For Quick Alerts
ALLOW NOTIFICATIONS  
For Daily Alerts

ಉಪ್ಪು ತಿಂದವರು ನೀರು ಕುಡಿಲೇಬೇಕಾ...?

By Su.Ra
|

ಉಪ್ಪು ತಿಂದವರು ನೀರು ಕುಡಿಲೇಬೇಕಾ? ಇಂದೆಂಥ ಪ್ರಶ್ನೆ ಕೇಳ್ತಿದ್ದಾರೆ ಅಂತ ನಿಮ್ಗೆ ಅನ್ನಿಸಬಹುದು.. ಗಾದೆ ಮಾತಿನ ತಾತ್ಪರ್ಯ ಬೇರೆಯದ್ದೇ ಆಗಿದೆ. ತಪ್ಪು ಮಾಡಿದ ಮೇಲೆ ಒಂದಲ್ಲ ಒಂದು ದಿನ ಸಿಕ್ಕಿಹಾಕಿಕೊಳ್ಳಲೇಬೇಕು ಅನ್ನುವ ಗಾದೆ ಅದು. ಆದ್ರೆ ನಾವ್ ಮಾತಾಡ್ತಾ ಇರೋದು ಅದ್ರ ಬಗ್ಗೆಯಲ್ಲ. ಬದಲಾಗಿ ನಿಜವಾಗ್ಲೂ ನಮ್ಮ ದೇಹಕ್ಕೆ ಉಪ್ಪಿನ ಅಗತ್ಯತೆ ಏನು ಮತ್ತು ಎಷ್ಟು ಉಪ್ಪು ತಿನ್ನಬೇಕು ಅನ್ನೋದ್ರ ಬಗ್ಗೆ. ಉಪ್ಪು ತಿಂದ ಮೇಲೆ ನೀರು ಕುಡಿಬೇಕು ಅಂತ ಅನ್ನಿಸೋದಾದ್ರೂ ಯಾಕೆ.. ಅತಿಯಾದ ಉಪ್ಪಿನಿಂದ ಕಾಯಿಲೆ ಬರುತ್ತೆ ಅಂತಾರಲ್ಲ ಅದೆಷ್ಟು ನಿಜ. ಹಾಗೆ ನೋಡಿದ್ರೆ ಅಧಿಕ ರಕ್ತದೊತ್ತಡದ ಸಮಸ್ಯೆ ಇರುವವರಿಗೆ ಉಪ್ಪು ನಿಷಿದ್ಧವೇ.. ಹಾಗಾದ್ರೆ ನಮ್ಮ ದೇಹದಲ್ಲಿ ಉಪ್ಪು ಮಾಡುವ ಕೆಲಸವೇನು ಅನ್ನುವ ಪ್ರಶ್ನೆ ಪ್ರತಿಯೊಬ್ಬರಲ್ಲೂ ಮೂಡುವುದು ಸಹಜ.

ಈ ಪ್ರಶ್ನೆಗಿಂತ ಪ್ರಮುಖವಾದ ವಿಚಾರ ಇನ್ನೊಂದಿದೆ. ಉಪ್ಪಿನಿಂದ ನೀವು ನಿಮ್ಮ ತೂಕ ನಿಯಂತ್ರಿಸಿಕೊಳ್ಳಬಹುದು. ಅಷ್ಟೇ ಅಲ್ಲ ಉಪ್ಪಿನ ಸರಿಯಾದ ಸೇವನೆಯಿಂದ ನಿಮ್ಮ ಆಯಸ್ಸು ವೃದ್ಧಿಸಿಕೊಳ್ಳಬಹುದು. ಅದಕ್ಕಾಗಿ ಹೊಸದೊಂದು ಸೂತ್ರ ಈಗ ಚಾಲ್ತಿಯಲ್ಲಿದೆ. ಇತ್ತೀಚೆಗಿನ ಅಧ್ಯಯನದ ಪ್ರಕಾರ ಉಪ್ಪಿನಿಂದ ಆ ಕಾಯಿಲೆ ಬರುತ್ತೆ. ಈ ಕಾಯಿಲೆ ಬರುತ್ತೆ. ಹೈ ಬಿಪಿ ಇರುವವರು ಕಡಿಮೆ ಉಪ್ಪು ತಿನ್ನಬೇಕು ಅದೂ ಇದು ವಿಚಾರಗಳು ಎಲ್ಲರಿಗೂ ಗೊತ್ತು..ಅದೇ ಕಾರಣಕ್ಕೆ ಈಗ ಸಾಲ್ಟ್ ಡಯಟ್ ಸೂತ್ರ ಆರಂಭವಾಗಿದೆ. ಹಾಗಾದ್ರೆ ಏನಿದು ಸಾಲ್ಟ್ ಡಯಟ್..? ಮುಂದೆ ಓದಿ. ಉಪ್ಪಿನಿಂದ ಚರ್ಮದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದೇ?

How much salt is best for the health

ಏನಿದು ಸಾಲ್ಟ್ ಡಯಟ್?

ಈಗಿನ ಜನರೇಷನ್ನಿನವ್ರು ರುಚಿಗೆ ತಕ್ಕಷ್ಟು ಉಪ್ಪು ಅನ್ನೋ ಫಾರ್ಮುಲಾ ಬಿಟ್ಟು ಆರೋಗ್ಯಕ್ಕೆ ತಕ್ಕಷ್ಟು ಹಿತಮಿತವಾಗಿ ಉಪ್ಪು ಬಳಕೆ ಮಾಡೋದನ್ನು ಆರಂಭಿಸಿದ್ದಾರೆ. ನಮ್ಮ ದೇಹಕ್ಕೆ ಅತಿಯಾಗಿ ಉಪ್ಪು ಬೇಡ. ಆದ್ರೆ ಅಗತ್ಯ ಪ್ರಮಾಣದಲ್ಲಿ ನಮ್ಮ ದೇಹ ಉಪ್ಪನ್ನ ಬಯಸೇ ಬಯಸುತ್ತೆ. ದೇಹದಲ್ಲಿನ ಅನಗತ್ಯ ತ್ಯಾಜ್ಯ ಬೆವರಿನ ರೂಪದಲ್ಲಿ ಹೋಗಬೇಕು ಅಂದ್ರೆ ಅಗತ್ಯ ಪ್ರಮಾಣದಲ್ಲಿ ಸಾಲ್ಟ್ ಸೇವನೆ ಇರಲೇಬೇಕು..

ಉಪ್ಪು ನಮ್ಮ ದೇಹದಲ್ಲಿ ಮಾಡುವ ಕೆಲಸ ಇಷ್ಟಕ್ಕೇ ಸೀಮಿತಗೊಂಡಿಲ್ಲ. ರಕ್ತಚಲನೆಗೂ ಉಪ್ಪಿಗೂ ನೇರ ಸಂಬಂಧವಿದೆ. ದೇಹದಲ್ಲಿರುವ ಸೋಡಿಯಂ ಪ್ರಮಾಣ ಅಧಿಕಗೊಂಡಾಗ ಬ್ಲಡ್ ಪ್ರಶರ್ ಅಥನಾ ರಕ್ತದೊತ್ತಡ ಬರುತ್ತೆ. ಅದೇ ಕಾರಣಕ್ಕೆ ಬ್ಲಡ್ ಪ್ರೆಷರ್ ಇರುವವರು ಉಪ್ಪನ್ನು ಸೇವಿಸಬೇಡಿ ಅಂತ ವೈದ್ಯರು ಸಲಹೆ ನೀಡೋದು.

How much salt is best for the health

ನಾಲಗೆ ಮೇಲೆ ಉಪ್ಪು ಬಿದ್ದಾಗ ಎಂಜಲು ಒಣಗಿ ನೀರು ಸೇವಿಸ್ಬೇಕು ಅಂತ ಅನ್ನಿಸುತ್ತೆ. ಹಾಗೆಯೇ ದೇಹದಲ್ಲಿ ಸೋಡಿಯಂ ಪ್ರಮಾಣ ಅಧಿಕವಾದಾಗ ಸಹಜವಾಗೇ ನೀರಿನಂಶ ಕುಗ್ಗುತ್ತೆ. ಆಗ ನೀರು ಕುಡಿಯಬೇಕು ಅಂತ ಅನ್ನಿಸೋದು ಸಹಜ. ನೀರಿನ ಪ್ರಮಾಣ ದೇಹದಲ್ಲಿ ಕಡಿಮೆಯಾದಾಗ ನಿಶ್ಯಕ್ತಿ ಅಥವಾ ಇತರೆ ಸಮಸ್ಯೆಗಳು ಕಾಡಬಹುದು.. ಹಾಗಾಗಿ ಉಪ್ಪು ತಿಂದವರು ನೀರು ಕುಡಿಯಲೇಬೇಕು ಅನ್ನುವ ಹಾಗೆ ಅನ್ನಿಸೋದು.. ಹಾಗಾದ್ರೆ ಉಪ್ಪಿನ ಸೇವನೆ ಯಾವ ವಯಸ್ಸಲ್ಲಿ ಹೇಗಿರಬೇಕು ಗೊತ್ತಾ? ಈ ಚಾರ್ಟ್ ಗಮನಿಸಿ.

How much salt is best for the health

. 51 ವರ್ಷಕ್ಕಿಂತ ಸಣ್ಣವರು - 2300 ಮಿಲಿಗ್ರಾಂ

. 51 ವರ್ಷಕ್ಕಿಂತ ದೊಡ್ಡವರು 1500 ಮಿಲಿಗ್ರಾಂ

. ಭಾರತೀಯರು ಸೇವಿಸುತ್ತಿರುವ ಪ್ರಮಾಣ 3400 ಮಿಲಿಗ್ರಾಂ

ವಯೋಮಾನದ ಆಧಾರದ ಮೇಲೆ ಹೇಳೋದಾದ್ರೆ 51 ವರ್ಷಕ್ಕಿಂತ ಸಣ್ಣವರು ಸುಮಾರು 2300 ಮಿಲಿಗ್ರಾಂ ನಷ್ಟು ಸೋಡಿಯಂನ್ನು ಒಂದು ದಿನಕ್ಕೆ ಸೇವಿಸ್ಬಹುದು.. 51 ವರ್ಷಕ್ಕಿಂತ ದೊಡ್ಡವರು 1500 ಮಿಲಿಗ್ರಾಂ ನಷ್ಟು ಉಪ್ಪಿನ ಸೇವನೆಯನ್ನು ಒಂದು ದಿನಕ್ಕೆ ಮಾಡ್ಬಹುದು. ಆದ್ರೆ ಒಂದು ಅಧ್ಯಯನದ ಪ್ರಕಾರ ಭಾರತೀಯರು ಪ್ರತಿದಿನ 3400 ಮಿಲಿಗ್ರಾಂ ಉಪ್ಪನ್ನು ಸೇವಿಸುತ್ತಾ ಇದ್ದಾರಂತೆ... ಆರೋಗ್ಯದ ಐಶ್ವರ್ಯಕ್ಕೆ ಕಲ್ಲುಪ್ಪು ಸೇವಿಸಿ!

How much salt is best for the health

ಅಧಿಕ ಉಪ್ಪು ಸೇವನೆ ಮಾಡುವ ತಾಪತ್ರಯಗಳು

ಅಧಿಕವಾಗಿ ಉಪ್ಪು ಸೇವಿಸಿದ್ರೆ ಮೂಳೆಗಳು ದುರ್ಬಲಗೊಳ್ಳಬಹುದು, ಅಷ್ಟೇ ಅಲ್ಲ, ಅಧಿಕ ಉಪ್ಪಿನಿಂದ ಹೃದಯಕ್ಕೂ ತೊಂದರೆಯುಂಟಾಗುತ್ತೆ. ಜಾಸ್ತಿ ಉಪ್ಪಿನಿಂದ ದಣಿವೂ ಹೆಚ್ಚುತ್ತೆ. ಮುಖದ ಕಳೆಯೂ ಹಾಳಾಗುತ್ತೆ. ಸೋ ಉಪ್ಪು ಸೇವನೆಗೂ ಮುನ್ನ ಸ್ವಲ್ಪ ಕೇರ್ ಫುಲ್ ಆಗಿರಬೇಕು. ಅಧಿಕ ಉಪ್ಪು ಸೇವನೆಯೂ ತಪ್ಪು. ಕಡಿಮೆ ಉಪ್ಪು ತಿನ್ನೋದು ತಪ್ಪು. ನಮ್ಮ ದೇಹಕ್ಕೆ ಎಷ್ಟು ಬೇಕೋ ಅಷ್ಟು ಉಪ್ಪು ಸೇವನೆಯಿಂದ ಖಂಡಿತ ಆರೋಗ್ಯ ಕಾಪಾಡಿಕೊಳ್ಳಬಹುದು.. ಈ ಸೂತ್ರ ಕೇವಲ ಉಪ್ಪಿಗೆ ಮಾತ್ರವಲ್ಲ, ಪ್ರತಿ ಆಹಾರಕ್ಕೂ ಅನ್ವಯಿಸುತ್ತೆ.

ನೀವು ಆರೋಗ್ಯವಂತರಾಗಿರಬೇಕು ಅಂದ್ರೆ ಸರಿಯಾದ ಪ್ರಮಾಣದ ಡಯಟ್ ಸೂತ್ರ ಅಳವಡಿಸಿಕೊಳ್ಳಬಹುದು. ಅದರಲ್ಲಿ ಉಪ್ಪಿಗೂ ಮಹತ್ವ ನೀಡಲೇಬೇಕು. ನಿಮ್ಮ ತೂಕದ ವಿಚಾರದಲ್ಲಿ ಉಪ್ಪು ಕೂಡ ಪ್ರಮುಖ ಪಾತ್ರ ವಹಿಸಿರುತ್ತೆ. ಕೇವಲ ತೂಕ ಮಾತ್ರವಲ್ಲ ನಿಮ್ಮ ಆಯಸ್ಸು ಕೂಡ ಉಪ್ಪು ಸೇವನೆಯ ಪ್ರಮಾಣದ ಮೇಲೆ ನಿಗದಿಯಾಗಿರುತ್ತೆ. ಅಡುಗೆಯಲ್ಲಿ ಸ್ವಲ್ಪ ಸಿಹಿ, ಹುಳಿ, ಖಾರ ಇಲ್ಲದೆ ಇದ್ದಾಗಲೂ ಸೇವಿಸಿಬಿಡಬಹುದೇನೋ ಆದ್ರೆ ಉಪ್ಪಿಲ್ಲದ ಅಡುಗೆ ತಿನ್ನೋಕೆ ಅಸಾಧ್ಯವೇ ಸರಿ. ಹಾಗಾಗಿಯೇ ಅಲ್ವೇ ಉಪ್ಪಿಗಿಂತ ರುಚಿ ಬೇರೆ ಇಲ್ಲ ಅಂತ ಹೇಳೋದು..

English summary

How much salt is best for the health?

Find out how much slat we really need, what high-sodium foods to avoid, and ... far more sodium than is recommended, and that could lead to serious health ... and less is usually best, especially if you're sensitive to the effects of sodium.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more