Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹಿತ್ತಲ ಗಿಡದ ಸೊಪ್ಪು- ಮಹಿಳೆಯರ ಆರೋಗ್ಯಕ್ಕೆ ರಹದಾರಿ
ಸೊಪ್ಪುಗಳು ಮತ್ತು ತರಕಾರಿಗಳು ಯಾವಾಗಲು ಆರೋಗ್ಯಕ್ಕೆ ಒಳ್ಳೆಯದು. ಅವುಗಳಲ್ಲಿ ಸಮೃದ್ಧವಾದ ಪೋಷಕಾಂಶಗಳು ಇದ್ದು, ಅವು ಸೇವಿಸುವವರ ಪಾಲಿಗೆ ಸಂಜೀವಿನಿಯಾಗಿರುತ್ತವೆ. ಅದರಲ್ಲೂ ಹೆಂಗಸರು ಇದನ್ನು ತಪ್ಪದೆ ಸೇವಿಸಬೇಕು ಏಕೆಂದರೆ ಮಹಿಳೆಯರು ಮಾಡುವ ಕೆಲಸ ಕಾರ್ಯಗಳಿಗೆ ಎಷ್ಟು ಶಕ್ತಿ ಬೇಕೋ, ಅವರು ಅನುಭವಿಸುವ ನೋವುಗಳಿಂದ ಅವರನ್ನು ರಕ್ಷಿಸಲು ಸಹ ಈ ಪೋಷಕಾಂಶಗಳು ಬೇಕಾಗುತ್ತವೆ. ಬನ್ನಿ ಯಾವ ಯಾವ ಸೊಪ್ಪು ಮತ್ತು ತರಕಾರಿಗಳು ಇವರಿಗೆ ಒಳ್ಳೆಯದು ಮತ್ತು ಅವು ಏಕೆ ಒಳ್ಳೆಯದು ಎಂದು ತಿಳಿದುಕೊಳ್ಳೋಣ.
ನುಗ್ಗೆ ಸೊಪ್ಪು
ಫೈಟೊಥೆರಪಿ ಇಂಟರ್‌ನ್ಯಾಷನಲ್ ಜರ್ನಲ್ ಪ್ರಕಟಿಸಿರುವ ಅಧ್ಯಯನದ ಪ್ರಕಾರ ನುಗ್ಗೆ ಸೊಪ್ಪಿನಲ್ಲಿ, ಎಮ್ಮೆನಗೋಗ್ ಅಂಶವು ಇರುತ್ತದೆಯಂತೆ. ಇದು ಕೆಳ ಹೊಟ್ಟೆಗೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆಯಂತೆ. ಇದರಿಂದಾಗಿ ಋತು ಚಕ್ರದ ಸಂದರ್ಭದಲ್ಲಿ ಬರುವ ನೋವು ಕಡಿಮೆಯಾಗುತ್ತದೆಯಂತೆ. ಇದಕ್ಕಾಗಿ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಎರಡು ಚಮಚ ನುಗ್ಗೆ ಸೊಪ್ಪಿನ ರಸವನ್ನು ಜೇನು ತುಪ್ಪದ ಜೊತೆಗೆ ಬೆರೆಸಿಕೊಂಡು ಸೇವಿಸಿ.

ಪಾಲಕ್
ನಿಮಗೆ ವಯಸ್ಸಾದಂತೆಲ್ಲಾ, ನಿಮ್ಮ ಮೆದುಳಿನ ಕೋಶಗಳು ಹಾಳಾಗಲು ಆರಂಭಿಸುತ್ತವೆ. ಇವುಗಳು ನಿಮ್ಮನ್ನು ತಾಳ್ಮೆ ಕಳೆದುಕೊಳ್ಳುವಂತೆ ಮಾಡುತ್ತವೆ. ಆದ್ದರಿಂದ ಪಾಲಕ್ ಸೊಪ್ಪನ್ನು ಸೇವಿಸಿ. ಇದರಲ್ಲಿರುವ ಆಂಟಿ-ಆಕ್ಸಿಡೆಂಟ್ ನಿಮ್ಮ ಮೆದುಳು ಹಾಳಾಗುವುದನ್ನು ತಡೆಯುತ್ತದೆ, ಇದರಲ್ಲಿರುವ ಅಂಶಗಳು ಮೆದುಳನ್ನು ಹಾಳು ಮಾಡುವ ಫ್ರೀ ರ‍್ಯಾಡಿಕಲ್‌ಗಳ ಮೇಲೆ ಹೋರಾಡುತ್ತವೆ. ಅದು ಸೂಪ್ ಆಗಲಿ, ಪರೋಟಾವಾಗಲಿ, ಪಾಲಕ್ ನಿಮ್ಮ ಆಹಾರದಲ್ಲಿ ಇರಲಿ.
ಸಬ್ಸಿಗೆ ಸೊಪ್ಪು
ಈ ಎಲೆಗಳಲ್ಲಿ ಫ಼್ಲಾವೊನಾಯ್ಡ್‌ಗಳು ಇರುತ್ತವೆ. ಇವು ಹಾರ್ಮೋನ್ ಅಸಮತೋಲನವನ್ನು ಸರಿಪಡಿಸುತ್ತವೆ ಮತ್ತು ಋತು ಚಕ್ರ ಏರುಪೇರನ್ನು ಸರಿಪಡಿಸುತ್ತವೆ. ಈ ಸೊಪ್ಪನ್ನು ದಿನವೂ ಸೇವಿಸುತ್ತಿದ್ದರೆ ಅದರಿಂದಾಗಿ ಪ್ರೊಜೆಸ್ಟೆರೋನ್ ಸ್ರವಿಸುವಿಕೆ ಹೆಚ್ಚಾಗುತ್ತದೆ, ಇವು ಅನಿಯಮಿತ ಋತುಚಕ್ರವನ್ನು ಸರಿಪಡಿಸಲು ನೆರವಾಗುತ್ತದೆ.
ಕರಿಬೇವಿನ ಎಲೆ
ಕೆಲವೊಮ್ಮೆ ಹೊಟ್ಟೆಯಲ್ಲಿ ಅಜೀರ್ಣವಾದ ಕಾರಣ ಹಲವು ಅನಿಲಗಳು ಉತ್ಪತ್ತಿಯಾಗಿ ಹೊಟ್ಟೆ ಮತ್ತು ಎದೆಯಲ್ಲಿ ಭಯಂಕರ ಉರಿ ತರಿಸುತ್ತವೆ. ಇಂತಹ ಸಮಯದಲ್ಲಿ ಕರಿಬೇವುಗಳನ್ನು ಮಿಕ್ಸಿಯಲ್ಲಿ ಗೊಟಾಯಿಸಿ ತಯಾರಿಸಿದ ಒಂದು ಲೋಟ ಜ್ಯೂಸ್ ಕುಡಿದರೆ ತಕ್ಷಣ ಆರಾಮವಾಗುತ್ತದೆ. ಅಜೀರ್ಣವಾಗಿದ್ದ ಆಹಾರ ಜೀರ್ಣವಾಗಿ ಪಚನಕ್ರಿಯೆ ಸರಾಗವಾಗುತ್ತದೆ.
ಕೊತ್ತಂಬರಿ ಸೊಪ್ಪು
ಸಾಮಾನ್ಯವಾಗಿ ಸಿಹಿತಿಂಡಿಗಳನ್ನು ಬಿಟ್ಟು ಬಹುತೇಕ ಎಲ್ಲಾ ಪದಾರ್ಥಗಳ ಕೊನೆಯಲ್ಲಿ ಸೇರಿಸುವುದು ಕೊತ್ತಂಬರಿ ಸೊಪ್ಪನ್ನು. ಇದು ಕೇವಲ ರುಚಿಯನ್ನು ಹೆಚ್ಚಿಸುತ್ತದೆ ಎಂದು ಭಾವಿಸಿದರೆ ಅದು ದೊಡ್ಡ ತಪ್ಪಾಗುತ್ತದೆ. ಏಕೆಂದರೆ ಕೊತ್ತಂಬರಿ ಸೊಪ್ಪಿನಲ್ಲಿ ಹೇರಳವಾದ ಪೋಷಕಾಂಶಗಳಿದ್ದು ಆರೋಗ್ಯಕ್ಕೆ ಪೂರಕವಾಗಿವೆ. ಸಾಮಾನ್ಯವಾಗಿ ವಯಸ್ಸಿನೊಂದಿಗೆ ರಕ್ತದೊತ್ತಡವೂ ಏರುತ್ತಾ ಹೋಗುತ್ತದೆ. ಇದಕ್ಕಾಗಿ ಊಟದೊಂದಿಗೆ ಒಂದು ಚಮಚ ಕೊತ್ತಂಬರಿ ಪುಡಿಯನ್ನು ಸೇರಿಸಿ ಸೇವಿಸುವ ಮೂಲಕ ಮೂರು ದಿನಗಳಲ್ಲಿಯೇ ಅಧಿಕ ರಕ್ತದೊತ್ತಡ ಹತೋಟಿಗೆ ಬರುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
