Latest Updates
-
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ!
ಕ್ಯಾಂಡಿ ಕ್ರಶ್ ಆಟ ತಂದೊಡ್ಡುವ ಅಪಾಯಗಳು...
ಕ್ಯಾಂಡಿ ಕ್ರಶ್ ಸಾಗಾ. ಈ ಗೇಮ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ..ಪ್ರತಿದಿನ ಜಗತ್ತಿನ 20 ಕೋಟಿ ಜನ ಆಡುವ ಆಟ ಇದು. ಮಹಿಳೆಯರಂತೂ ಕೂತಲ್ಲಿ ನಿಂತಲ್ಲಿ ಕೊನೆಗೆ ಬಸ್ಸಲ್ಲಿ ಸೀಟು ಸಿಕ್ಕಿ ಆರಾಮಾಗಿ ಕೂತಿದ್ದಾಗ, ಆರಾಮಾಗಿ ಟೈಂ ಪಾಸ್ ಮಾಡಬೇಕು ಅನ್ನಿಸಿದಾಗೆಲ್ಲ ಮೊಬೈಲ್‌ನಲ್ಲಿ ಕ್ಯಾಂಡಿ ಕ್ರಶ್ ಆಡ್ತಾ ಇರ್ತಾರೆ..ಆದ್ರೆ ಸುಲಭವಾಗಿ ಆಡುವ ಈ ಆಟದಿಂದ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುತ್ತೆ ಅಂದ್ರೆ ನೀವು ನಂಬಲೇಬೇಕು..ಇದು ಅಚ್ಚರಿಯಾದ್ರೂ ಕಹಿಯಾಗಿರುವ ಸತ್ಯ ವಿಚಾರ.
ನೀವು ನಂಬಿಲಿಕ್ಕಿಲ್ಲ..ಲಾಸ್ ಏಂಜಲೀಸ್‍ನ ಯುವಕನ ಹೆಬ್ಬೆರಳು ಕ್ಯಾಂಡಿ ಕ್ರಶ್ ಆಡಿಯೇ ನಜ್ಜುಗುಜ್ಜಾಗಿದೆಯಂತೆ...ಅಮೆರಿಕದ ಇನ್ನೊಬ್ಬ ವ್ಯಕ್ತಿಯ ಫಿಂಗರ್ ಪ್ರಿಂಟ್ ವ್ಯತ್ಯಾಸಗೊಂಡಿದ್ದು ಇದೇ ಕ್ಯಾಂಡಿ ಕ್ರಶ್ ಕಾರಣಕ್ಕಂತೆ.. ದೈಹಿಕ ಅಪಾಯವನ್ನು ಮಾತ್ರ ಕ್ಯಾಂಡಿಕ್ರಷ್ ಸೃಷ್ಟಿಸುತ್ತೆ ಅಂದುಕೊಳ್ಳಬೇಡಿ. ಬದಲಾಗಿ ಮಾನಸಿಕ ಸಮಸ್ಯೆಗೂ ಕೂಡ ಇದು ಕಾರಣವಾಗುತ್ತೆ. ಕ್ಯಾಂಡಿ ಕ್ರಶ್‌ನ ಕ್ರಷ್ ಇಷ್ಟೊಂದು ಹೆಚ್ಚಾಗಲು ಕಾರಣ ಇದು ಮಕ್ಕಳಿಂದ ಹಿಡಿದು ಇಳಿವಯಸ್ಸಿನವ್ರೂ ಕೂಡ ಸುಲಭದಲ್ಲಿ ಕಲಿತು ಆಡಬಹುದಾದ ಗೇಮ್. ಟೈಂಪಾಸ್‌ಗೆ ಹೇಳಿಮಾಡಿಸಿದಂತ ಎಲ್ಲಾ ಕ್ವಾಲಿಟಿಗಳು ಈ ಗೇಮ್ನಲ್ಲಿ ಇರೋದ್ರಿಂದಲೇ ಹೆಚ್ಚಿನವ್ರು ಈ ಗೇಮ್‌ಗೆ ಅಟ್ರಾಕ್ಟ್ ಆಗ್ತಿದ್ದಾರೆ..ಹಾಗಾದ್ರೆ ಕ್ಯಾಂಡಿಕ್ರಷ್‌ಗೆ ಎಡಿಕ್ಟ್ ಆಗಿದ್ದಾರೆ. ಹಾಗಾಗಿ ಈ ರೀತಿ ಎಡಿಕ್ಟ್ ಆಗಿರುವವರು ಹೇಗೆ ಇದ್ರಿಂದ ಪಾರಾಗೋದು?

ಕ್ಯಾಂಡಿಕ್ರಷ್‌ನಿಂದ ಆಗುವ ಸಮಸ್ಯೆಗಳು
ಇದು ಕುಳಿತಲ್ಲೇ ಕೂತು ಆಡುವ ಆಟ. ಮೊದಲನೆಯದಾಗಿ ದೈಹಿಕ ಚಟುವಟಿಕೆಯ ಕೊರತೆ ಶುರುವಾಗುತ್ತೆ. ಬೇರೆ ಆಟ ಮಚ್ಚು ವ್ಯಾಯಾಮಗಳತ್ತ ಮನಸ್ಸು ಸರಿಯದೆ ಸೋಮಾರಿತನ ಬೆಳೆಸಿಕೊಳ್ಳುತ್ತೀರಿ. ನೀವು ಒಂದೇ ಪೊಸಿಸಷನ್ ನಲ್ಲಿ ಕುಳಿತು ಆಡೋದ್ರಿಂದ ರಕ್ತಚಲನೆ ನಿಧಾನಗೊಳ್ಳುತ್ತೆ. ಅಂಗಾಂಗ ವಿಶೇಷವಾಗಿ ಭುಜ-ಕೈಗಳಲ್ಲಿ ರಕ್ತ ಹೆಪ್ಪುಗಟ್ಟುತ್ತದೆ. ಗೇಮ್ ಗೆ ಹೆಚ್ಚು ಅಡಿಕ್ಟಾದಾಗ ಊಟ ಬಿಡುತ್ತೀರಿ. ನಿಧಾನವಾಗಿ ನಿದ್ದೆ ಮಧ್ಯೆಯೂ ಕ್ಯಾಂಡಿಕ್ರಷ್ ಬಂದ ಹಾಗಾಗುತ್ತೆ. ಇದರಿಂದ ಬೇರೆ ಸಂಗತಿಗಳತ್ತ ಏಕಾಗ್ರತೆ ಅಸಾಧ್ಯ. ಹಾಗೂ ನೀವು ಊಟ ಆದ್ಮೇಲೂ ಮೊಬೈಲ್ ಹಿಡಿದು ಕುಳಿತರೆ ಜೀರ್ಣಶಕ್ತಿಯ ಕೊರತೆ ಶುರು. ಇಂಥ ಗೇಮ್ ವೇಳೆ ಜಂಕ್ ಫುಡ್ ಸೇವನೆಯೂ ಹೆಚ್ಚಾಗೋದ್ರಿಂದ ಕೊಬ್ಬು ವೃದ್ಧಿಸುತ್ತದೆ.
ಕುಳಿತು ಆಡೋದ್ರಿಂದ ಸೊಂಟನೋವು, ಕುತ್ತಿಗೆ- ಭುಜನೋವು ಬರಬಹುದು. ಈ ಆಟವನ್ನು ಸುದೀರ್ಘ ಆಡೋದ್ರಿಂದ ಕಣ್ಣಿಗೆ ಹೆಚ್ಚು ಕೆಲಸವಾಗಿ, ಆ ಕೃತಕ ಬೆಳಕಿಗೆ ಡ್ರೈ ಐಸ್ ಆಗಬಹುದು. ಚಿಕ್ಕ ಚಿಕ್ಕ ಕ್ಯಾಂಡಿಗಳನ್ನು ನೋಡುವುದು ದೃಷ್ಟಿಗೂ ಸಮಸ್ಯೆಯನ್ನು ಉಂಟುಮಾಡುತ್ತೆ. ದಿನದಲ್ಲಿ ನೀವು ಒಂದೂವರೆ ಗಂಟೆ ಆಡಿದರೆ ಎಂದರೆ ಇನ್ ಸೋನ್ಮಿಯಾ ಅಂದ್ರೆ ನಿದ್ರಾಹೀನತೆ ಸಮಸ್ಯೆ ಕಾಡುತ್ತೆ. ಓದುವಿಕೆ ಮೇಲೆ ಪರಿಣಾಮ ಬೀಳುತ್ತದೆ, ಹಣವೂ ಪೋಲು ಸಮಯವೂ ಪೋಲಾಗೋದ್ರಿಂದ ಖಿನ್ನತೆ ಖಂಡಿತವಾಗ್ಲೂ ಕಾಡುತ್ತೆ. ವಿಶೇಷವಾಗಿ ನಿಮ್ಮ ಕ್ರಿಯೇಟಿವಿಟಿಯನ್ನೇ ನಿರ್ದಾಕ್ಷಿಣ್ಯವಾಗಿ ಕೊಂದುಬಿಡುತ್ತೆ ಕ್ಯಾಂಡಿಕ್ರಷ್. ಸಿಟ್ಟು ಹೆಚ್ಚಾಗುವ ಸಾಧ್ಯತೆ ಇದೆ.. ಹೆಚ್ಚು ಬಾರಿ ಸೋಲುತ್ತಿದ್ದರೆ ನಿಮ್ಮ ಮೇಲೆಯೇ ನಿಮ್ಗೆ ಹತಾಶೆ ಶುರುವಾಗಬಹುದು. ಹೀಗೆ ಪಟ್ಟಿ ಮಾಡುತ್ತಾ ಸಾಗಿದರೆ ಕ್ಯಾಂಡಿಕ್ರಷ್ ಉಂಟುಮಾಡುವ ಸಮಸ್ಯೆಯ ಪಟ್ಟಿ ಹನುಮನ ಬಾಲದಂತೆ ಬೆಳೆಯುತ್ತಲೇ ಸಾಗುತ್ತೆ. ಹಾಗಾಗಿ ಒಂದು ವೇಳೆ ನೀವು ಕ್ಯಾಂಡಿಕ್ರಷ್ ಗೆ ಅತಿಯಾಗಿ ಫಿದಾ ಆಗಿದ್ದವರಾಗಿದ್ರೆ ಅದನ್ನು ಹೆಚ್ಚು ಹೊತ್ತು ಆಡುವ ಅಭ್ಯಾಸದಿಂದ ಹಿಂದೆ ಸರಿಯಲೇ ಬೇಕು.
ಕ್ಯಾಂಡಿಕ್ರಷ್‌ನ ಕ್ರಷ್ ಕಡಿಮೆಗೊಳಿಸಿಕೊಳ್ಳೋದು ಹೇಗೆ?
ಮೊದಲನೆಯದಾಗಿ ಈ ಗೇಮ್ ನ ಆಪ್ ಕಣ್ಮುಂದೆ ಇದ್ದರೆ ತಾನೆ ಆಡೋದು? ಹಾಗಾಗಿ ರಿಮೂವ್ ಮಾಡುವ ಕಠಿಣ ನಿರ್ಧಾರ ತೆಗೆದುಕೊಳ್ಳಿ.. ಕೆಲ ಕಾಲ ನೆಟ್ ಫಾಸ್ಟಿಂಗ್ ಅಥವಾ ಇಂಟರ್ನೆಟ್‍ನಿಂದ ದೂರವಿರುವುದನ್ನು ರೂಢಿಸಿಕೊಳ್ಳಿ. ಸಮಯ- ಹಣ ಎರಡೂ ವ್ಯಯವಾಗೋದ್ರಿಂದ ನಿಮಗೆ ನೀವೆ ನಷ್ಟವಾಗ್ತಿದ್ದೀರಿ ಅನ್ನೋದು ಗೊತ್ತಿರಲಿ.ಓದುವುದು, ದೈಹಿಕ ಸಕ್ರಿಯತೆ ಬಯಸುವ ಕ್ರೀಡೆಗಳತ್ತ ಹೆಚ್ಚು ಆಸಕ್ತಿ ತೋರಿಸಿ.. ಈ ಆಟದ ಬಗ್ಗೆ ಮಾಹಿತಿ ಗೊತ್ತಲ್ಲ. ಇದ್ರಲ್ಲೇನಿದೆ... ಇಷ್ಟೇ ತಾನೆ ಅನ್ನೋ ನೆಗ್ಲಿಜೆನ್ಸಿ ಬೆಳೆಸಿಕೊಳ್ಳಿ..
ಒಟ್ಟಿನಲ್ಲಿ ಕ್ಯಾಂಡಿಕ್ರಷ್‌ನಿಂದ ಹಲವು ಸಮಸ್ಯೆಗಳು ಉಧ್ಬವವಾಗ್ತಿದೆ ಅನ್ನೋದು ಸಂಶೋಧನೆಗಳಿಂದ ಬಹಿರಂಗವಾಗಿದೆ. ಹಾಗಾಗಿ ನೀವೇನಾದ್ರೂ ಕ್ಯಾಂಡಿಕ್ರಷ್ ಆಟಕ್ಕೆ ಅಡಿಕ್ಟ್ ಆಗಿದ್ರೆ ಆದಷ್ಟು ಬೇಗ ಅದನ್ನು ಬಿಟ್ಟುಬಿಡುವ ನಿಟ್ಟಿನಲ್ಲಿ ನಿಮ್ಮ ಪ್ರಯತ್ನ ಸಾಗಲಿ ಅನ್ನೋದು ನಮ್ಮ ಆಶಯ. ಆ ಮೂಲಕ ಆರೋಗ್ಯವಂತಾರಾಗಿ ಮತ್ತು ಚಟುವಟಿಕೆಯಿಂದ ಇರುವವರು ನೀವಾಗಿ..
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

