Latest Updates
-
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು? -
ಜನ್ಮಾಷ್ಟಮಿ ಉಪವಾಸ: ಸುಸ್ತಾಗದೆ, ಆರೋಗ್ಯಕರವಾಗಿ ವ್ರತ ಆಚರಿಸಲು ಇಲ್ಲಿವೆ ಸರಳ ಟಿಪ್ಸ್!
ಚೂಯಿಂಗ್ ಗಮ್, ಜಗಿದು ಜಗಿದು ನುಂಗಿ ಬಿಟ್ಟಿರಿ ಜೋಕೆ!
ಚೂಯಿಂಗ್ ಗಮ್ ಅಗಿಯುವುದು ಬಹುತೇಕ ಜನರ ಆಸಕ್ತಿದಾಯಕ ಹವ್ಯಾಸಗಳಲ್ಲಿ ಒಂದಾಗಿರುತ್ತದೆ. ಇದಕ್ಕೆ ಮಕ್ಕಳು, ಹಿರಿಯರು ಎಂಬ ಭೇದ ಭಾವವಿಲ್ಲ. ಕ್ರಿಕೆಟ್ ಅಂಗಣದಲ್ಲಿ ಆಡುವ ವಿಶ್ವಖ್ಯಾತ ಆಟಗಾರರಿಂದ ಹಿಡಿದು ಶಾಲೆಗೆ ಹೋಗುವ ಪುಟ್ಟ ಮಗುವರೆಗೆ ಇದು ಬೇಕು ಎಂದು ಕೇಳುವವರು ಇದ್ದಾರೆ. ಮಕ್ಕಳಂತು ಹಠ ಹಿಡಿದು ತಮ್ಮ ಕೆಲಸವನ್ನು ಮಾಡಿಕೊಳ್ಳುತ್ತಾರೆ. ಮಕ್ಕಳಿಗೆ ಈ ಚೂಯಿಂಗ್ ಗಮ್ ಅನ್ನು ತಿನ್ನುವುದರ ಜೊತೆಗೆ ಬುಡ್ಡೆ ಅಥವಾ ಗುಳ್ಳೆಯನ್ನು ಬಿಟ್ಟು ಅದನ್ನು ಹೊಡೆಯುವ ಕೆಲಸವನ್ನು ಸಹ ಮಾಡಲು ಇಷ್ಟವಾಗುತ್ತದೆ.

ಆದರೂ ನಮ್ಮ ಬಾಯಿಯಲ್ಲಿ ಸುಮಾರು ಹೊತ್ತು ಅಗಿಯಲು ಮತ್ತು ನಮ್ಮ ಕಾಲವನ್ನು ಕಳೆಯಲು ಸಹಾಯ ಮಾಡುವ ಈ ಚೂಯಿಂಗ್ ಗಮ್ ಅನ್ನು ನುಂಗುವುದರಿಂದ ಏನಾದರು ಹೆಚ್ಚು ಕಡಿಮೆ ಉಂಟಾಗುತ್ತದೆಯೇ? ಎಂಬ ಸಂಶಯ ನಿಮ್ಮನ್ನು ಕಾಡಬಹುದು ಬನ್ನಿ ಒಂದು ವೇಳೆ ನೀವು ಚೂಯಿಂಗ್ ಗಮ್ ಅನ್ನು ಸೇವಿಸಿದಾಗ ಏನಾಗುತ್ತದೆ ಎಂಬುದನ್ನು ನೋಡೋಣ ಬನ್ನಿ. ಹಳೆಯ ಮೂಢನಂಬಿಕೆಯ ಪ್ರಕಾರ ಒಂದು ವೇಳೆ ಚೂಯಿಂಗ್ ಗಮ್ ಅನ್ನು ಸೇವಿಸಿದಲ್ಲಿ, ಅದು ನಿಮ್ಮ ಕರುಳಿನಲ್ಲಿ 7 ವರ್ಷ ಇರುತ್ತದೆಯಂತೆ. ಅದು ಎಲ್ಲಾ ಸುಳ್ಳು ಅದನ್ನು ನಂಬಬೇಡಿ. ಆದರೂ ನೀವು ಇದನ್ನು ಸೇವಿಸಿದ ಮೇಲೆ ಏನಾಗುತ್ತದೆ ಎಂದು ನೀವು ಗಂಭೀರವಾಗಿ ಚಿಂತಾಕ್ರಾಂತರಾಗಿದ್ದಲ್ಲಿ, ಏನಾಗುತ್ತದೆ ಎಂದು ತಿಳಿದುಕೊಳ್ಳಲು ಇದನ್ನು ಓದಿ.
ಚೂಯಿಂಗ್ ಗಮ್ ಸೇವಿಸುವುದರಿಂದ ಯಾವ ಪರಿಣಾಮವುಂಟಾಗುತ್ತದೆ?
ಚೂಯಿಂಗ್ ಗಮ್ ಅನ್ನು ನೀವು, ನುಂಗದ ಹೊರತು ಸಾಮಾನ್ಯವಾಗಿ ನಿರಾಪಯಕಾರಿಯಾಗಿಯೇ ಇರುತ್ತವೆ. ಒಂದು ಚೂಯಿಂಗ್ ಗಮ್ ಅನ್ನು ನೀವು ನುಂಗಿದರೆ ಅದರಿಂದ ಯಾವುದೇ ಹಾನಿ ಅಥವಾ ಅಪಾಯ ಉಂಟಾಗುವುದಿಲ್ಲ. ಆದರೆ ಒಂದೇ ಬಾರಿಗೆ ನೀವು ಹಲವಾರು ಚೂಯಿಂಗ್ ಗಮ್ ಅನ್ನು ನುಂಗಿದಲ್ಲಿ, ನಿಮಗೆ ಅಪಾಯ ಕಟ್ಟಿಟ್ಟ ಬುತ್ತಿ. ಇವು ನಿಮ್ಮ ಕರುಳಿನಲ್ಲಿ ಹೋಗಿ ಕಟ್ಟಿಕೊಂಡು ಬಿಡುತ್ತವೆ.
ಹಲವಾರು ಚಿಕ್ಕ ಮಕ್ಕಳು ಈ ಚೂಯಿಂಗ್ ಗಮ್ ಕುರಿತಾಗಿ ಉದಾಸೀನರಾಗಿರುತ್ತಾರೆ. ಇದು ಅವರ ಆರೋಗ್ಯದ ಮೇಲೆ ಮತ್ತು ಕರುಳಿನ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಅರಿಯದ ಇವರು ಅದನ್ನು ನುಂಗಿಬಿಡುತ್ತಾರೆ. ಚೂಯಿಂಗ್ ಗಮ್ಸೇವಿಸುವುದರಿಂದ ಯಾವ ಪರಿಣಾಮವುಂಟಾಗುತ್ತದೆ? ಒಂದು ವೇಳೆ ನೀವು ಚೂಯಿಂಗ್ ಗಮ್ಅನ್ನು ಆಕಸ್ಮಿಕವಾಗಿ ಸೇವಿಸಿಬಿಟ್ಟರೆ, ಆ ಗಮ್ ಅನ್ನು ನಿಮ್ಮ ಕರುಳು ಎಲ್ಲಾ ಪದಾರ್ಥಗಳ ರೀತಿಯೇ ಗ್ರಹಿಸಿ ಜೀರ್ಣ ಮಾಡಿಕೊಳ್ಳುತ್ತದೆ.
ಚೂಯಿಂಗ್ ಗಮ್ ಅನ್ನು ಕಲರಿಂಗ್ ಏಜೆಂಟ್‌ಗಳು, ಸ್ವೀಟ್‌ನರ್‌ಗಳು ಮತ್ತು ಕೃತಕ ಫ್ಲೇವರ್‌ಗಳನ್ನು ಸೇರಿಸಿ ಮಾಡಿರುತ್ತಾರೆ. ಇವುಗಳು ನಿಮ್ಮ ಹೊಟ್ಟೆಯಲ್ಲಿರುವ ಜೀರ್ಣಕಾರಿ ರಸಗಳಿಂದ ಸುಲಭವಾಗಿ ವಿಘಟನೆಯಾಗುತ್ತದೆ. ಆದರೂ ಈ ಗಮ್‌ನಲ್ಲಿ ರೆಸಿನ್‌ಗಳು, ಎಲಾಸ್ಟೊಮರ್‌ಗಳು, ವ್ಯಾಕ್ಸ್‌ಗಳು, ಎಮುಲ್ಸಿಫೈಯರ್‌ಗಳು ಇರುತ್ತವೆ. ವಾಸ್ತವ ಏನೆಂದರೆ ಇವುಗಳನ್ನು ನಮ್ಮ ಹೊಟ್ಟೆ ಜೀರ್ಣ ಮಾಡಿಕೊಳ್ಳಲು ಆಗುವುದಿಲ್ಲ.
ಆದ್ದರಿಂದ ಇವುಗಳೆಲ್ಲ ಸೇರಿರುವ ಒಂದು ಪದಾರ್ಥವನ್ನು ನಮ್ಮ ಹೊಟ್ಟೆ ಜೀರ್ಣ ಮಾಡಿಕೊಳ್ಳಲು ಆಗುವುದಿಲ್ಲ. ಹಾಗೆಂದು ಇದು ನಮ್ಮ ಹೊಟ್ಟೆಯಲ್ಲಿ ಏಳು ವರ್ಷಗಳ ಕಾಲ ಜೀರ್ಣಗೊಳ್ಳದೆ ಇರುತ್ತದೆ ಎಂದರ್ಥವಲ್ಲ! ಈ ಗಮ್ ನಿಮ್ಮ ಹೊಟ್ಟೆಗೆ ಸೇರಿದಾಗ ಜಠರದ ಸಂಕುಚನ ವಿಕಸನ ಪ್ರಕ್ರಿಯೆ ಮೂಲಕ ನಿಧನವಾಗಿ ಕರುಳಿನಲ್ಲಿ ಸಾಗುತ್ತದೆ. ಕೊನೆಗೆ ಇದು ನಿಮ್ಮ ಜೀರ್ಣಾಂಗವ್ಯೂಹದಲ್ಲಿ 1-2 ದಿನಗಳಲ್ಲಿ ಸಂಪೂರ್ಣವಾಗಿ ಜೀರ್ಣಗೊಳ್ಳುತ್ತದೆ.
ಚೂಯಿಂಗ್ ಗಮ್ ಸೇವಿಸಲು ಮಕ್ಕಳಿಗೆ ಯಾವ ವಯಸ್ಸು ಸೂಕ್ತ?
ನಿಮ್ಮ ಮಕ್ಕಳು ಚೂಯಿಂಗ್ ಗಮ್ ಹೇಗೆ ಅಗಿಯಬೇಕು ಎಂದು ಗೊತ್ತಿಲ್ಲವಾದಲ್ಲಿ, ಅವರಿಗೆ ಇದನ್ನು ನೀಡಬೇಡಿ. ಅವರಿಗೆ ಅದನ್ನು ಉಪಯೋಗಿಸುವ ವಿಧಾನ ಗೊತ್ತಿದ್ದರೆ ಮಾತ್ರ ಇದನ್ನು ನೀಡುವುದು ನಿಮಗೆ ಒಳ್ಳೆಯದು. ಸಾಮಾನ್ಯವಾಗಿ ಐದು ವರ್ಷದ ಮಕ್ಕಳಿಗೆ ಇದನ್ನು ಹೇಗೆ ಅಗಿಯಬೇಕು ಎಂದು ಗೊತ್ತಿರುತ್ತದೆ. ಅವರಿಗೆ ಕ್ಯಾಂಡಿ ಮತ್ತು ಗಮ್ ನಡುವಿನ ವ್ಯತ್ಯಾಸ ಗೊತ್ತಾಗುತ್ತದೆ.
ಹಾಗಾಗಿ ನಿಮ್ಮ ಮನೆಯಲ್ಲಿರುವ ಪುಟ್ಟ ಮಕ್ಕಳಿಗೆ ಇದನ್ನು ತೆಗೆದುಕೊಂಡು ಹೋಗಿ ನೀಡಬೇಡಿ ಹಾಗು ಅವರಿಗೆ ಇದನ್ನು ತಿನ್ನಲು ಪ್ರೋತ್ಸಾಹಿಸಬೇಡಿ. ಕನಿಷ್ಠ ಐದು ವರ್ಷದ ಒಳಗಿನ ಮಕ್ಕಳಿಗೆ ಇದನ್ನು ತಿನ್ನಲು ನೀಡಲೇಬೇಡಿ. ಅವರು ಇದನ್ನು ಅಗಿಯುವ ಬದಲು ನುಂಗುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ.
ಚೂಯಿಂಗ್ ಗಮ್ ಸೇವಿಸುವುದರಿಂದ ಯಾವ ಪರಿಣಾಮವುಂಟಾಗುತ್ತದೆ?
ಇದರಲ್ಲಿ ಕೆಟ್ಟದ್ದು ಎಂಬುದು ಹೆಚ್ಚಾಗಿ ಇರುತ್ತದೆ. ಚ್ಯೂಯಿಂಗ್ ಗಮ್‌ನಲ್ಲಿ ಸ್ವೀಟ್‌ನರ್‌ಗಳು ಹೆಚ್ಚಾಗಿರುತ್ತವೆ. ಹಾಗಾಗಿ ನಿಮ್ಮ ಮಗು ಇದನ್ನು ಸೇವಿಸಿದಲ್ಲಿ ನಿಮ್ಮ ಮಗುವಿಗೆ ಹೆಚ್ಚಿನ ಸಕ್ಕರೆ ಅಂಶ ಸೇರುತ್ತದೆ. ಇದರಿಂದ ಅಧಿಕ ಕ್ಯಾಲೋರಿಗಳು ನಿಮ್ಮ ಮಗುವಿಗೆ ಲಭಿಸುತ್ತವೆ.
ಕೆಲವೊಂದು ಚೂಯಿಂಗ್ ಗಮ್‌ಗಳಲ್ಲಿ ಚಕ್ಕೆಯ ಸ್ವಾದವನ್ನು ಬೆರೆಸಿರುತ್ತಾರೆ. ಇವು ನಿಮ್ಮ ಮಗುವಿನ ಬಾಯಿಯಲ್ಲಿ ತುರಿಕೆಯನ್ನುಂಟು ಮಾಡಬಹುದು. ಹಾಗಾಗಿ ನೀವು ನಿಮ್ಮ ಮಗುವಿಗೆ ಈ ಚೂಯಿಂಗ್ ಗಮ್ ನೀಡಿದರೆ, ಅದನ್ನು ತಿಂದ ಬಳಿಕ ಬಾಯಿ ಮುಕ್ಕಳಿಸುವಂತೆ ಸಲಹೆ ನೀಡಿ. ಯಾವಾಗಲು ಸಕ್ಕರೆ ರಹಿತ ಚೂಯಿಂಗ್ ಗಮ್ ಸೇವಿಸಲು ಮಕ್ಕಳಿಗೆ ಸಲಹೆ ನೀಡಿ. ಇದರಿಂದ ದಂತಕುಳಿಗಳ ಸಮಸ್ಯೆ ನೀಗುತ್ತದೆ.
ಒಂದು ವೇಳೆ ನಿಮ್ಮ ಮಗು ಚೂಯಿಂಗ್ ಗಮ್ ಸೇವಿಸಬೇಕು ಎಂದು ಬಯಸಿದಲ್ಲಿ, ವಾರಕ್ಕೆ ಒಂದು-ಎರಡು ಸೇವಿಸಲು ನೀಡಿ. ಇದರಿಂದ ಅವರು ಚೂಯಿಂಗ್ ಗಮ್ ನುಂಗುವ ಸಾಧ್ಯತೆ ಕಡಿಮೆಯಾಗುತ್ತದೆ. ಈ ಲೇಖನದ ಒಟ್ಟಾರೆ ನೀತಿ, ಚೂಯಿಂಗ್ ಗಮ್ ಅನ್ನು ಅಗಿಯಿರಿ. ಆದರೆ ನುಂಗಲು ಹೋಗಬೇಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


