Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗ್ರಾಮೀಣ ಭಾಗದ 'ನೀಲಿ' ಸುಂದರಿ 'ನೇರಳೆ ಹಣ್ಣಿನ' ಪ್ರಯೋಜನಗಳು
ನೇರಳೆ ಹಣ್ಣು, ಸೀಸನಲ್ ಫ್ರೂಟ್ ಎಲ್ಲಾ ಟೈಮಲ್ಲೂ ಸಿಗಲ್ಲ....ಸಿಗೋ ಟೈಮಲ್ಲಿ ದುಬಾರಿ ಬೆಲೆ ಬೇರೆ. ದುಬಾರಿ ಅಂತ ತಿನ್ನದೇ ಇದ್ರೆ ನಿಮಗೇ ಲಾಸ್.. ಯಾಕೆ ಅಂತ ಕೇಳುತ್ತಾ ಇದ್ದೀರಾ. ಅದಕ್ಕೆ ಖಂಡಿತ ಹಲವು ಕಾರಣಗಳಿವೆ. ನೇರಳೆ ಹಣ್ಣು ಸೌಂದರ್ಯ ವರ್ಧಕ. ಆರೋಗ್ಯಕಾರಕ.
ವರ್ಷಕ್ಕೊಮ್ಮೆ ಒಂದೆರಡು ತಿಂಗಳು ಮಾತ್ರ ಲಭ್ಯವಿರುವ, ಕಪ್ಪುಕಪ್ಪಾಗಿರುವ ಈ ಬ್ಯೂಟಿಫುಲ್ ಫ್ರೂಟ್ ಸವಿಯದೇ ಇದ್ದವರು ಮತ್ತೆ ಮಾರುಕಟ್ಟೆಯಲ್ಲಿ ನೋಡಿದಾಗ ಸವಿಯುವುದನ್ನು ಮರೀಬೇಡಿ.ನಾವು ಹಿಗೆ ಹೇಳೋದಕ್ಕೆ ಖಂಡಿತ ಹಲವು ಕಾರಣಗಳಿವೆ. ನೇರಳೆ ಬಣ್ಣದ ಈ ಹಣ್ಣು ನಮ್ಮ ಆರೋಗ್ಯಕ್ಕೆ ಮತ್ತು ನಮ್ಮ ಸೌಂದರ್ಯಕ್ಕೆ ನೀಡುವ ಬೆನಿಫಿಟ್‌ಗಳು ಹತ್ತು ಹಲವು. ಅವು ಯಾವುದು ಎಂಬುದನ್ನು ಮುಂದೆ ಓದಿ...

ಮೊಡವೆ ಕಲೆಗಳ ನಿಯಂತ್ರಣ
ಮ್ಯಾಜಿಕ್ ಮಿಕ್ಸ್ ಒಂದರ ಬಗ್ಗೆ ಹೇಳ್ತೀವಿ ಕೇಳಿ.. ನೇರಳೆ ಹಣ್ಣಿನ ರಸ ಮತ್ತು ಸ್ವಲ್ಪ ಹಾಲು ಮಿಕ್ಸ್ ಮಾಡಿ ಅದನ್ನು ನಿಯಮಿತವಾಗಿ ಕೆಲವು ದಿನಗಳವರೆಗೆ ಮುಖಕ್ಕೆ ಹಚ್ಚಿಕೊಳ್ತಾ ಬಂದ್ರೆ ಮೊಡವೆ ಕಲೆಗಳು ನಿಯಂತ್ರಣಕ್ಕೆ ಬರುತ್ತೆ. ಒಂದೇ ರಾತ್ರಿ ಹಚ್ಚಿದ್ರೆ ಕೆಲಸ ನಡೆಯಲ್ಲಾ... ದಿನಾ ಹಚ್ಚಬೇಕು.

ಬಾಯಿಯ ದುರ್ವಾಸನೆ ನಿಯಂತ್ರಣ
ನೇರಳೆ ಹಣ್ಣಿನಲ್ಲಿ ಆಂಟಿ ಬ್ಯಾಕ್ಟೀರಿಯ ಗುಣಗಳಿವೆ. ಅದೇ ಕಾರಣಕ್ಕೆ ಇದನ್ನು ಹಲ್ಲಿಗೆ ಸಂಬಂಧಿಸಿದ ಔಷಧಿಗಳಲ್ಲಿ ಬಳಕೆ ಮಾಡಲಾಗುತ್ತೆ. ನೇರಳೆ ಎಲೆಗಳನ್ನು ತಿನ್ನೋದ್ರಿಂದ ಬಾಯಿಯ ದುರ್ವಾಸನೆಯಂತ ಸಮಸ್ಯೆಗಳು ದೂರವಾಗುತ್ತೆ. ಬೇಕಿದ್ರೆ ಟ್ರೈ ಮಾಡಿ ನೋಡಿ..

ಡಯಾಬಿಟಿಸ್ ನಿಯಂತ್ರಣ
ಡಯಾಬಿಟಿಸ್ ಇರುವವರು ಕೂಡಾ ನೇರಳೆ ಹಣ್ಣನ್ನ ಸ್ವೀಕರಿಸ್ಬಹುದು. ಈ ಹಣ್ಣಲ್ಲಿ ಜಾಂಬೋಲಿನ್ ಅನ್ನುವ ವಿಶೇಷ ಗ್ಲುಕೋಸ್ ಅಂಶವಿರುತ್ತೆ. ಇದು ಆರೋಗ್ಯಕ್ಕೆ ಉತ್ತಮವಾದದ್ದು..

ಅಜೀರ್ಣ ಸಮಸ್ಯೆ ನಿವಾರಣೆ
ಒಂದು ವೇಳೆ ನಿಮ್ಗೆ ಜೀರ್ಣಕ್ರಿಯೆಯ ಸಮಸ್ಯೆ ಇದ್ದಲ್ಲಿ ಅದರ ನಿವಾರಣೆಗೆ ನೇರಳೆ ಹಣ್ಣಿನ ಜ್ಯೂಸ್ ಕುಡಿಯೋದು ಒಳಿತು. ಇಲ್ಲವೇ ಜಾಮೂನ್ ಹಣ್ಣಿನ ತಿರುಳು ಮತ್ತು ಮೊಸರನ್ನು ಮಿಕ್ಸ್ ಮಾಡಿ ಸೇವಿಸ್ಬಹುದು.

ಆಯಿಲಿ ಸ್ಕಿನ್ ಗೆ ಮುಕ್ತಿ ನೀಡುತ್ತೆ
ನಿಮ್ಮದು ಆಯಿಲಿ ಸ್ಕಿನ್ ಆಗಿದ್ರೆ ಖಂಡಿತ ಜಾಮೂನ್ ಫ್ರೂಟ್ ಬಳಕೆ ಮಾಡ್ಬಹುದು. ಈ ನೇರಳೆ ಹಣ್ಣಿನಲ್ಲಿ ನಿಮ್ಮ ತ್ವಚೆಯ ಎಣ್ಣೆಯನ್ನು ನಿಯಂತ್ರಣಕ್ಕೆ ತರುವ ಶಕ್ತಿಯಿದೆ. ನೇರಳೆ ಹಣ್ಣಿನ ಸಿಪ್ಪೆ, ಬಾರ್ಲಿ ಪೌಡರ್,ರೋಸ್ ವಾಟರ್ ಮತ್ತು ನೆಲ್ಲಿಕಾಯಿ ರಸವನ್ನು ಮಿಕ್ಸ್ ಮಾಡಿ ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಬಹುದು.

ಡಾರ್ಕ್ ಸ್ಪಾಟ್‌ಗಳನ್ನು ಹೋಗಲಾಡಿಸುತ್ತೆ
ನಿಮ್ಮ ಮುಖದಲ್ಲಿ ಡಾರ್ಕ್ ಸ್ಪಾಟ್‌ಗಳಿದ್ದಲ್ಲಿ ಅದಕ್ಕೂ ರಾಮಬಾಣದಂತೆ ನೇರಳೆಹಣ್ಣು. ರೋಸ್ ವಾಟರ್ ಮತ್ತು ಅಲ್‌ಮಂಡ್ ಆಯಿಲ್ ಜೊತೆ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಬಹುದು.

ಸುಂದರ ತ್ವಚೆ
ನೇರಳೆ ಹಣ್ಣಿನಲ್ಲಿ ಕಬ್ಬಿಣಾಂಶ ಹೆಚ್ಚಿರುತ್ತೆ. ನಿಮ್ಮ ರಕ್ತ ಶುದ್ದೀಕರಿಸುವ ಶಕ್ತಿ ಇದೆ. ಚರ್ಮವನ್ನು ಕ್ಲೀನ್ ಎಂಡ್ ಕ್ಲಿಯರ್ ಮಾಡೋದಕ್ಕೆ ಇದು ಸಹಕಾರಿಯಾಗಿರುತ್ತೆ. ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಿಸಲು ಇದು ಹೆಲ್ಪ್ ಮಾಡುತ್ತೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸುಂದರ ತ್ವಚೆ
ಅಷ್ಟೇ ಅಲ್ಲ ನಿಮ್ಮ ಋತುಚಕ್ರ ಸಮಸ್ಯೆಯನ್ನು ಸರಿಪಡಿಸಲು ಉಪಯೋಗಕಾರಿಯಾಗಿದೆ.ಒಟ್ಟಿನಲ್ಲಿ ನೇರಳೆಹಣ್ಣು ನಮ್ಮ ಸೌಂದರ್ಯ ಮತ್ತು ಆರೋಗ್ಯ ವೃದ್ಧಿಗೆ ಸಹಕಾರಿ ಅನ್ನೋದ್ರಲ್ಲಿ ಎರಡು ಮಾತಿಲ್ಲ.



Click it and Unblock the Notifications
