Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ದಿನನಿತ್ಯ ಸೈಕಲ್ ಸವಾರಿ, ಇದುವೇ ಆರೋಗ್ಯದ ದಾರಿ
ನಿತ್ಯವೂ ಕಚೇರಿಗೆ, ಕಾಲೇಜಿಗೆ ಶಾಲೆಗಳಿಗೆ ಅಥವಾ ಇನ್ನಿತರ ಸಂಸ್ಥೆಗಳಿಗೆ ನಿಮ್ಮ ಪ್ರಯಾಣವನ್ನು ಸ್ಕೂಟರ್, ಬಸ್, ಆಟೋರಿಕ್ಷಾ ಮೊದಲಾದ ವಾಹನಗಳಿಂದ ಮಾಡುತ್ತೀರಿ ಅಲ್ಲವೇ? ನಿಮ್ಮಂತೆ ನಗರದಲ್ಲಿರುವ ಎಲ್ಲಾ ವಾಸಿಗಳೂ ತಮ್ಮ ಪ್ರಯಾಣಕ್ಕಾಗಿ ಹೊಗೆಯುಗುಳವ ವಾಹನಗಳನ್ನೇ ಅವಲಂಬಿಸಿದ್ದಾರೆ. ಜನ ಜಾಸ್ತಿಯಾದಂತೆ ಬಳಸುವ ಸವಲತ್ತುಗಳೂ ಅಧಿಕವೆಂಬಂತೆ ಈಗೀಗ ಪಟ್ಟಣಗಳಲ್ಲಿ ವಾಹನಗಳ ಸಂಖ್ಯೆಯೂ ಅಧಿಕವಾಗಿದೆ. ಇದು ನಿಮ್ಮ ಸುಖಪ್ರಯಾಣಕ್ಕೆ ಅನುಕೂಲವನ್ನು ಒದಗಿಸಿದರೂ ಪರಿಸರಕ್ಕೆ ಉಂಟುಮಾಡುವ ಹಾನಿಯಂತೂ ಅಧಿಕ ಪ್ರಮಾಣದ್ದು. ಕಾರ್ಬನ್ ಡೈಕ್ಸೈಡ್ ಅನ್ನು ವಾತಾವರಣಕ್ಕೆ ಬಿಡುವ ಈ ವಾಹನಗಳು ನಿಮ್ಮ ಆರೋಗ್ಯಕ್ಕೂ ಸಂಚಕಾರವನ್ನು ತಂದೊಡ್ಡುತ್ತಿದೆ.
ಹಾಗಿದ್ದರೆ ಈ ಅಪಾಯವನ್ನು ತಡೆಗಟ್ಟುವ ವಿಧಾನವೆಂದರೆ ಹೊಗೆಯುಗಳದ ಅಂತೆಯ ನಿಮಗೆ ದೈಹಿಕ ಸಾಮರ್ಥ್ಯವನ್ನು ನೀಡುವ ವಾಹನವನ್ನು ಆಶ್ರಯಿಸುವುದಾಗಿದೆ. ಆಗ ನಮ್ಮ ಮನಸ್ಸಿನಲ್ಲಿ ಬರುವ ಒಂದೇ ವಾಹನವೆಂದರೆ ಅದು ಸೈಕಲ್ ಆಗಿದೆ. ಸೈಕಲ್ ತುಳಿಯುವುದರಿಂದ ನಿಮಗೆ ದೈಹಿಕ ವ್ಯಾಯಾಮವೂ ದೊರಕಿ ಪರಿಸರಕ್ಕೆ ಉಂಟಾಗುತ್ತಿರುವ ಬಹು ದೊಡ್ಡ ಅಪಾಯವನ್ನು ತಪ್ಪಿಸಿಕೊಳ್ಳಬಹುದಾಗಿದೆ.
ಹೊರದೇಶದಲ್ಲಿ ನಮ್ಮಕ್ಕಿಂತಲೂ ಹೆಚ್ಚಿನ ಆಧುನಿಕ ವ್ಯವಸ್ಥೆಗಳಿದ್ದರೂ ಸೈಕಲ್ ಅಲ್ಲಿ ಹೆಚ್ಚು ಬಳಸುವ ವಾಹನವಾಗಿದೆ. ಅಂತೆಯೇ ನಾವು ಕೂಡ ಇಲ್ಲಿ ಸೈಕಲ್ ಅನ್ನೇ ನಮ್ಮ ದಿನದ ಬಹು ಹೆಚ್ಚಿನ ಚಟುವಟಿಕೆಗಳಿಗೆ ಬಳಸಿದರೆ ನಮಗೆ ಅದರಿಂದ ಲಾಭ. ಹಾಗಿದ್ದರೆ ಆ ಲಾಭಗಳೇನು ಮತ್ತು ಸೈಕಲ್ ತುಳಿಯುವುದರಿಂದ ದೇಹಕ್ಕೆ ಉಂಟಾಗುವ ಆರೋಗ್ಯ ಪ್ರಯೋಜನಗಳೇನು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ಅರಿತುಕೊಳ್ಳಲಿದ್ದೇವೆ.

ಹೃದಯಕ್ಕೆ ಉತ್ತಮ
ನಿಮ್ಮ ಹೃದಯ ಉತ್ತಮ ಸ್ಥಿತಿಯಲ್ಲಿದ್ದರೆ ಮಾತ್ರವೇ ನಿಮಗೆ ಹೆಚ್ಚಿನ ಕೆಲಸಗಳನ್ನು ಮಾಡಲು ಸಾಧ್ಯ. ಹಾಗಿದ್ದರೆ ಸೈಕಲ್ ತುಳಿಯುವುದನ್ನು ನಿಮ್ಮ ಚಟುವಟಿಕೆಯ ಒಂದು ಭಾಗವಾಗಿ ಏಕೆ ಪರಿಗಣಿಸಬಾರದು? ನಿತ್ಯವೂ ಸೈಕಲ್ ತುಳಿಯುವುದು ನಿಮ್ಮ ಹೃದಯವನ್ನು ಸ್ವಾಸ್ಥ್ಯಪೂರ್ಣವನ್ನಾಗಿಸುತ್ತದೆ ಮತ್ತು ಹೃದಯ ಸ್ತಂಭನದಂತಹ ಕಾಯಿಲೆಗಳನ್ನು ದೂರಮಾಡುತ್ತದೆ.

ಸುಂದರ ದೇಹದ ಆಕಾರಕ್ಕಾಗಿ
ನಿಮ್ಮ ಕಚೇರಿಗೆ ನೀವು ಸೈಕಲ್ ತುಳಿದು ಹೋಗುತ್ತೀರಿ ಎಂದಾದಲ್ಲಿ ಇದರಲ್ಲಿ ನಾಚಿಕೆ ಪ್ರಶ್ನೆಯೇ ಬೇಡ. ಸೂಕ್ತವಾದ ದೇಹಾಕಾರವನ್ನು ಪಡೆಯಲು ಸಾಕಷ್ಟು ಪ್ರಯತ್ನಿಸಿದ್ದೀರಾ? ಹಾಗಿದ್ದರೆ ಸೈಕಲ್ ಹೊಡೆಯಿರಿ. ನೀವು ಹೆಚ್ಚು ವೇಗವಾಗಿ ಸೈಕಲ್ ಮೆಟ್ಟಿದಂತೆ ನಿಮ್ಮ ಕೊಬ್ಬು ಕರಗುತ್ತದೆ. ಜೊತೆಗೆ ಉತ್ತಮ ದೇಹಾಕಾರವನ್ನು ನೀವು ಪಡೆದುಕೊಳ್ಳುತ್ತೀರಿ.

ಸ್ನಾಯುಗಳ ಅಭಿವೃದ್ಧಿಗೆ
ಸೈಕಲ್ ತುಳಿಯುವುದರಿಂದ ದೊರೆಯುವ ಆರೋಗ್ಯ ಪ್ರಯೋನಗಳು ಬಹಳಷ್ಟು. ಸುಂದರ ಆಕಾರದ ದೇಹ ಮತ್ತು ಸ್ನಾಯುಗಳನ್ನು ಪಡೆದುಕೊಳ್ಳಲು ಸೈಕಲ್ ಹೊಡೆಯುವುದು ಅತ್ಯಗತ್ಯ. ಮಟ್ಟಸವಾದ ಸೊಂಟ, ತೊಡೆ ಮತ್ತು ಹಿಂಭಾಗವನ್ನು ಪಡೆದುಕೊಳ್ಳಲು ಸಾಧ್ಯ. ಹಿಂಭಾಗ ಮತ್ತು ಕಾಲುಗಳಲ್ಲಿ ಸಂಧಿವಾತದಂತಹ ನೋವುಗಳಿದ್ದಲ್ಲಿ ಸೈಕ್ಲಿಂಗ್ ಮಾಡುವುದರಿಂದ ಅದು ಹೇಳ ಹೆಸರಿಲ್ಲದಂತೆ ಮಾಯವಾಗುತ್ತದೆ.

ಅಂಗಾಂಗಳ ಸಂಘಟನೆ
ಸೈಕಲ್ ತುಳಿಯುವಾಗ ನಿಮ್ಮೆರಡು ಕಾಲುಗಳು ನಿಯಂತ್ರಣದಲ್ಲಿರುತ್ತವೆ, ಕೈಗಳು ಸೈಕಲ್ನ ಬ್ರೇಕ್ ಹಿಡಿದುಕೊಂಡು ನಿಮ್ಮನ್ನು ಸೈಕಲ್ ಅನ್ನು ಸಮಾನವಾಗಿ ಕೊಂಡೊಯ್ಯುತ್ತಿರುತ್ತದೆ, ಅಂತೆಯೇ ಸೈಕಲ್ ತುಳಿಯುವಾಗ ನೀವು ಹೆಚ್ಚು ಎಚ್ಚರಿಕೆಯಿಂದ ಇರುತ್ತೀರಿ. ನಿಮ್ಮ ಅಂಗಾಂಗಳು ಒಂದಕ್ಕೊಂದು ಸಹಾಯ ಮಾಡುತ್ತಾ ಸಂಘಟನೆಯಿಂದ ಇರುವುದು ನಿಮ್ಮಲ್ಲಿ ಕೂಡ ಈ ಅಭ್ಯಾಸವನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತವೆ.

ದೀರ್ಘ ಆಯುಷ್ಯಕ್ಕಾಗಿ
ಸೈಕಲ್ ತುಳಿಯುವುದರಿಂದ ನೀವು ಅಪಾಯಕ್ಕೆ ಒಳಗಾಗುವುದು ಕಡಿಮೆ. ಅಂತೆಯೇ ಇತರ ವಾಹನಗಳಲ್ಲಿ ನೀವು ಪ್ರಯಾಣಿಸುವಾಗ ಆಗುವ ಅಪಘಾತಕ್ಕಿಂತ ಸೈಕಲ್ನಲ್ಲಿ ಇಂತಹ ನೋವು ಸಂಭವಿಸುವುದಿಲ್ಲ.ಹಾಗಿದ್ದರೆ ಸೈಕಲ್ ತುಳಿಯುವುದನ್ನು ಇಂದೇ ಆರಂಭಿಸಿ.

ರೋಗನಿರೋಧಕ ಶಕ್ತಿ
ನಿಮ್ಮ ಸೈಕಲ್ ತುಳಿಯುವ ಅಭ್ಯಾಸದಿಂದ ನೀವು ರೋಗ ರುಜಿನದಿಂದ ಮುಕ್ತರಾಗಿರುವುದು ಖಂಡಿತ. ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಮೂಲಕ ಕ್ಯಾನ್ಸರ್ ಅನ್ನು ಬುಡದಿಂದಲೇ ಇದು ಕಿತ್ತೊಗೆಯುತ್ತದೆ. ನಿಮ್ಮ ಒತ್ತಡವನ್ನು ನಿವಾರಿಸಿ ಹಾಯಾಗಿ ಸಂತಸದಿಂದ ಸೈಕಲ್ ತುಳಿಯುವ ಮೋಜನ್ನು ನಿಮಗೆ ಅನುಭವಿಸಬಹುದಾಗಿದೆ.

ಮಾನಸಿಕ ಆರೋಗ್ಯ ವೃದ್ಧಿಗೆ
ಹೆಚ್ಚಿನ ಸಂಶೋಧನೆಗಳಿಂದ ತಿಳಿದು ಬಂದಿರುವ ಅಂಶವೆಂದರೆ ಸೈಕಲ್ ತುಳಿಯುವುದರಿಂದ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದಾಗಿದೆ. ಸೈಕಲ್ ತುಳಿಯುವುದರಿಂದ ಆತಂಕ, ಖಿನ್ನತೆ, ಒತ್ತಡಗಳು ದೂರಾಗಿ ಸಂತಸ ನಿಮ್ಮಲ್ಲಿ ನೆಲೆಗೊಳ್ಳುತ್ತದೆ.



Click it and Unblock the Notifications
