Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಪಿತ್ತ ದೋಷ ಸಮಸ್ಯೆಗೆ, ಸಮರ್ಥ ಗಿಡಮೂಲಿಕೆಗಳು
ಆಯುರ್ವೇದದ ಪ್ರಕಾರ ನಮ್ಮ ದೇಹದ ಪಿತ್ತದೋಶ ಜೀವರಾಸಾಯನಿಕ ಕ್ರಿಯೆಗಳ ಪರಿಣಾಮವನ್ನು ನಿಯಂತ್ರಿಸುತ್ತದೆ. ಪಿತ್ತದೋಶದಲ್ಲಿ ನೀರು ಮತ್ತು ಅಗ್ನಿಯ ಪ್ರಭಾವ ಪ್ರಮುಖವಾಗಿದ್ದು ಇದು ಜೀರ್ಣಕ್ರಿಯೆಯನ್ನು ನಿಯಂತ್ರಿಸುತ್ತದೆ. ಅಲ್ಲದೇ ನಮ್ಮ ಪಂಚೇದ್ರಿಯಗಳ ಮೂಲಕ ವಿಶ್ವವನ್ನು ಗ್ರಹಿಸಲೂ ಸಾಧ್ಯವಾಗುತ್ತದೆ!
ಕೆಲವೊಮ್ಮೆ ಪಿತ್ತ ಕೆರಳಿದಾಗ ಕೆಲವು ತೊಂದರೆಗಳು ಎದುರಾಗಬಹುದು. ಚರ್ಮದಲ್ಲಿ ಉರಿ, ಎದೆಯುರಿ, ಅತಿಸಾರ, ಆಮ್ಲೀಯತೆ, ಅಕಾಲಿಕ ನೆರೆ, ಕೂದಲಿನ ಪ್ರಮಾಣದಲ್ಲಿ ಇಳಿಕೆ, ನಿದ್ರಾಹೀನತೆ ಸ್ಥಿತಿ, ಅಸಹನೆ, ಸಿಟ್ಟು, ಚರ್ಮ ಕೆಂಪಗಾಗುವುದು ಮೊದಲಾದ ತೊಂದರೆಗಳು ಎದುರಾಗುತ್ತವೆ. ವಾತ ಪಿತ್ತ ಕಫಗಳಿಗಾಗಿ ಸೂಕ್ತ ಯೋಗಾಸನಗಳು
ಈ ಸಂದರ್ಭಗಳಲ್ಲಿ ಕೆಲವು ಗಿಡಮೂಲಿಕೆಗಳನ್ನು ಸೇವಿಸುವ ಮೂಲಕ ಈ ದೋಷವನ್ನು ಸರಿಪಡಿಸಿ ಆರೋಗ್ಯವನ್ನು ಮತ್ತೆ ಪಡೆಯಬಹುದು. ಈ ನಿಟ್ಟಿನಲ್ಲಿ ಸಮರ್ಥವಾದ ಕೆಲವು ಗಿಡಮೂಲಿಕೆಗಳ ಬಗ್ಗೆ ಅಮೂಲ್ಯ ಮಾಹಿತಿಯನ್ನು ನೀಡಲಾಗಿದೆ, ಮುಂದೆ ಓದಿ...
ಬ್ರಾಹ್ಮಿ
ನವತಾರುಣ್ಯವನ್ನು ಪಡೆಯಲು ಬ್ರಾಹ್ಮಿ ಒಂದು ಉತ್ತಮ ಗಿಡಮೂಲಿಕೆಯಾಗಿದ್ದು ವಿಶೇಷವಾಗಿ ಒತ್ತಡಕ್ಕೆ ಸಿಲುಕಿದ ದೇಹ ಮತ್ತು ಮನಗಳು ಮತ್ತೆ ಚೇತನ ಪಡೆಯಲು ನೆರವಾಗುತ್ತದೆ. ಒಂದು ವೇಳೆ ಪಿತ್ತದ ಪ್ರಭಾವ ಹೆಚ್ಚು ಕಡಿಮೆಯಾಗಿದ್ದರೆ ಇದನ್ನು ಸರಿಪಡಿಸಲು ಬ್ರಾಹ್ಮಿ ಉತ್ತಮ ಆಯ್ಕೆಯಾಗಿದ್ದು ಬಿಸಿಯಾಗಿದ್ದ ದೇಹವನ್ನು ತಣಿಸುವ ಮೂಲಕ ಜೀವರಾಸಾಯನಿಕ ಕ್ರಿಯೆಯನ್ನೂ ಸುಲಲಿತಗೊಳಿಸುತ್ತದೆ. ಅಲ್ಲದೇ ವಿಶೇಷವಾಗಿ ನಮ್ಮ ನರಮಂಡಲ ಮತ್ತು ನರವ್ಯವಸ್ಥೆ ಉತ್ತಮಗೊಳ್ಳಲು ನೆರವಾಗುತ್ತದೆ. ಇದರಿಂದ ಕಲಿಕಾಸಾಮರ್ಥ್ಯ, ಸ್ಮರಣಶಕ್ತಿ ಮತ್ತ್ತುಏಕಾಗ್ರತೆ ಹೆಚ್ಚುತ್ತದೆ.

ಏಲಕ್ಕಿ
ಪಿತ್ತದೋಶದಿಂದ ಬಳಲುತ್ತಿರುವ ವ್ಯಕ್ತಿಗಳ ದೇಹಕ್ಕೆ ತಂಪುನೀಡಲು ಏಲಕ್ಕಿ ಒಂದು ಉತ್ತಮ ಮೂಲಿಕೆಯಾಗಿದೆ. ಏಲಕ್ಕಿಯಲ್ಲಿನ ಪೋಷಕಾಂಶಗಳು ಯಕೃತ್ ನ ಕ್ಷಮತೆ ಹೆಚ್ಚಿಸುವ ಮೂಲಕ ಪ್ರೋಟೀನುಗಳನ್ನು ಸಮರ್ಥವಾಗಿ ಸಂಸ್ಕರಿಸಲು ನೆರವಾಗುತ್ತದೆ. ತನ್ಮೂಲಕ ಜೀವರಾಸಾಯನಿಕ ಕ್ರಿಯೆ ಉತ್ತಮಗೊಳ್ಳುತ್ತದೆ. ಮಸಾಲೆ ಪದಾರ್ಥಗಳ ರಾಣಿ- ಪುಟ್ಟ ಏಲಕ್ಕಿ
ಶತಾವರಿ (asparagus)
ತ್ರಿಫಲ
ತ್ರಿಫಲದಲ್ಲಿರುವ ಪೋಷಕಾಂಶಗಳ ವಿಶಿಷ್ಟ ಸಂಯೋಜನೆಯ ಕಾರಣದಿಂದಾಗಿ ಎಲ್ಲ ತರಹದ ದೋಶಗಳಿಗೂ ಉತ್ತಮ ಪರಿಹಾರ ದೊರಕುತ್ತದೆ. ಇದರಲ್ಲಿರುವ ತಂಪುಮಾಡುವ ಗುಣ ಮತ್ತು ದೋಶಗಳಿಗೆ ಕಾರಣವಾದ ಅಸಮತೋಲನವನ್ನು ಸರಿಪಡಿಸುವ ಗುಣದಿಂದಾಗಿ ಹಲವು ತೊಂದರೆಗಳು ಸುಲಭವಾಗಿ ಇಲ್ಲವಾಗುತ್ತವೆ. ನೆಲ್ಲಿಕಾಯಿಯಲ್ಲಿ ನೈಸರ್ಗಿಕ ಆಂಟಿ ಆಕ್ಸಿಡೆಂಟುಗಳಿದ್ದು ಇದು ರೋಗ ನಿರೋಧಕ ಶಕ್ತಿಯನ್ನು ಅಪಾರವಾಗಿ ಹೆಚ್ಚಿಸುತ್ತದೆ. ಗರ್ಭಾವಸ್ಥೆಯಲ್ಲಿ ಪಿತ್ತ ನಿವಾರಣೆ ಹೇಗೆ?
ಹರಿತಾಕಿ ಎಂಬ ಮೂಲಿಕೆ ಸಂಕೋಚಕ ಮತ್ತು ವಿರೇಚಕ ಗುಣಗಳನ್ನು ಹೊಂದಿದ್ದು ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತದೆ. ಬಿಭಿತಾಕಿ ಎಂಬ ಇನ್ನೊಂದು ಮೂಲಿಕೆಯೂ ಸಂಕೋಚಕ ಮತ್ತು ಪುನರ್ಯೌವನ ನೀಡುವ ಗುಣ ಹೊಂದಿದ್ದು ವಿಶೇಷವಾಗಿ ಉಸಿರಾಟ ಮತ್ತು ಶ್ವಾಸಸಂಬಂಧಿ ಕಾರ್ಯಗಳನ್ನು ಉತ್ತಮಗೊಳಿಸುತ್ತದೆ. ತ್ರಿಫಲಗಳ ಸರಿಯಾದ ಪ್ರಮಾಣದ ಮಿಶ್ರಣ ಪಿತ್ತದೋಶವನ್ನು ನಿವಾರಿಸಲು ಉತ್ತಮವಾಗಿದೆ.
ಕೇಸರಿ
ರಕ್ತಪರಿಚಲನೆ ಹೆಚ್ಚಿಸಿದರೂ ದೇಹವನ್ನು ತಂಪಾಗಿಟ್ಟುವಲ್ಲಿ ಕೇಸರಿಗಿಂತ ಉತ್ತಮವಾದ ಆಯ್ಕೆ ಇನ್ನೊಂದಿಲ್ಲ. ಏಕೆಂದರೆ ರಕ್ತ ಪರಿಚಲನೆ ಹೆಚ್ಚಿಸುವ ಇನ್ನಾವುದೇ ಕ್ರಮದಿಂದ ಶರೀರದ ತಾಪಮಾನವೂ ಹೆಚ್ಚುತ್ತದೆ. ಪಿತ್ತದೋಶದ ಈ ಪರಿಣಾಮದಿಂದಾಗಿ ಸಂಧಿವಾತ, ಹೆಪಟೈಟಿಸ್ ಮತ್ತು ಮೊಡವೆ ಮೊದಲಾದ ತೊಂದರೆಗಳಿಂದ ಬಳಲುತ್ತಿರುವವರಿಗೆ ಕೇಸರಿ ನಿಶ್ಚಿತವಾಗಿಯೂ ಉತ್ತಮ ಪರಿಹಾರ ನೀಡುತ್ತದೆ. ಬಹುಪಯೋಗಿ ಕೇಸರಿ, ಗರ್ಭಿಣಿಯರ ಪಾಲಿನ ಸಂಜೀವಿನಿ
ಸಂಶೋಧನೆಗಳ ಮೂಲಕ ಈ ಮೂಲಿಕೆಯಲ್ಲಿ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿದ್ದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಅಲ್ಲದೇ ದೇಹದೊಳಗೆ ಉಷ್ಣದಿಂದಾಗಿ ಎದುರಾಗಿದ್ದ ಉರಿ ಮತ್ತು ಕೆಲವು ವಿಧದ ಕ್ಯಾನ್ಸರ್ ಆವರಿಸುವುದರಿಂದಲೂ ಮುಕ್ತಿ ನೀಡುತ್ತದೆ.
ಈ ಮೂಲಿಕೆಗಳ ಹೊರತಾಗಿ ಪಿತ್ತದೋಶವನ್ನು ಕಡಿಮೆಗೊಳಿಸಲು ನಮ್ಮ ಅಭ್ಯಾಸಗಳಲ್ಲಿ ಕೊಂಚ ಬದಲಾವಣೆಯನ್ನು ತರುವುದೂ ಅವಶ್ಯವಾಗಿದೆ. ಇದರಲ್ಲಿ ಪ್ರಮುಖವಾದುದೆಂದರೆ ಅತಿ ಬಿಸಿಯಾದ ಆಹಾರಗಳನ್ನು ತಿನ್ನುವುದು. ಇದನ್ನು ಸರಿಪಡಿಸಲು ಆಹಾರಗಳನ್ನು ಸಾಮಾನ್ಯ ತಾಪಮಾನಕ್ಕೆ ತಣಿಸಿದ ಬಳಿಕವೇ ಸೇವಿಸುವುದು ಪರಿಹಾರವಾಗಿದೆ. ಸಿಹಿ, ಒಣದಾಗಿರುವ, ಸಂಕೋಚಕ ಗುಣ ಹೊಂದಿರುವ ಹಾಗೂ ಕಹಿಯಾದ ಆಹಾರಗಳ ಸೇವನೆ ಹಿತಕರ. ಆದರೆ ಅತಿ ಹೆಚ್ಚಿನ ಹುಳಿ, ಉಪ್ಪು, ಘಾಟು ಬರುವ ಮತ್ತು ಎಣ್ಣೆಯ ಆಹಾರಗಳನ್ನು ವರ್ಜಿಸಬೇಕು. ನಿಯಮಿತವಾಗಿ ಅಭ್ಯಂಗ ಅಥವಾ ಕೊಬ್ಬರಿ ಎಣ್ಣೆಯ ಮಸಾಜ್ ಮಾಡಿಸಿಕೊಳ್ಳುವ ಮೂಲಕ ದೇಹಕ್ಕೆ ಹೆಚ್ಚಿನ ತಂಪು ದೊರಕುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications












