Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನೀವರಿಯದ ಬೇವಿನ ಎಲೆಗಳ ಸೀಮಾತೀತ ಗುಣಗಳು
ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ ಮನೆ ಔಷಧವೇ ಕ್ಷಣ ಕಾಲದ ಉಪಶಮನವನ್ನು ನೀಡುತ್ತದೆ. ಜ್ವರ ಬಂದಾಗ ನೆಗಡಿಯಾದಾಗ ಕೆಮ್ಮು ಉಂಟಾದಾಗ ಆದಷ್ಟು ಮನೆ ಮದ್ದಿನಿಂದಲೇ ಈ ರೋಗಗಳನ್ನು ನಾವು ಉಪಚರಿಸುತ್ತೇವೆ. ಇದು ತೀವ್ರವಾದಾಗ ಮಾತ್ರವೇ ನಾವು ವೈದ್ಯರನ್ನು ಭೇಟಿಯಾಗುತ್ತೇವೆ.
ಹೀಗೆ ಮನೆಮದ್ದಿನ ಕಮಾಲಿನಲ್ಲೇ ಹಲವಾರು ರೋಗಗಳನ್ನು ಗುಣಪಡಿಸಬಹುದಾಗಿದ್ದು ಮನೆಮದ್ದು ಯಾವುದೇ ರೋಗಕ್ಕೂ ರಾಮಬಾಣ ಎಂದೆನಿಸಿದೆ. ಇಂತಹುದೇ ಚಿನ್ನದಂತಹ ಗುಣಗುಳನ್ನು ಹೊಂದಿರುವ ಬೇವಿನ ಆರೋಗ್ಯ ಪ್ರಯೋಜನಗಳನ್ನೇ ಇಂದಿನ ಲೇಖನದಲ್ಲಿ ನಾವು ನೋಡಲಿದ್ದೇವೆ.
ಬೇವಿನ ಎಲೆಗಳು ಹಿಂದಿನಿಂದಲೂ ಆಯುರ್ವೇದ ಔಷಧ ಪದ್ಧತಿಗಳಲ್ಲಿ ಬಳಕೆಯಾಗುತ್ತಿದ್ದು ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ತನ್ನಲ್ಲಿ ಒಳಗೊಂಡಿದೆ. ಕಹಿ ಗುಣವನ್ನು ಹೊಂದಿದ್ದರೂ ಸರ್ವರೋಗಕ್ಕೂ ಫಲಪ್ರದ ಮದ್ದು ಎಂಬ ಹೆಸರು ಬೇವಿಗಿದೆ. ಇಂದು ಬೇವಿನ ಇನ್ನಷ್ಟು ಪ್ರಯೋಜನಕಾರಿ ಗುಣಗಳನ್ನು ಅರಿತುಕೊಳ್ಳೋಣ...

ಶಿಲೀಂಧ್ರ ಸೋಂಕಿನಿಂದ ಪರಿಹಾರ
ಶಿಲೀಂಧ್ರ ಸೋಂಕಿನಿಂದ ನಮಗೆ ಸಂರಕ್ಷಣೆಯನ್ನು ನೀಡುವಲ್ಲಿ ಬೇವಿನ ಪಾತ್ರ ಹಿರಿದಾದುದು. ಕ್ರೀಡಾಪಟುಗಳ ಕಾಲನ್ನು ಉಪಚರಿಸುವಲ್ಲಿ ಇದು ಪರಿಣಾಮಕಾರಿಯಾಗಿದ್ದು, ರಿಂಗ್ ವರ್ಮ್ ಚಿಕಿತ್ಸೆ, ಕರುಳಿನ ಸಮಸ್ಯೆ, ಬಾಯಿ, ಯೋನಿ, ಶ್ವಾಸಕೋಶ ಮತ್ತು ತ್ವಚೆಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಶಿಲೀಂಧ್ರ ಸೋಂಕುಗಳನ್ನು ಪರಿಣಾಮಕಾರಿಯಾಗಿ ಗುಣಪಡಿಸುತ್ತದೆ.

ಬ್ಯಾಕ್ಟೀರಿಯಾ ಸೋಂಕುಗಳಿಗೆ ಉಪಚಾರ
ಬೇವಿನ ಎಲೆಗಳು ಆಂಟಿಬಯಾಟಿಕ್ನಂತೆ ಕೆಲಸ ಮಾಡಿ ಬ್ಯಾಕ್ಟೀರಿಯಾ ಸೋಂಕುಗಳನ್ನು ನಿವಾರಣೆ ಮಾಡುತ್ತದೆ. ವಿಷಾಹಾರದ ಮೂಲಕ ಉಂಟಾಗುವ ಸ್ಟಿಫಿಲೊಕಸ್ ಬ್ಯಾಕ್ಟೀರಿಯಾ ಅಥವಾ ಹಲ್ಲಿನ ರೋಗಗಳಿಂದ ಉಂಟಾಗುವ ಸೋಂಕುಗಳನ್ನು ನಿವಾರಿಸುತ್ತದೆ. ಇದರ ಆಂಟಿಬಯಾಟಿಕ್ ಅಂಶಗಳು ಸೀಮಿತವಾಗಿದ್ದು, ಸೋಂಕುಗಳಿಗೆ ಕಾರಣವಾಗುವ ಎಲ್ಲಾ ಬ್ಯಾಕ್ಟೀರಿಯಾದೊಂದಿಗೆ ಹೋರಾಡುತ್ತದೆ ಎಂದು ಹೇಳಲಾಗುವುದಿಲ್ಲ.

ಆಂಟಿ ವೈರಲ್ ಗುಣಗಳು
ಚಿಕನ್ ಫಾಕ್ಸ್ ಮತ್ತು ಫಾಲ್ ಫಾಕ್ಸ್ನಂತಹ ವೈರಲ್ ರೋಗಗಳ ಚಿಕಿತ್ಸೆಗೆ ಬೇವಿನ ಎಲೆಗಳನ್ನು ಬಳಸಲಾಗುತ್ತದೆ. ಇದರ ಎಲೆಗಳು ಆಂಟಿವೈರಲ್ ಅಂಶಗಳನ್ನು ಒಳಗೊಂಡಿರುವುದರಿಂದ ಕೋಶಗಳಿಗೆ ಹಾನಿಯನ್ನುಂಟು ಮಾಡುವ ವೈರಸ್ಗಳನ್ನು ತಡೆದು ಸೋಂಕು ಬರದಂತೆ ತಡೆಹಿಡಿಯುತ್ತದೆ.

ಹಲ್ಲಿನ ಆರೋಗ್ಯ ಸುಧಾರಣೆ
ಭಾರತ ಮತ್ತು ಹೆಚ್ಚಿನ ಆಫ್ರಿಕಾ ದೇಶಗಳಲ್ಲಿ, ಬೇವಿನ ಕೊಂಬೆಗಳನ್ನು ಹಲ್ಲುಜ್ಜುವ ಬ್ರಶ್ನಂತೆ ಬಳಸುತ್ತಾರೆ ಏಕೆಂದರೆ ಇದು ಪರಿದಂತೀಯ ರೋಗಗಳನ್ನು ತಡೆಯುತ್ತದೆ. ಬೇವಿನ ಎಲೆಗಳೂ ಕೂಡ ಇದೇ ಅಂಶಗಳನ್ನು ಒಳಗೊಂಡಿರುವುದರಿಂದ ಹೆಚ್ಚಿನ ಟೂತ್ ಪೇಸ್ಟ್ಗಳಲ್ಲಿ ಸಾರಗಳಂತೆ ಬಳಸಲಾಗಿದೆ.

ಆತಂಕ ನಿವಾರಣೆ
ಬೇವಿನ ಎಲೆಗಳು ಆತಂಕ ನಿವಾರಕ ಅಂಶಗಳನ್ನು ಒಳಗೊಂಡಿರುವುದರಿಂದ ಇದು ಯಾವುದೇ ಅಡ್ಡಪರಿಣಾಮಗಳನ್ನು ಉಂಟು ಮಾಡುವುದಿಲ್ಲ ಎಂಬುದಾಗಿ ಅಧ್ಯಯನಗಳು ತಿಳಿಸಿವೆ.

ಎಚ್ಐವಿಗೆ ಚಿಕಿತ್ಸೆ
ಎಚ್ಐವಿಯನ್ನು ಉಪಚರಿಸುವ ಶಕ್ತಿಯನ್ನು ಬೇವಿನ ಎಲೆಗಳು ಹೊಂದಿದ್ದು ಚಿಕಿತ್ಸೆಯನ್ನು ಉತ್ತಮವಾಗಿಸುತ್ತವೆ. ರೋಗವರ್ಧಕ ಗುಣಗಳು ಇದರಲ್ಲಿದ್ದು ಎಚ್ಐವಿ ಪೀಡಿತರಿಗೆ ಮತ್ತು ಎಚ್ಐವಿ ಇರುವವರಿಗೆ ಚಿಕಿತ್ಸೆಯನ್ನು ನೀಡಲಾಗುತ್ತದೆ.

ತ್ವಚೆಯ ಆರೋಗ್ಯ ಸುಧಾರಣೆ
ಕಲೆಗಳು, ಮೊಡವೆಗಳು, ವರ್ಣದ್ರವ್ಯಗಳು, ದದ್ದುಗಳು, ಆಘಾತ ಮತ್ತು ಚರ್ಮದ ಇತರ ಸಮಸ್ಯೆಗಳನ್ನು ಹೋಗಲಾಡಿಸಲು ಬೇವಿನ ಎಲೆಗಳನ್ನು ಬಳಸಲಾಗುತ್ತದೆ ಎಂಬುದಾಗಿ ಅಧ್ಯಯನಗಳು ತಿಳಿಸಿವೆ.



Click it and Unblock the Notifications