For Quick Alerts
ALLOW NOTIFICATIONS  
For Daily Alerts

ಹಲ್ಲುಗಳ ಆರೋಗ್ಯಕ್ಕೆ ಸರಳ ಸೂತ್ರ-ತಪ್ಪದೇ ಅನುಸರಿಸಿ

By Manu
|

ನಾವು ಅತಿ ದೃಢ ಎಂದು ನಂಬಿರುವ ಹಲ್ಲುಗಳು ಸಹಾ ಒಳಗಡೆಯಿಂದ ಟೊಳ್ಳಾಗಿರುತ್ತವೆ. ಅದರಲ್ಲೂ ಕೆಲವರ ಹಲ್ಲು ಅತಿ ಸಂವೇದಿಯಾಗಿರುವ ಕಾರಣ ಇವರಿಗೆ ಬಿಸಿಯಾದ, ತಣ್ಣನೆಯ, ಅತಿ ಖಾರದ, ಅತಿ ಸಿಹಿಯ ಯಾವುದೇ ವಸ್ತು ತಿನ್ನುವಂತಿಲ್ಲ. ಗಟ್ಟಿ ಪದಾರ್ಥಗಳನ್ನು ತಿನ್ನಲೂ ಕಷ್ಟ, ಸ್ವಲ್ಪ ಕಠಿಣವಾಗಿರುವ ಆಹಾರಗಳನ್ನು ಜಗಿಯುವಾಗ ಒಸಡಿನಿಂದ ರಕ್ತ ಸೋರುವುದೂ ಸಾಮಾನ್ಯ. ಈ ತೊಂದರೆ ಇರುವವರಲ್ಲಿ ಶೇಖಡಾ ಹತ್ತರಷ್ಟು ಜನರಿಗೆ ಮಾತ್ರ ಇದು ವಂಶಪಾರಂಪರ್ಯವಾಗಿ ಬಂದಿದ್ದು ಉಳಿದ ತೊಂಬತ್ತು ಶೇಖಡಾ ಜನರಿಗೆ ಅರಿತೋ ಅರಿಯದೆಯೋ ಆದ ನಿರ್ಲಕ್ಷ್ಯದಿಂದಲೇ ಆಗಿದೆ. ನಿದ್ದೆ ಕೆಡಿಸುವ ಹಲ್ಲು ನೋವಿಗೆ ಮನೆಮದ್ದಿನ ಚಿಕಿತ್ಸೆ

ಇದರಲ್ಲಿ ಅತಿ ಪ್ರಮುಖವಾದುದ್ದು ತಂಬಾಕಿನ ಸೇವನೆ. ತಂಬಾಕಿನ ದ್ರವದಲ್ಲಿ ಹಲ್ಲು ಕರಗುತ್ತದೆ. ಅಂತೆಯೇ ತಂಬಾಕನ್ನು ಹೊಗೆ, ದ್ರವ, ಗುಟ್ಕಾ ಅಥವಾ ಇನ್ನಾವುದೇ ರೂಪದಲ್ಲಿ ಬಾಯಿಗಿಟ್ಟರೂ ಇದು ಹಲ್ಲುಗಳನ್ನು ನಿಧಾನವಾಗಿ ಕರಗಿಸುತ್ತದೆ. ಅಂತೆಯೇ ವರ್ಷಗಳ ಅಭ್ಯಾಸದ ಬಳಿಕ ಹಲ್ಲಿನ ಮೇಲ್ಪದರ ಸವೆದು ಒಳಗಿನ ಟೊಳ್ಳುಭಾಗದ ಕಾರಣ ಸುಲಭವಾಗಿ ತೂತು ಬೀಳುತ್ತದೆ. ಹಳದಿ ಹಲ್ಲಿಗೆ ಮಂಗಳ ಹಾಡುವ ಮನೆಮದ್ದುಗಳು

ಅಂದರೆ ತೆಳ್ಳಗಾಗಿರುವ ಮೇಲ್ಪದರದಲ್ಲಿ ಗಟ್ಟಿಯಾದ ಬೀಜ, ಮೂಳೆ ಅಥವಾ ಇನ್ನಾವುದೋ ವಸ್ತುವನ್ನು ತಿಂದಾಗ ಆ ಭಾಗ ಕುಸಿದು ಒಂದು ತೂತಾಗುತ್ತದೆ ಅಥವಾ ಹಲ್ಲೇ ಬಿರಿದು ಎರಡು ತುಂಡಾಗಬಹುದು. ಈ ತೂತಿಗೆ ದಂತಕುಳಿ ಎಂದು ಕರೆಯುತ್ತಾರೆ. ಆರೋಗ್ಯಕರ ಒಸಡುಗಳಿಗಾಗಿ ಮನೆಯಲ್ಲಿಯೇ ತಯಾರಿಸಿ ಟೂಥ್ ಪೌಡರ್!

ಇನ್ನುಳಿದಂತೆ ಅತಿ ಹೆಚ್ಚಿನ ಒತ್ತಡದಿಂದ ಬ್ರಶ್ ಮಾಡುವುದು, ಆಹಾರದಲ್ಲಿ ಆಮ್ಲೀಯತೆ ಹೆಚ್ಚಿರುವುದು, ಹಲ್ಲಿನ ಸಂದುಗಳಲ್ಲಿ ಸೇರಿಕೊಂಡಿದ್ದ ಕೊಳೆಯನ್ನು ತುಂಬಾ ಹೊತ್ತಿನವರೆಗೆ ತಗೆಯದೇ ಇರುವುದು ಇತ್ಯಾದಿ. ಆದ್ದರಿಂದಲೇ ದಂತವೈದ್ಯರು ನಿತ್ಯವೂ ಎರಡು ಬಾರಿ ಹಲ್ಲುಜ್ಜಲು ಸಲಹೆ ಮಾಡುತ್ತಾರೆ. ಒಂದು ವೇಳೆ ಈಗಾಗಲೇ ನಿಮ್ಮ ಹಲ್ಲು ಸವೆದು ಸೂಕ್ಷ್ಮಸಂವೇದಿಯಾಗಿದ್ದರೆ ಕೆಳಗಿನ ಸಲಹೆಗಳು ನಿಮ್ಮ ನೆರವಿಗೆ ಬರಬಲ್ಲವು....

ಸಲಹೆ #1

ಸಲಹೆ #1

ಆಮ್ಲೀಯತೆ ಹೆಚ್ಚಿರುವ ಆಹಾರಗಳು ಹಲ್ಲಿನ ಮೇಲ್ಪದರವನ್ನು ಸುಲಭವಾಗಿ ಕರಗಿಸಬಲ್ಲವು. ಆದ್ದರಿಂದ ಆಮ್ಲೀಯತೆ ಹೆಚ್ಚಿರುವ ಉಪ್ಪಿನಕಾಯಿ, ಲಿಂಬೆರಸ ಮೊದಲಾದ ಆಮ್ಲೀಯ ಹಣ್ಣುಗಳ ರಸ, ಕೆಂಪು ವೈನ್ ಇತ್ಯಾದಿಗಳನ್ನು ತ್ಯಜಿಸುವುದೇ ಉತ್ತಮ.

ಸಲಹೆ #2

ಸಲಹೆ #2

ಹಲ್ಲಿನ ಸವೆತಕ್ಕೆ ಹಲ್ಲುಗಳನ್ನು ಉಜ್ಜಿಕೊಳ್ಳುತ್ತಾ ಇರುವ ಅಭ್ಯಾಸವೂ ಇನ್ನೊಂದು ಕಾರಣ. ಇದನ್ನು ತಡೆಯಲು ಸುಲಭದಲ್ಲಿ ಸಾಧ್ಯವಿಲ್ಲ. ಇದಕ್ಕೆ ಅಪ್ರತಿಮ ಮನೋದಾರ್ಢ್ಯ ಮತ್ತು ದೃಢಸಂಕಲ್ಪ ಅಗತ್ಯ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ದಂತವೈದ್ಯರನ್ನು ಕಂಡು ಅವರು ಹೆಚ್ಚು ಸವೆದ ಹಲ್ಲುಗಳನ್ನು ಪರೀಕ್ಷಿಸಿ ಈ ಭಾಗದ ಸವೆತ ತಡೆಯಲು ನೀಡುವ ರಕ್ಷಣಾ ಕವಚಗಳನ್ನು ಧರಿಸಿ, ಉಜ್ಜಿಕೊಳ್ಳುವುದನ್ನು ಮುಂದುವರೆಸಬಹುದು.

ಸಲಹೆ #3

ಸಲಹೆ #3

ಸೂಕ್ಷ್ಮಸಂವೇದಿ ಹಲ್ಲುಗಳಿಗಾಯೇ ಇರುವ ಪೇಸ್ಟ್ ಗಳನ್ನು ಬಳಸಲು ಪ್ರಾರಂಭಿಸಿ. ಇವು ಕೊಂಚ ದುಬಾರಿಯಾದರೂ ಹಲ್ಲುಗಳ ಆರೋಗ್ಯದ ವಿಷಯ ಬಂದಾಗ ಅನಿವಾರ್ಯವಾಗಿ ಸಹಿಸಿಕೊಳ್ಳಲೇಬೇಕಾಗುತ್ತದೆ. ಇದರ ಬಳಕೆಯಿಂದ ಒಂದೆರಡು ದಿನಗಳಲ್ಲೇನೂ ಥಟ್ಟನೆ ಪರಿಣಾಮ ದೊರಕುವುದಿಲ್ಲ. ಆದರೆ ನಿಧಾನವಾಗಿ ಹಲ್ಲುಗಳು ಅತಿ ಸೂಕ್ಷ ಸಂವೇದಿಯಾಗಿರದೇ ಕೊಂಚ ಕಡಿಮೆಯಾಗುತ್ತದೆ. ನಮ್ಮ ಹಲ್ಲುಗಳಲ್ಲಿರುವ ನರತಂತುಗಳ ಅತಿಸೂಕ್ಷ್ಮ ನರಾಗ್ರ ಅಥವಾ ತುದಿಗಳನ್ನು ಈ ಪೇಸ್ಟ್ ನಲ್ಲಿರುವ ಅಂಶ ಮರಗಟ್ಟಿಸುವ ಮೂಲಕ ನೋವಿನ ಸಂವೇದನೆಯನ್ನು ಮೆದುಳಿಗೆ ತಲುಪಿಸದೇ ಇರುವುದು ಇದರ ಗುಟ್ಟು

ಸಲಹೆ #4

ಸಲಹೆ #4

ಹಲ್ಲುಗಳು ಉತ್ತಮಗೊಳ್ಳಬೇಕೇ, ಕೆಫೀನ್ ಇರುವ ಪೇಯಗಳು, ಆಲ್ಕೋಹಾಲ್, ಧೂಮಪಾನ, ಗುಟ್ಕಾ ಅಥವಾ ಬಾಯಿಯ ಆರೋಗ್ಯವನ್ನು ಬಾಧಿಸುವ ಯಾವುದೇ ಕೆಟ್ಟ ಅಭ್ಯಾಸವನ್ನು ಎಷ್ಟೇ ಕಷ್ಟವಾದರೂ ಸರಿ, ಬಿಟ್ಟುಬಿಡಿ. ಇದಕ್ಕಾಗಿ ಮನಸ್ಸನ್ನು ಮೊದಲು ಗಟ್ಟಿಮಾಡಿಕೊಂಡು ಬಳಿಕ ವೈದ್ಯರ ನೆರವು ಪಡೆದು ಆರೋಗ್ಯಕರ ವಿಧಾನ ಅನುಸರಿಸಿ ಕೆಟ್ಟ ಅಭ್ಯಾಸದಿಂದ ಹೊರಬನ್ನಿ.

ಸಲಹೆ #5

ಸಲಹೆ #5

ದಿನಕ್ಕೆ ಕನಿಷ್ಠ ಎರಡು ಬಾರಿಯಾದರೂ ಹಲ್ಲುಗಳನ್ನು ಉಜ್ಜಿಕ್ಕೊಳ್ಳಿ. ಪ್ರತಿ ಬಾರಿ ಉಜ್ಜಲೂ ಮೃದುವಾದ ಬ್ರಶ್ ಬಳಸಿ. ಹಲ್ಲುಗಳಿಗೆ ನೀಡುವ ಒತ್ತಡ ಅತಿ ಕಡಿಮೆ ಇರಲಿ. ಒತ್ತಡ ಹೆಚ್ಚಾದಷ್ಟೂ ಹಲ್ಲುಗಳೂ, ಹಲ್ಲುಗಳಿಗಿಂತ ಹೆಚ್ಚಾಗಿ ಒಸಡುಗಳು ಸವೆಯುತ್ತವೆ. ನೆನಪಿರಲಿ, ಸವೆದ ಹಲ್ಲು ಅಥವಾ ಒಸಡು ಮತ್ತೆ ಬೆಳೆಯುವುದಿಲ್ಲ.

ಸಲಹೆ #6

ಸಲಹೆ #6

ನಿಮ್ಮ ಒಸಡುಗಳನ್ನು ಪರೀಕ್ಷಿಸಿ ನೋಡಿ. ಇವು ತುಂಬಾ ಆಳಕ್ಕೆ ಸವೆದಿರುವಂತೆ ಕಂಡರೆ ತಕ್ಷಣ ದಂತವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆಯನ್ನು ಪಡೆಯಿರಿ.

ಸಲಹೆ #7

ಸಲಹೆ #7

ವರ್ಷಕ್ಕೆ ಎರಡು ಬಾರಿ ನಿಯಮಿತವಾಗಿ ನಿಮ್ಮ ದಂತವೈದ್ಯರನ್ನು ಕಂಡು ಹಲ್ಲುಗಳನ್ನು ಪರೀಕ್ಷಿಸಿಕೊಳ್ಳಿ. ಇಂದು ಸೂಕ್ಷ್ಮ ಸಂವೇದಿ ಹಲ್ಲುಗಳಿಗೆ ನೂತನ ವಿಧಾನದ ಚಿಕಿತ್ಸೆ ಲಭ್ಯವಿದ್ದು ನಿಮ್ಮ ಅಗತ್ಯಕ್ಕೆ ಮತ್ತು ಸಾಮರ್ಥ್ಯಕ್ಕೆ ತಕ್ಕ ಚಿಕಿತ್ಸೆ ಪಡೆದುಕೊಳ್ಳಿ.

English summary

Home Remedies for Sensitive Teeth

The moment certain foods come into contact with your teeth, you might start yelling with pain. What's the reason? Well, when the enamel which is a protective layer, gets damaged due to any reason, Now, let us discuss some tips to deal with the problem of sensitivity.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X