For Quick Alerts
ALLOW NOTIFICATIONS  
For Daily Alerts

ನಾಲಗೆಯಲ್ಲಿ ಬಿಳಿ ಪದರ ಆಗಿದ್ರೆ ಚಿಂತಿಸದಿರಿ, ಇಲ್ಲಿದೆ ಪರಿಹಾರ

By SU.Ra
|

ಒಂದು ಗಾದೆ ಮಾತಿದೆ. ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ ಅಂತ... ಈ ಗಾದೆಯ ಸೂಕ್ಷ್ಮ ವಿಚಾರ ಏನು ಅಂದ್ರೆ ನಮ್ಮ ದೇಹದ ಹೆಚ್ಚಿನ ಕಾಯಿಲೆಗಳಿಗೆ ಮತ್ತು ನಮ್ಮ ಸಮಸ್ಯೆಗಳಿಗೆ ಕಾರಣ ಬಾಯಿ. ಬಾಯಿ ಎಷ್ಟೇ ಶುದ್ಧವಾಗಿದ್ರೂ ಸಾಕಾಗೋದಿಲ್ಲ. ಬಾಯಿಯನ್ನು ಕಂಟ್ರೋಲ್ ಮಾಡಿಕೊಂಡ್ರೆ ಅಂದರೆ ಬಾಯಿಯ ಬಗ್ಗೆ ಹೆಚ್ಚು ಕಾಳಜಿ ತೆಗೆದುಕೊಂಡ್ರೆ ಹೆಚ್ಚಿನ ಸಮಸ್ಯೆಯಿಂದ ದೂರವಿರಬಹುದು.

ಬಾಯಿ ಅಂದ್ರೆ ನಿಮ್ಮ ನಾಲಗೆಯೇ ಅದರ ಕಂಟ್ರೋಲರ್.. ನಾಲಗೆಯಲ್ಲಿ ಹಲವು ಸಮಸ್ಯೆಯಾಗುತ್ತೆ. ಕೆಲವರಿಗೆ ಡ್ರೈ ಆಗೋದು, ಬಿಳಿ ಪದರ ಆಗೋದು, ವಾಸನೆ ಬರೋದು, ಹೀಗೆ ಹತ್ತು ಹಲವು ,... ನಿಮ್ಮ ನಾಲಗೆಯೂ ತುಂಬಾ ಡ್ರೈ ಆಗಿದ್ಯಾ? ನಾಲಗೆಯಲ್ಲಿ ಅಗ್ರ (ನಾಲಗೆಯಲ್ಲಿ ಕಾಣಿಸಿಕೊಳ್ಳುವ ಬಿಳಿಯ ಪದರ) ಆಗಿ ಬಾಯಿಯಿಂದ ಕೆಟ್ಟ ವಾಸನೆ ಬರ್ತಾ ಇದ್ಯಾ? ಇಂತಹ ನಾಲಗೆಯಿಂದ ನೀವು ಬೇಸತ್ತು ಹೋಗಿದ್ದೀರಾ? ಹಾಗಾದ್ರೆ ನಿಮ್ಮ ಸಮಸ್ಯೆಗೆ ಪರಿಹಾರ ನಾವ್ ಹೇಳ್ತೀವಿ ಕೇಳಿ..

ಉಪ್ಪು

ಉಪ್ಪು

ಉಪ್ಪನ್ನು ನಾಲಗೆಯನ್ನು ಶುದ್ಧ ಮಾಡಲು ಎರಡು ರೀತಿಯಲ್ಲಿ ಬಳಕೆ ಮಾಡ್ಬಹುದು. ಸ್ವಲ್ಪ ಬಿಸಿಯಾಗಿರುವ ನೀರಿಗೆ ಒಂದು ಸ್ಪೂನ್‌ ಫುಲ್‌ ಉಪ್ಪನ್ನು ಮಿಕ್ಸ್ ಮಾಡಿ. ಈ ನೀರಿನಿಂದ ಪ್ರತಿದಿನ ಆರರಿಂದ ಏಳು ಬಾರಿ ಬಾಯಿ ಮುಕ್ಕಳಿಸಿ. ಒಂದೇ ವಾರದಲ್ಲಿ ಬಾಯಿಯ ಬಿಳಿ ಪದರ ಕಡಿಮೆಯಾಗುವುದನ್ನ ಗಮನಿಸ್ಬಹುದು. ಇನ್ನೊಂದು ಮೆಥೆಡ್‌ ಅಂದ್ರೆ ಸ್ವಲ್ಪ ಉಪ್ಪನ್ನು ನಾಲಗೆ ಮೇಲೆ ಹಾಕಿ ನಂತ್ರ ಬ್ರಷ್‌ನಿಂದ ಉಜ್ಜಿಕೊಳ್ಳಿ. ಇದು ಕೂಡ ಸೇಮ್ ರಿಸಲ್ಟ್‌ ಕೊಡಲಿದೆ.

ವೆಜಿಟೇಬಲ್‌ ಗ್ಲಿಸರಿನ್

ವೆಜಿಟೇಬಲ್‌ ಗ್ಲಿಸರಿನ್

ವೆಜಿಟೇಬಲ್‌ ಗ್ಲಿಸರಿನ್ ಸುಲಭವಾಗಿ ಸೂಪರ್‌ ಮಾರ್ಕೆಟ್‌ಗಳಲ್ಲಿ ಸಿಗುತ್ತೆ. ಗ್ಲಿಸರಿನ್‌ನ್ನು ನಿಮ್ಮ ನಾಲಗೆ ಮೇಲೆ ಹಾಕ್ಕೊಳ್ಳಿ. ನಂತ್ರ ನಿಧಾನವಾಗಿ ಸಾಫ್ಟ್‌ ಬ್ರಷ್ನಿಂದ ಬ್ರಷ್‌ ಮಾಡಿ.. ಇದು ನಿಮ್ಮ ಬ್ಯಾಡ್‌ಬ್ರೀತ್‌ ಕಡಿಮೆ ಮಾಡಿ ನಾಲಗೆ ಡ್ರೈ ಆಗಿರೋದನ್ನು ತಪ್ಪಿಸಿ ಅಗ್ರ ಕಡಿಮೆಯಾಗುವಂತೆ ಮಾಡುತ್ತೆ.

ಬೇಕಿಂಗ್ ಸೋಡಾ

ಬೇಕಿಂಗ್ ಸೋಡಾ

ಬೇಕಿಂಗ್‌ ಸೋಡಾವನ್ನು ಲಿಂಬೆರಸದ ಜೊತೆ ಮಿಕ್ಸ್ ಮಾಡಿ. ಈ ಪೇಸ್ಟನ್ನು ನಿಮ್ಮ ನಾಲಗೆಯ ಮೇಲೆ ಅಪ್ಲೈ ಮಾಡಿ. ಇದು ನಿಮ್ಮ ನಾಲಗೆಯ ಮೇಲೆ ಆಗಿರುವ ಬಿಳಿ ಪ್ಯಾಚ್‌ಗಳನ್ನು ತೊಡೆದು ಹಾಕಲು ನೆರವಾಗುತ್ತೆ. ಅಷ್ಟೇ ಅಲ್ಲ ಬ್ಯಾಡ್‌ ಬ್ರೀತ್‌ ಕಡಿಮೆ ಮಾಡಿ, ಹಲ್ಲುಗಳು ಕೂಡ ಹೊಳೆಯುವಂತೆ ಮಾಡುತ್ತೆ.

ಅರಿಶಿನ

ಅರಿಶಿನ

ಎಲ್ಲರಿಗೂ ಗೊತ್ತಿರೋ ಹಾಗೆ ಅರಿಶಿನ ಒಂದು ಌಂಟಿಬ್ಯಾಕ್ಟೀರಿಯಲ್‌ ರೆಮಿಡಿ. ಇದನ್ನು ನಿಮ್ಮ ನಾಲಗೆಯಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾಗಳನ್ನು ಸಾಯಿಸಲು ಬಳಕೆ ಮಾಡ್ಬಹುದು. ಸ್ವಲ್ಪ ಅರಿಶಿನಪುಡಿಯನ್ನು ಲಿಂಬೆರಸದ ಜೊತೆ ಮಿಕ್ಸ್ ಮಾಡಿ. ಅದನ್ನು ನಾಲಗೆಯ ಮೇಲೆ ಅಪ್ಲೈ ಮಾಡಿ ವೈಟ್‌ ಪ್ಯಾಚ್‌ಗಳನ್ನು ಸ್ಕ್ರಬ್‌ ಮಾಡಿ. ಅಥ್ವಾ ನೀರಿನೊಂದಿಗೆ ಅರಿಶಿನಪುಡಿಯನ್ನು ಮಿಕ್ಸ್ ಮಾಡಿ ಬಾಯಿ ಮುಕ್ಕಳಿಸಿದ್ರೂ ಕೂಡ ಸಮಸ್ಯೆ ನಿವಾರಣೆಯಾಗುತ್ತೆ.

ಮೊಸರು

ಮೊಸರು

ನಾಲಗೆಯ ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಿವಾರಿಸಲು ಮೊಸರು ಅಥ್ವಾ ಯೋಗರ್ಟ್‌ ಒಂದು ಬೆಸ್ಟ್ ಮೆಡಿಸಿನ್‌ ರೀತಿ ಕೆಲ್ಸ ಮಾಡುತ್ತೆ.ಒಂದು ಕಪ್‌ ಮೊಸರನ್ನು ಸ್ಪೂನ್‌ನಿಂದ ಡೈರೆಕ್ಟ್‌ ಆಗಿ ಸೇವಿಸಿ. ನಿಮ್ಮ ನಾಲಗೆ ಪ್ರೊಬಯೋಟಿಕ್‌ನ್ನು ಫೀಲ್‌ ಮಾಡಲಿ. ಮೊಸರಿನಲ್ಲಿರುವ ಪ್ರೊಬಯೋಟಿಕ್‌ಗಳು ನಾಲಗೆಯಲ್ಲಿ ಫಂಗಲ್‌ ಮತ್ತು ಬ್ಯಾಕ್ಟೀರಿಯಾ ಇನ್ಫೆಕ್ಷನ್‌ ಆಗೋದನ್ನು ನಿಯಂತ್ರಿಸುತ್ತೆ.

ಅಲೋವಿರಾ

ಅಲೋವಿರಾ

ಹಲವು ಸಮಸ್ಯೆಗಳನ್ನು ನಿವಾರಿಸುವ ಸಾಮರ್ಥ್ಯ ಅಲವೀರಾಗಿದೆ. ಬಾಯಿಯಲ್ಲಿ ಸೃಷ್ಟಿಯಾಗುವ ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಿವಾರಿಸುವ ಶಕ್ತಿ ಅಲವೀರಾಗಿದೆ. ಕೆಲವು ಸ್ಪೂನ್‌ನಷ್ಟು ಅಲವೀರಾ ರಸವನ್ನು ನಾಲಗೆಗೆ ಹಾಕಿಕೊಳ್ಳಿ. ಅಲವೀರಾ ರಸ ಕಹಿಯಾಗಿದ್ದು, ಇದು ನಿಮ್ಮ ನಾಲಗೆಯನ್ನು ಸ್ವಚ್ಛಗೊಳಿಸುವ ಸಾಮರ್ಥ್ಯ ಹೊಂದಿದೆ.

ಬೇವು

ಬೇವು

ಆಂಟಿಫಂಗಲ್ ಮತ್ತು ಌಂಟಿ ಬ್ಯಾಕ್ಟೀರಿಯಲ್‌ ಕ್ವಾಲಿಟಿಯನ್ನು ಕಹಿಬೇವು ಹೊಂದಿದೆ. ಬೇವಿನ ಎಲೆಗಳನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ನಂತ್ರ ಆ ನೀರನ್ನು ಆರಿಸಿ, ಬಾಯಿ ಮುಕ್ಕಳಿಸಿ. ಹೀಗೆ ಕೆಲವು ದಿನಗಳವರೆಗೆ ಮಾಡೋದ್ರಿಂದ ನಾಲಗೆ ದಪ್ಪವಾಗೋದು, ನಾಲಗೆಯಲ್ಲಿ ಬಿಳಿ ಪದರ ಆಗುವ ಸಮಸ್ಯೆ ನಿವಾರಣೆಯಾಗುತ್ತೆ.

ಸೇಬು ಮತ್ತು ಕ್ಯಾರೆಟ್‌

ಸೇಬು ಮತ್ತು ಕ್ಯಾರೆಟ್‌

ಸೇಬು, ಕ್ಯಾರೆಟ್, ಸ್ಟ್ರಾಬೆರಿಗಳು ನೈಸರ್ಗಿಕವಾಗಿ ನಾಲಗೆಯನ್ನು ಶುದ್ಧಗೊಳಿಸುವ ಸಾಮರ್ಥ್ಯ ಹೊಂದಿದೆ. ಅದ್ರ ತರಿತರಿಯಾದ ಪದರ ನಾಲಗೆಯನ್ನು ಶುದ್ಧಗೊಳಿಸಿ, ನಾಲಗೆಯ ಬಿಳಿ ಪದರವನ್ನು ನಿವಾರಿಸುತ್ತೆ.

ನಿದ್ದೆಗೂ ಮುನ್ನ ಹಲ್ಲುಜ್ಜುವುದನ್ನು ಮರೀಬೇಡಿ

ನಿದ್ದೆಗೂ ಮುನ್ನ ಹಲ್ಲುಜ್ಜುವುದನ್ನು ಮರೀಬೇಡಿ

ಅದೆಷ್ಟೇ ಹೇಳಿದ್ರೂ ಕೆಲವರು ದಿನಕ್ಕೆ ಒಂದು ಬಾರಿ ಮಾತ್ರ ಹಲ್ಲುಜ್ತಾರೆ. ಬಟ್‌ ದಿನಕ್ಕೆ ಎರಡು ಬಾರಿ ಅದ್ರಲ್ಲೂ ನಿದ್ದೆಗೂ ಮುನ್ನ ಹಲ್ಲುಜ್ಜುವುದರಿಂದ ನಾಲಗೆಯಲ್ಲಿ ಅಗ್ರ ಆಗುವುದನ್ನು ನಿಯಂತ್ರಿಸಿಕೊಳ್ಳಬಹುದು. ನಾವು ಎಷ್ಟು ಶುದ್ಧವಾಗಿ ನಮ್ಮ ನಾಲಗೆಯನ್ನು ಇಟ್ಟುಕೊಳ್ತೀವಿ ಅನ್ನೋದು ಕೂಡ ತುಂಬಾ ಇಂಪಾರ್ಟೆಂಟ್ ಆಗುತ್ತೆ ಅನ್ನೋದನ್ನು ಮರೀಬೇಡಿ..

English summary

Home Remedies for a White-Coated Tongue

The tongue is one of the strongest muscles in the body. It helps us taste food, swallow and talk. A healthy tongue is pink in color and covered with small nodules called papillae. But at times, your tongue may have a white coating. This is a common problem and can lead to symptoms like bad breath or a bitter taste in the mouth. Here are the top home remedies for a white-coated tongue.
Story first published: Friday, February 19, 2016, 17:53 [IST]
X
Desktop Bottom Promotion