For Quick Alerts
ALLOW NOTIFICATIONS  
For Daily Alerts

ಅಲರ್ಜಿಗೆ ಅಲಕ್ಷ್ಯ ಬೇಡ, ಸರಿಯಾದ ಸೂಕ್ತ ಚಿಕಿತ್ಸೆ ಅತ್ಯಗತ್ಯ...

ವೈದ್ಯರು ಸೂಚಿಸಿದ ಮದ್ದನ್ನು ಬಳಸುವುದರಿಂದ ಅಲರ್ಜಿ ಒಮ್ಮೆಕಡಿಮೆಯಾಗಬಹುದು. ಆದರೆ ಮತ್ತೆ ಇದು ಕಾಡುವುದಿಲ್ಲವೆಂದು ಹೇಳಲು ಸಾಧ್ಯವಿಲ್ಲ. ಅಲರ್ಜಿಗೆ ಕೆಲವೊಂದು ನೈಸರ್ಗಿಕ ಚಿಕಿತ್ಸೆಯನ್ನು ಬಳಸಿದರೆ ಖಾಯಂ ಆಗಿ ದೂರವಿರಬಹುದು....

By Manu
|

ಧೂಳು, ಆಹಾರ ಹಾಗೂ ಪ್ರಾಣಿಗಳಿಂದ ಕೆಲವರಿಗೆ ಅಲರ್ಜಿ ಕಾಣಿಸಿಕೊಳ್ಳಬಹುದು. ಅಲರ್ಜಿಯಿಂದ ಸಾಮಾನ್ಯ ಜೀವನ ನಡೆಸುವುದು ಕಷ್ಟವಾಗುತ್ತದೆ. ಎಲ್ಲಿ ಹೋದರೂ ತುಂಬಾ ಎಚ್ಚರಿಕೆ ವಹಿಸಬೇಕಾಗುತ್ತದೆ. ಸ್ವಲ್ಪ ಏರುಪೇರಾದರೂ ಅಲರ್ಜಿಯಿಂದ ಜೀವಕ್ಕೆ ಅಪಾಯಸಂಭವಿಸಬಹುದು.

Allergies

ವೈದ್ಯರು ಸೂಚಿಸಿದ ಮದ್ದನ್ನು ಬಳಸುವುದರಿಂದ ಅಲರ್ಜಿ ಒಮ್ಮೆಕಡಿಮೆಯಾಗಬಹುದು. ಆದರೆ ಮತ್ತೆ ಇದು ಕಾಡುವುದಿಲ್ಲವೆಂದು ಹೇಳಲು ಸಾಧ್ಯವಿಲ್ಲ. ಅಲರ್ಜಿಗೆ ಕೆಲವೊಂದು ನೈಸರ್ಗಿಕ ಚಿಕಿತ್ಸೆಯನ್ನು ಬಳಸಿದರೆ ಖಾಯಂ ಆಗಿ ಅಲರ್ಜಿಯಿಂದ ದೂರವಿರಬಹುದು. ಅಲರ್ಜಿಗೆ ಕಾರಣ ಮತ್ತು ಮನೆಮದ್ದು

ಹೆಚ್ಚಾಗಿ ಮೂಗಿನಲ್ಲಿ ಸಿಲುಕಿಕೊಳ್ಳುವ ಕೆಲವೊಂದು ವಸ್ತುಗಳಿಂದಾಗಿ ಅಲರ್ಜಿ ಸಂಭವಿಸುತ್ತದೆ. ಇದರಿಂದ ಮೂಗನ್ನು ಆಗಾಗ ಸ್ವಚ್ಛಗೊಳಿಸುತ್ತಾ ಕಪಾಲಭಾತಿ ಮಾಡಿದರೆ ಅದರಿಂದ ಮೂಗು ಸ್ವಚ್ಛವಾಗುವುದು. ಕಪಾಲಭಾತಿ ಮಾಡುವ ಮೊದಲು ತಜ್ಞರ ಸಲಹೆ ಪಡೆಯುವುದು ಮುಖ್ಯ.

ಅಲರ್ಜಿ ಆರಂಭವಾದ ತಕ್ಷಣ ಅಥವಾ ದಿನಾಲೂ ಆ್ಯಪಲ್ ಸೀಡರ್ ವಿನೇಗರ್ ಅನ್ನು ಸೇವಿಸಿದರೆ ಒಳ್ಳೆಯದು. ಇದು ಅಲರ್ಜಿಯನ್ನು ಸಂಪೂರ್ಣವಾಗಿ ನಿವಾರಿಸಲು ಹಾಗೂ ನಿಯಂತ್ರಿಸಲು ನೆರವಾಗುವುದು. ಒಂದು ಕಪ್ ನೀರಿಗೆ ಒಂದು ಚಮಚ ಆ್ಯಪಲ್ ಸೀಡರ್ ವಿನೇಗರ್ ಸೇರಿಸಿ ಸ್ವಲ್ಪ ಸ್ವಲ್ಪವೇ ಕುಡಿಯಿರಿ ಅಥವಾ ಇದನ್ನು ದಿನದಲ್ಲಿ ಒಂದು ಸಲ ಕುಡಿಯಿರಿ. ಅಲರ್ಜಿ ನಿವಾರಣೆಗೆ ಇಲ್ಲಿವೆ ಸೂಪರ್ ಮನೆಮದ್ದು

ಕೆಲವರು ಇದನ್ನು ಒಮ್ಮೆ ಸೇವಿಸಿದರೆ ಅಲರ್ಜಿ ನಿವಾರಣೆ ಆಗಬಹುದು. ಇನ್ನು ಕೆಲವರಿಗೆ ಇದನ್ನು ಎರಡರಿಂದ ಮೂರು ಸಲವಾದರೂ ಸೇವಿಸಬೇಕಾಗುತ್ತದೆ. ಅಲರ್ಜಿ ಆರಂಭವಾದ ಕೂಡಲೇ ಇದನ್ನು ಕುಡಿದರೆ ಅಲರ್ಜಿ ಲಕ್ಷಣಗಳು ಕಡಿಮೆಯಾಗುವುದನ್ನು ನೋಡಬಹುದು.

ಕೆಲವರಿಗೆ ಆಹಾರದಿಂದ ಅಲರ್ಜಿ ಆಗುವುದಿದೆ. ಅದರಲ್ಲಿ ಪ್ರಮುಖವಾಗಿ ಗೋಧಿ ಮತ್ತು ಹಾಲು ಕೆಲವರಿಗೆ ಅಲರ್ಜಿ ಉಂಟು ಮಾಡಬಹುದು. ಗ್ಲುಟೆನ್ ಹಾಗೂ ಹಾಲನ್ನು ಸುಮಾರು ಆರು ವಾರಗಳ ಕಾಲ ದೂರವಿರಿಸಿದರೆ ದೇಹದಲ್ಲಿ ಅಲರ್ಜಿ ಉಂಟು ಮಾಡುವ ಅಂಶಗಳು ದೂರವಾಗುವುದು. ಚಳಿಗಾಲದಲ್ಲಿ ಕಾಡುವ ಅಲರ್ಜಿ ಸಮಸ್ಯೆಗೆ ಅದ್ಭುತ ಆಹಾರಗಳು

ಅಕ್ಯೂಪಂಕ್ಚರ್ ಮೂಲಕ ಅಲರ್ಜಿಯನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಕೆಲವರು ಹೇಳಿದರೆ, ಜೇನುತುಪ್ಪವನ್ನು ದಿನಾಲೂ ಸೇವಿಸಿದರೆ ಅಲರ್ಜಿ ಕಡಿಮೆಯಾಗುತ್ತದೆ ಇನ್ನು ಕೆಲವರು ವಾದ ಮಾಡುತ್ತಾರೆ.

English summary

How To Get Rid Of Allergies Naturally

There are certain ways in which people who suffer from allergies have succeeded to get rid of allergies. Read on to know about these solutions. Read the natural solutions below and see if you start feeling better now without the help of drugs and can get rid of your allergies permanently.
Story first published: Monday, December 5, 2016, 19:40 [IST]
X
Desktop Bottom Promotion