For Quick Alerts
ALLOW NOTIFICATIONS  
For Daily Alerts

ಗಾಂಧಿ ಜಯಂತಿ ವಿಶೇಷ: ಲವಲವಿಕೆಯ ಆರೋಗ್ಯ ಜೀವನಕ್ಕೆ ಗಾಂಧಿ ತತ್ವ ಪಾಲಿಸಿ...

By Hemanth
|

ಅಹಿಂಸೆ ಮತ್ತು ಶಾಂತಿಯಿಂದ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾನ್ ನಾಯಕ ಮಹಾತ್ಮ ಗಾಂಧಿ ಅವರ ತತ್ವಗಳನ್ನು ಇಂದು ವಿಶ್ವದೆಲ್ಲೆಡೆ ಪ್ರತಿಯೊಬ್ಬರು ಪಾಲಿಸಿಕೊಂಡು ಹೋಗುತ್ತಿದ್ದಾರೆ. ಭಾರತೀಯರಾದ ನಾವು ಕೂಡ ಅವರ ತತ್ವಗಳತ್ತ ಆಕರ್ಷಿತರಾಗಿದ್ದೇವೆ. ಆದರೆ ಅವರ ಆರೋಗ್ಯಕರವಾದ ಜೀವನಶೈಲಿ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಅವರ ಜೀವನಶೈಲಿಯಿಂದ ನಾವು ಸಾಕಷ್ಟು ಕಲಿಯಬೇಕಾಗಿದೆ. ಲವಲವಿಕೆಯ ಜೀವನಶೈಲಿಗೆ 10 ಸರಳ ಸೂತ್ರ

ಹೊಟ್ಟೆ ತುಂಬಿಸಿಕೊಳ್ಳಲು ಮಾತ್ರ ಊಟ ಮಾಡುವುದಲ್ಲ, ಅದರಿಂದ ಸಾಕಷ್ಟು ಇತರ ಉಪಯೋಗಗಳೂ ಇದೆ ಎಂದು ಗಾಂಧೀಜಿ ನಂಬಿದ್ದರು. ಆಹಾರವು ನಿಮ್ಮನ್ನು ಚುರುಕಾಗಿಡುತ್ತದೆ. ಆರೋಗ್ಯಕರ ಜೀವನಕ್ಕೆ ಆರೋಗ್ಯಕರ ಆಹಾರವು ತುಂಬಾ ಮುಖ್ಯವಾಗಿದೆ ಎಂದು ಗಾಂಧಿ ಹೇಳುತ್ತಿದ್ದರು. ಸರಳವಾಗಿಯೇ ಜೀವನ ಸಾಗಿಸುತ್ತದ್ದ ಗಾಂಧಿ ಅವರ ಆರೋಗ್ಯಕರ ಜೀವನಶೈಲಿ ಬಗ್ಗೆ ನೀವು ತಿಳಿದುಕೊಂಡು ಅದನ್ನು ಪಾಲಿಸಿಕೊಂಡು ಹೋಗಿ...

1. ಹಸಿರು ತರಕಾರಿ

1. ಹಸಿರು ತರಕಾರಿ

ಗಾಂಧೀಜಿ ಜೀವಮಾನವಿಡಿ ಸಮತೋಲಿತ ಮತ್ತು ಮಿತಿಯಲ್ಲಿ ಆರೋಗ್ಯಕರ ಆಹಾರ ಸೇವನೆ ಮಾಡುತ್ತಿದ್ದರು. ಅವರು ನಿಯಮಿತವಾಗಿ ಹಸಿರೆಲೆ ತರಕಾರಿಗಳನ್ನು ಸೇವಿಸುತ್ತಾ ಇದ್ದರು.

2. ಹಣ್ಣು ಮತ್ತು ತರಕಾರಿಗಳು

2. ಹಣ್ಣು ಮತ್ತು ತರಕಾರಿಗಳು

ಗಾಂಧೀಜಿಗೆ ಹಣ್ಣು ಮತ್ತು ತರಕಾರಿಗಳೆಂದರೆ ತುಂಬಾ ಇಷ್ಟ. ಆಯಾಯ ಋತುಗಳಲ್ಲಿ ಸಿಗುವಂತಹ ಹಣ್ಣು ಮತ್ತು ತರಕಾರಿಗಳನ್ನು ಆಹಾರ ಕ್ರಮದಲ್ಲಿ ಸೇರಿಸುತ್ತಿದ್ದರು.

3. ಖಾರದ ಪದಾರ್ಥಗಳಿಂದ ಬಲು ದೂರ

3. ಖಾರದ ಪದಾರ್ಥಗಳಿಂದ ಬಲು ದೂರ

ಸಂಸ್ಕರಿತ ಆಹಾರಗಳಿಂದ ಗಾಂಧೀಜಿ ದೂರವಿರುತ್ತಿದ್ದರು. ಅವರು ಸಕ್ಕರೆ ಸೇವನೆ ಕೂಡ ಮಾಡುತ್ತಿರಲಿಲ್ಲ. ಸಕ್ಕರೆ ಬದಲಿಗೆ ಬೆಲ್ಲ ಸೇವನೆ ಮಾಡುತ್ತಿದ್ದ ಗಾಂಧೀಜಿ ಅವರು ಖಾರದ ಪದಾರ್ಥಗಳಿಂದ ದೂರವಿರುತ್ತಿದ್ದರು.

4. ಮಾಂಸಾಹಾರದಿಂದ ದೂರ

4. ಮಾಂಸಾಹಾರದಿಂದ ದೂರ

ಯೌವನದಲ್ಲಿ ಮಾಂಸಾಹಾರ ಸೇವನೆ ಮಾಡಿದ್ದ ಗಾಂಧೀಜಿ ಬಳಿಕ ಮಾಂಸಾಹಾರದಿಂದ ದೂರವಿದ್ದರು. ಅವರು ಹಲವಾರು ದಶಕಗಳ ಕಾಲ ಸಸ್ಯಾಹಾರ ಸೇವನೆ ಮಾಡುತ್ತಿದ್ದರು.

5. ದಿನನಿತ್ಯದ ನಡಿಗೆ

5. ದಿನನಿತ್ಯದ ನಡಿಗೆ

ನಡೆಯುವುದು ಅವರ ದೈಹಿಕ ಚಟುವಟಿಕೆಯಾಗಿತ್ತು. ಉತ್ತಮ ಆರೋಗ್ಯ ಕಾಪಾಡಲು ಅವರು ನಿಯಮಿತವಾಗಿ ನಡೆಯುತ್ತಿದ್ದರು.

6. ಧಾನ್ಯಕ್ಕೆ ಮೊರೆ

6. ಧಾನ್ಯಕ್ಕೆ ಮೊರೆ

ಗಾಂಧೀಜಿ ಅವರು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಒತ್ತಡದಿಂದ ದೂರವಿರಲು ಧಾನ್ಯಕ್ಕೆ ಮೊರೆ ಹೋಗುತ್ತಿದ್ದರು. ಧ್ಯಾನದಿಂದ ಅವರು ಒಳ್ಳೆಯ ಆರೋಗ್ಯವನ್ನು ಕಾಪಾಡಿಕೊಂಡಿದ್ದರು.

7. ಮದ್ಯಪಾನ ಮತ್ತು ಧೂಮಪಾನ ಬಲು ದೂರ

7. ಮದ್ಯಪಾನ ಮತ್ತು ಧೂಮಪಾನ ಬಲು ದೂರ

ಯುವಕರಾಗಿದ್ದಾಗ ಮದ್ಯಪಾನ ಮತ್ತು ಧೂಮಪಾನ ಮಾಡಿದ್ದ ಗಾಂಧೀಜಿ ಅವರು ಬಳಿಕ ಜೀವಮಾನವಿಡಿ ಎಂದೂ ಅದನ್ನು ಮುಟ್ಟಲಿಲ್ಲ.

English summary

Gandhi jayanthi Special: What We Can Learn From Mahatma Gandhi

There is a lot to learn from this country's greatest thinker and freedom fighter Mahatma Gandhi. His healthy lifestyle is itself a good lesson for us. He used to believe that food is not just something that fills the belly but it is more than that. It shapes your very consciousness and this is why a healthy life demands healthy food.
X
Desktop Bottom Promotion