಎದೆಯಲ್ಲಿ ನೋವು

  ಎದೆಯಲ್ಲಿ ನೋವು

  ಸಾಮಾನ್ಯವಾಗಿ ಹೊಟ್ಟೆಯಲ್ಲಿ ಆಮ್ಲೀಯತೆ ಹೆಚ್ಚಾದಾಗ ಇದು ಅನ್ನನಾಳದ ಮೂಲಕ ಹೊರಬರಲು ಯತ್ನಿಸುವುದರಿಂದ ಜಠರದ ಮೇಲ್ಭಾಗ ಮತ್ತು ವಪೆಯಲ್ಲಿ ಉರಿ ತರಿಸುತ್ತದೆ. ಇದು ಸಾಮಾನ್ಯವಾಗಿ ಎದೆಯ ಕೆಳಭಾಗದಲ್ಲಿರುವುದರಿಂದ ಎದೆನೋವು ಎಂದೇ ತಿಳಿಯುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

  ಎದೆಯಲ್ಲಿ ನೋವು

  ಎದೆಯಲ್ಲಿ ನೋವು

  ವಾಸ್ತವವಾಗಿ ಇದು ಎದೆಯುರಿಯಾಗಿದ್ದು ಅಂಟಾಸಿಡ್ ದ್ರವದ ಸೇವನೆಯಿಂದ ತಕ್ಷಣ ಕಡಿಮೆಯಾಗುತ್ತದೆ. ಆದರೆ ಎದೆಯ ಮೇಲ್ಭಾಗದಲ್ಲಿ ನೋವು ಅಥವಾ ಸೂಜಿ ಚುಚ್ಚಿದಂತೆ ಉರಿಯಾದರೆ, ದವಡೆ, ಗಂಟಲು, ಭುಜ, ತೋಳುಗಳು ಮೊದಲಾದ ಕಡೆ ನೋವು ಕಾಣಿಸಿಕೊಳ್ಳುತ್ತಿದ್ದರೆ ಇದು ಹೃದಯಕ್ಕೆ ಸಂಬಂಧಿಸಿದ ನೋವು ಆಗಿರಬಹುದು. ತಕ್ಷಣ ವೈದ್ಯರ ಬಳಿ ಸಾಗಿ ಸೂಕ್ತ ಪರೀಕ್ಷೆಗಳಿಗೆ ಒಳಪಡುವುದು ಅನಿವಾರ್ಯ. ಎಚ್ಚರ: ಎದೆ ನೋವು ಎನ್ನುವುದು ಸಾಮಾನ್ಯ ಕಾಯಿಲೆ ಅಲ್ಲ..!

    

  English summary

  Never Ignore These Pains...

  When you suffer a minor headache or a body pain, you tend to gulp an over the counter pill to get rid of it. We all do that because going to a doctor for every small thing isn't practical. But what if the pains never leave you? Well, in such a case, you might first need to realise that the cause behind the pain is serious and it is indicating that something is seriously wrong within your body elsewhere.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more