ಮದುವೆಗೂ ಮುನ್ನ ವೈದ್ಯಕೀಯ ಪರೀಕ್ಷೆಗಳು ಅತ್ಯಗತ್ಯ!

By Manu

ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎಂಬ ಗಾದೆಯೊಂದಿದೆ. ಆದರೆ ಈ ಗಾದೆ ಸರ್ವಕಾಲಕ್ಕೂ ಸಲ್ಲುವುದಿಲ್ಲ. ಅದರಲ್ಲೂ ಇಂದಿನ ಯುಗಕ್ಕೆ ಸರ್ವಥಾ ಅಲ್ಲ. ಏಕೆಂದರೆ ಯಾವುದೇ ಸುಳ್ಳು ಹೇಳಿ ಮದುವೆ ಮಾಡಿಸಿದರೂ ಆ ಸುಳ್ಳು ಕಂಡುಕೊಂಡ ತಕ್ಷಣ ಇಬ್ಬರಲ್ಲಿಯೂ ವೈಮನಸ್ಯ ಪ್ರಾರಂಭವಾಗಿ ಇದು ಒಡಕಿನತ್ತಲೇ ಮುಂದುವರೆಯುತ್ತದೆ. ಆದ್ದರಿಂದ ಯಾರು ಎಷ್ಟೇ ಸುಳ್ಳು ಹೇಳಲಿ, ವೈದ್ಯಕೀಯ ಪರೀಕ್ಷಾ ವರದಿಗಳು ಸುಳ್ಳು ಹೇಳಲಾರವು. ಆದ್ದರಿಂದ ಸದ್ಯದ ದಿನಗಳಲ್ಲಿ ವಿವಾಹವಾಗುವ ಯೋಚನೆಯಿದ್ದರೆ ಮುಂದಿನ ಜೀವನವನ್ನು ಕಳೆಯಬೇಕಾದ ವ್ಯಕ್ತಿ ನಿಜವಾಗಿಯೂ ಆರೋಗ್ಯವಂತನೋ ಅಲ್ಲವೋ ಎಂಬುದನ್ನು ಕಂಡುಕೊಳ್ಳಬಹುದು.

ವೈದ್ಯಕೀಯ ತಜ್ಞರ ಮತ್ತು ಮನಃಶಾಸ್ತ್ರಜ್ಞರ ಪ್ರಕಾರ ವಿವಾಹಕ್ಕೂ ಮುನ್ನ ಅವಶ್ಯ ಪರೀಕ್ಷೆಗಳನ್ನು ನಡೆಸಿಯೇ ಮುಂದುವರೆಯುವ ಮೂಲಕ ವಿವಾಹದ ಬಳಿಕ ಎದುರಾಗುವ ಎಷ್ಟೋ ತೊಂದರೆಗಳನ್ನು ನಿವಾರಿಸಬಹುದು. ಎಷ್ಟೋ ಸಲ ವ್ಯಕ್ತಿಗೆ ಗೊತ್ತೇ ಇರದಿದ್ದ ಕಾರಣಗಳೂ ಹೊರಬಂದು ಸೂಕ್ತ ಚಿಕಿತ್ಸೆಯನ್ನು ಸಕಾಲಕ್ಕೆ ಪಡೆಯಲೂ ಸಾಧ್ಯವಾಗುತ್ತದೆ. ತಜ್ಞ ವೈದ್ಯರ ಪ್ರಕಾರ ವಿವಾಹಕ್ಕೂ ಮೊದಲೂ ಇಬ್ಬರೂ ಕನಿಷ್ಠ ಐದು ಬಗೆಯ ಪರೀಕ್ಷೆಗಳಿಗೆ ತಮ್ಮನ್ನು ತಾವು ಒಡ್ಡಿಕೊಳ್ಳಬೇಕು. ಬೆಚ್ಚಿ ಬೀಳಿಸುವ ಸತ್ಯ- ಈ ಔಷಧಿಗಳ ಉದ್ದೇಶ ಬೇರೆಯೇ ಆಗಿತ್ತು..
ಈ ಪರೀಕ್ಷೆಗಳು ವರ್ಷಕ್ಕೊಂದು ಬಾರಿ ಅಥವಾ ವಿವಾಹಕ್ಕೆ ಗರಿಷ್ಠ ಆರು ತಿಂಗಳ ಮುನ್ನ ಮಾಡಿಸಿಕೊಳ್ಳಬೇಕು. ಒಂದು ವೇಳೆ ಯಾವುದಾದರೂ ಕಾಯಿಲೆ ಇದ್ದಿದ್ದುದು ಗೊತ್ತಿಲ್ಲದಿದ್ದರೆ ಅಥವಾ ಪ್ರಾರಂಭಿಕ ಹಂತದಲ್ಲಿದ್ದರೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ತೆಗೆದುಕೊಳ್ಳುವ ಮೂಲಕ ಈ ಕಾಯಿಲೆ ಉಲ್ಬಣಗೊಳ್ಳುವ ಸಾಧ್ಯತೆಯನ್ನು ಶೇಖಡಾ ಎಂಭತ್ತರಿಂದ ತೊಂಬತ್ತರಷ್ಟು ಕಡಿಮೆ ಮಾಡಬಹುದು. ಎಷ್ಟೋ ವರದಿಗಳಲ್ಲಿ ಪುರುಷರಿಗೂ ಮಹಿಳೆಯರಿಗೂ ತಮ್ಮ ದೇಹದಲ್ಲಿ ಏನು ಬದಲಾವಣೆಗಳಾಗುತ್ತಿವೆ ಎಂಬುದನ್ನೇ ಅರಿಯದವರಾಗಿದ್ದು ಈ ಚಿಕಿತ್ಸೆ ಒಂದು ಆಪತ್ಬಾಂಧವನಾಗಿ ಪರಿಣಮಿಸುತ್ತದೆ. ಇನ್ನೂ ಮುಖ್ಯವಾಗಿ ಹಿಂದೆಂದೋ ಮಾಡಿದ್ದ ತಪ್ಪಿನ ಪರಿಣಾಮವಾಗಿ ಯಾವುದಾದರೂ ಮಾರಣಾಂತಿಕ ರೋಗಕ್ಕೆ ತುತ್ತಾಗಿದ್ದರೆ ಈ ವಿವಾಹದಿಂದ ವಿಮುಖರಾಗುವ ಎಚ್ಚರಿಕಾ ಕ್ರಮ ಮತ್ತು ಸೂಕ್ತ ನಿರ್ಧಾರ ಕೈಗೊಳ್ಳಲೂ ಈ ಪರೀಕ್ಷೆ ನೆರವಾಗುತ್ತದೆ. ಬನ್ನಿ, ಈ ಪರೀಕ್ಷೆಗಳು ಯಾವುವು ಎಂಬುದನ್ನು ಈಗ ನೋಡೋಣ...

ವಯಸ್ಸಿನ ಪರೀಕ್ಷೆ

ವಯಸ್ಸಿನ ಪರೀಕ್ಷೆ

ಸಾಮಾನ್ಯವಾಗಿ ಹೆಣ್ಣುಮಕ್ಕಳನ್ನು ಚಿಕ್ಕವಯಸ್ಸಿನಲ್ಲಿಯೇ ಮದುವೆ ಮಾಡಿಕೊಡುವ ಆತುರ ಎಲ್ಲರಿಗೂ ಇರುತ್ತದೆ. ಆದ್ದರಿಂದ ಮದುವೆ ಮಾಡಿಕೊಡಲು ವಯಸ್ಸನ್ನು ಮರೆಮಾಚುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ದತಿಯಾಗಿದ್ದು ಸುಳ್ಳು ಹೇಳಿ ಮಾಡಿದ ಮದುವೆಗೆ ಬಳಿಕ ಮರುಗುವಂತಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ವಯಸ್ಸಿನ ಪರೀಕ್ಷೆ

ವಯಸ್ಸಿನ ಪರೀಕ್ಷೆ

ಅದರಲ್ಲೂ ತಡವಾಗಿ ಮದುವೆಯಾಗುವ ಮಹಿಳೆಯರು ಒಂದು ವೇಳೆ ಮೂವತ್ತೈದು ದಾಟಿದ್ದು ವಯಸ್ಸಿನ್ನೂ ಕಡಿಮೆ ಎಂದು ಸುಳ್ಳು ಹೇಳಿದ್ದರೆ ಇದರಿಂದ ವಿವಾಹದ ಬಳಿಕ ಗರ್ಭಧರಿಸುವ ಸಾಧ್ಯತೆ ಅತಿ ಕಡಿಮೆಯಾಗಿರುತ್ತದೆ ಅಥವಾ ಗರ್ಭಧಾರಣೆಯಾದರೂ ಇದರಲ್ಲಿ ಅತಿ ಹೆಚ್ಚಿನ ಪ್ರಾಣಾಪಾಯ ಎದುರಾಗಬಹುದು. ಅಲ್ಲದೇ ಗಂಡು ಹೆಣ್ಣುಗಳ ನಡುವಣ ವಯಸ್ಸಿನ ಅಂತರವೂ ಐದು ವರ್ಷಕ್ಕಿಂತ ಹೆಚ್ಚು ಇರಬಾರದು. ವಯಸ್ಸಿನ ಪರೀಕ್ಷೆಯಿಂದ ನಿಜವಾದ ವಯಸ್ಸು ಅರಿತು ಹೇಳಿದ ಯಾವುದೇ ಸುಳ್ಳು ಬಯಲಾಗುತ್ತದೆ.

ಫಲವತ್ತತೆ ಪರೀಕ್ಷೆ

ಫಲವತ್ತತೆ ಪರೀಕ್ಷೆ

ಯುವಜನತೆಯಲ್ಲಿ ಈ ಪರೀಕ್ಷೆಯ ಬಗ್ಗೆ ಹೆಚ್ಚು ಅರಿವು ಮೂಡುತ್ತಿದೆ. ಮದುವೆಯಾದ ಎರಡು ಮೂರು ವರ್ಷಗಳವರೆಗೆ ಮಕ್ಕಳಾಗದಿರಲು ಬಂಜೆತನ ಕಾರಣ ಎಂದು ನಂಬಲಾಗುತ್ತದೆ. ಆದರೆ ವಿವಾಹಕ್ಕೂ ಮುನ್ನ ಫಲವತ್ತತೆಯ ಪರೀಕ್ಷೆಯಿಂದ ಇಬ್ಬರ ಗುಟ್ಟು ರಟ್ಟಾಗಿ ವಿವಾಹಕ್ಕೆ ಅರ್ಹರೋ ಅಲ್ಲವೋ ಎಂದು ಗೊತ್ತಾಗುತ್ತದೆ.

ಎಸ್.ಟಿ.ಡಿ. ಪರೀಕ್ಷೆ

ಎಸ್.ಟಿ.ಡಿ. ಪರೀಕ್ಷೆ

ಎಸ್.ಟಿ.ಡಿ.-ಸೆಕ್ಷುವಲೀ ಟ್ರಾನ್ಸ್ಮಿಟೆಡ್ ಡಿಸೀಸಸ್ ಅಂದರೆ ಲೈಂಗಿಕವಾಗಿ ಹರಡುವ ರೋಗಗಳ ಪರೀಕ್ಷೆ ಇಂದಿನ ದಿನಗಳಲ್ಲಿ ಅನಿವಾರ್ಯವಾಗಿದೆ. ಇದು ಮನೋಕಾಮನೆಯನ್ನು ನಿಗ್ರಹಿಸಲಾರದೇ ಬೆಲೆಕೊಟ್ಟು ಕೊಂಡ ಅಸುರಕ್ಷಿತ ದೈಹಿಕಸುಖದ ಪರಿಣಾಮವಾಗಿದ್ದು ಇದರ ಫಲವನ್ನು ಜೀವನಪರ್ಯಂತ ಅನುಭವಿಸಬೇಕಾಗುತ್ತದೆ. ಆದರೆ ವಿವಾಹದ ಬಳಿಕ ಇದನ್ನು ತಮ್ಮ ಸಂಗಾತಿಗಳಿಗೆ ಹಬ್ಬಿಸದೇ ಇರಲು ವಿವಾಹಕ್ಕೂ ಮೊದಲು ಇದರ ಪರೀಕ್ಷೆಯಾಗುವುದು ಅಗತ್ಯ ಕ್ರಮ. ಸಿಫಿಲಿಸ್, ಗೊನೋರಿಯಾ, ಖ್ಯಾಂಕ್ರಾಯ್ಡ್, ಹರ್ಪಿಸ್ ಮೊದಲಾದ ರೋಗಗಳು ಲೈಂಗಿಕವಾಗಿ ಹರಡುವಂತಹದ್ದಾಗಿದ್ದು ಪರೀಕ್ಷೆಯಲ್ಲಿ ದೃಢಪಟ್ಟ ತಕ್ಷಣವೇ ವಿವಾಹದ ಯೋಚನೆಯನ್ನು ಮುಂದೆ ಹಾಕಿ ಚಿಕಿತ್ಸೆಗೆ ಮುಂದಾಗುವುದೇ ನಿರ್ವಾಹವಿಲ್ಲದ ಕ್ರಮವಾಗಿದೆ.

ರಕ್ತದಲ್ಲಿ ಏರುಪೇರಿನ ಪರೀಕ್ಷೆ

ರಕ್ತದಲ್ಲಿ ಏರುಪೇರಿನ ಪರೀಕ್ಷೆ

ಇಂದು ರಕ್ತಪರೀಕ್ಷೆಯಲ್ಲಿ ಶರೀರದ ಹತ್ತು ಹಲವು ಕಾಯಿಲೆ ಅಥವಾ ಗುಣಗಳನ್ನು ಕಂಡುಹಿಡಿಯಬಹುದು. ಕೆಲವೊಮ್ಮೆ ರಕ್ತಸಂಬಂಧಿತ ಕಾಯಿಲೆಗಳಾದ ಹೀಮೋಫಿಲಿಯಾ ಮತ್ತು ಥಲಸ್ಸೀಮಿಯಾದಂತಹ ಕಾಯಿಲೆಗಳಿದ್ದರೆ ಇದು ಆಯಸ್ಸನ್ನು ಕುಂಠಿತಗೊಳಿಸಬಹುದು ಅಥವಾ ಮಕ್ಕಳನ್ನು ಚಿಕ್ಕವಯಸ್ಸಿನಲ್ಲಿಯೇ ಆಹುತಿ ತೆಗೆದುಕೊಳ್ಳಬಹುದು. ಅಷ್ಟೇ ಅಲ್ಲ, ಜಾಂಡಿಸ್ ಮೊದಲಾದ ಕಾಯಿಲೆಗಳನ್ನೂ ಕಂಡುಹಿಡಿಯಬಹುದು. ವಿವಾಹಕ್ಕೂ ಮೊದಲು ಇಬ್ಬರ ರಕ್ತಪರೀಕ್ಷೆಯಿಂದ ಮುಂದೆ ಹುಟ್ಟುವ ಮಗುವಿಗೆ ಏನಾದರೂ ತೊಂದರೆಯಾಗಬಹುದೇ ಎಂಬುದನ್ನು ರಕ್ತಪರೀಕ್ಷೆ ಖಚಿತಪಡಿಸುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ರಕ್ತದಲ್ಲಿ ಏರುಪೇರಿನ ಪರೀಕ್ಷೆ

ರಕ್ತದಲ್ಲಿ ಏರುಪೇರಿನ ಪರೀಕ್ಷೆ

ತಜ್ಞರ ಪ್ರಕಾರ Rh-negative ಇರುವ, ಉದಾಹರಣೆಗೆ A (-ve) ರಕ್ತದ ಗುಂಪಿನ ಮಹಿಳೆ Rh-positive ಇರುವ, ಉದಾಹರಣೆಗೆA (+ve) ಅಥವಾ B (+ve) ರಕ್ತದ ಗುಂಪಿನ ಪುರುಷನನ್ನು ಮದುವೆಯಾದರೆ ಇವರಿಗೆ ಹುಟ್ಟುವ ಎರಡನೆಯ ಮಗುವಿನ ಜನನ ಅತ್ಯಂತ ಪ್ರಾಣಾಪಾಯ ಒಡ್ಡಬಹುದು. ಆದ್ದರಿಂದ ಈ ಭಿನ್ನ ರಕ್ತದ ಗುಂಪಿನವರು ಮದುವೆಯಾಗದಿರುವುದೇ ಉತ್ತಮ. ತಜ್ಞರು ಯಾವ ಗುಂಪಿನವರು ಮದುವೆಯಾದರೆ ಸೂಕ್ತ ಎಂಬ ಮಾಹಿತಿಯನ್ನು ನೀಡಬಲ್ಲರು.

ವಂಶಪಾರಂಪರಿಕ ಕಾಯಿಲೆಗಳ ಪರೀಕ್ಷೆ

ವಂಶಪಾರಂಪರಿಕ ಕಾಯಿಲೆಗಳ ಪರೀಕ್ಷೆ

ಕೆಲವು ಕಾಯಿಲೆಗಳು ವಂಶವಾಹಿನಿಯ ಮೂಲಕ ಹರಿದು ಬರುವಂತಹದ್ದಾಗಿದ್ದು ಹಿರಿಯರಿಗೆ ಇದ್ದರೆ ಕಿರಿಯರು ಹಿರಿಯರಾಗುವ ವೇಳೆ ಅವರಿಗೂ ಆವರಿಸುವ ಸಂಭವ ಹೆಚ್ಚಾಗಿರುತ್ತದೆ. ಶ್ವಾಸಕೋಶವನ್ನು ತುಂಬಿಕೊಳ್ಳುವ Cystic Fibrosis, ಸ್ತನ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಕರುಳಿನ ಕ್ಯಾನ್ಸರ್, ಮಧುಮೇಹ ಮೊದಲಾದವು ವಂಶವಾಹಿನಿಯನ್ನು ಅನುಸರಿಸಿವೆ.

ವಂಶಪಾರಂಪರಿಕ ಕಾಯಿಲೆಗಳ ಪರೀಕ್ಷೆ

ವಂಶಪಾರಂಪರಿಕ ಕಾಯಿಲೆಗಳ ಪರೀಕ್ಷೆ

ಆದ್ದರಿಂದ ಮದುವೆಗೂ ಮುನ್ನ ಇಬ್ಬರ ವಂಶದಲ್ಲಿಯೂ ಇರುವ ಕಾಯಿಲೆಗಳು ಮುಂದಿನ ಪೀಳಿಗೆಗೆ ಮುಂದುವರೆಯುವ ಸಾಧ್ಯತೆ ಅಪಾರವಾಗಿದ್ದರೆ ಇದನ್ನು ವೈದ್ಯರು ನಿರೂಪಿಸಿಕೊಡುತ್ತಾರೆ. ಆ ಪ್ರಕಾರ ಮುಂದಿನ ಕ್ರಮ ಕೈಗೊಳ್ಳುವುದು ಸೂಕ್ತ.

English summary

Medical Check-ups To Test Before Getting Married

When you pass a certain age in life, there are certain tests both men and women should undertake. If you are looking at marriage in the near future, these medical health check-ups are a must, as they help determine if you are actually healthy and ready to take this big step ahead in life. According to medical experts, it is necessary for couples to take these 5 tests at least once in a year or 6 months once before they walk down the aisle.
X
Desktop Bottom Promotion