ಚಳಿಗಾಲದಲ್ಲಿ ಏರ್ ಕಂಡಿಷನರ್ ಆಯ್ಕೆ, ಇರಲಿ ಕೊಂಚ ಜಾಗ್ರತೆ

By Super

ಚಳಿಗಾಲ ಎಂದಾಕ್ಷಣ ಹೆಚ್ಚಿನವರಿಗೆ ಬೆಚ್ಚಗೆ ಹೊದ್ದು ಮಲಗುವುದೇ ನೆನಪಿಗೆ ಬರುತ್ತದೆ. ಅತ್ಯಂತ ಅಪ್ಯಾಯಮಾನವಾದ ಈ ಋತುವಿನಲ್ಲಿ ವಾತಾವರಣ ತಣ್ಣಗಾಗುವುದು ಮಾತ್ರವಲ್ಲ ಸುತ್ತಮುತ್ತಲ ಗಿಡಮರ ತರುಲತೆಗಳೆಲ್ಲಾ ಹೊಸ ಚಿಗುರು ಮೂಡಿಸಿಕೊಂಡು, ಹೂ ಬಿಟ್ಟು ಹಚ್ಚ ಹಸುರಿನ ಮತ್ತು ತಾರುಣ್ಯದ ಭಾವನೆಯನ್ನು ಮೂಡಿಸುತ್ತದೆ. ನವಿರಾಗಿ ಬೀಸುವ ತಂಗಾಳಿ ಹಲವು ಕನಸುಗಳನ್ನು ಮೂಡಿಸುತ್ತದೆ.

ಹಲವು ಸ್ಫೂರ್ತಿಗಳಿಗೆ ಕಾರಣವಾಗುತ್ತದೆ. ಆದರೆ ಒಣದಾಗುವ ಹವೆಯ ಕಾರಣ ಚರ್ಮವೂ ಒಣಗುತ್ತದೆ, ಶೀತ ಕೆಮ್ಮು ನೆಗಡಿ ಜ್ವರಗಳೂ ಬಾಧಿಸುತ್ತವೆ. ಆದರೆ ಇದಕ್ಕೆ ತಕ್ಕ ಆರೈಕೆ ಮತ್ತು ಮುಂಜಾಗರೂಕತೆ ವಹಿಸಿದರೆ ಚಳಿಗಾಲದ ಅಪ್ಯಾಯಮಾನವನ್ನು ಉತ್ತಮ ಆರೋಗ್ಯದೊಂದಿಗೆ ಅನುಭವಿಸಬಹುದು. ಆದರೆ ಇತ್ತೀಚೆಗೆ ಮನೆಗಳಿಗೆ ಆಗಮಿಸಿರುವ ಹವಾನಿಯಂತ್ರಣಗಳು ಅಥವಾ ಹವಾನಿಯಂತ್ರಿತಗಳು ಮಾತ್ರ ಬೇರೆಯೇ ಕಥೆ ಹೇಳುತ್ತವೆ.

ಏಕೆಂದರೆ ಏಸಿ ಇರುವ ಮನೆಯವರು ಕಿಟಕಿಗಳನ್ನು ಸಾಮಾನ್ಯವಾಗಿ ತೆರೆಯುವುದೇ ಇಲ್ಲ. ಏಕೆಂದರೆ ಮನೆಯ ಐಷಾರಾಮದ ಒಂದು ಅಂಗವಾಗಿರುವ ಏಸಿಯ ಹವೆ ಹೊರಹೋಗಬಾರದು ಮತ್ತು ಕಿಟಕಿ ಬಾಗಿಲು ತೆರೆದರೆ ಮನೆಯೊಳಗೆ ಧೂಳು ಬರುತ್ತದೆಂದು ಇವರು ಸಬೂಬು ನೀಡುತ್ತಾರೆ. ವಾಸ್ತವವಾಗಿ ಇದು ಪ್ರತಿಷ್ಠೆಯ ಸಂಕೇತವಾಗಿದ್ದು ಮನೆಯಲ್ಲಿ ಏಸಿ ಇದ್ದೂ ಹಾಕದೇ ಇದ್ದರೆ ಗೌರವಕ್ಕೆ ಕುಂದು ಎಂದು ಭಾವಿಸುವ ಜನರಿಂದಲೇ ಏಸಿ ವರ್ಷಕ್ಕೆ ಮೂನ್ನೂರ ಅರವತ್ತೈದು ದಿನವೂ ಈ ಏಸಿಗಳು ನಡೆಯುತ್ತಲೇ ಇರುತ್ತವೆ. ಏಸಿಯಲ್ಲಿ ವಿಂಟರ್ ಸೆಟ್ಟಿಂಗ್ ಎಂದು ಒಂದಿರುತ್ತದೆ.

ಇದು ದುಬಾರಿ ಏಸಿಗಳಲ್ಲಿ ಮಾತ್ರವೇ ಇರುತ್ತವೆ ವಿನಃ ಕಡಿಮೆ ಬೆಲೆಯ ಏಸಿಗಳಲ್ಲಿ ಅಲ್ಲ. ಆದರೆ ಚಳಿಗಾಲದಲ್ಲಿ ಏಸಿ ಉಪಯೋಗಿಸಿದರೆ ಕೋಣೆಯನ್ನು ಬೆಚ್ಚಗೆ ಇರಿಸುವುದರ ಜೊತೆಗೇ ಕೋಣೆಯಲ್ಲಿ ಆರ್ದ್ರತೆಯನ್ನು ಅತೀವವಾಗಿ ಕಡಿಮೆ ಮಾಡುತ್ತದೆ. ಆದರೆ ಚಳಿಗಾಲದ ಒಣಹವೆಯೇ ಆರೋಗ್ಯಕ್ಕೆ ಹಲವು ರೀತಿಯ ತೊಂದರೆಗಳನ್ನು ಒಡ್ಡಬಲ್ಲದು. ಆದರೆ ಏಸಿಯ ಹವೆ ಈ ತೊಂದರೆಗಳನ್ನು ಇನ್ನಷ್ಟು ಹೆಚ್ಚಿಸುತ್ತದೆ. ಅದರಲ್ಲೂ ಮಕ್ಕಳ ಆರೋಗ್ಯ ಸುಲಭವಾಗಿ ಬಾಧೆಗೊಳಗಾಗುತ್ತದೆ. ಹವಾನಿಯಂತ್ರಿತ: ಪ್ರಾಣಕ್ಕೆ ಸಂಚಕಾರ ತರುವ ಸಂಚುಕೋರ!

ಮನೆಯಲ್ಲಿ ಬಿಡಿ, ಕಚೇರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿಯೂ ಏಸಿ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಇಲ್ಲಿ ಮಾತ್ರ ಇದರ ನಿಯಂತ್ರಣಗಳನ್ನು ಬೆಚ್ಚಗಲ್ಲ, ಚಳಿಗಾಲದಲ್ಲಿ ಹೊರಗಿರುವುದಕ್ಕಿಂತ ತಣ್ಣಗೆ ಮಾಡಿಟ್ಟಿರುತ್ತಾರೆ. ಇದು ಒಣಹವೆಯನ್ನು ಇನ್ನಷ್ಟು ಒಣಗಿಸಿ ಹಲವು ಶ್ವಾಸಸಂಬಂಧಿ ಹಾಗೂ ಚರ್ಮಸಂಬಂಧಿ ತೊಂದರೆಗಳನ್ನು ಉಂಟುಮಾಡಬಹುದು. ಆದರೆ ಇದಕ್ಕೆ ಇದುವರೆಗೆ ಏಕಾಗಿ ವಿರೋಧ ವ್ಯಕ್ತವಾಗಿಲ್ಲ?

ಈ ಪ್ರಶ್ನೆಗೆ ಉತ್ತರ ಅಷ್ಟು ಸುಲಭವಲ್ಲ. ಏಕೆಂದರೆ ಈ ತೊಂದರೆಗಳು ಎಲ್ಲರನ್ನೂ ಸಮಾನವಾಗಿ ಬಾಧಿಸುವುದಿಲ್ಲ. ಕೆಲವರಿಗೆ ನಿಧಾನವಾಗಿ, ಕೆಲವರಿಗೆ ಶೀಘ್ರವಾಗಿ ಬಾಧಿಸುತ್ತದೆ. ಏಸಿಯನ್ನು ಸಮರ್ಥಿಸುವವರು ನಿಧಾನವಾಗಿ ಭಾಧಿಸುವ ಜನರನ್ನೇ ಉದಾಹರಿಸಿ ಇವರಿಗೇನೂ ಆಗಿಲ್ಲವಲ್ಲಾ, ನಿಮ್ಮ ಆರೋಗ್ಯವೇ ಕೆಟ್ಟಿದೆ ಸುಮ್ಮನೆ ಏಸಿ ಮೇಲೆ ಗೂಬೆ ಕೂರಿಸಬೇಡಿ ಎಂದು ದಬಾಯಿಸುತ್ತಾರೆ. ಈ ದಬ್ಬಾಳಿಕೆಗೆ ಸೋತು ಏಸಿಯ ಒಣಹವೆಯನ್ನು ಇನ್ನಷ್ಟು ಉಸಿರಾಡುವ ಮೂಲಕ ಯಾವ ತೊಂದರೆಗಳು ಉಂಟಾಗಬಹುದು ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ:

ಚಳಿಗಾಲದ ಅಸ್ತಮಾ ಎದುರಾಬಲ್ಲದು

ಚಳಿಗಾಲದ ಅಸ್ತಮಾ ಎದುರಾಬಲ್ಲದು

ಚಳಿಗಾಲದಲ್ಲಿ ಏಸಿಯ ತೊಂದರೆ ಅಸ್ತಮಾ ಉಂಟುಮಾಡಬಲ್ಲುದು. ಇದನ್ನು ಅರಿಯಲು ನಮ್ಮ ಶ್ವಾಸನಾಳಗಳ ಬಗ್ಗೆ ಕೊಂಚ ಅರಿವಿರುವುದು ಉತ್ತಮ. ಮೂಗಿನಿಂದ ಒಳಗೆಳೆದುಕೊಂಡ ಗಾಳಿ ಶ್ವಾಸನಾಳದ ಬಳಿಕ ಶ್ವಾಸಕೋಶಗಳ ಒಳಗೆ ಸೆಳೆಯಲ್ಪಡುತ್ತದೆ. ಈ ಶ್ವಾಸನಾಳಗಳು ಸತತವಾಗಿ ಕವಲೊಡೆದು ಶ್ವಾಸಕೋಶದ ಒಳಗೆ ಅತಿ ತುದಿಯ ಭಾಗಕ್ಕೆ ತಲುಪುವಾಗ ಅತ್ಯಂತ ಕಿರಿಯ ಮತ್ತು ಸೂಕ್ಷ್ಮಗಾತ್ರಕ್ಕಿಳಿದಿರುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಚಳಿಗಾಲದ ಅಸ್ತಮಾ ಎದುರಾಬಲ್ಲದು

ಚಳಿಗಾಲದ ಅಸ್ತಮಾ ಎದುರಾಬಲ್ಲದು

ಈ ಸೂಕ್ಷ್ಮಕವಲುಗಳು ಸುಲಭವಾಗಿ ಸೋಂಕಿಗೆ ಒಳಗಾಗುತ್ತವೆ. (ಧೂಮಪಾನಿಗಳಲ್ಲಿ ಆಗುವುದೂ ಇದೇ) ಏಸಿಯ ಒಣಹವೆ ಈ ಭಾಗದಲ್ಲಿ ಕೊಂಚ ಪ್ರಚೋದನೆಯುಂಟುಮಾಡಿ ಕಿರಿದಾಗಿರುವ ಈ ನಾಳಗಳನ್ನು ಇನ್ನಷ್ಟು ಕುಗ್ಗಿಸುತ್ತವೆ. ಆಗ ಉಸಿರಾಟ ಕಷ್ಟಕರವಾಗುತ್ತದೆ. ಇದೇ ಅಸ್ತಮಾ. ಕೆಲವೊಮ್ಮೆ ಕುಗ್ಗಿದ ನಾಳಗಳು ಮುಚ್ಚಿಯೇ ಹೋಗುತ್ತವೆ. ಇದೇ ಅಸ್ತಮಾ ಅಟ್ಯಾಕ್. ಹೀಗಾಗಬಾರದು ಎಂದರೆ ಏಸಿಯನ್ನು ಚಳಿಗಾಲದಲ್ಲಿ ಬಳಸದಿರುವುದೇ ಉತ್ತಮ ಅಲ್ಲದೇ ಏಸಿ ಬಂದ್ ಆಗಿರುವಾಗ ಸಂಗ್ರಹಗೊಂಡ ಧೂಳು ಸಹಾ ಗಾಳಿಯಲ್ಲಿ ತೇಲಿಬಂದು ಉಸಿರಾಟದ ಮೂಲಕ ಅಸ್ತಮಾ ಸಾಧ್ಯತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.

ವಿವಿಧ ರೀತಿಯ ಅಲರ್ಜಿಗಳು ಕಾಡುತ್ತದೆ

ವಿವಿಧ ರೀತಿಯ ಅಲರ್ಜಿಗಳು ಕಾಡುತ್ತದೆ

ಚಳಿಗಾಲದಲ್ಲಿ ಏಸಿಯನ್ನು ಕೆಲಕಾಲ ಬಂದ್ ಮಾಡಿದ್ದು ಬಳಿಕ ಪ್ರಾರಂಭಿಸಿದರೆ ಒಳಗೆ ಕುಳಿತಿದ್ದ ಧೂಳು ಸಹಾ ಗಾಳಿಯಲ್ಲಿ ಮಿಳಿತವಾಗುತ್ತದೆ. ಅಲ್ಲದೇ ಚಳಿಗಾಲದಲ್ಲಿ ಹೂವಿನ ಪರಾಗ, ಒಣಚರ್ಮದಿಂದ ಬೇರ್ಪಟ್ಟ ಸತ್ತ ಜೀವಕೋಶಗಳು, ಚಳಿಗೆ ಉದುರಿದ ಮಾನವರ ಮತ್ತು ಪ್ರಾಣಿಗಳ ಕೂದಲು ಮೊದಲಾದವು ಹೇರಳವಾಗಿರುತ್ತವೆ. ಇವೆಲ್ಲವೂ ಏಸಿಯ ಒತ್ತಡದ ಹವೆಯ ಮೂಲಕ ಬಲವಂತವಾಗಿ ಹೊರಗಿನಿಂದ ಒಳಗೆ ದಬ್ಬಲ್ಪಡುತ್ತವೆ. ಇದರಲ್ಲಿ ಯಾವುದು ಯಾರಿಗೆ ಅಲರ್ಜಿಕಾರಕ ಎಂದು ಹೇಳಲು ಬರುವುದಿಲ್ಲ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ವಿವಿಧ ರೀತಿಯ ಅಲರ್ಜಿಗಳು ಕಾಡುತ್ತದೆ

ವಿವಿಧ ರೀತಿಯ ಅಲರ್ಜಿಗಳು ಕಾಡುತ್ತದೆ

ಸಾಮಾನ್ಯವಾಗಿ ಬೆಕ್ಕಿನ ಕೂದಲು ಹೊಟ್ಟೆಗೆ (ಅಥವಾ ಶ್ವಾಸದ ಮೂಲಕ ಶ್ವಾಸಕೋಶಕ್ಕೆ) ಹೋದರೆ ಹೆಚ್ಚಿನವರಿಗೆ ತಕ್ಷಣ ಅಲರ್ಜಿಯುಂಟಾಗುತ್ತದೆ. ಅಕ್ಕಪಕ್ಕದಲ್ಲಿ ಅಕೇಶಿಯಾ ಮರದ ಹೂವು ಬಿಟ್ಟಿದ್ದರಂತೂ ಆ ಪ್ರದೇಶದಲ್ಲಿರುವ ಅಷ್ಟೂ ಮನೆಗಳ ಸದಸ್ಯರಿಗೆ ಮತ್ತು ಮಾಲ್ ಗಳ ಸಂದರ್ಶಕರಿಗೆ ಚರ್ಮದಲ್ಲಿ ತುರಿಕೆ ಖಚಿತ. ಈ ಸಂಗತಿ ಖಚಿತಗೊಂಡ ಬಳಿಕ ಕರ್ನಾಟಕ ಅರಣ್ಯ ಇಲಾಖೆ ಈಗ ಅಕೇಶಿಯಾ ಗಿಡಗಳನ್ನು ನೆಡುವುದನ್ನೇ ಕೈಬಿಟ್ಟಿದೆ ಹಾಗೂ ಈಗ ಜನವಸತಿ ಪ್ರದೇಶದಲ್ಲಿ ಅಕೇಶಿಯಾ ಮರಗಳಿದ್ದರೆ ಅದನ್ನು ನಿವಾರಿಸಿ ಬೇರೆ ಮರಗಳನ್ನು ನೆಡುತ್ತಿದೆ.

ಒಣಚರ್ಮ ಸಾಮಾನ್ಯವಾಗುತ್ತದೆ

ಒಣಚರ್ಮ ಸಾಮಾನ್ಯವಾಗುತ್ತದೆ

ಚಳಿಗಾಲದಲ್ಲಿ ಆರ್ದ್ರತೆಯ ಕೊರತೆಯಿಂದ ಚರ್ಮ ಒಣಗುತ್ತದೆ. ಆದರೆ ಏಸಿಯನ್ನು ಬಳಸುವ ಮೂಲಕ ಈ ಒಣಗುವಿಕೆ ಇನ್ನಷ್ಟು ಉಲ್ಬಣಗೊಳ್ಳುತ್ತದೆ. ಒಣಚರ್ಮ ಸುಲಭವಾಗಿ ಬಿರುಕುಬಿಟ್ಟು ಹೊರಪದರ ಪರೆಯಂತೆ ಏಳುತ್ತದೆ.ತಕ್ಷಣ ಸೂಕ್ತ ಆರೈಕೆ ಕೈಗೊಳ್ಳದೇ ಇದ್ದರೆ ಒಳಪದರವೂ ಬಿರುಕುಬಿಟ್ಟು ರಕ್ತಒಸರಲು ತೊಡಗುತ್ತದೆ. ಇದು ಹಲವಾರು ಸೋಂಕುಗಳಿಗೆ ಕೆಂಪುರತ್ನಗಂಬಳಿಯನ್ನು ಹಾಸಿ ಆತ್ಮೀಯ ಆಹ್ವಾನ ಕೋರುತ್ತದೆ. ಹೀಗಾಗಬಾರದು ಎಂದರೆ ಚಳಿಗಾದಲ್ಲಿ ಸಾಧ್ಯವಿದ್ದಷ್ಟು ಏಸಿ ಬಳಸದಿರುವುದೇ ಉತ್ತಮ.

ಸೋಂಕುಗಳ ಸಾಧ್ಯತೆ ಹೆಚ್ಚುತ್ತದೆ

ಸೋಂಕುಗಳ ಸಾಧ್ಯತೆ ಹೆಚ್ಚುತ್ತದೆ

ಚಳಿಗಾಲದಲ್ಲಿ ಒಣಚರ್ಮ ಸಾಮಾನ್ಯ. ಏಸಿಯನ್ನು ಬಳಸುವ ಮೂಲಕ ಒಣಚರ್ಮ ಇನ್ನಷ್ಟು ಹೆಚ್ಚುತ್ತದೆ. ಒಣಚರ್ಮದ ಹೊರಪದರದಿಂದ ಹೊರಬಿದ್ದ ಚರ್ಮದ ಸತ್ತ ಜೀವಕೋಶಗಳು ಅತಿ ಸೂಕ್ಷ್ಮ ಧೂಳಿನ ಕಣಗಳಂತಿರುತ್ತವೆ. ಇವು ಬ್ಯಾಕ್ಟೀರಿಯಾಗಳಿಗೆ ಮೃಷ್ಟಾನ್ನ ಭೋಜನವಾಗಿದೆ. ಇವು ಮನೆಯ ಪರದೆ, ನೆಲಹಾಸು, ಬಟ್ಟೆ, ತಲೆದಿಂಬು, ಹಾಸಿಗೆ, ಬೆಡ್ ಶೀಟ್, ಹೊದಿಕೆ, ಟವೆಲ್, ಮೊದಲಾದ ನೂಲಿನಿಂದ ಮಾಡಿದ ಯಾವುದೇ ವಸ್ತುಗಳ ಬಿರುಕುಗಳಲ್ಲಿ ಕುಳಿತುಕೊಳ್ಳಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸೋಂಕುಗಳ ಸಾಧ್ಯತೆ ಹೆಚ್ಚುತ್ತದೆ

ಸೋಂಕುಗಳ ಸಾಧ್ಯತೆ ಹೆಚ್ಚುತ್ತದೆ

ಅಲ್ಲದೇ ಸೆಂಟ್ರಲ್ ಏಸಿಯಲ್ಲಿ ಹೊರಗಿನಿಂದ ಬಂದ ಗಾಳಿ ಬೇರೆ ಮನೆಯಲ್ಲಿನ ಬ್ಯಾಕ್ಟೀರಿಯಾಗಳನ್ನೂ, ಧೂಳು, ಶಿಲೀಂಧ್ರಗಳನ್ನೂ ನಿಮ್ಮ ಮನೆಗೆ ತರಬಹುದು. ಇವೆಲ್ಲಾ ಚಳಿಗಾಲದಲ್ಲಿ ನಿಮ್ಮ ಮನೆಯ ಅತಿಥಿಗಳಾಗಿ ಆಗಮಿಸಿ, ಒಣಚರ್ಮದ ಮೃಷ್ಟಾನ್ನ ಭೋಜನ ಉಂಡು ಕೊಬ್ಬಿ ಬಳಿಕ ನಿಮ್ಮ ಮೇಲೆಯೇ ಆಕ್ರಮಣ ಮಾಡಿ ಉಂಡ ಮನೆಗೇ ದ್ರೋಹ ಬಗೆಯುತ್ತವೆ.

ತುರಿಕೆಯನ್ನು ಹೆಚ್ಚಿಸುತ್ತದೆ

ತುರಿಕೆಯನ್ನು ಹೆಚ್ಚಿಸುತ್ತದೆ

ಏಸಿಯಲ್ಲಿ ಕಾಲ ಕಳೆದವರಿಗೆ ತುರಿಕೆ ಹೆಚ್ಚಾಗಿ ಕಾಡುತ್ತದೆ. ವಿಶೇಷವಾಗಿ ಪಾದಗಳು, ಮೂಗು, ಮೊಣಕಾಲಿನಿಂದ ಕೆಳಗೆ ಕಾಲಿನ ಮುಂಭಾಗ (ಮೂಳೆ ನೇರವಾಗಿ ತಾಕುವಲ್ಲಿ), ತೊಡೆಸಂದಿ, ಬೆರಳುಗಳ ಸಂಧಿ, ಕಾಲುಬೆರಳುಗಳ ಸಂಧಿಯಲ್ಲಿ, ಕುತ್ತಿಗೆಯ ಹಿಂಭಾಗದಲ್ಲಿ ಹೆಚ್ಚಾಗಿ ತುರಿಕೆಯ ಅನುಭವವಾಗುತ್ತದೆ. ಏಕೆಂದರೆ ಈ ಭಾಗದಲ್ಲಿ ಹೊರಚರ್ಮ ಅತಿ ತೆಳುವಾಗಿದ್ದು ಚಳಿಯಿಂದಾಗಿ ಸುಲಭವಾಗಿ ಪರೆ ಬಿಡುತ್ತದೆ. ಏಸಿಯ ಈ ಭಾಗಗಳಲ್ಲಿ ಅತಿ ಹೆಚ್ಚು ಪ್ರಭಾವ ಬೀರುತ್ತದೆ. ಪರಿಣಾಮವಾಗಿ ತುರಿಕೆ ಅನವರತವಾಗುತ್ತದೆ.

ತುರಿಕೆಯನ್ನು ಹೆಚ್ಚಿಸುತ್ತದೆ

ತುರಿಕೆಯನ್ನು ಹೆಚ್ಚಿಸುತ್ತದೆ

ಅದರಲ್ಲೂ ವಿಶೇಷವಾಗಿ ಕಚೇರಿಗಳಲ್ಲಿ ಮತ್ತು ಶಾಪಿಂಗ್ ಮಾಲ್ ಮೊದಲಾದ ಕಡೆಗಳಲ್ಲಿ ಕೆಲಸ ಮಾಡುವವರಿಗೆ ಈ ತೊಂದರೆ ಅನಿವಾರ್ಯವಾಗಿ ಕಾಡುತ್ತದೆ. ಇದರಿಂದ ಪಾರಾಗಲು ನಿತ್ಯವೂ ಸ್ನಾನದ ಬಳಿಕ ಉತ್ತಮ ಗುಣಮಟ್ಟದ ಮಾಯಿಶ್ಚರೈಸಿಂಗ್ ಅಥವಾ ಆರ್ದ್ರತೆ ನೀಡುವ ಕ್ರೀಂ ಅಥವಾ ವ್ಯಾಸೆಲಿನ್ ಪೋಷಣೆಯನ್ನು ನೀಡುವುದು ಅಗತ್ಯ.

ನಿರ್ಜಲೀಕರಣದ ಭಯ

ನಿರ್ಜಲೀಕರಣದ ಭಯ

ಸಾಮಾನ್ಯವಾಗಿ ಏಸಿಯ ಹವೆ ಗಾಳಿಯಲ್ಲಿರುವ ಆರ್ದ್ರತೆಯನ್ನು ನಿವಾರಿಸುತ್ತದೆ. ಈ ಒಣಹವೆಯನ್ನು ಸೇವಿಸುವ ಪರಿಣಾಮವಾಗಿ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಇದನ್ನೇ ನಿರ್ಜಲೀಕರಣ (dehydration) ಎಂದು ಕರೆಯಲಾಗುತ್ತದೆ. ಇದು ಚಳಿಗಾಲದಲ್ಲಿ ಏಸಿ ಹಾಕುವ ದುಷ್ಪರಿಣಾಮಗಳಲ್ಲಿ ಅತಿ ಕೆಟ್ಟದ್ದಾಗಿದೆ. ಆದ್ದರಿಂದ ಚಳಿಗಾಲವನ್ನು ಇದ್ದ ಹಾಗೇ ಅನುಭವಿಸುವುದೇ ಕ್ಷೇಮ ಹಾಗೂ ಆರೋಗ್ಯಕರ. ಏಸಿಯನ್ನು ಬೇಸಿಗೆಯವರೆಗೆ ಬಂದ್ ಮಾಡಿ ಇಡುವುದು ಉತ್ತಮ.

ಕೆಲವು ಸಲಹೆಗಳು

ಕೆಲವು ಸಲಹೆಗಳು

* ಕೇವಲ ಏಸಿಯ ಹವೆ ಮಾತ್ರ ಸುಳಿದಾಡುವಂತೆ ನಿರ್ಮಿಸಿರುವ ಇಂದಿನ ಆಧುನಿಕ ಮನೆ ಹಾಗೂ ಮಾಲ್ ಮೊದಲಾದ ಸ್ಥಳಗಳಲ್ಲಿ ಏಸಿ ಬಂದ್ ಮಾಡುವುದು ಸಾಧ್ಯವೇ ಇಲ್ಲ.

*ಈ ಸಂದರ್ಭದಲ್ಲಿ ಕೇವಲ ಫ್ರೆಶ್ ಏರ್ (ಅಥವಾ ಫ್ಯಾನ್ ಓನ್ಲಿ) ಆಯ್ಕೆಯನ್ನು ಬಳಸಿ ಹೊರಗಿನ ಹವೆಯನ್ನು ಇದ್ದ ಹಾಗೇ ಒಳಗೆ ಬರೆಯ ಫ್ಯಾನ್ ಮೂಲಕ ಹಾಯಿಸುವುದು ಉತ್ತಮ. ಹಾಗೂ ಫಿಲ್ಟರ್ ಗಳನ್ನು ಕಾಲಕಾಲಕ್ಕೆ, ಸಾಧ್ಯವಾದರೆ ಪ್ರತಿದಿನ ಸ್ವಚ್ಛಗೊಳಿಸುತ್ತಾ ಇರಬೇಕು

ಕೆಲವು ಸಲಹೆಗಳು

ಕೆಲವು ಸಲಹೆಗಳು

* ಮನೆಯಲ್ಲಿ ಕಿಟಕಿಗಳಿದ್ದರೆ ವಿಶಾಲವಾಗಿ ಅಲ್ಲದಿದ್ದರೂ ಕೊಂಚವಾಗಿ ತೆರೆದು ಅದಕ್ಕೆ ಅಡ್ಡಲಾಗಿ ದಪ್ಪ ಪರದೆಯನ್ನಿರಿಸಿದರೆ ಧೂಳನ್ನು ಸಾಕಷ್ಟು ಕಡಿಮೆಗೊಳಿಸಬಹುದು.

* ಪ್ರತಿದಿನ ವ್ಯಾಕ್ಯೂಮ್ ಕ್ಲೀನರ್ ಬಳಸಿ ಸಾಧ್ಯವಿದ್ದಷ್ಟು ಬಟ್ಟೆಯ ಎಲ್ಲಾ ಭಾಗಗಳನ್ನು ಸ್ವಚ್ಛಗೊಳಿಸುತ್ತಿರುವುದು ಉತ್ತಮ

ಕೆಲವು ಸಲಹೆಗಳು

ಕೆಲವು ಸಲಹೆಗಳು

* ಚರ್ಮಕ್ಕೆ ನಿತ್ಯವೂ ಆರ್ದ್ರತೆ ನೀಡುವ ಪ್ರಸಾದನಗಳನ್ನು ಬಳಸಬೇಕು

* ಬಟ್ಟೆಗಳು ಒಣಗಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ಅರ್ಧ ದಿನ ಒಣಗಿದ ಬಳಿಕ ಎಲ್ಲ ಬಟ್ಟೆಗಳನ್ನು ಉಲ್ಟಾ ಮಾಡಿ ಇನ್ನೊಂದು ಬದಿ ಮೇಲೆ ಬರುವಂತೆ ಮಾಡಿದರೆ ಇನ್ನಷ್ಟು ಬೇಗನೇ ಒಣಗುತ್ತದೆ.

ಕೆಲವು ಸಲಹೆಗಳು

ಕೆಲವು ಸಲಹೆಗಳು

* ವರ್ಷದ ಯಾವುದೇ ಸಮಯದಲ್ಲಿ ಬಟ್ಟೆಗಳನ್ನು ಇಸ್ತ್ರಿ ಮಾಡುವುದು ಉತ್ತಮ. ಆದರೆ ವಿಶೇಷವಾಗಿ ಒಳಉಡುಪುಗಳನ್ನು ಚಳಿಗಾಲದಲ್ಲಿ ಇಸ್ತ್ರಿ ಮಾಡದೇ ತೊಡಲೇ ಬಾರದು.

* ಏಸಿ ಅನಿವಾರ್ಯವಾಗಿದ್ದರೆ ಇಪ್ಪತ್ತೈದು ಅಥವಾ ಇಪ್ಪತ್ತಾರು ಡಿಗ್ರಿಗಳಿಗೆ ಸೆಟ್ ಮಾಡಿ ಲೋ ಕೂಲ್ ಲೋ ಫ್ಯಾನ್ ನಲ್ಲಿರಿಸುವುದರ ಮೂಲಕ ಅಪಾಯಗಳನ್ನು ಕನಿಷ್ಠಕ್ಕಿಳಿಸಬಹುದು.

X
Desktop Bottom Promotion