For Quick Alerts
ALLOW NOTIFICATIONS  
For Daily Alerts

ಲಿಂಬೆ ಹಣ್ಣು: ಮೂರ್ತಿ ಚಿಕ್ಕದಾದರೂ, ಕೀರ್ತಿ ದೊಡ್ಡದು

By Manu
|

ಲಿಂಬೆಹಣ್ಣಿನಿಂದ ಹಲವಾರು ರೀತಿಯ ಲಾಭಗಳು ಇವೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ. ಲಿಂಬೆ ಹಣ್ಣಿನ ರಸವನ್ನು ವಿವಿಧ ರೀತಿಯಲ್ಲಿ ಬಳಸಿಕೊಂಡು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಕೆಲವೊಂದು ಸೌಂದರ್ಯವರ್ಧಕಗಳಲ್ಲಿಯೂ ಲಿಂಬೆಹಣ್ಣಿನ ರಸವನ್ನು ಬಳಸುತ್ತಾರೆ. ಫೇಸ್ ಮಾಸ್ಕ್ ಹಾಗೂ ಹೇರ್ ಮಾಸ್ಕ್‌ಗಳಲ್ಲಿ ಲಿಂಬೆಹಣ್ಣಿನ ರಸವನ್ನು ಬಳಸುವುದು ಸಾಮಾನ್ಯವಾಗಿದೆ.

ಇದರಲ್ಲಿನ ಸಿಟ್ರಿಕ್ ಅಂಶವು ಹಲವಾರು ಲಾಭಗಳನ್ನು ನೀಡುವುದರ ಜೊತೆಗೆ ಇದರಲ್ಲಿರುವ ಸುವಾಸನೆಯು ನಮಗೆ ಪುನಃಶ್ಚೇತನವನ್ನೂ ನೀಡುತ್ತದೆ. ಅದೇ ಕೆಲವೊಂದು ಲಿಂಬೆ ತುಂಡುಗಳನ್ನು ಚಕ್ರ ಆಕಾರವಾಗಿ ಕತ್ತರಿಸಿಕೊಂಡು ಅದಕ್ಕೆ ಉಪ್ಪು ಸಿಂಪಡಿಸಿ, ಮಲಗುವ ಕೋಣೆಯಲ್ಲಿ ಇಟ್ಟರೆ ಅದರಿಂದ ಹಲವಾರು ರೀತಿಯ ಲಾಭಗಳು ಇವೆಯಂತೆ. ಲಿಂಬೆ ಹಣ್ಣು- ಹುಳಿಯಾದರೂ, ಆರೋಗ್ಯಕ್ಕೆ ಸಿಹಿ!

ಮಲಗುವ ಮೊದಲು ಈ ರೀತಿ ಲಿಂಬೆಯ ತುಂಡುಗಳನ್ನು ಇಟ್ಟರೆ ಅದರಿಂದ ಯಾವ ರೀತಿಯ ಆರೋಗ್ಯ ಲಾಭಗಳು ಆಗಬಹುದು ಎನ್ನುವುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳುವ....

ಲಿಂಬೆ ತುಂಡುಗಳನ್ನು ಕತ್ತರಿಸಿ ಕೋಣೆಯಲ್ಲಿಡಿ...

ಲಿಂಬೆ ತುಂಡುಗಳನ್ನು ಕತ್ತರಿಸಿ ಕೋಣೆಯಲ್ಲಿಡಿ...

ಲಿಂಬೆ ಹಣ್ಣಿನ ಸುವಾಸನೆಯಲ್ಲಿ ಆ್ಯಂಟಿಬ್ಯಾಕ್ಟೀರಿಯಾ ಗುಣಗಳು ಇವೆ. ಮೂಗು ಕಟ್ಟಿರುವುದರಿಂದ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲವೆಂದಾದರೆ ಲಿಂಬೆ ತುಂಡುಗಳನ್ನು ಕತ್ತರಿಸಿ ಕೋಣೆಯಲ್ಲಿ ಇಟ್ಟರೆ ಅದರ ಸುವಾಸನೆಗೆ ಒಳ್ಳೆಯ ನಿದ್ರೆ ಬರುತ್ತದೆ.

ಒತ್ತಡವನ್ನು ನಿವಾರಿಸಲು

ಒತ್ತಡವನ್ನು ನಿವಾರಿಸಲು

ಲಿಂಬೆ ಹಣ್ಣಿನ ಸುವಾಸನೆಯು ಒತ್ತಡವನ್ನು ನಿವಾರಣೆ ಮಾಡಿ ಆರಾಮವಾಗಿರುವಂತೆ ಮಾಡುತ್ತದೆ. ಇದರಿಂದ ನಿಮಗೆ ಒಳ್ಳೆಯ ನಿದ್ರೆ ಬರುವುದು.

ಇರುವೆ ಹಾಗೂ ಕೀಟಗಳ ಉಪದ್ರಕ್ಕೆ

ಇರುವೆ ಹಾಗೂ ಕೀಟಗಳ ಉಪದ್ರಕ್ಕೆ

ಇರುವೆ ಹಾಗೂ ಕೀಟಗಳು ನಿದ್ರೆ ಮಾಡಲು ನಿಮಗೆ ಸಮಸ್ಯೆಯನ್ನು ಉಂಟು ಮಾಡುತ್ತಾ ಇದ್ದರೆ ಲಿಂಬೆ ಹಣ್ಣಿನ ತುಂಡುಗಳನ್ನು ಇಡಿ. ಲಿಂಬೆ ಹಣ್ಣಿನ ಸುವಾಸನೆ ಕೀಟಗಳನ್ನು ಓಡಿಸುತ್ತದೆ.

ನಿದ್ರಾಹೀನತೆಯಿಂದ ಬಳಲುತ್ತಾ ಇದ್ದರೆ

ನಿದ್ರಾಹೀನತೆಯಿಂದ ಬಳಲುತ್ತಾ ಇದ್ದರೆ

ಯಾರಾದರೂ ನಿದ್ರಾಹೀನತೆಯಿಂದ ಬಳಲುತ್ತಾ ಇದ್ದರೆ ಲಿಂಬೆಹಣ್ಣಿನ ತುಂಡುಗಳನ್ನು ಕೋಣೆಯಲ್ಲಿ ಇಟ್ಟುಕೊಂಡರೆ ಒಳ್ಳೆಯ ನಿದ್ರೆ ಮಾಡಬಹುದು. ಇದನ್ನು ನಿಯಮಿತವಾಗಿ ಮಾಡುತ್ತಲಿದ್ದರೆ ರಕ್ತದೊತ್ತಡವು ಕಡಿಮೆಯಾಗುತ್ತದೆ ಎನ್ನಲಾಗುತ್ತದೆ. ಇದನ್ನು ಪ್ರಯತ್ನಿಸಿ ನೋಡಿ.

ಲವಲವಿಕೆಯ ಜೀವನ ಶೈಲಿ

ಲವಲವಿಕೆಯ ಜೀವನ ಶೈಲಿ

ಲಿಂಬೆ ಹಣ್ಣಿನ ತುಂಡುಗಳನ್ನು ಕೋಣೆಯಲ್ಲಿ ಇಟ್ಟರೆ ಬೆಳಿಗ್ಗೆ ಉಲ್ಲಾಸದಿಂದ ಏಳಬಹುದು. ನಿಂಬೆಯ ಸುವಾಸನೆಯು ಸೆರೊಟೊನಿನ್ ಮಟ್ಟವನ್ನು ವೃದ್ಧಿಸುತ್ತದೆ. ಇದರಿಂದ ಬೆಳಿಗ್ಗೆ ಉಲ್ಲಾಸದಿಂದ ಏಳಬಹುದು.

ಸುವಾಸನೆಯುಕ್ತ ಗಾಳಿ....

ಸುವಾಸನೆಯುಕ್ತ ಗಾಳಿ....

ಎಲ್ಲಕ್ಕಿಂತಲೂ ಹೆಚ್ಚಾಗಿ ಲಿಂಬೆ ಹಣ್ಣಿನ ಸುವಾಸನೆಯು ಕೋಣೆಯೊಳಗಿನ ಗಾಳಿಯನ್ನು ತಾಜಾ ಮಾಡುತ್ತದೆ. ಇದರಿಂದ ನೀವು ಒಳ್ಳೆಯ ಗಾಳಿಯನ್ನು ಉಸಿರಾಡಬಹುದು.

English summary

Miraculous Remedy: Put Sliced Lemon Next To Bed

Before sleeping, place those slices somewhere in the bedroom near the place you sleep. What happens if you do so? Well, many sources claim that there are some health benefits if you do so. Here are they...
X
Desktop Bottom Promotion