For Quick Alerts
ALLOW NOTIFICATIONS  
For Daily Alerts

ಆರೋಗ್ಯ ಟಿಪ್ಸ್: ಸಾಂಬಾರು ಪದಾರ್ಥಗಳ ಅಸಾಧಾರಣ ಗುಣಗಳು

By Jaya subramanya
|

ಭಾರತದ ಸಾಂಬಾರು ಪದಾರ್ಥಗಳು ನಮ್ಮ ನೆಲದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ತಮ್ಮ ಸುವಾಸನೆಯನ್ನು ಬೀರಿದಂತಹವುಗಳಾಗಿವೆ. ಅನಾದಿ ಕಾಲದಿಂದಲೂ ಭಾರತೀಯ ಸಾಂಬಾರು ಪದಾರ್ಥಗಳು ತಮ್ಮ ರುಚಿಗೆ ಹೆಸರುವಾಸಿಯಾಗಿದ್ದು ವಿದೇಶಿಗರೂ ನಮ್ಮ ದೇಶಕ್ಕೆ ಇವುಗಳ ಖರೀದಿಗಾಗಿಯೇ ಬಂದಿಳಿದದ್ದು.

Importance Of Consuming Indian Spices

ವಾಸ್ಕೋಡಿಗಾಮ ಕೂಡ ನಮ್ಮ ನೆಲದ ಕಾಳುಮೆಣಸಿನ ಸೊಗಸಿಗೆ ಸೊಬಗಿಗೆ ಮಾರುಹೋಗಿ ಇಲ್ಲೇ ಬೀಡುಬಿಟ್ಟ ಸಂಗತಿಯನ್ನು ನೀವು ಇತಿಹಾಸದಲ್ಲಿ ಓದಿರುತ್ತೀರಿ. ಅಷ್ಟೊಂದು ಪ್ರಖ್ಯಾತಿಯನ್ನು ಸಾಂಬಾರು ಪದಾರ್ಥಗಳು ಪಡೆದುಕೊಂಡಿವೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಅರಿಶಿನ ಪುಡಿಯಿಂದ ಹಿಡಿದು ಜೀರಿಗೆ, ಕೊತ್ತಂಬರಿ, ದಾಲ್ಚಿನ್ನಿ ಹೀಗೆ ಹತ್ತು ಹಲವು ಸಾಂಬಾರು ಮಸಾಲೆ ಪದಾರ್ಥಗಳು ಆರೋಗ್ಯದ ದೃಷ್ಟಿಯಿಂದಲೂ ನಮಗೆ ಅನುಕೂಲವನ್ನು ಮಾಡಿಕೊಟ್ಟಿವೆ. ಈ ಗುಣಗಳಿರುವುದು ಭಾರತದ ಸಂಬಾರಗಳಲ್ಲಿ ಮಾತ್ರ!

ಬರಿಯ ಉಪ್ಪು ಖಾರ ಹಾಕಿ ಸಾಂಬಾರು ಪದಾರ್ಥಗಳಿಲ್ಲದೆ ಮಾಡಿದ ಅಡುಗೆಯನ್ನು ನೀವು ಉಂಡಿದ್ದಲ್ಲಿ ಸಾಂಬಾರು ಪದಾರ್ಥಗಳು ಏಕೆ ಅಗತ್ಯ ಎಂಬುದು ತಿಳಿದಿರುತ್ತದೆ. ಇಂದಿನ ನಮ್ಮ ಲೇಖನದಲ್ಲಿ ಈ ಸಾಂಬಾರು ಪದಾರ್ಥಗಳ ಆರೋಗ್ಯ ಗುಣಗಳನ್ನು ನಾವು ತಿಳಿಸಿಕೊಡುತ್ತಿದ್ದು ಇದರಿಂದ ನಿಮಗೆ ಹೆಮ್ಮೆಯುಂಟಾಗುವುದು ಖಂಡಿತ ಮತ್ತು ಇವುಗಳು ಹೇಗೆ ಪ್ರಥಮ ಚಿಕಿತ್ಸಕದಂತೆ ಕೆಲಸ ಮಾಡುತ್ತವೆ ಎಂಬುದನ್ನು ಅರಿತುಕೊಳ್ಳಬಹುದಾಗಿದೆ.

ದಾಲ್ಚಿನ್ನಿಯ ಅದ್ಭುತ ಆರೋಗ್ಯ ಅಂಶಗಳಿಗೆ ಮಾರುಹೋಗದವರೇ ಇಲ್ಲ. ಇದು ಉದ್ದನೆಯ ಕೋಲಿನ ರಚನೆಯನ್ನು ಪಡೆದುಕೊಂಡಿದ್ದು, ಆಹಾರದಲ್ಲಿ ಅತಿ ವಿರಳವಾಗಿ ಕಂಡುಬರುತ್ತದೆ. ಇದು ವಿವೇಚನೆಯಿಂದ ಮತ್ತು ಆರ್ಥಿಕವಾಗಿ ತನ್ನ ಕೆಲಸವನ್ನು ಮಾಡಿದ್ದು ತನ್ನ ರುಚಿ ನೀಡುವ ಗುಣಕ್ಕಿಂತಲೂ ಅತ್ಯಧಿಕ ಅಂಶವನ್ನು ಒಳಗೊಂಡಿದೆ. ಜೇನು ದಾಲ್ಚಿನ್ನಿ ಜೋಡಿ ಮಾಡಲಿದೆ ಕಮಾಲಿನ ಮೋಡಿ

ಹೃದಯಕ್ಕೆ ಹೆಚ್ಚು ಉತ್ತಮವಾಗಿರುವ ದಾಲ್ಚಿನ್ನಿ ಅರ್ಧ ಚಮಚದಷ್ಟು ಇದರ ಪುಡಿಯನ್ನು ಸೇವಿಸುವುದು ಎಲ್‎ಡಿಎಲ್ ಕೊಲೆಸ್ಟ್ರಾಲ್ ಅನ್ನು ಕಡಿಮೆಮಾಡುತ್ತದೆ. ಮಧುಮೇಹವನ್ನು ನಿಯಂತ್ರಣದಲ್ಲಿಡುವ ಗುಣವನ್ನು ದಾಲ್ಚಿನ್ನಿ ಪಡೆದುಕೊಂಡಿದ್ದು, ರಕ್ತದ ಗ್ಲುಕೋಸ್ ಮೇಲೆ ನಿಯಂತ್ರಕ ಪರಿಣಾಮವನ್ನು ಬೀರುತ್ತದೆ ಎರಡನೆ ವಿಧದ ಮಧುಮೇಹಿಗಳಿಗೆ ಇದು ಹೆಚ್ಚು ಪ್ರಯೋಜಕವಾಗಿದೆ.

ಯುಎಸ್‎ನಲ್ಲಿರುವ ಸಂಶೋಧಕ ಕೆಲಸಗಾರರು ಬಿಡುಗಡೆ ಮಾಡಿದ ವರದಿಯ ಪ್ರಕಾರ ದಾಲ್ಚಿನ್ನಿಯು ಕ್ಯಾನ್ಸರ್ ಕೋಶಗಳಲ್ಲಿರುವ ಲ್ಯುಕುಮಿಯಾ ಮತ್ತು ಲಿಂಫೊಮಾವನ್ನು ಕಡಿಮೆ ಮಾಡುತ್ತದೆ ಎಂದಾಗಿದೆ. ಕೋಪ್‎ಹೇಗನ್ ವಿಶ್ವವಿದ್ಯಾನಿಲಯವು ಪ್ರಕಟಿಸಿದ ವರದಿಯಂತೆ ಉಪಹಾರಕ್ಕೆ ಮುನ್ನ ಒಂದು ಚಮಚ ಜೇನಿನೊಂದಿಗೆ ಅರ್ಧ ಚಮಚ ದಾಲ್ಚಿನ್ನಿ ಪುಡಿಯನ್ನು ಜನರಿಗೆ ನೀಡಿದಾಗ ಸಂಧಿವಾತದ ಸಮಸ್ಯೆ ವಾರದಲ್ಲಿ ಇಳಿಮುಖವಾಗಿರುವುದು ಕಂಡುಬಂದಿದೆ ಅಂತೆಯೇ ಅವರುಗಳು ಯಾವುದೇ ನೋವಿಲ್ಲದೆ ಮೂವತ್ತು ದಿನಗಳಲ್ಲಿ ನಡೆದಾಡಿದ್ದಾರೆ.

ಆಹಾರದಲ್ಲಿ ಇದು ಸಂರಕ್ಷಕನಂತೆ ಕೆಲಸ ಮಾಡುತ್ತಿದ್ದು, ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ತಡೆದು ಆಹಾರ ಕೆಡದಂತೆ ನೋಡಿಕೊಳ್ಳುತ್ತದೆ. ನೈಸರ್ಗಿಕ ರಾಸಾಯನಿಕದಂತೆ ಇದು ಕೆಲಸ ಮಾಡಿ ಆಹಾರವನ್ನು ಸಂರಕ್ಷಿಸುತ್ತದೆ. ದೈನಂದಿನ ಜೀವನದಲ್ಲಿ ದಾಲ್ಚಿನ್ನಿಯನ್ನು ತೆಗೆದುಕೊಳ್ಳಲೇಬೇಕು. ಅಂತೆಯೇ ಇದರ ಸೇವನೆ ಕೂಡ ಮಿತಿಯಲ್ಲಿರಬೇಕು.

ಹಿಂಗು ಅಥವಾ ಇಂಗಿನ ಅದ್ಭುತ ಗುಣಗಳು
ಪರಿಮಳಕ್ಕಾಗಿ ಬಳಕೆ ಮಾಡುವ ಸಾಂಬಾರು ಪದಾರ್ಥವಾಗಿರು ಇಂಗು ತನ್ನ ಆರೋಗ್ಯಕಾರಿ ಅಂಶಗಳು ಮತ್ತು ವೈದ್ಯಕೀಯ ಮೌಲ್ಯಗಳ ಮೂಲಕ ಮನೆಮನೆಗಳಲ್ಲಿ ಮನೆಮಾತಾಗಿದೆ. ವ್ಯಕ್ತಿಯ ಸಂಪೂರ್ಣ ಆರೋಗ್ಯವನ್ನು ಕಾಪಾಡುವ ಹಿಂಗು ಕೆಮ್ಮು, ಸಂಧಿವಾತ ಮತ್ತು ಗಂಟಲೂತಕ್ಕೆ ಮನೆಮದ್ದಾಗಿದೆ. ಮಹಿಳೆಯರ ಹಲವಾರು ಸಮಸ್ಯೆಗಳಾದ ಬಂಜೆತನ, ಅನಪೇಕ್ಷಿತ ಗರ್ಭಪಾತ, ಅಕಾಲಿಕ ಹೆರಿಗೆ ಮತ್ತು ಮುಟ್ಟಿನ ದಿನಗಳ ಅಸಾಧಾರಣ ಮತ್ತು ವಿಪರೀತ ನೋವಿನ ಶಮನಕ್ಕೆ ಇಂಗು ಉತ್ತಮ ಪರಿಹಾರವನ್ನು ಒದಗಿಸುತ್ತದೆ. ಅಡುಗೆಗೆ ಮಾತ್ರವಲ್ಲ ಆರೋಗ್ಯಕ್ಕೂ ಬೇಕು-ಇಂಗು

English summary

Importance Of Consuming Indian Spices

They come in different colours: red, yellow, green, brown, black, etc. They add taste, colour and variety to human life and make us cringe when they are absent. Enter, the world of the wonderful Indian spices. From the little rai, to the small round kaalimiri, from the exotic kesar to the all pervading haldi, spices will constantly be put on a pedestal in India.
Story first published: Thursday, June 23, 2016, 20:21 [IST]
X
Desktop Bottom Promotion