For Quick Alerts
ALLOW NOTIFICATIONS  
For Daily Alerts

ಆರೋಗ್ಯ ಟಿಪ್ಸ್: ಸೂರ್ಯಕಾಂತಿ ಬೀಜದ ಜಬರ್ದಸ್ತ್ ಪವರ್

By Super Admin
|

ಸೂರ್ಯಕಾಂತಿ ಎಣ್ಣೆಯ ಪ್ರಯೋಜನಗಳ ಬಗ್ಗೆ ನಾವೆಲ್ಲಾ ಅರಿತಿದ್ದೇವೆ. ಆದರೆ ಇದರ ಬೀಜಗಳಲ್ಲಿಯೂ ಉತ್ತಮ ಪೋಷಕಾಂಶಗಳಿವೆ. ಇದನ್ನು ಸುಮ್ಮನೇ ಸಮಯ ಕಳೆಯಲು ಸುಲಿದು ತಿನ್ನುವ ಬೀಜದ ರೂಪದ ಬದಲಾಗಿ ಇದರ ಬೀಜದ ಪುಡಿಯನ್ನು ನಿಮ್ಮ ನಿತ್ಯದ ಸಾಲಾಡ್, ಜ್ಯೂಸ್, ಮೊಸರು ಮೊದಲಾದವುಗಳ ಮೇಲೆ ಸಿಂಪಡಿಸಿ ಸೇವಿಸಿದರೆ ಆ ಖಾದ್ಯಗಳ ರುಚಿಯೂ ಹೆಚ್ಚುತ್ತದೆ ಹಾಗೂ ಇದರ ಪೌಷ್ಟಿಕತೆಯೂ ಹೆಚ್ಚುತ್ತದೆ. ಸೂರ್ಯಕಾಂತಿ ಎಣ್ಣೆ: ಅದೇನು ಮಾಯೆ, ಅದೇನು ಜಾದೂ..

ಸೂರ್ಯಕಾಂತಿ ಬೀಜದಲ್ಲಿ ವಿಟಮಿನ್ ಇ, ಕ್ಯಾಲ್ಸಿಯಂ, ಫೈಟೋ ಸ್ಟೆರಾಲ್ ಮತ್ತು ಇತರ ಅನೇಕ ಪೋಷಕಾಂಶಗಳಿವೆ. ಇವೆಲ್ಲವೂ ಆರೋಗ್ಯಕ್ಕೆ ಒಂದಲ್ಲಾ ಒಂದು ರೀತಿ ಪ್ರಯೋಜನಕಾರಿಯಾಗಿವೆ. ಯಾವ ಯಾವ ರೀತಿಯಲ್ಲಿ ಪ್ರಯೋಜನಕಾರಿಯಾಗಿವೆ? ಎಂಬ ಪ್ರಶ್ನೆಯನ್ನು ಕೆಳಗಿನ ಸ್ಲೈಡ್ ಶೋ ಉತ್ತರಿಸುತ್ತದೆ.

ಕೂದಲ ಬೆಳವಣಿಗೆಗೆ ಸಹಕರಿಸುತ್ತದೆ

ಕೂದಲ ಬೆಳವಣಿಗೆಗೆ ಸಹಕರಿಸುತ್ತದೆ

ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿಟಮಿನ್ ಇ ಕೂದಲ ಬುಡಕ್ಕೆ ಅತಿ ಹೆಚ್ಚಿನ ಪೋಷಣೆ ನೀಡುವ ಮೂಲಕ ಕೂದಲು ಸೊಂಪಾಗಿ, ಉದ್ದವಾಗಿ ಮತ್ತು ಗಾಢವರ್ಣದಿಂದ ಕೂಡಿರಲು ನೆರವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕೂದಲ ಬೆಳವಣಿಗೆಗೆ ಸಹಕರಿಸುತ್ತದೆ

ಕೂದಲ ಬೆಳವಣಿಗೆಗೆ ಸಹಕರಿಸುತ್ತದೆ

ಅಲ್ಲದೆ, ಕೂದಲ ಬುಡಕ್ಕೆ ಹೆಚ್ಚಿನ ರಕ್ತಸಂಚಾರ ಮತ್ತು ಪೋಷಕಾಂಶಗಳನ್ನು ನೀಡಲು ವಿಟಮಿನ್ ಇ ನೆರವಾಗುತ್ತದೆ. ತನ್ಮೂಲಕ ಕೂದಲು ಉದ್ದನಾಗಿ ಬೆಳೆಯಲು ಸಾಧ್ಯವಾಗುತ್ತದೆ.

ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ತಗ್ಗಿಸುತ್ತದೆ

ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ತಗ್ಗಿಸುತ್ತದೆ

ಇದರಲ್ಲಿರುವ ಫೈಟೋಸ್ಟೆರಾಲ್ ಎಂಬ ಪೋಷಕಾಂಶ ಕೆಟ್ಟ ಕೊಲೆಸ್ಟ್ರಾಲ್ ಅಥವಾ low density lipoprotein (LDL) ನೊಂದಿಗೆ ಸೇರಿ ಅದನ್ನು ಸಡಿಲಿಸಿ ನಿವಾರಿಸಲು ನೆರವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ತಗ್ಗಿಸುತ್ತದೆ

ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ತಗ್ಗಿಸುತ್ತದೆ

ಅಲ್ಲದೇ ಇದರಲ್ಲಿರುವ ಅಗತ್ಯ ಕ್ಕೊಬ್ಬಿನ ಆಮ್ಲ essential fatty acids (EFAs) ಒಟ್ಟಾರೆ ಕೊಲೆಸ್ಟ್ರಾಲ್ ಮಟ್ಟವನ್ನು ಆರೋಗ್ಯಕರ ಮಿತಿಯೊಳಗಿರಿಸಲು ನೆರವಾಗುತ್ತದೆ. ತನ್ಮೂಲಕ ಹೃದಯದ ಮೇಲಿನ ಒತ್ತಡವನ್ನು ಕಡಿಮೆಗೊಳಿಸಿ ಹೃದಯ ಸಂಬಂಧಿ ತೊಂದರೆಗಳಿಂದ ದೂರಾಗಲು ಸಹಕರಿಸುತ್ತದೆ.

ಮದ್ಯಪಾನದ ವ್ಯಸನದಿಂದ ದೂರಾಗಲು ನೆರವಾಗುತ್ತದೆ

ಮದ್ಯಪಾನದ ವ್ಯಸನದಿಂದ ದೂರಾಗಲು ನೆರವಾಗುತ್ತದೆ

ಮದ್ಯಪಾನದ ವ್ಯಸನಕ್ಕೆ ಬಿದ್ದವರು ಇದನ್ನು ಬಿಡಲು ಮಾಡುವ ಪ್ರಯತ್ನಗಳೆಲ್ಲಾ ಕೈಕೊಡುತ್ತಿದ್ದರೆ ಇವರಿಗೆ ಸೂರ್ಯಕಾಂತಿ ಬೀಜ ತನ್ನ ನೆರವಿನ ಹಸ್ತ ಚಾಚುತ್ತದೆ. ಯಾವಾಗ ಮದ್ಯಪಾನದ ಸಾಮಾನ್ಯ ಸಮಯವಾಗುತ್ತದೆಯೋ ಅದಕ್ಕೂ ಕೊಂಚ ಹೊತ್ತು ಮುನ್ನ ಸುಮಾರು ಒಂದು ಮುಷ್ಠಿಯಷ್ಟು ಸೂರ್ಯಕಾಂತಿ ಬೀಜಗಳನ್ನು ತಿನ್ನುತ್ತಾ ಹೊರಗೆ ನಡೆದಾಡುತ್ತಾ ಹೋದರೆ ಆ ಸಮಯದಲ್ಲಿ ಸಾಮಾನ್ಯವಾಗಿ ಆಗುವ ಮದ್ಯಪಾನದ ಬಯಕೆ ಆಗುವುದೇ ಇಲ್ಲ.

ಮದ್ಯಪಾನದ ವ್ಯಸನದಿಂದ ದೂರಾಗಲು ನೆರವಾಗುತ್ತದೆ

ಮದ್ಯಪಾನದ ವ್ಯಸನದಿಂದ ದೂರಾಗಲು ನೆರವಾಗುತ್ತದೆ

ಇದಕ್ಕೆ ಸೂರ್ಯಕಾಂತಿ ಬೀಜದಲ್ಲಿರುವ ಪೋಷಕಾಂಶಗಳು ಮೆದುಳಿನಲ್ಲಿ ಡೋಪಮೈನ್ ಎಂಬ ರಸದೂತದ ಪ್ರಮಾಣವನ್ನು ಹೆಚ್ಚಿಸುವುದೇ ಕಾರಣ. ಸಾಮಾನ್ಯವಾಗಿ ಮದ್ಯಪಾನದ ಅಮಲಿನಲ್ಲಿ ಈ ಡೋಪಮೈನ್ ಕಡಿಮೆಯಾಗಿರುವುದೇ ವ್ಯಸನ ಹೆಚ್ಚಲು ಕಾರಣ. ಈಗ ಡೋಪಮೈನ್ ಹೆಚ್ಚಿರುವ ಕಾರಣ ಮದ್ಯಪಾನ ಬಿಡಲು ವ್ಯಸನಿಗೆ ಹೆಚ್ಚಿನ ಮನಃಶಕ್ತಿ ದೊರಕುತ್ತದೆ. ಮನಃಶಕ್ತಿಗಿಂದ ಮಿಗಿಲಾದ ಯಾವುದೇ ಶಕ್ತಿ ಈ ಜಗತ್ತಿನಲ್ಲಿಲ್ಲ. ಬರೆಯ ಮದ್ಯವ್ಯಸನ ಮಾತ್ರವಲ್ಲ, ಜೀವನದಲ್ಲಿ ಬಹಳಷ್ಟನ್ನು ಸಾಧಿಸಲೂ ಸಾಧ್ಯವಾಗುತ್ತದೆ.

ಮಹಿಳೆಯರ ಮಾಸಿಕ ದಿನಗಳನ್ನು ಸುಲಭವಾಗಿಸುತ್ತದೆ

ಮಹಿಳೆಯರ ಮಾಸಿಕ ದಿನಗಳನ್ನು ಸುಲಭವಾಗಿಸುತ್ತದೆ

ಮಹಿಳೆಯರ ಮಾಸಿಕ ದಿನಗಳಲ್ಲಿ ಸ್ರವಿಸುವ ರಸದೂತದ ಕಾರಣ ಕೆಳಹೊಟ್ಟೆಯಲ್ಲಿ ನೋವು ಒಂದು ತೊಂದರೆಯಾದರೆ ಹಾರ್ಮೋನುಗಳ ಏರುಪೇರಿನಿಂದ ಮನಃಸ್ಥಿತಿಯೂ ಬದಲಾಗುತ್ತದೆ. ಸೂರ್ಯಕಾಂತಿ ಬೀಜದಲ್ಲಿ ಉತ್ತಮ ಪ್ರಮಾಣದ ಅಂಟಿ ಆಕ್ಸಿಡೆಂಟುಗಳು, ವಿಟಮಿನ್ ಇ, ಹೇರಳ ಪ್ರಮಾಣದಲ್ಲಿ ಮೆಗ್ನೀಶಿಯಂ ಇರುವ ಕಾರಣ ಇವು ಸ್ನಾಯುಗಳ ಸೆಳೆತವನ್ನು ನಿಯಂತ್ರಿಸಲು ನೆರವಾಗುತ್ತವೆ.

ಮಹಿಳೆಯರ ಮಾಸಿಕ ದಿನಗಳನ್ನು ಸುಲಭವಾಗಿಸುತ್ತದೆ

ಮಹಿಳೆಯರ ಮಾಸಿಕ ದಿನಗಳನ್ನು ಸುಲಭವಾಗಿಸುತ್ತದೆ

ಪರಿಣಾಮವಾಗಿ ಈ ದಿನಗಳಲ್ಲಿ ಎದುರಾಗುವ ನೋವು ಕಡಿಮೆಯಾಗುತ್ತದೆ ಹಾಗೂ ಮನಃಸ್ಥಿತಿಯೂ ಉತ್ತಮವಾಗಿರಲು ಸಹಕರಿಸುತ್ತದೆ. ಅಲ್ಲದೇ ಸೂರ್ಯಕಾಂತಿ ಬೀಜದಲ್ಲಿರುವ ಕಬ್ಬಿಣದ ಪ್ರಮಾಣ ಕಳೆದುಕೊಂಡ ರಕ್ತವನ್ನು ಮತ್ತೆ ತುಂಬಿಕೊಳ್ಳಲು ನೆರವಾಗುವ ಮೂಲಕ ಶೀಘ್ರ ಚೇತರಿಕೆಗೆ ನೆರವಾಗುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಸೂರ್ಯಕಾಂತಿ ಬೀಜದಲ್ಲಿರುವ ಹೆಚ್ಚಿನ ಪ್ರಮಾಣದ ಸೆಲೆನಿಯಂ ದೇಹದಲ್ಲಿರುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ಗುಡಿಸಿ ನಿವಾರಿಸುವ ಶಕ್ತಿ ಹೊಂದಿದೆ. ಇದರಿಂದ ಜೀವಕೋಶಗಳು ಘಾಸಿಗೊಳ್ಳುವುದರಿಂದ ರಕ್ಷಣೆ ಪಡೆಯುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಆದ್ದರಿಂದ ನಿಯಮಿತವಾಗಿ ಕೆಲವು ಸೂರ್ಯಕಾಂತಿ ಬೀಜಗಳನ್ನು ಸೇವಿಸುತ್ತಾ ಬಂದರೆ ರೋಗ ನಿರೋಧಕ ಶಕ್ತಿ ಹೆಚ್ಚುವುದು ಮಾತ್ರವಲ್ಲ, ಹಲವಾರು ಸೋಂಕುಗಳಿಂದ ದೇಹ ತನ್ನನ್ನು ತಾನೇ ರಕ್ಷಿಸಿಕೊಳ್ಳಲೂ ನೆರವಾಗುತ್ತದೆ.

English summary

Health Benefits of Sunflower Seeds, which should surprise you

Did you known sprinkling sunflower seeds on salads, smoothies or curd can enhance its taste? Well, this is not the reason why you should include sunflower seeds in your diet. These seeds are packed with vitamin E, calcium, phytosterols and numerous nutrients, which helps in making you healthier. Here are health benefits of sunflower seeds you should know.
Story first published: Monday, July 4, 2016, 20:23 [IST]
X
Desktop Bottom Promotion