For Quick Alerts
ALLOW NOTIFICATIONS  
For Daily Alerts

ಬಹೂಪಯೋಗಿ ಶುಂಠಿಯ ಔಷಧೀಯ ಗುಣಗಳು

By Manu
|

ಶುಂಠಿಯು ಮಸಾಲಾ ಪದಾರ್ಥ ಮಾತ್ರವಾಗಿಲ್ಲದೆ ಅದ್ಭುತ ಔಷಧೀಯ ಗಿಡಮೂಲಿಕೆಯೂ ಹೌದು. ನಿರ್ವಿಷಗೊಳಿಸುವ ಅಂಶಗಳನ್ನು ಒಳಗೊಂಡಿರುವ ಶುಂಠಿಯು, ಶುದ್ಧೀಕರಿಸುವ ಗಿಡಮೂಲಿಕೆಗಳಲ್ಲಿ ಒಂದಾಗಿದೆ. ಭಾರತ ಮತ್ತು ಚೀನಾದಲ್ಲಿ ಶುಂಠಿಯ ಮಹತ್ವತೆಗಳನ್ನು ಪರಿಶೋಧಿಸಲಾಗಿದ್ದು, ಹಲವಾರು ರೋಗಗಳನ್ನು ನಿವಾರಿಸುವಲ್ಲಿ ಶುಂಠಿ ಕಮಾಲನ್ನೇ ಮಾಡುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

Health Benefits Of Ginger That Were Unknown

ಸಾಕಷ್ಟು ವಿಟಮಿನ್ ಅಂಶಗಳನ್ನು ಹೊಂದಿರುವ ಶುಂಠಿಯು ವೈದ್ಯಕೀಯ ಅಂಶಗಳಿಂದ ಪ್ರಸಿದ್ಧವಾಗಿದೆ. ಹಗುರವಾದ ಆರಾಮದಾಯಕ ಫಲಿತಾಂಶಗಳನ್ನು ದೇಹಕ್ಕೆ ನೀಡುವ ಶುಂಠಿಯು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುವಲ್ಲಿ ಸಿದ್ಧಹಸ್ತವಾಗಿದೆ.

ಬೇರೆ ಬೇರೆ ಖಾದ್ಯಗಳಲ್ಲಿ ಅಂತೆಯೇ ಪಾನೀಯಗಳಲ್ಲಿ ಕೂಡ ಶುಂಠಿಯನ್ನು ಬಳಸಲಾಗಿದ್ದು ಅಡುಗೆ ಮನೆಯ ತರಕಾರಿ ಬಾಸ್ಕೆಟ್‎ನಲ್ಲಿ ಈ ಸಾಮಾಗ್ರಿ ಇಲ್ಲದೇ ಇರುವುದಿಲ್ಲ. 300 ವರ್ಷಗಳಿಗಿಂತ ಹೆಚ್ಚು ಸಮಯ ಬಳಸಲಾದ ಶುಂಠಿಯು, ವೈದ್ಯಕೀಯ ಗಿಡಮೂಲಿಕೆ ಎಂದೆನಿಸಿದ್ದು ಪಾಕಶಾಲಿಕಾ ಮೂಲಿಕೆ ಎಂಬುದಾಗಿ ಕೂಡ ಹೆಸರುವಾಸಿಯಾಗಿದೆ.

ಇದು ಸುವಾಸನೆಯುಕ್ತ ಪರಿಮಳವನ್ನು ಹೊಂದಿರುವುದಲ್ಲದೆ, ಇತರೆ ಸಾಂಬಾರು ಪದಾರ್ಥಗಳಂತೆ ಭೂಮಿಯ ತಳಭಾಗದಲ್ಲಿ ಬೆಳೆಯುತ್ತಿದ್ದರೂ ತನ್ನ ವೈದ್ಯಕೀಯ ಗುಣಗಳಿಂದ ಹೆಸರುವಾಸಿಯಾಗಿದೆ. ಶುಂಠಿಯಂತೆ ಅದರ ಬೇರು ಕಾಂಡ ಕೂಡ ಗಿಡಮೂಲಿಕಾ ಅಂಶಗಳನ್ನು ಒಳಗೊಂಡಿದೆ. ಹುಡಿಮಾಡಿದ ಶುಂಠಿ ಕೂಡ ನಿಮ್ಮ ಹೊಟ್ಟೆಯ ಸಮಸ್ಯೆಗಳನ್ನು ದೂರಮಾಡುವ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, ಜೀರ್ಣಕ್ರಿಯೆ ಸಮಸ್ಯೆಗಳನ್ನು ನಿವಾರಿಸುತ್ತದೆ. ಶುಂಠಿಯ ಬೇರನ್ನು ಫ್ರಿಡ್ಜ್‎ನಲ್ಲಿ ಬಹಳಷ್ಟು ಸಮಯ ನಿಮಗೆ ಇಡಬಹುದಾಗಿದ್ದು ಇದು ಹಾಳಾಗುವುದಿಲ್ಲ. ಶುಂಠಿ-ಅರಿಶಿನದ ಚಹಾ, ಕಣ ಕಣದಲ್ಲೂ ಆರೋಗ್ಯದ ಶಕ್ತಿ

ನಿರ್ವಿಷಕಾರಿ ಗುಣಗಳನ್ನು ಶುಂಠಿಯು ಪಡೆದುಕೊಂಡಿದ್ದು, ಹೊಟ್ಟೆಯಲ್ಲಿರುವ ಗ್ಯಾಸ್ ಅನ್ನು ಇದು ತಗ್ಗಿಸುತ್ತದೆ. ತಮ್ಮ ಪ್ರೊಟೀನ್ ಸೇವನೆಯು ಹೆಚ್ಚಾದಾಗ ಗ್ಯಾಸ್ ಸಮಸ್ಯೆ ಹೊಟ್ಟೆಯಲ್ಲಿ ಕಾಡುತ್ತದೆ. ಆಹಾರದಲ್ಲಿ ಶುಂಠಿಯನ್ನು ಸೇರಿಸಿಕೊಂಡು ಸೇವಿಸುವುದು ಗ್ಯಾಸ್ ಭಾವನೆಯನ್ನು ನಿವಾರಿಸುತ್ತದೆ ಮತ್ತು ಬೆಳಗ್ಗಿನ ವಾಕರಿಕೆ, ಅಜೀರ್ಣ ಹಾಗೂ ವಾಂತಿ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ.

ಅಲ್ಸರೇಟೀವ್ ಕಾಲಿಟ್ಸ್ ಮತ್ತು ಸಂಧಿವಾತದಂತಹ ರೋಗಗಳನ್ನು ಗುಣಪಡಿಸುವ ಶುಂಠಿಯು ಉತ್ಕಷರ್ಣ ನಿವಾರಕ ಅಂಶಗಳನ್ನು ಒಳಗೊಂಡಿದ್ದು ವೈರಸ್ ನಿವಾರಕವಾಗಿದೆ. ಶುಂಠಿಯ ನಿರ್ವಿಷಕಾರಿ ಅಂಶವು ದೇಹವನ್ನು ಸ್ವಚ್ಛಮಾಡುತ್ತದೆ ಮತ್ತು ದೇಹದ ರಿಪೇರಿಯನ್ನು ಸ್ವಾಭಾವಿಕವಾಗಿ ಮಾಡುತ್ತದೆ. ಜ್ವರದಂತಹ ಕಾಯಿಲೆಗಳಿಂದ ಕೂಡ ದೇಹವನ್ನು ಸ್ವಾಸ್ಥ್ಯವಾಗಿರಿಸುತ್ತದೆ. ಶುಂಠಿ ಚಹಾ- ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ!

ರಕ್ತದ ಉತ್ತೇಜನೆಯು ಶುಂಠಿಯು ಮಾಡಲಿದ್ದು ದೀರ್ಘಕಾಲದ ಮತ್ತು ಮಾರಕ ಸಂದರ್ಭಗಳಲ್ಲಿ ಕಂಡುಬರುವ ಘನೀಕರಣವನ್ನು ಇದು ತಡೆಗಟ್ಟುತ್ತದೆ. ಶುಂಠಿಯು ಶಾಗಲ್‎ಗಳು ಮತ್ತು ಜಿಂಜರ್ಲಸ್‎ಗಳನ್ನು ಒಳಗೊಂಡಿದ್ದು ಕಟುವಾದ ಪರಿಮಳವನ್ನು ಬೀರುವುದು ಮಾತ್ರವಲ್ಲದೆ ತನ್ನ ಚಿಕಿತ್ಸಕ ಗುಣಗಳಿಂದ ಪರಿಣಾಮಕಾರಿಯಾಗಿರುವ ಶುಂಠಿಯು ಜೀರ್ಣಕ್ರಿಯೆಗೂ ಅನುಕೂಲಕರವಾಗಿದೆ.

ಇದರಲ್ಲಿರುವ ವೊಲಟೈಲ್ ಆಯಿಲ್ ಜೀರ್ಣಕ್ರಿಯೆ ಕಿಣ್ವಗಳ ನಿರ್ವಹಣೆಯನ್ನು ಮಾಡುತ್ತದೆ ಇದು ಆಸಿಡ್‎ಗಳನ್ನು ನ್ಯೂಟ್ರಲೈಸ್ ಮಾಡಿ ಸಂಪೂರ್ಣ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಅಂತೆಯೇ ನಿಮ್ಮ ಹೊಟ್ಟೆಯ ಯಾವುದೇ ಸಮಸ್ಯೆಯಿರಲಿ, ಡೈಯೇರಿಯಾ ಮತ್ತು ಮಲಬದ್ಧತೆ ಸಮಸ್ಯೆಗೆ ಪರಿಣಾಮಕಾರಿ ಚಿಕಿತ್ಸಾ ಔಷಧಿಯಾಗಿದೆ ಶುಂಠಿ. ಬೆಕ್ಕಸ ಬೆರಗಾಗಿಸುವ ಹಸಿ ಶುಂಠಿಯ ಕಾರುಬಾರು...!

English summary

Health Benefits Of Ginger That Were Unknown

Ginger is among the best purifying herbs suggested in most of the detoxifying applications, including the 3-day cleansing diets. It is really brought about by the ginger's quality detected by complementary medicine specialists, particularly in China, India, etc, along with other countries practicing this way of naturally treating disorders.
X
Desktop Bottom Promotion