Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹುಳಿ ಸಿಹಿ ದ್ರಾಕ್ಷಿ ಜ್ಯೂಸ್‌ನಲ್ಲಿದೆ ಆರೋಗ್ಯಕರ ಗುಣಗಳು
ಹಣ್ಣುಗಳನ್ನು ಇಷ್ಟಪಡದೇ ಇರುವವರು ತುಂಬಾ ಕಡಿಮೆ. ಅದರಲ್ಲೂ ಹಣ್ಣುಗಳ ಸಲಾಡ್ ಮಾಡಿಕೊಂಡು ಅದಕ್ಕೆಐಸ್ ಕ್ರೀಮ್ ಹಾಕಿಕೊಂಡು ತಿಂದರೆ ಅದರ ರುಚಿಯೇ ಬೇರೆಯಾಗಿರುತ್ತದೆ. ಮಕ್ಕಳು ಹೆಚ್ಚಾಗಿ ಇದನ್ನು ಇಷ್ಟಪಡುತ್ತಾರೆ. ಹುಳಿಯಾಗಿರುವ ಕಾರಣದಿಂದಾಗಿ ಹೆಚ್ಚಿನವರಿಗೆ ದ್ರಾಕ್ಷಿ ಇಷ್ಟವಾಗುವುದಿಲ್ಲ.
ದ್ರಾಕ್ಷಿ ಹಣ್ಣು ಇಷ್ಟಪಡುವವರಿಗೆ ಇಲ್ಲಿ ಒಂದು ಒಳ್ಳೆಯ ಸುದ್ದಿಯಿದೆ. ದ್ರಾಕ್ಷಿಯ ಹಣ್ಣಿನ ಜ್ಯೂಸ್‌ನಲ್ಲಿ ಖನಿಜಾಂಶ, ವಿಟಮಿನ್, ಆ್ಯಂಟಿ ಆಕ್ಸಿಡೆಂಟ್ ಸಮೃದ್ಧವಾಗಿದೆ. ಇದು ದೇಹಕ್ಕೆ ತುಂಬಾ ಒಳ್ಳೆಯದು. ದ್ರಾಕ್ಷಿ ಹಣ್ಣನ್ನು ಹಾಗೆ ತಿಂದರೆ ಅದರಲ್ಲಿನ ನಾರಿನಾಂಶಗಳು ನಮಗೆ ಸಿಗುತ್ತದೆ. ಆದರೆ ಜ್ಯೂಸ್‌ನಲ್ಲಿ ಇದು ಲಭ್ಯವಾಗುವುದಿಲ್ಲ. ಆದರೆ ಜ್ಯೂಸ್‌ನಿಂದ ಸಿಗುವ ಇತರ ಲಾಭಗಳು ಏನು ಎಂದು ಇಲ್ಲಿ ತಿಳಿದುಕೊಳ್ಳುವ.
ಎಲ್ ಡಿಎಲ್ ಕೊಬ್ಬಿನಿಂದ ಹೃದಯ ರಕ್ಷಣೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುವ ವ್ಯಕ್ತಿಗಳನ್ನು ಕೆಂಪು ವೈನ್ ಅಥವಾ ನೇರಳೆ ದ್ರಾಕ್ಷಿಯಲ್ಲಿರುವ ಫ್ಲಾವನಾಯ್ಡ್ ರಕ್ಷಣೆ ಮಾಡುತ್ತದೆ ಎಂದು ಜರ್ನಲ್ ಸರ್ಕ್ಯೂಲೇಷನ್‌ನಲ್ಲಿ ಪ್ರಕಟವಾಗಿರುವ ಅಧ್ಯಯನವೊಂದು ಹೇಳಿದೆ. ನೇರಳೆ ದ್ರಾಕ್ಷಿ ಜ್ಯೂಸ್ ಎಲ್ ಡಿಎಲ್ ಕೊಬ್ಬಿನ ಉತ್ಕರ್ಷಣೆ ಕಡಿಮೆ ಮಾಡಿ ಹೃದಯವನ್ನು ಆರೋಗ್ಯವಾಗಿಡುತ್ತದೆ.

ಪ್ರತಿರೋಧಕ ಶಕ್ತಿ ಸುಧಾರಣೆ
ಮಧ್ಯವಯಸ್ಕರು ನೇರಳೆ ಬಣ್ಣದ ದ್ರಾಕ್ಷಿಯ ಜ್ಯೂಸ್ ಅನ್ನು ಕುಡಿದರೆ ಅವರಲ್ಲಿ ಪ್ರತಿರೋಧಕ ಶಕ್ತಿಯು ಹೆಚ್ಚಾಗುತ್ತದೆ ಎಂದು ಜರ್ನಲ್ ಆಫ್ ಮೆಡಿಸಿನಲ್ ಫುಡ್ ನಲ್ಲಿ ಪ್ರಕಟವಾದ ಅಧ್ಯಯನವು ಹೇಳಿವೆ. ದ್ರಾಕ್ಷಿ ಜ್ಯೂಸ್ ಕುಡಿಯುವುದರಿಂದ ವಿಟಮಿನ್ ಸಿ ಮಟ್ಟವು ಹೆಚ್ಚುವುದು.

ಹೃದಯದಲ್ಲಿ ತಡೆ ನಿವಾರಣೆ
ದ್ರಾಕ್ಷಿ ಜ್ಯೂಸ್ ಕಿರುಬಿಲ್ಲೆ ಚಟುವಟಿಕೆಯನ್ನು ತಗ್ಗಿಸಿ ಹೃದಯದಲ್ಲಿರುವ ತಡೆಯನ್ನು ನಿವಾರಣೆ ಮಾಡುತ್ತದೆ ಎಂದು ಜರ್ನಲ್ ಆಫ್ ನ್ಯೂಟ್ರಿಷನ್ ನಲ್ಲಿ ಪ್ರಕಟನೆಯಾಗಿರುವ ಅಧ್ಯಯನವು ಹೇಳಿದೆ. ಒಂದು ಲೋಟ ಜ್ಯೂಸ್ ಕುಡಿಯುವುದರಿಂದ ತಡೆಗೆ ಕಾರಣವಾಗಿರುವ ಅಪಧಮನಿಗಳಲ್ಲಿ ಕಿರುಬಿಲ್ಲೆಗಳ ಗುಂಪುಗೂಡುವಿಕೆಯನ್ನು ಸಂಪೂರ್ಣವಾಗಿ ತಡೆಯುತ್ತದೆ ಎಂದು ಅಧ್ಯಯನವು ಕಂಡುಕೊಂಡಿದೆ.

ಚಯಾಪಚಾಯ ಕ್ರಿಯೆ ಸುಧಾರಣೆ
ನೇರಳೆ ಬಣ್ಣದ ದ್ರಾಕ್ಷಿಯ ಜ್ಯೂಸ್ ಕುಡಿಯುವ ಜನರ ಮೂತ್ರದಲ್ಲಿ ಇತರ ಹಣ್ಣುಗಳ ಜ್ಯೂಸ್ ಕುಡಿಯುವ ಅಥವಾ ಜ್ಯೂಸ್ ಕುಡಿಯದೆ ಇರುವ ವ್ಯಕ್ತಿಗಳ ಮೂತ್ರದಲ್ಲಿ ಕಂಡುಬರುವಂತಹ ಆಮ್ಲೀಯ ಅಂಶವು ಕಡಿಮೆಯಿತ್ತು ಎಂದು ತಿಳಿದುಬಂದಿದೆ. ಒಂದು ಲೋಟ ದ್ರಾಕ್ಷಿ ಜ್ಯೂಸ್ ಚಯಾಪಚಾಯ ಕ್ರಿಯೆಯನ್ನು ಸುಧಾರಿಸುತ್ತದೆ.

ರಕ್ತದೊತ್ತಡ ನಿಯಂತ್ರಣ
ದ್ರಾಕ್ಷಿ ಮತ್ತು ದ್ರಾಕ್ಷಿಯ ಸಿಪ್ಪೆಯಲ್ಲಿರುವಂತಹ ಫ್ಲಾವನಾಯ್ಡ್ ಮತ್ತು ಆ್ಯಂಟಿಆಕ್ಸಿಡೆಂಟ್ ಹೃದಯದ ಸ್ನಾಯುಗಳು ಆರಾಮವಾಗಿರುವಂತೆ ಮಾಡುತ್ತದೆ. ಇದರಿಂದ ರಕ್ತ ಸಂಚಲನವು ಸುಧಾರಣೆಯಾಗಿ ಏರುಪೇರಾಗುವ ರಕ್ತದೊತ್ತಡವನ್ನು ಸರಿಯಾಗಿ ನಿಯಂತ್ರಣದಲ್ಲಿಡುತ್ತದೆ.

ತೂಕ ಕಳೆದುಕೊಳ್ಳಲು
ಇದು ನೇರವಾಗಿ ತೂಕ ಕಳೆದುಕೊಳ್ಳುಲು ನೆರವಾಗುವುದಿಲ್ಲ. ಆದರೆ ವ್ಯಾಯಾಮದ ಬಳಿಕ ಕುಡಿಯಲು ಒಳ್ಳೆಯ ಜ್ಯೂಸ್. 12 ವಾರಗಳ ತನಕ ದ್ರಾಕ್ಷಿ ಜ್ಯೂಸ್ ನ್ನು ಕುಡಿದರೆ ಅದರಿಂದ ಯಾವುದೇ ರೀತಿಯ ತೂಕ ಹೆಚ್ಚಳವಾಗಲ್ಲ. ಆದರೆ ದ್ರಾಕ್ಷಿ ಸವಿಯ ಕೃತಕ ಪಾನೀಯ ಕುಡಿಯುತ್ತಿದ್ದವರಲ್ಲಿ ತೂಕದಲ್ಲಿ ವ್ಯತ್ಯಾಸ ಕಂಡುಬಂದಿದೆ.

ದ್ರಾಕ್ಷಿ ಜ್ಯೂಸ್ ಮಾಡುವ ವಿಧಾನ
ಒಂದು ಪಿಂಗಾಣಿಯಷ್ಟು ದ್ರಾಕ್ಷಿ(ಸರಿಯಾಗಿ ತೊಳೆದಿರಬೇಕು)
2 ಕಪ್ ನೀರು
ಮೂರು ಚಮಚ ಸಕ್ಕರೆ
ಸ್ವಲ್ಪ ಉಪ್ಪು

ದ್ರಾಕ್ಷಿ ಜ್ಯೂಸ್ ಮಾಡುವ ವಿಧಾನ
ಹೇಳಿದಷ್ಟು ಪ್ರಮಾಣದ ದ್ರಾಕ್ಷಿ ಮತ್ತು ಎರಡು ಕಪ್ ನೀರನ್ನು ಜ್ಯೂಸರ್ ಗೆ ಹಾಕಿಕೊಳ್ಳಿ. ಒಂದು ಸುತ್ತು ತಿರುಗಿಸಿದ ಬಳಿಕ ಸಕ್ಕರೆ ಹಾಕಿಕೊಳ್ಳಿ(ಅಗತ್ಯವಿದ್ದರೆ ಮಾತ್ರ). ಜ್ಯೂಸರ್ ಆನ್ ಮಾಡಿಕೊಳ್ಳಿ. ಜ್ಯೂಸ್ ಅನ್ನು ತೆಗೆದುಕೊಂಡು ಸೋಸಿಕೊಳ್ಳಿ. ರುಚಿಗೆ ಬೇಕಾಗಿ ಸ್ವಲ್ಪ ಉಪ್ಪು ಹಾಕಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಪ್ರಿಡ್ಜ್‌ನಲ್ಲಿ ಕೆಲಹೊತ್ತು ಇಟ್ಟ ಬಳಿಕ ಕುಡಿಯಲು ನೀಡಿದರೆ ರುಚಿಕರವಾಗಿರುವ, ಆರೋಗ್ಯದಾಯಕ ದ್ರಾಕ್ಷಿ ಜ್ಯೂಸ್ ಕುಡಿಯಲು ರೆಡಿ.



Click it and Unblock the Notifications
