ಜಾನ್ಸನ್ & ಜಾನ್ಸನ್ ಉತ್ಪನ್ನಕ್ಕೂ, ಕ್ಯಾನ್ಸರ್‌ಗೂ ಸಂಬಂಧವಿದೆ!

By Super

ಮಕ್ಕಳ ನೈರ್ಮಲ್ಯಕ್ಕೆ ಉಪಯೋಗಿಸುವ ಉತ್ಪನ್ನಗಳಲ್ಲಿ ಪ್ರಮುಖವಾದ ಹೆಸರು ಎಂದರೆ ಜಾನ್ಸನ್ ಆಂಡ್ ಜಾನ್ಸನ್. ಮಾರುಕಟ್ಟೆಯಲ್ಲಿ ಅಗ್ರಸ್ಥಾನ ಪಡೆದಿರುವ ಈ ಸಂಸ್ಥೆಯ ಇತಿಹಾಸದಲ್ಲಿಯೇ ಕಳೆದ ವರ್ಷ ಒಂದು ಪ್ರಕರಣ ಕಪ್ಪುಚುಕ್ಕೆಯಿಟ್ಟುಬಿಟ್ಟಿತು. ಅಮೇರಿಕಾದ ಅಲಬಾಮಾ ಸಂಸ್ಥಾನದ ಜಾಕಿ ಫಾಕ್ಸ್ ಎಂಬ ಅರವತ್ತೆರಡು ವರ್ಷದ ಹಿರಿಯ ಮಹಿಳೆಯೋರ್ವರು ಅಕ್ಟೋಬರ್ 2015ರಲ್ಲಿ ಗರ್ಭಕೋಶದ ಕ್ಯಾನ್ಸರ್‌ನಲ್ಲಿ ತೀರಿಕೊಂಡಿದ್ದು ಇದಕ್ಕೆ ಜಾನ್ಸನ್ ಆಂಡ್ ಜಾನ್ಸನ್ ಉತ್ಪನ್ನದ ಬಳಕೆಯೇ ಕಾರಣ ಎಂದು ನ್ಯಾಯಾಯಲದಲ್ಲಿ ವಾದಿಸಲಾಯಿತು.

ಹಲವು ವಿಚಾರಣೆಗಳ ಬಳಿಕ ಸಂಸ್ಥೆ ಆಕೆಯ ಮನೆಯವರಿಗೆ ಬರೋಬ್ಬರಿ ಎಪ್ಪತ್ತೆರಡು ಮಿಲಿಯನ್ ಡಾಲರುಗಳಷ್ಟು (ಸುಮಾರು 495 ಕೋಟಿ ರೂಪಾಯಿ) ಭಾರೀ ಮೊತ್ತವನ್ನು ನೀಡುವಂತೆ ತೀರ್ಪು ನೀಡಿತು. ಈ ಮಹಿಳೆ ಸತತವಾಗಿ ಸಂಸ್ಥೆಯ ಬೇಬಿ ಪೌಡರ್ ಮತು ಇತರ ಉತ್ಪನ್ನಗಳನ್ನು ಬಳಸುತ್ತಿದ್ದರು. ಸುಮಾರು ಐವತ್ತು ವರ್ಷಗಳ ಕಾಲ ಬಳಸಿದ ಕಾರಣ ಇವರ ಗರ್ಭಕೋಶ ಕ್ಯಾನ್ಸರ್‌ಗೆ ಒಳಗಾಗಿದ್ದು ಸಂಸ್ಥೆಯೇ ಪರಿಹಾರ ನೀಡಬೇಕು ಎಂದು ಅವರ ಮಗ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಪ್ರಕರಣ ಮಾತ್ರವಲ್ಲ, ನ್ಯೂ ಜರ್ಸಿಯಲ್ಲಿ ಮುಖ್ಯ ಕಚೇರಿ ಇರುವ ಈ ಸಂಸ್ಥೆ ತನ್ನ ಉತ್ಪನ್ನಗಳನ್ನು ನವೀಕರಿಸಿದ ಬಳಿಕವೂ ಆರೋಗ್ಯ ಮತ್ತು ಗ್ರಾಹಕ ಬಳಕೆ ವಸ್ತುಗಳ ಬಳಕೆದಾರರ ಸಂಸ್ಥೆಗಳೂ ಈ ಉತ್ಪನ್ನಗಳ ಬಗ್ಗೆ ಅಧ್ಯಯನ ನಡೆಸಿ ಆರೋಗ್ಯಕ್ಕೆ ಮಾರಕವಾದ ಇದರ ಕೆಲವು ಸಾಮಾಗ್ರಿಗಳ ಬಗ್ಗೆ ವಿವರ ಸಲ್ಲಿಸಿದ್ದವು. ಸುಗಂಧಭರಿತವಾದ ಟಾಲ್ಕಂ ಪೌಡರ್‌ ಆರೋಗ್ಯಕ್ಕೆ ಮಾರಕವೇ?

ಒಂದೆರಡು ಬಾರಿಯಲ್ಲ, ಸತತ ಮೂರು ವರ್ಷಗಳವರೆಗೆ ಸತತವಾಗಿ ಈ ಸಂಸ್ಥೆಗಳು ಜಾನ್ಸನ್ ಆಂಡ್ ಜಾನ್ಸನ್ ಉತ್ಪನ್ನಗಳ ಬಗ್ಗೆ ಸಾರ್ವಜನಿಕರಲ್ಲಿ ಕಾಳಜಿ ಮೂಡಿಸಿ ಉತ್ಪನ್ನಗಳನ್ನು ಖರೀದಿಸದಂತೆ ಮಾಡಿದವು. ಯಾರ ಬೆದರಿಕೆಗೂ ಮಣಿಯದಿದ್ದ ಸಂಸ್ಥೆ ಜನತಾ ಜನಾರ್ಧನ ಯಾವಾಗ ಉತ್ಪನ್ನಗಳನ್ನು ಬೇಡ ಎಂದನೋ ಆಗ ಎಚ್ಚೆತ್ತುಕೊಂಡು 2012ರಲ್ಲಿ ತನ್ನ ಉತ್ಪನ್ನಗಳಿಂದ 1,4-dioxane ಮತ್ತು formaldehyde ಎಂಬ ರಾಸಾಯನಿಕಗಳನ್ನು ನಿವಾರಿಸುವುದಾಗಿ ಸ್ಪಷ್ಟೀಕರಣ ನೀಡಿ ಮಾರುಕಟ್ಟೆಯಲ್ಲಿ ಈ ಅಂಶವಿದ್ದ ಅಷ್ಟೂ ಉತ್ಪನ್ನಗಳನ್ನು ಹಿಂದೆ ಪಡೆದುಕೊಂಡು ಈ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು.

ಏಕೆಂದರೆ ಈ ರಾಸಾಯನಿಕಗಳು ನಿಧಾನವಾಗಿ ಗರ್ಭಕೋಶದಲ್ಲಿ ಕ್ಯಾನ್ಸರ್ ಹುಟ್ಟುಹಾಕುವುದನ್ನು ಸಂಶೋಧನೆಗಳು ದೃಢಪಡಿಸಿದ್ದವು. ಆದರೆ ಭಾರತದಲ್ಲಿ ಲಭ್ಯವಿರುವ ಈ ಸಂಸ್ಥೆಯ ಉತ್ಪನ್ನಗಳಲ್ಲಿ ಈ ರಾಸಾಯನಿಕಗಳು ಇಲ್ಲ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಸಂಸ್ಥೆಯ ಉತ್ಪನ್ನಗಳು ಮತ್ತು ಕ್ಯಾನ್ಸರ್‌ಗೆ ಯಾವ ಸಂಬಂಧ ಇದೆ ಎಂಬ ನಿಟ್ಟಿನಲ್ಲಿ ಇಂದು ಬೋಲ್ಡ್ ಸ್ಕೈ ತಂಡ ಮಹತ್ವದ ಮಾಹಿತಿಗಳನ್ನು ನೀಡುತ್ತಿದೆ. ಒಂದು ವೇಳೆ ನೀವೂ ಈ ಸಂಸ್ಥೆಯ ಉತ್ಪನ್ನಗಳನ್ನು ಬಳಸುತ್ತಾ ಬಂದಿದ್ದೀರಾದರೆ ಈ ಬಗ್ಗೆ ಎಚ್ಚೆತ್ತುಕೊಂಡು ಬೇರೆ ಸಂಸ್ಥೆಯ ಉತ್ಪನ್ನಗಳನ್ನು ಬಳಸಲು ಕೆಳಗಿನ ಸ್ಲೈಡ್ ಶೋ ನೆರವಾಗಲಿದೆ....

ಟಾಲ್ಕ್ ಎಂದರೇನು

ಟಾಲ್ಕ್ ಎಂದರೇನು

ಟಾಕ್ ಎಂದೇ ಹೆಚ್ಚು ಜನಪ್ರಿಯವಾದ ಟಾಲ್ಕಂ ಪೌಡರ್‌ನ ಪ್ರಮುಖ ಸಾಮಗ್ರಿ ಎಂದರೆ ಟಾಲ್ಕ್ (talc), ವಾಸ್ತವವಾಗಿ ಇದೊಂದು ಖನಿಜವಾಗಿದ್ದು ಮಣ್ಣಿನಲ್ಲಿ ಬೆರೆತಿರುತ್ತದೆ. ಇದರಲ್ಲಿ ಪ್ರಮುಖವಾಗಿ ಮೆಗ್ನೇಶಿಯಂ, ಸಿಲಿಕಾನ್, ಆಮ್ಲಜನಕ ಮತ್ತು ಜಲಜನಕ ಇರುತ್ತದೆ. ಇದು ಸಂಪೂರ್ಣವಾಗಿ ಒಣಗಿರುವ ಕಾರಣ ನೀರನ್ನು ಸುಲಭವಾಗಿ ಹೀರಿಕೊಳ್ಳುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಟಾಲ್ಕ್ ಎಂದರೇನು

ಟಾಲ್ಕ್ ಎಂದರೇನು

ಇದೇ ಕಾರಣಕ್ಕೆ ಟಾಲ್ಕಂ ಪೌಡರ್ ಅಂದರೆ ಬೆವರು ಹೀರಿಕೊಳ್ಳಲೆಂದೇ ಪೌಡರ್ ನ ರೂಪದಲ್ಲಿ ಬಳಸಲಾಗುತ್ತದೆ. ಇದರ ಸೌಮ್ಯ ರೂಪವನ್ನು ಮಕ್ಕಳ ಪೌಡರ್‌ನಲ್ಲಿ ಬಳಸಲಾಗುತ್ತದೆ. ಜಾನ್ಸನ್ ಅಂಡ್ ಜಾನ್ಸನ್ ಬೇಬಿ ಪೌಡರ್ ಎಂದರೆ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಉತ್ಪನ್ನವಾಗಿದೆ.

ಟಾಲ್ಕ್ ನಲ್ಲಿ ಇನ್ನೇನಿದೆ?

ಟಾಲ್ಕ್ ನಲ್ಲಿ ಇನ್ನೇನಿದೆ?

ಸುಮಾರು ಎಪ್ಪತ್ತರ ದಶಕದಲ್ಲಿ ಇದರಲ್ಲಿ ಆಸ್ಬೆಸ್ಟಾಸ್ (asbestos) ಎಂಬ ಸಾಮಾಗ್ರಿಯನ್ನೂ ಬೆರೆಸಲಾಗುತ್ತಿತ್ತು. ಆದರೆ ಆ ಸಮಯದಲ್ಲಿ ಕೆಲವು ಸಂಶೋಧನೆಗಳ ಮೂಲಕ ಇದು ಶ್ವಾಸಕೋಶದ ಕ್ಯಾನ್ಸರ್ ಬರುತ್ತದೆ ಎಂದು ಸಾಬೀತಾದ ಕಾರಣ ಇದನ್ನು ಬೆರೆಸುವುದನ್ನು ನಿಲ್ಲಿಸಲಾಯಿತು. ಆದರೆ ಅಂದು ಈ ಉತ್ಪನ್ನಗಳನ್ನು ಬಳಸಿದ್ದವರಲ್ಲಿ ನಿಧಾನವಾಗಿ ಕ್ಯಾನ್ಸರ್ ಹಬ್ಬಿಯಾಗಿತ್ತು.

ಗರ್ಭಕೋಶದ ಕ್ಯಾನ್ಸರ್ ಗೆ ಇತರ ಕಾರಣಗಳೇನು

ಗರ್ಭಕೋಶದ ಕ್ಯಾನ್ಸರ್ ಗೆ ಇತರ ಕಾರಣಗಳೇನು

ಸಂಸ್ಥೆಯ ವತಿಯಿಂದ ವಾದ ಮಾಡಿದ ವಕೀಲರು ಗರ್ಭಕೋಶದ ಕ್ಯಾನ್ಸರ್ ಗೆ ತಮ್ಮ ಉತ್ಪನ್ನಗಳು ಮಾತ್ರ ಕಾರಣವಾಗಿರಲು ಸಾಧ್ಯವಿಲ್ಲ, ಬೇರೆ ಕಾರಣಗಳೂ ಇರಬಹುದು ಎಂದು ತಿಳಿಸಿದ್ದರು. ಕ್ಯಾನ್ಸರ್ ತಜ್ಞರ ಪ್ರಕಾರ ವಯಸ್ಸು, ವಂಶವಾಹಿನಿಯ ಮೂಲಕ ಬರುವ ತೊಂದರೆಗಳು, ಸಂತಾನೋತ್ಪತ್ತಿಗೆ ಸಂಬಂಧಪಟ್ಟ ತೊಂದರೆಗಳು ಮತ್ತು ಗರ್ಭ ನಿರೋಧಕಗಳ ಅಡ್ಡ ಪರಿಣಾಮಗಳು ಮೊದಲಾದವು ಕಾರಣವಾಗಿರಬಹುದು.

ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆಗೂ ಗರ್ಭಕೋಶದ ಕ್ಯಾನ್ಸರ್‌ಗೂ ಏನು ಸಂಬಂಧ?

ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆಗೂ ಗರ್ಭಕೋಶದ ಕ್ಯಾನ್ಸರ್‌ಗೂ ಏನು ಸಂಬಂಧ?

ಜಾನ್ಸನ್ ಅಂಡ್ ಜಾನ್ಸನ್ ನ ಉತ್ಪನ್ನಗಳಲ್ಲಿ ಗರ್ಭಕೋಶದ ಕ್ಯಾನ್ಸರ್‌ಗೆ ಕಾರಣವಾಗುವ ರಾಸಾಯನಿಕಗಳಿವೆಯೇ? ಈ ಪ್ರಶ್ನೆಗೆ ಕೆಲವರು ಸಂಶೋಧನೆಗಳು ಇವೆ ಎಂದು ಉತ್ತರ ನೀಡಿವೆ. ಆದರೆ ಇವು ಯಾವ ಯಾವ ಉತ್ಪನ್ನಗಳಲ್ಲಿವೆ ಎಂದು ಖಚಿತಪಡಿಸಿಲ್ಲ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆಗೂ ಗರ್ಭಕೋಶದ ಕ್ಯಾನ್ಸರ್‌ಗೂ ಏನು ಸಂಬಂಧ?

ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆಗೂ ಗರ್ಭಕೋಶದ ಕ್ಯಾನ್ಸರ್‌ಗೂ ಏನು ಸಂಬಂಧ?

ಹೆಚ್ಚಿನ ಸಂದರ್ಭಗಳಲ್ಲಿ ಟಾಲ್ಕ್ ಇರುವ ಉತ್ಪನ್ನಗಳಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ರಾಸಾಯನಿಕ ಹೆಚ್ಚಿರುವುದು ಕಂಡುಬಂದಿದ್ದು ಇದರ ಬಳಕೆದಾರರಲ್ಲಿ ಕ್ಯಾನ್ಸರ್ ಕಾಣಿಸಿಕೊಳ್ಳುವ ಸಂಭವ ಹೆಚ್ಚು ಎಂದು ಈ ಸಂಶೋಧನೆಗಳು ತಿಳಿಸಿವೆ.

ಗರ್ಭಕೋಶದ ಕ್ಯಾನ್ಸರ್‌ನ ಲಕ್ಷಣಗಳೇನು ಗೊತ್ತೇ?

ಗರ್ಭಕೋಶದ ಕ್ಯಾನ್ಸರ್‌ನ ಲಕ್ಷಣಗಳೇನು ಗೊತ್ತೇ?

ಗರ್ಭಕೋಶದ ಕ್ಯಾನ್ಸರ್ ಆವರಿಸಿದ ಬಳಿಕ ತೂಕದಲ್ಲಿ ಶೀಘ್ರ ಇಳಿಕೆ, ಹೊಟ್ಟೆಯ ಕೆಳಭಾಗದಲ್ಲಿ ತುಂಬಿಕೊಂಡಂತೆ ಆಗುವುದು, ಊತ, ಅತೀವ ಸೊಂಟನೋವು, ಮಲವಿಸರ್ಜನೆಯಲ್ಲಿ ಕಷ್ಟವಾಗುವುದು. ಪದೇಪದೇ ಮೂತ್ರಕ್ಕೆ ಅವಸರವಾಗುವುದು ಈ ಕ್ಯಾನ್ಸರ್ ನ ಪ್ರಮುಖ ಲಕ್ಷಣಗಳಾಗಿವೆ.

ಈ ಕ್ಯಾನ್ಸರ್‍‌ನಿಂದ ಕಾಪಾಡಿಕೊಳ್ಳುವುದು ಹೇಗೆ?

ಈ ಕ್ಯಾನ್ಸರ್‍‌ನಿಂದ ಕಾಪಾಡಿಕೊಳ್ಳುವುದು ಹೇಗೆ?

ಕ್ಯಾನ್ಸರ್ ಆವರಿಸಿದೆಯೇ ಎಂಬುದನ್ನು ಕಂಡುಕೊಳ್ಳುವುದು ಮೊದಲ ಆದ್ಯತೆಯಾಗಿದೆ.ಇದಕ್ಕಾಗಿ ವೈದ್ಯರು ಕೆಲವು ಪರೀಕ್ಷೆಗಳನ್ನು ನಡೆಸುತ್ತಾರೆ. ಗರ್ಭಕೋಶದ ಗಾತ್ರ ದೊಡ್ಡದಾಗಿದೆಯೇ ಎಂಬುದನ್ನು

ಪರೀಕ್ಷಿಸುತ್ತಾರೆ. ಕೆಳಹೊಟ್ಟೆಯಲ್ಲಿ ನೀರು ತುಂಬಿಕೊಂಡಿರುವ (ascites) ಸಂದರ್ಭಗಳು ಕ್ಯಾನ್ಸರ್ ಆವರಿಸಿರುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.

ಈ ಕ್ಯಾನ್ಸರ್‍‌ನಿಂದ ಕಾಪಾಡಿಕೊಳ್ಳುವುದು ಹೇಗೆ?

ಈ ಕ್ಯಾನ್ಸರ್‍‌ನಿಂದ ಕಾಪಾಡಿಕೊಳ್ಳುವುದು ಹೇಗೆ?

ಆದ್ದರಿಂದ ಜಾನ್ಸನ್ ಸಂಸ್ಥೆಯ ಉತ್ಪನ್ನಗಳನ್ನು ಕಣ್ಣು ಮುಚ್ಚಿ ಖರೀದಿಸುವ ಬದಲು ನಮ್ಮ ದೇಶದ, ಸುರಕ್ಷಿತ ಎಂದು ಪ್ರಾಮಾಣಿತವಾದ ಉತ್ಪನ್ನಗಳನ್ನೇ ಬಳಸುವುದು ಶ್ರೇಯಸ್ಕರ.

English summary

Johnson & Johnson Causes Ovarian Cancer?

Today, Boldsky gives you some insight information as to what is the link between Johnson & Johnson products and cancer. The results will shock you. And, if you have been using the product, it is time to opt for a different talc. Take a look at how Johnson & Johnson causes cancer:
X
Desktop Bottom Promotion