Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತಲೆದಿಂಬು ಇಲ್ಲದೇ ಮಲಗಿ, ಆರೋಗ್ಯ ವೃದ್ಧಿಸಿಕೊಳ್ಳಿ
ಹಾಸಿಗೆ ಮತ್ತು ದಿಂಬು ಇಲ್ಲದೆ ಹೆಚ್ಚಿನವರು ಸುಖನಿದ್ದೆ ಪಡೆಯಲಾರರು. ಮಲಗುವ ಭಂಗಿಯನ್ನು ಅನುಸರಿಸಿ ಕೆಲವರಿಗೆ ಒಂದು ದಿಂಬು ಸಾಕಾದರೆ ಕೆಲವರಿಗೆ ಎರಡು, ಇನ್ನೂ ಕೆಲವರಿಗೆ ಮೂರು ದಿಂಬುಗಳು ಬೇಕಾಗುತ್ತದೆ. ಆದರೆ ವಾಸ್ತವವಾಗಿ ದಿಂಬು ಇಲ್ಲದೇ ಮಲಗುವುದು ಆರೋಗ್ಯಕ್ಕೆ ಪೂರಕ. ದಿಂಬು ತಲೆಗೆ ಕೊಂಚ ಎತ್ತರವನ್ನು ನೀಡಿ ನಿದ್ದೆ ಸುಖಕರವನ್ನಾಗಿಸುತ್ತದಾದರೂ ದಿಂಬಿಲ್ಲದೇ ಮಲಗಿದರೆ ಇತರೇ ಪ್ರಯೋಜನಗಳಿವೆ.
ಅವೆಂದರೆ ಚರ್ಮದಲ್ಲಿ ನೆರಿಗೆ ಮೂಡದೇ ಇರುವುದು, ಕುತ್ತಿಗೆ, ಬೆನ್ನುಹುರಿಯಲ್ಲಿ ನೋವು ಉಂಟಾಗದಿರುವುದು ಮೊದಲಾದವು ಪ್ರಮುಖವಾಗಿವೆ. ಒಂದು ವೇಳೆ ಅತಿ ದಪ್ಪನೆಯ ಅಥವಾ ಎರಡು ಮೂರು ದಿಂಬುಗಳನ್ನು ಬಳಸಿ ತಲೆಯನ್ನು ಹೆಚ್ಚು ಎತ್ತರಕ್ಕೆ ಎತ್ತಿದ್ದರೆ ಕುತ್ತಿಗೆ ಮತ್ತು ಬೆನ್ನಿನ ಮೇಲ್ಭಾಗದ ಸ್ನಾಯುಗಳಿಗೆ ವಿಪರೀತ ಹೆಚ್ಚಿನ ಸೆಳೆತ ನೀಡಿ ಮರುದಿನ ಎದ್ದಾಗ ಭಾರೀ ನೋವು ಅನುಭವಿಸಬೇಕಾಗಬಹುದು. ಒಂದು ವೇಳೆ ಈಗಾಗಲೇ ಈ ತೊಂದರೆಗಳನ್ನು ಅನುಭವಿಸಿದ್ದರೆ ದಿಂಬುರಹಿತವಾಗಿ ಮಲಗುವುದೇ ಈ ನೋವಿನಿಂದ ಹೊರಬರಲು ಸುಲಭವಾದ ಮದ್ದು.
ಒಂದು ವೇಳೆ ದಿಂಬು ನಿಮಗೆ ಅನಿವಾರ್ಯವಾಗಿದ್ದು ದಿಂಬಿಲ್ಲದೇ ಮಲಗಬೇಡಿ ಎಂದು ವೈದ್ಯರು ಶಿಫಾರಸ್ಸು ಮಾಡಿದ್ದರೆ ನಿಮ್ಮ ತಲೆ ಎದೆಯ ಮಟ್ಟಕ್ಕಿಂತ ಮೇಲೆ ಹೋಗದಂತಿರುವ ತೆಳ್ಳನೆಯ ದಿಂಬನ್ನೇ ಆರಿಸಿ. ಅಲ್ಲದೇ ಮಲಗಿದ ಬಳಿಕ ನಿಮ್ಮ ಮಲಗುವ ಭಂಗಿಯನ್ನು ಅನುಸರಿಸಿ ದಿಂಬು ಸಹಾ ಸುಲಭವಾಗಿ ಬದಲಿಸುವಂತಿರಬೇಕು. ಆದರೂ ಸಾಧ್ಯವಾದಷ್ಟು ದಿಂಬು ಇಲ್ಲದೇ ಸಪಾಟಾದ ಹಾಸಿಗೆಯ ಮೇಲೆ ಪವಡಿಸುವುದೇ ಉತ್ತಮ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಬನ್ನಿ, ಇದರ ಪ್ರಯೋಜನಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆಯೋಣ...

ಬೆನ್ನುಹುರಿಗೆ ಉತ್ತಮ
ಬೆನ್ನುನೋವು, ಕೆಳಬೆನ್ನು ನೋವು, ಕುತ್ತಿಗೆನೋವುಗಳಿಗೆ ಸರಿಯಾದ ಭಂಗಿಯಲ್ಲಿ ಮಲಗದಿರುವುದು ಮುಖ್ಯವಾದ ಕಾರಣವಾಗಿದೆ. ಕೆಲದಿನಗಳ ಕಾಲ ದಿಂಬು ಇಲ್ಲದೇ ಮಲಗಿ ನೋಡಿ, ಈ ನೋವುಗಳು ತನ್ನಿಂತಾನೇ ಮಾಯವಾಗುತ್ತವೆ. ವ್ಯತಿರಿಕ್ತವಾದಿ ದಪ್ಪನೆಯ ಅಥವಾ ಎರಡು ಮೂರು ದಿಂಬುಗಳ ಮೇಲೆ ಪವಡಿಸುವ ಮೂಲಕ ಬೆನ್ನು ಹುರಿ ಇನ್ನೂ ಹೆಚ್ಚಿನ ಸೆಳೆತಕ್ಕೆ ಒಳಗಾಗಿ ನೋವು ಹೆಚ್ಚುತ್ತದೆ.

ಕುತ್ತಿಗೆಗೂ ಉತ್ತಮ
ಕೆಲವೊಮ್ಮೆ ಬೆಳಿಗ್ಗೆದ್ದ ಬಳಿಕ ಅಕ್ಕ ಪಕ್ಕ ಕುತ್ತಿಗೆ ತಿರುಗಿಸಲೂ ಸಾಧ್ಯವಾಗದಷ್ಟು ನೋವಾಗುತ್ತದೆ. ಇದಕ್ಕೂ ದಪ್ಪ ತಲೆದಿಂಬೇ ಕಾರಣ. ತಲೆದಿಂಬು ಇಲ್ಲದೇ ಮಲಗಿದರೆ ಕುತ್ತಿಗೆ ಸಾಧ್ಯವಾದಷ್ಟು ಹಿಂದಕ್ಕೆ ಬಾಗಿ ಪೂರ್ಣಪ್ರಮಾಣದ ರಕ್ತಪರಿಚಲನೆಗೆ ನೆರವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕುತ್ತಿಗೆಗೂ ಉತ್ತಮ
ಅಲ್ಲದೆ ಇದು ನೋವನ್ನು ಶಮನಗೊಳಿಸಲು ಸಾಧ್ಯವಾಗುವುದರ ಜೊತೆಗೆ, ಇದೇ ಹೊತ್ತಿನಲ್ಲಿ ಬೆನ್ನುಹುರಿಗೂ ಉತ್ತಮ ರಕ್ತಸಂಚಾರ ಸಿಗುವ ಮೂಲಕ ಬೆನ್ನು ನೋವು ಆಗುವ ಸಂಭವವೂ ಕಡಿಮೆಯಾಗುತ್ತದೆ.

ಮುಖದ ಸ್ನಾಯುಗಳಿಗೂ ಉತ್ತಮ
ಸಾಮಾನ್ಯವಾಗಿ ಮಲಗಿದ ಬಳಿಕ ಕೆಲವರು ದಿಂಬಿನಲ್ಲಿ ಮುಖವನ್ನು ಹುದುಗಿಸುತ್ತಾರೆ. ಇದು ಚರ್ಮದಲ್ಲಿ ನೆರಿಗೆ ಮೂಡಲು ಪ್ರಮುಖ ಕಾರಣವಾಗಿವೆ. ದಿಂಬೇ ಇಲ್ಲದಿದ್ದ ಬಳಿಕ ಹುದುಗಿಸಿವುದೇ ಇಲ್ಲವಾದುದರಿಂದ ಮುಖದ ಸ್ನಾಯುಗಳು ಮತ್ತು ಚರ್ಮ ಸಹಜ ಆರೈಕೆ ಪಡೆಯುತ್ತವೆ ಹಾಗೂ ಉತ್ತಮ ಸೆಳೆತದಿಂದ ವೃದ್ಧಾಪ್ಯವನ್ನು ದೂರಾಗಿಸುತ್ತದೆ.

ಸುಖನಿದ್ದೆಗೆ ಪೂರಕ
ತಜ್ಞರ ಪ್ರಕಾರ ಸುಖನಿದ್ದೆಗೆ ಸೂಕ್ತವಾದ ಭಂಗಿಯಲ್ಲಿ ಮಲಗುವುದು ಮುಖ್ಯ. ದಿಂಬಿಲ್ಲದೇ ಮಲಗುವುದು ಸುಖಕರವಾದ ನಿದ್ದೆ ಮತ್ತು ಗಾಢನಿದ್ದೆಗೆ ಕಾರಣವಾಗುತ್ತದೆ. ದಿಂಬು ಹೆಚ್ಚಿದಷ್ಟೂ ನಿದ್ದೆಯ ಗಾಢತೆ ಕಡಿಮೆಯಾಗುತ್ತದೆ ಎಂದು ಈಗ ಕಂಡುಕೊಳ್ಳಲಾಗಿದೆ.

ದಿಂಬು ಇಲ್ಲದೇ ಮಲಗುವುದು ಹೇಗೆ?
ದಿಂಬು ಇಲ್ಲದೇ ಮಲಗಿದರೆ ಮೊದಮೊದಲಿಗೆ ಅಸಹನೀಯವಾಗುತ್ತದೆ. ಆದರೆ ಇದಕ್ಕೆ ಕೆಲವು ವಿಧಾನಗಳಿವೆ. ಇದುವರೆಗೆ ನೀವು ಬಳಸುತ್ತಿದ್ದ ದಿಂಬಿಗಿಂತ ಕೊಂಚವೇ ತೆಳ್ಳಗಾದ ದಿಂಬನ್ನು ಮೊದಲು ಬಳಸಿ ಕೆಲವು ದಿನ ನಿದ್ದೆ ಮಾಡಬೇಕು. ಎಂದಿಗೂ ಒಮ್ಮೆಲೇ ದಿಂಬಿಲ್ಲದ ಸ್ಥಿತಿಗೆ ಬರಬಾರದು. ಬಳಿಕ ಇದಕ್ಕೂ ತೆಳ್ಳನೆಯ ದಿಂಬನ್ನು ಉಪಯೋಗಿಸಬೇಕು. ನಂತರ ಇದಕ್ಕೂ ತೆಳ್ಳನೆಯ ಅದರ ನಂತರ ದಿಂಬಿಲ್ಲದೇ ಮಲಗಿದರೆ ಸುಖನಿದ್ದೆ ಬರುತ್ತದೆ.

ದಿಂಬು ಇಲ್ಲದೇ ಮಲಗುವುದು ಹೇಗೆ?
ಪ್ರತಿ ಬಾರಿ ಬದಲಿಸಲು ಒಂದು ವಾರದ ಅಭ್ಯಾಸ ಸಾಕು. ಆದರೆ ಹೆಚ್ಚಿನವರ ಮನೆಯಲ್ಲಿ ದಿಂಬುಗಳೆಲ್ಲವೂ ಒಂದೇ ದಪ್ಪನಾಗಿರುತ್ತದೆ. ಇದಕ್ಕಾಗಿ ಒಂದು ಉಪಾಯವಿದೆ. ಅದೆಂದರೆ ಒಂದು ಅಥವಾ ಎರಡು ದಪ್ಪನೆಯ ಟರ್ಕಿ ಟವೆಲ್ ಮಡಚಿ ದಿಂಬಿನಷ್ಟೆ ದಪ್ಪಗಾಗಿಸಿ ದಿಂಬಿನ ಬದಲಿಗೆ ಉಪಯೋಗಿಸುವುದು. ನಿಧಾನವಾಗಿ ಒಂದೊಂದಾಗಿ ಮಡಿಕೆಗಳನ್ನು ಬಿಡಿಸುತ್ತಾ ತೆಳ್ಳಗಾಗಿಸುತ್ತಾ ಹೋಗುವುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ದಿಂಬು ಇಲ್ಲದೇ ಮಲಗುವುದು ಹೇಗೆ?
ಒಂದು ತಿಂಗಳಲ್ಲಿ ನಾಲ್ಕು ಹಂತಗಳಲ್ಲಿ, ಅಂದರೆ ವಾರಕ್ಕೊಮ್ಮೆ ಈ ಮಡಿಕೆ ಕಡಿಮೆಯಾಗುತ್ತಾ ಹೋಗಬೇಕು. ಆಗ ಯಾವುದೇ ತೊಂದರೆಯಿಲ್ಲದೇ ದೇಹ ಈ ಬದಲಾವಣೆಗೆ ಒಗ್ಗಿಕೊಳ್ಳುತ್ತದೆ. ಅಂತಿಮ ಹಂತದ ಸಮಯದಲ್ಲಿ ಮಲಗುವ ಮುನ್ನ ಕೆಲವು ಸೆಳೆತದ ವ್ಯಾಯಮಗಳನ್ನು ಮಾಡುವ ಮೂಲಕ ಇದಕ್ಕೆ ಹೊಂದಿಕೊಳ್ಳಲು ಇನ್ನಷ್ಟು ಸುಲಭವಾಗುತ್ತದೆ.



Click it and Unblock the Notifications


