Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಥೈರಾಯ್ಡ್ ಗ್ರಂಥಿಯ ಅಪಾಯದ ಲಕ್ಷಣಗಳು, ಎಚ್ಚರವಾಗಿರಿ!
ನಿಮ್ಮ ತೂಕ ಇಳಿಸುವ ಪ್ರಯತ್ನಗಳು ಫಲ ಕೊಡುತ್ತಿಲ್ಲವೇ? ಕೊಂಚ ಹೊತ್ತು ಮಲಗಿದರೂ ನಿದ್ದೆ ಆವರಿಸುತ್ತಿದೆಯೇ? ದಿನದ ಬಹುತೇಕ ಸಮಯದಲ್ಲಿ ಆಯಾಸ ಆವರಿಸಿರುತ್ತದೆಯೇ? ಮೆದುಳಿನ ಕ್ಷಮತೆ ಕಡಿಮೆಯಾಗಿದೆ ಎಂದು ಅನ್ನಿಸುತ್ತಿದೆಯೇ? ಈ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಎಂದಾದರೆ ಇದಕ್ಕೆ ಥೈರಾಯ್ಡ್ ಗ್ರಂಥಿಯ ಕ್ಷಮತೆ ಕುಂದಿರುವುದು ಅಥವಾ hypothyroidism ಎಂಬ ಕಾರಣವಿರಬಹುದು. ನಮ್ಮ ನಿತ್ಯದ ಚಟುವಟಿಕೆಗೆ ಅಗತ್ಯವಾದ ಜೀವರಾಸಾಯನಿಕ ಕ್ರಿಯೆ ಪೂರ್ಣಗೊಳ್ಳಲು ಥೈರಾಯ್ಡ್ ಗ್ರಂಥಿಯ ಪೂರ್ಣ ಪ್ರಮಾಣದ ಸ್ರವಿಸುವಿಕೆ ಅಗತ್ಯ. ಒಂದು ವೇಳೆ ಈ ಪ್ರಮಾಣದಲ್ಲಿ ಕಡಿಮೆಯಾದರೆ ಜಡತೆ ಆವರಿಸುತ್ತದೆ.
ಅಷ್ಟಕ್ಕೂ ಈ ಥೈರಾಯ್ಡ್ ಎಂದರೇನು? ಇದು ನಮ್ಮ ಕುತ್ತಿಗೆಯಲ್ಲಿ ಧ್ವನಿಪೆಟ್ಟಿಗೆಯನ್ನು ಸುತ್ತುವರೆದಿರುವಂತಿರುವ ಒಂದು ಗ್ರಂಥಿಯಾಗಿದ್ದು ನಮ್ಮ ದೇಹದ ಬೆಳವಣಿಗೆ ಮತ್ತು ಇತರ ಚಟುವಟಿಕೆಗೆ ಅಗತ್ಯವಾದ ಹಾರ್ಮೋನುಗಳನ್ನು ಸ್ರವಿಸುತ್ತದೆ. ಈ ಹಾರ್ಮೋನುಗಳ ಸ್ರವಿಕೆ ಏಕೆ ಅಗತ್ಯ? ನಮ್ಮ ದೇಹದ ತಾಪಮಾನವನ್ನು ಸುಸ್ಥಿತಿಯಲ್ಲಿಡುವುದು, ಜೀರ್ಣಕ್ರಿಯೆ, ಶಕ್ತಿಯ ಬಳಕೆ ಇತ್ಯಾದಿಗಳಿಗೆಲ್ಲಾ ಅಗತ್ಯ ಪ್ರಮಾಣದ ಹಾರ್ಮೋನುಗಳನ್ನು ಸ್ರವಿಸುವುದು ಈ ಗ್ರಂಥಿಯ ಕೆಲಸ. ಅಲ್ಲದೇ ನಮ್ಮ ದೇಹದ ಅತಿಮುಖ್ಯ ಅಂಗಗಳಾದ ಹೃದಯ ಮತ್ತು ಯಕೃತ್ ಗಳ ಕಾರ್ಯವನ್ನು ನಿರ್ವಹಿಸಲೂ ಥೈರಾಯ್ಡ್ ಸ್ರವಿಕೆ ಅವಶ್ಯಕವಾಗಿದ್ದು ಒಂದರ್ಥದಲ್ಲಿ ಈ ಅಂಗಗಳನ್ನು ನಿಯಂತ್ರಿಸುವ ಚಾಲಕನಾಗಿದೆ.
ಥೈರಾಯ್ಡ್ ಗ್ರಂಥಿಯ ಕ್ಷಮತೆ ಕಡಿಮೆಯಾಗಿರುವುದರಿಂದ ನಮ್ಮ ನಡುವಣ ಹಲವಾರು ಜನರು ಬಳಲುತ್ತಿರುತ್ತಾರಾದರೂ ಇದರ ಬಗ್ಗೆ ಹೆಚ್ಚಿನವರಿಗೆ ಅರಿವೇ ಇರುವುದಿಲ್ಲ. ಒಂದು ವೇಳೆ ನಿಮ್ಮಲ್ಲಿ ಈ ತೊಂದರೆ ಇದೆ ಎಂದು ಗೊತ್ತಾಗುವುದು ಹೇಗೆ? ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿರುವ ಮಾಹಿತಿಗಳು ನಿಮ್ಮ ನೆರವಿಗೆ ಬರಬಲ್ಲವು, ಮುಂದೆ ಓದಿ...

ಸುಸ್ತು
ಇಡಿಯ ದಿನ ಯಾವುದೇ ಸುಸ್ತಾಗುವಂತಹ ಕೆಲಸ ಮಾಡದೇ ಇದ್ದರೂ ಸುಸ್ತು ಅನ್ನಿಸುವುದು, ಇಡಿಯ ದಿನ ನಿದ್ದೆಯ ಜೊಂಪು ಆವರಿಸಿರುವುದು, ಕೊಂಚ ಅವಕಾಶ ಸಿಕ್ಕಿದರೂ ನಿದ್ದೆಗೆ ಜಾರುವುದು ಇದರ ಪ್ರಮುಖ ಲಕ್ಷಣವಾಗಿದೆ. ಏಕೆಂದರೆ ನಿಮ್ಮ ರಕ್ತದಲ್ಲಿ ಹಾರ್ಮೋನುಗಳ ಪ್ರಮಾಣ ಕಡಿಮೆಯಾದರೆ ಜಡತ್ವವೂ ಹೆಚ್ಚುತ್ತದೆ. ಇದಕ್ಕೆ ಉತ್ತಮ ಪರಿಹಾರವೆಂದರೆ ಅಗತ್ಯವಿದ್ದರೂ ಇಲ್ಲದಿದ್ದರೂ ಶರೀರವನ್ನು ಸುಮ್ಮನಿರಲು ಬಿಡದೇ ಏನಾದರೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದು.

ಖಿನ್ನತೆ
ಥೈರಾಯ್ಡ್ ಗ್ರಂಥಿಯ ಕ್ಷಮತೆ ಕಡಿಮೆಯಾಗಿರುವ ಇನ್ನೊಂದು ಸ್ಪಷ್ಟ ಲಕ್ಷಣವೆಂದರೆ ಖಿನ್ನತೆ ಮತ್ತು ನಿರುತ್ಸಾಹತೆ. ಇಡಿಯ ದಿನ ಏನೂ ಮಾಡಲು ಮನಸ್ಸು ಬಾರದೇ ಇರುವುದು, ಯಾವುದಾದರೂ ಚಟುವಟಿಕೆ ಇದ್ದರೆ ಇದನ್ನು ತಪ್ಪಿಸಿಕೊಳ್ಳಲು ನೆವ ಹುಡುಕುವುದು.

ಮಲಬದ್ಧತೆ
ಥೈರಾಯ್ಡ್ ಗ್ರಂಥಿಯ ಕ್ಷಮತೆ ಕಡಿಮೆಯಾಗುವ ಮೂಲದ ದೇಹದ ಕೆಲವು ಕ್ರಿಯೆಗಳೂ ಬಾಧೆಗೊಳಗಾಗುತ್ತವೆ. ಇದರಲ್ಲಿ ಪ್ರಮುಖವಾದುದು ಜೀರ್ಣಕ್ರಿಯೆಯಲ್ಲಿ ವ್ಯತ್ಯಯ. ಇದರ ನೇರಪರಿಣಾಮವಾಗಿ ಮಲಬದ್ಧತ ಉಂಟಾಗುತ್ತದೆ. ವಿಸರ್ಜನೆ ಕಾರ್ಯ ಎರಡು ಅಥವಾ ಮೂರು ದಿನಕ್ಕೊಮ್ಮೆಯಷ್ಟು ತಡವಾಗುತ್ತದೆ.

ಸ್ಮರಣ ಶಕ್ತಿ ಕುಂದುವುದು
ಮೆದುಳಿನ ಕ್ಷಮತೆಯೂ ಕುಂದುವ ಕಾರಣ ಸ್ಮರಣಶಕ್ತಿ, ಮುಂದೆ ಬರಬಹುದಾದುದನ್ನು ಊಹಿಸುವ ಶಕ್ತಿ, ಪೂರ್ವಗ್ರಹಣ ಶಕ್ತಿ ಮೊದಲಾದವು ಕೂಡಾ ಕಡಿಮೆಯಾಗುತ್ತದೆ.

ಸ್ಥೂಲಕಾಯ ಆವರಿಸುತ್ತದೆ
ಉತ್ತಮ ಆಹಾರ ಸೇವಿಸಿಯೂ, ನಿತ್ಯದ ಚಟುವಟಿಕೆಗಳನ್ನು ಆಚರಿಸಿಯೂ ತೂಕ ಹೆಚ್ಚುತ್ತಾ ಹೋದರೆ ಇದು ಸಹಾ ಥೈರಾಯ್ಡ್ ಗ್ರಂಥಿಯ ಕ್ಷಮತೆ ಕಡಿಮೆಯಾಗಿರುವ ಸೂಚನೆಯಾಗಿದೆ.

ನಿಮಿರು ದೌರ್ಬಲ್ಯ ಆವರಿಸುತ್ತದೆ
ಥೈರಾಯ್ಡ್ ಗ್ರಂಥಿಯ ಕ್ಷಮತೆ ಕಡಿಮೆಯಾಗುವ ಮೂಲಕ ಎದುರಾಗುವ ಇನ್ನೊಂದು ತೊಂದರೆ ಎಂದರೆ ನಿಮಿರು ದೌರ್ಬಲ್ಯ ಹಾಗೂ ಪ್ರೇಮಚಟುವಟಿಕೆಯಲ್ಲಿ ನಿರುತ್ಸಾಹ.

ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣದಲ್ಲಿ ಏರಿಕೆ
ಕೆಲವೊಮ್ಮೆ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಏರಿಕೆಯಾಗಿರುವುದಕ್ಕೆ ಥೈರಾಯ್ಡ್ ಗ್ರಂಥಿಯೇ ಕಾರಣವಾಗಿರಬಹುದು. ಮೇಲಿನ ಸೂಚನೆಗಳಲ್ಲಿ ಕೆಲವಾದರೂ ನಿಮ್ಮ ಅನುಭವಕ್ಕೆ ಬಂದರೆ ತಕ್ಷಣವೇ ವೈದ್ಯರ ಬಳಿ ತಪಾಸಿಸಿಕೊಂಡು ಸೂಕ್ತ ಔಷಧಿಗಳನ್ನು ಸೇವಿಸುವ ಮೂಲಕ ಉತ್ತಮ ಆರೋಗ್ಯವನ್ನು ಮತ್ತೆ ಪಡೆಯಬಹುದು.



Click it and Unblock the Notifications