Latest Updates
-
ಶಾಖದ ಅಲೆ ಎಚ್ಚರಿಕೆ: ಎಸಿ ಇಲ್ಲದೆ ಮನೆಯನ್ನು ತಂಪಾಗಿಡಲು ಮತ್ತು ನಿಮ್ಮ ಗಿಡಗಳನ್ನು ಬಿಸಿಲಿನಿಂದ ರಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ಪಾನೀಯ ಮತ್ತು ಆಹಾರವೇ ಸಂಜೀವಿನಿ! -
ಸೀರೆ ಉಡೋದ್ರಲ್ಲಿ ಹೊಸ ಕ್ರಾಂತಿ: ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗ್ತಿರೋ 'ದೇಸಿ-ಕೋರ್' ಸೀರೆ ಸ್ಟೈಲ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಬೇಗೆಯಲ್ಲೂ ಫಿಟ್ ಆಗಿರಬೇಕೆ? ಮುಂಜಾನೆಯ ಈ ಸಣ್ಣ ಬದಲಾವಣೆ ನಿಮ್ಮ ಆರೋಗ್ಯಕ್ಕೆ ವರದಾನ! -
ಬಿಸಿಲ ಧಗೆಯಲ್ಲಿ ಮದುವೆ ಸಮಾರಂಭಗಳ ಸಂಕಟ: ಅತಿಥಿಗಳಿಗೂ ನಿಮಗೂ ಆರಾಮ ನೀಡುವ ಸೀಕ್ರೆಟ್ ಟಿಪ್ಸ್ ಇಲ್ಲಿದೆ! -
ಬಿಸಿಲ ಬೇಗೆಯಿಂದ ಮನೆ ತತ್ತರ: ಎಸಿ ಇಲ್ಲದೆಯೇ ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಉಳಿಸಲು ಈ ಸರಳ ಉಪಾಯಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮಗಳನ್ನು ಪಾಲಿಸಿ, ಆರೋಗ್ಯವಾಗಿರಿ! -
ಕಾನ್ ರೆಡ್ ಕಾರ್ಪೆಟ್ ಮೇಲೆ ದಿಶಾ ಮದನ್ ಅಬ್ಬರ: ಹಳೆಯ ಸೀರೆಯಿಂದ ಸೃಷ್ಟಿಯಾದ ಈ ಫ್ಯಾಷನ್ ಮ್ಯಾಜಿಕ್ ನೋಡಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಜೀವಕ್ಕೆ ಅಪಾಯವಾಗದಂತೆ ತಡೆಯಲು ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಬಿಸಿಲ ಬೇಗೆಯಲ್ಲಿ ದಂಪತಿಗಳ ನಡುವೆ ಹೆಚ್ಚಿದ ಕಿರಿಕಿರಿ: ಸಂಬಂಧ ಹಾಳಾಗದಂತೆ ತಡೆಯಲು ಈ ಟಿಪ್ಸ್ ಪಾಲಿಸಿ
ಮನಿ ಪ್ಲಾಂಟ್ ಗಿಂತ ಆರೋಗ್ಯಕಾರಿ ಈ ಸಸ್ಯಗಳು
ಮನೆಯಲ್ಲಿ ಗಿಡಗಳನ್ನು ಬೆಳೆಸೋದು ಅತ್ಯಂತ ಒಳ್ಳೆಯ ಅಭ್ಯಾಸಗಳಲ್ಲಿ ಒಂದು. ಆದ್ರೆ ಕೆಲವರು ಶೋಕಿಗೋಸ್ಕರ ಇಲ್ಲವೇ ಮೂಢನಂಬಿಕೆಗಳಿಂದಾಗಿ ಮನೆಯಲ್ಲಿ ಬೆಳೆಸುವ ಗಿಡ ಮನಿಪ್ಲಾಂಟ್.. ಮನಿಪ್ಲಾಂಟ್ ನೆಟ್ಟರೆ ಮನೆಯಲ್ಲಿ ದುಡ್ಡು ಬರುತ್ತೆ. ಮನಿಪ್ಲಾಂಟ್ ಎಷ್ಟು ಚೆನ್ನಾಗಿ ಬೆಳೆಯುತ್ತೋ ಅಷ್ಟು ದುಡ್ಡು ಇರುತ್ತಂತೆ. ಇಂತಹ ಮೂಢನಂಬಿಕೆಗಳಿಗೇನು ಕೊರತೆಯೇ ಇಲ್ಲಬಿಡಿ. ನಿಜ ಹೇಳಬೇಕು ಅಂದ್ರೆ ಮನಿ ಪ್ಲಾಂಟ್ ನೀವಂದುಕೊಂಡಂತ ಗಿಡ ಅಲ್ಲವೇ ಅಲ್ಲ. ಅದೊಂದು ಶೋಕಿ ಗಿಡ ಅಷ್ಟೇ.. ಮನಿ ಪ್ಲಾಂಟ್ ಬದಲಿಗೆ ನೀವು ನಿಮ್ಮ ಮನೆಯಲ್ಲಿ ಇತರೆ ಹಲವು ಗಿಡಗಳನ್ನು ಬೆಳೆಸಿಕೊಳ್ಳಬಹುದು.. ಅವು ನಿಮ್ಮ ಆರೋಗ್ಯದ ದೃಷ್ಟಿಯಿಂದ ಮಾಡುವ ಸಹಾಯ ಮನಿ ಪ್ಲಾಂಟ್ ಗಿಂತ ನೂರು ಪಟ್ಟು ಹೆಚ್ಚು.
ಮನಿಪ್ಲಾಂಟ್ ಮನೆಯ ಯಾವುದೇ ಕೆಲಸಕ್ಕೂ ಬಳಕೆಗೆ ಬರೋದಿಲ್ಲ. ಮನಿಪ್ಲಾಂಟ್ ಬದಲಾಗಿ ಅದೇ ರೀತಿ ಬಳ್ಳಿಯ ಇಲ್ಲವೇ ಅದ್ರಂತೆಯೇ ಬೆಳೆಸುವ ಆಹಾರ ಪದಾರ್ಥದ ಗಿಡಗಳನ್ನು ಬೆಳೆಸಿಕೊಂಡರೆ ನಿಮಗೇ ಒಳಿತು.. ಜೊತೆಗೆ ಮನೆಯ ಪರಿಸರವೂ ಸುಂದರವಾಗಿ ಕಾಣುತ್ತೆ.ಮನೆಮಂದಿಯ ಆರೋಗ್ಯವೂ ವೃದ್ಧಿಯಾಗುತ್ತೆ. ಹಾಗಾದ್ರೆ ಮನಿಪ್ಲಾಂಟ್ ಬದಲಿಗೆ ಬೆಳೆಸಬಹುದಾದ ಗಿಡಗಳು ಯಾವುದು ಅಂತ ಕೇಳುತ್ತಾ ಇದ್ದೀರಾ? ಇಲ್ಲಿವೆ ನೋಡಿ ಲಿಸ್ಟ್..

ಬಸಲೆ ಸೊಪ್ಪು
ಬಸಲೆ ಸೊಪ್ಪು.. ವಿಟಮಿನ್‌ಗಳಿಂದ ಭರಪೂರಗೊಂಡಿರುವ ಅತ್ಯಂತ ಒಳ್ಳೆಯ ಸೊಪ್ಪು. ಮನೆಯಲ್ಲಿ ಮನಿಪ್ಲಾಂಟ್‌ಗೆ ಗೊಬ್ಬರಗಿಬ್ಬರ ಹಾಕಿ ಸೊಂಪಾಗಿ ಬೆಳೆಸುವ ಬದಲು ಅದೇ ಗೊಬ್ಬರವನ್ನು ಬಸಲೆಗಿಡಕ್ಕೆ ಹಾಕಿ ಬೆಳೆಸಿದ್ರೆ ಮನೆಯ ಅಂದವೂ ಹೆಚ್ಚುತ್ತೆ. ಬಸಲೆ ಗಿಡ ಮನಿಪ್ಲಾಂಟ್‌ನಂತೆಯೇ ಹಬ್ಬಿರುತ್ತೆ. ಜೊತೆಗೆ ಅಡುಗೆಗೂ ಬಳಸ್ಬಹುದು. ಮನಿಪ್ಲಾಂಟ್ ನಿಮ್ಮ ಮನೆಯ ಅಡುಗೆಗೆ ಯೋಗ್ಯವಲ್ಲದ ಸೊಪ್ಪು. ಅದಕ್ಕೆ ಗೊಬ್ಬರ ಸುರಿದು ಆರೈಕೆ ಮಾಡುವ ಬದಲು ಬಸಲೆ ಗಿಡಕ್ಕೆ ಮಾಡಿದ್ರೆ ನೀವು ನಿಮ್ಮ ಮನೆಮಂದಿ ತಂಪಾದ ಆಹಾರ ಸೇವಿಸಿದಂತಾಗುತ್ತೆ. ಅಷ್ಟೇ ಅಲ್ಲ ನಾರಿನಂಶ ಅಧಿಕವಿರುವ ಉತ್ತಮ ಆಹಾರ ನಿಮ್ಮದಾಗುತ್ತೆ.

ಹರಿವೆ ಸೊಪ್ಪು
ಹಸಿರು, ಕಡುಗೆಂಪು ಹೀಗೆ ಎರಡು ರೀತಿಯ ಹರಿವೆ ಸೊಪ್ಪುಗಳನ್ನು ಮನೆಯಲ್ಲಿ ಮನಿಪ್ಲಾಂಟ್ ಬದಲಾಗಿ ಬಳಸಿದ್ರೆ ಖಂಡಿತ ಮನೆಯ ಅಂತ ಇಮ್ಮಡಿಗೊಳ್ಳುತ್ತೆ. ಕಲರ್‌ಫುಲ್ ಗಿಡ ಜೊತೆಗೆ ಅಡುಗೆಗೂ ಯೋಗ್ಯವಾಗಿರುವ ಹರಿವೆಗಿಡ ಖಂಡಿತ ಮನಿಪ್ಲಾಂಟ್ ಬದಲಿಗೆ ಬಳಸಿದ್ರೆ ಅತ್ಯತ್ತುಮ ಮನೆಯಲ್ಲೇ ಲಭ್ಯವಾಗುತ್ತೆ. ಒಂದು ಹರಿವೆ ಸೊಪ್ಪಿನ ಕಟ್ಟನ್ನು ಅಂಗಡಿಯಲ್ಲಿ ಖರೀದಿಸಲು ಹೋದ್ರೆ ಕಡಿಮೆ ಅಂದ್ರೂ ಐದು ರುಪಾಯಿ ಸಲ್ಲಿಸಬೇಕು. ಅದರ ಬದಲಿಗೆ ನೀವೇ ನಿಮ್ಮ ಮನೆಯಲ್ಲೇ ಬೆಳೆಸಿಕೊಂಡ್ರೆ ಉತ್ತಮ ಆಹಾರ ನಿಮ್ಮದಾಗುತ್ತೆ.

ಕೊತ್ತುಂಬರಿ ಸೊಪ್ಪು
ಒಂದು ರುಪಾಯಿ, ಎರಡು ರುಪಾಯಿಗೆ ಅಂತ ಪ್ರತಿದಿನ ಹೊರಗಡೆಯಿಂದ ಕೊತ್ತುಂಬರಿ ಸೊಪ್ಪು ಖರೀದಿಸ್ತಲೇ ಇರ್ತೀವಿ. ಬಟ್ ಮನೆಯ ಪಾಟ್‌ನಲ್ಲಿ ಮನಿಪ್ಲಾಂಟ್ ಬೆಳೆಸಿರ್ತೀವಿ. ಮನಿಪ್ಲಾಂಟ್ ಬದಲಾಗಿ ಅದೇ ಮಣ್ಣಿನ ಪಾಟ್‌ನಲ್ಲಿ ಕೊತ್ತುಂಬರಿ ಬೀಜಗಳನ್ನು ಬಿತ್ತಿ ನೋಡಿ.. ಕೆಲವೇ ದಿನದಲ್ಲಿ ನಿಮಗೆ ನೀವೇ ಬೆಳೆದ ಕೊತ್ತುಂಬರಿ ಸೊಪ್ಪು ನಿಮ್ಮ ಕೈಯಲ್ಲಿರುವಂತಾಗಿರುತ್ತೆ. ಹೆಲ್ತಿಯೂ ಆಗಿರುತ್ತೆ.

ಹಸಿಮೆಣಸಿನಕಾಯಿ ಗಿಡ
ಮೆಣಸಿನಕಾಯಿ ಗಿಡದಲ್ಲಿ ಹಲವು ವಿಧಗಳಿವೆ, ಬೇರೆಬೇರೆ ಕಲರಿನ ಮೆಣಸಿನಗಿಡಗಳನ್ನು ಪಾಟ್‌ನಲ್ಲಿ ಬೆಳೆಸಿಕೊಳ್ಳಬಹುದು.. ಇದನ್ನು ಮನೆಯ ಒಳಗಿನ ಪಾಟ್‌ನಲ್ಲೂ ಬೆಳೆಸಿಕೊಳ್ಳಬಹುದು. ಸ್ವಲ್ಪ ಗಾಳಿ,ಬೆಳಕು,ಬಿಸಿಲಿನ ಅಗತ್ಯವಿರುತ್ತೆ. ಮನಿಪ್ಲಾಂಟ್‌ಗೆ ಗೊಬ್ಬರ ಸುರಿದು ಬೆಳೆಸುವ ಬದಲು ಅದೇ ಗೊಬ್ಬರವನ್ನು ಹಸಿಮೆಣಸಿನ ಗಿಡಕ್ಕೆ ಹಾಕಿದ್ರೆ ಖಂಡಿತ ಸಿಟಿ ಮಂದಿ ಹಸಿಮೆಣಸನ್ನು ಅಂಗಡಿಯಿಂದ ತರೋದನ್ನು ತಪ್ಪಿಸಿಕೊಳ್ಳಬಹುದು..

ಪುದೀನಾ
ಅತ್ಯಂತ ವೇಗವಾಗಿ ಬೆಳೆಯುವ ಗಿಡಗಳಲ್ಲಿ ಪುದೀನಾ ಕೂಡ ಒಂದು.. ನೀವು ಪಾಟ್‌ಗಳಲ್ಲಿ ಪೆಸ್ಟಿಸೈಡ್ಸ್ ಹಾಕಿ ಬೆಳೆದಿರುವ ಸೊಪ್ಪುಗಳನ್ನು ಕೊಂಡುಕೊಳ್ಳುವ ಬದಲು ನೀವೇ ಮನೆಯಲ್ಲೇ ಅತ್ಯತ್ತುಮ ಆಹಾರವನ್ನು ಬೆಳೆಸಿಕೊಳ್ಳಬಹುದು. ಆದ್ರೆ ಹೆಚ್ಚಿನವ್ರು ಆಹಾರ ಪದಾರ್ಥಗಳ ಗಿಡಗಳನ್ನು ಬೆಳೆಸಿ ಕೇರ್ ತೆಗೆದುಕೊಳ್ಳುವ ಬದಲು ಮನಿಪ್ಲಾಂಟ್ ಬೆಳೆಸಿದ್ರೆ ದುಡ್ಡು ಬರುತ್ತೆ ಅನ್ನೋ ಮೌಢ್ಯತೆಯಲ್ಲಿದ್ದು ಆಹಾರ ಪದಾರ್ಥಗಳನ್ನು ಬೆಳೆಸಿಕೊಳ್ಳಲು ಅವಕಾಶವಿದ್ರೂ ಬೆಳೆಯುದಿಲ್ಲ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಪುದೀನಾ
ಆದ್ರೆ ನೆನಪಿಡಿ ನೀವು ಆಹಾರ ಪದಾರ್ಥಗಳ ಗಿಡಗಳನ್ನು ಬೆಳೆಸಿದ್ರೆ ಖಂಡಿತ ದುಡ್ಡು ಉಳಿಯುತ್ತೆ. ಬದಲಾಗಿ ಕಸದಂತಿರುವ ವೇಸ್ಟ್ ಗಿಡವನ್ನು ಬೆಳೆಸಿದ್ರೆ ಅಲ್ಲ ಅನ್ನೋದು ನೆನಪಿರಲಿ. ಅಷ್ಟೇ ಅಲ್ಲ ಪುದೀನಾ ಗಿಡಗಳನ್ನು ಮನೆಯಲ್ಲಿ ಬೆಳೆಸಿದ್ರೆ ಸೊಳ್ಳೆಗಳ ಕಾಟವೂ ಇರೋದಿಲ್ಲ. ಹಾಗಾಗಿ ಸೊಳ್ಳೆಗಳಿಂದ ಆಗುವ ಕಿರಿಕಿರಿಯನ್ನು ತಪ್ಪಿಸಿಕೊಳ್ಳಬೇಕು. ಅವುಗಳು ಹರಡುವ ಕಾಯಿಲೆಯಿಂದ ಮುಕ್ತರಾಗಿರಬೇಕು ಅಂದ್ರೆ ನೀವು ಮನೆಯಲ್ಲಿ ಮನಿಪ್ಲಾಂಟ್ ಬದಲಾಗಿ ಪುದೀನಾ ಗಿಡಗಳನ್ನು ಬೆಳೆಸಿಕೊಳ್ಳಬಹುದು.

ಸೌತೆಬಳ್ಳಿ
ಇನ್ನು ಮನಿಪ್ಲಾಂಟ್‌ನಂತೆ ಬಳ್ಳಿಯಾಗಿ ಹರಡುವ ಸೌತೆಬಳ್ಳಿಯನ್ನು ಕೂಡ ನೀವು ಮನೆಯಲ್ಲಿ ಬೆಳೆಸಿಕೊಳ್ಳಬಹುದು.. ಆದ್ರೆ ಸೌತೆಕಾಯಿ ಬಿಟ್ಟಾಗ ಸ್ವಲ್ಪ ಕೇರ್ ತೆಗೆದುಕೊಳ್ಳಬಹುದು. ಆದ್ರೆ ನೆನಪಿಡಿ.. ತಾಯಿಗೆ ಮಗುವು ಭಾರವೇ ಅನ್ನೋ ಹಾಗೆ ಸೌತೆಕಾಯಿ ಸೌತೆಗಿಡಕ್ಕೆ ಭಾರವಾಗಿರೋದಿಲ್ಲ. ನೀವು ಸ್ವಲ್ಪ ಬಳ್ಳಿ ಹೇಗೆ ಹರಡಿಸ್ಬೇಕು ಅನ್ನೋದ್ರ ಬಗ್ಗೆ ಮನಿಪ್ಲಾಂಟ್ ವಿಷ್ಯದಲ್ಲಿ ಹೇಗೆ ಕೇರ್ ತೆಗೆದುಕೊಳ್ತೀರೋ ಹಾಗೆ ಕೇರ್ ತೆಗೆದುಕೊಂಡ್ರೆ ಆಯ್ತು..

ಮಲ್ಲಿಗೆ, ಜಾಜಿ ಹೂವಿನ ಬಳ್ಳಿ
ಒಂದು ಕಡೆ ಮನಿಪ್ಲಾಂಟ್ ಬಳ್ಳಿ ಬೆಳೆಸಿ ಜಾಗ ವೇಸ್ಟ್ ಮಾಡಿರೋದು ಅಲ್ಲದೇ ದೇವರ ಪೂಜೆಗೆ ಪ್ರತಿದಿನ ಹೂವು ಬೇರೆ ಕೊಂಡುಕೊಳ್ತಾ ಇರೋರು ಇನ್ಮುಂದೆ ನಿಮ್ಮನ್ನ ನೀವು ತಿದ್ದಿಕೊಳ್ಳಿ. ಮನಿಪ್ಲಾಂಟ್ ಬೆಳೆಸುವ ಬದಲು ಅದೇ ಜಾಗದಲ್ಲಿ ಮಲ್ಲಿಗೆ ಗಿಡವನ್ನೋ, ಇಲ್ಲ ಜಾಜಿ ಗಿಡವನ್ನೋ ಬೆಳೆಸಿ ನೋಡಿ. ಮಲ್ಲಿಗೆ ಕೂಡ ಬಳ್ಳಿಯಂತೆ ಹರಡಿ ಮೊಗ್ಗರಳಿ ಹೂವಾಗೋದ್ರಿಂದ ಮನೆಯೂ ಸುವಾಸನೆ ಭರಿತವಾಗಿರುತ್ತೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮಲ್ಲಿಗೆ, ಜಾಜಿ ಹೂವಿನ ಬಳ್ಳಿ
ಹೂವು ಕೊಂಡುಕೊಳ್ಳೋಕೆ ಹಣವೂ ವೇಸ್ಟ್ ಆಗೋದಿಲ್ಲ. ಅಷ್ಟೇ ಅಲ್ಲ ಆರೈಕೆ ಚೆನ್ನಾಗಿದ್ರೆ ಮಲ್ಲಿಗೆ ಎಲ್ಲಾ ಸೀಸನ್‌ನಲ್ಲೂ ಹೂವರಳಿ ಮನೆ ನಂದನವನದಂತೆ ಕಂಗೊಳಿಸುತ್ತೆ. ಅಷ್ಟೇ ಅಲ್ಲ ಮನೆಯನ್ನು ಸುವಾಸನೆಭರಿತವಾಗಿ ಇಟ್ಟುಕೊಳ್ಳಲು ನೀವು ಯಾವುದೇ ಸ್ಪ್ರೇ ಬಳಸುವ ಅಗತ್ಯವಿಲ್ಲ. ದುರ್ಗಂಧ ರಹಿತವಾಗಿ ಮನೆಯನ್ನು ಇಟ್ಟುಕೊಳ್ಳೋದಕ್ಕೆ ಇದೊಂದು ಉತ್ತಮ ವಿಧಾನ. ಒಟ್ಟಿನಲ್ಲಿ ಮನಿಪ್ಲಾಂಟ್ ಬದಲಿಗೆ ಈ ರೀತಿಯ ಗಿಡಗಳನ್ನು ಬೆಳೆಸಿ ನೀವು ನಿಮ್ಮ ಆರೋಗ್ಯ, ಹಣ, ಎಲ್ಲವನ್ನೂ ಹೆಚ್ಚಿಸಿಕೊಳ್ಳಬಹುದು ಅನ್ನೋದ್ರ ಬಗ್ಗೆ ಸ್ವಲ್ಪ ಯೋಚಿಸಿ.,



Click it and Unblock the Notifications