For Quick Alerts
ALLOW NOTIFICATIONS  
For Daily Alerts

ಪುದೀನಾ ನೀರು ಸೇವಿಸಿ ಬೇಸಿಗೆಯ ಸಮಸ್ಯೆಗಳನ್ನು ನಿವಾರಿಸಿ

By Jaya Subramanya
|

ಬೇಸಿಗೆಯ ಬಿಸಿಲು ನಿಮ್ಮನ್ನು ಹಿಂಡಿ ಹಿಪ್ಪೆ ಮಾಡುವಷ್ಟು ಪ್ರಖರವಾಗಿರುತ್ತದೆ. ನಿಲ್ಲದ ಬಾಯಾರಿಕೆ, ಆಯಾಸ, ಸ್ನಾನ ಮಾಡಿದಂತೆ ಬೆವರು ಹರಿಯುವುದು ಅಂತೂ ಒಂದು ರೀತಿಯ ಅಸಹನೀಯ ಕಿರಿಕಿರಿಯನ್ನು ಬೇಸಿಗೆಯಲ್ಲಿ ನಾವು ಅನುಭವಿಸುತ್ತೇವೆ. ಇಂತಹ ಉರಿ ಬಿಸಿಯಲ್ಲಿ ತಂಪಾಗಿ ತಾಜಾ ಆಗಿರುವುದು ಖಂಡಿತ ಸಾಧ್ಯವಿಲ್ಲದ ಮಾತು ಎಂಬುದು ನಿಮ್ಮ ಅಭಿಪ್ರಾಯವಾಗಿದ್ದರೆ ಈ ಅನಿಸಿಕೆಯನ್ನು ಇಂದಿನ ಲೇಖನ ಸುಳ್ಳು ಮಾಡಲಿದೆ...! ಬಿರು ಬೇಸಿಗೆಯಲ್ಲೂ ನೀವು ತಂಪಾಗಿ ಆಹ್ಲಾದಮಯವಾಗಿ ಇರಬಹುದಾಗಿದೆ ಅದು ಹೇಗೆ ಎಂಬುದೇ ಇಂದಿನ ಲೇಖನದ ಒಳಗುಟ್ಟಾಗಿದೆ.

ಪುದೀನಾ ಬೇಸಿಗೆಯಲ್ಲೂ ನಿಮ್ಮನ್ನು ತಂಪಾಗಿರಿಸುವಲ್ಲಿ ಸಹಕಾರಿಯಾಗಿದೆ. ಬರಿಯ ನೀರನ್ನು ಮಾತ್ರ ಸೇವಿಸದೇ ಪುದೀನಾ ನೀರನ್ನು ಸೇವಿಸುವುದರಿಂದ ದೇಹದಲ್ಲಿ ಉಂಟಾಗುವ ತಂಪಿನ ಅನುಭವವನ್ನು ನಿಮಗೆ ತಿಳಿದುಕೊಳ್ಳಬಹುದಾಗಿದೆ. ಒಂದು ಜಾರ್‌ನಷ್ಟು ನೀರಿಗೆ ಪುದೀನಾ ಎಲೆಗಳನ್ನು ಹಾಕಿ ಇದಕ್ಕೆ ಲಿಂಬೆ ಹೋಳುಗಳನ್ನು ಸೇರಿಸಿ ಮತ್ತು ಸೌತೆಕಾಯಿ ಅಥವಾ ಕಲ್ಲಂಗಡಿ ತುಂಡನ್ನು ಈ ನೀರಿಗೆ ಬೆರೆಸಿ ಜಜ್ಜಿದ ಶುಂಠಿಯನ್ನು ಕಲಸಿಕೊಂಡು ಸೇವಿಸಬೇಕು.

ಈ ಜಾರ್‌ಗೆ ಐಸ್ ಅನ್ನು ಹಾಕಿ. ನಂತರ ಅದಕ್ಕೆ ನೀರು ಹಾಕಿ ಫ್ರಿಡ್ಜ್‌ನಲ್ಲಿರಿಸಿ. ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸಲು ಮತ್ತು ತೂಕವನ್ನು ಇಳಿಸುವಿಲ್ಲಿ ಪುದೀನಾ ನೀರು ಕಮಾಲನ್ನೇ ಉಂಟುಮಾಡಲಿದೆ. ಹಾಗಿದ್ದರೆ ಬೇಸಿಗೆಯಲ್ಲಿ ಈ ನೀರನ್ನು ಸೇವಿಸುವುದರಿಂದ ಉಂಟಾಗುವ ಅದ್ಭುತ ಪ್ರಯೋಜನಗಳನ್ನು ಅರಿತುಕೊಳ್ಳೋಣ...

ಜೀರ್ಣಕ್ರಿಯೆಗೆ ಸಹಕಾರಿ

ಜೀರ್ಣಕ್ರಿಯೆಗೆ ಸಹಕಾರಿ

ಬೇಸಿಗೆಯಲ್ಲಿ ಅಜೀರ್ಣ ಸಮಸ್ಯೆಗಳು ಉಂಟಾಗುವುದು ಸಹಜ. ಪುದೀನಾ ನೀರು ಇದಕ್ಕೆ ಉತ್ತಮ ಉತ್ಕರ್ಷಣ ನಿರೋಧಿ ಅಂಶಗಳು ಇದರಲ್ಲಿದ್ದು ಫೈಟೋನ್ಯೂಟ್ರಿಯಂಟ್ಸ್ ಅಂಶಗಳಿರುವುದರಿಂದ ಹೊಟ್ಟೆಗೆ ಇದು ಅತ್ಯುತ್ತಮ ಎಂದೆನಿಸಿದೆ.

ವಾಕರಿಕೆ ದೂರಾಗಿಸುತ್ತದೆ

ವಾಕರಿಕೆ ದೂರಾಗಿಸುತ್ತದೆ

ಬೇಸಿಗೆಯಲ್ಲಿ ಪುದೀನಾ ನೀರು ಸೇವಿಸುವುದು ಅತ್ಯುತ್ತಮ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಪುದೀನಾದ ಬಲವಾದ ಸುವಾಸನೆಯು ವಾಕರಿಕೆಯನ್ನು ಹೋಗಲಾಡಿಸುವಲ್ಲಿ ಪ್ರಮುಖವಾದುದು. ಅಂತೆಯೇ ಗರ್ಭಿಣಿ ಸ್ತ್ರೀಯರನ್ನು ಕಾಡುವ ಬೆಳಗ್ಗಿನ ಬೇನೆಯನ್ನು ನಿವಾರಿಸಲು ಪುದೀನಾ ಸಹಕಾರಿ

ಮೊಡವೆ ಮತ್ತು ಗುಳ್ಳೆಗಳನ್ನು ಹೋಗಲಾಡಿಸುತ್ತದೆ

ಮೊಡವೆ ಮತ್ತು ಗುಳ್ಳೆಗಳನ್ನು ಹೋಗಲಾಡಿಸುತ್ತದೆ

ಬೇಸಿಗೆಯಲ್ಲಿ ಪುದೀನಾ ನೀರು ಮಾಡುವ ಕಮಾಲು ಇದಾಗಿದೆ. ಬೇಸಿಗೆಯಲ್ಲಿ, ನಿಮ್ಮ ತ್ವಚೆ ಜಿಡ್ಡಿನಿಂದ ಕೂಡಿರುತ್ತದೆ ಮತ್ತು ಮಂದವಾಗಿರುತ್ತದೆ. ಈ ಸಮಯದಲ್ಲಿ ತ್ವರಿತವಾಗಿ ಮೊಡವೆ ಮತ್ತು ಗುಳ್ಳೆಗಳು ಉಂಟಾಗುತ್ತದೆ. ಪುದೀನಾ ನೀರನ್ನು ನಿಯಮಿತವಾಗಿ ಸೇವಿಸುವುದರಿಂದ ಈ ಸಮಸ್ಯೆಯನ್ನು ಹೋಗಲಾಡಿಸಬಹುದು ಮತ್ತು ನೈಸರ್ಗಿಕವಾಗಿ ಹೊಳೆಯುವ ತ್ವಚೆಯನ್ನು ಪಡೆದುಕೊಳ್ಳಬಹುದು.

ಅಸ್ತಮಾವನ್ನು ತಡೆಗಟ್ಟಲು

ಅಸ್ತಮಾವನ್ನು ತಡೆಗಟ್ಟಲು

ಅದ್ಭುತ ನೈಸರ್ಗಿಕ ಶಾಮಕವಾಗಿರುವ ಪುದೀನಾ ಯಾವುದೇ ರೀತಿಯ ಕಟ್ಟುವಿಕೆಯಿಂದ ನಿಮಗೆ ತ್ವರಿತ ಆರಾಮವನ್ನು ಒದಗಿಸುತ್ತದೆ. ಇದರ ಪರಿಮಳ ಗಾಳಿಯ ಚಲನೆಯನ್ನು ತೆರವುಗೊಳಿಸುತ್ತದೆ ಮತ್ತು ಉಸಿರಾಡಲು ಸರಾಗಗೊಳಿಸುತ್ತದೆ. ಅಸ್ತಮಾ ರೋಗಿಗಳಿಗೆ ಪುದೀನಾ ನೀರು ಔಷಧ ಎಂದೆನಿಸಿದೆ.

ಮುಟ್ಟಿನ ತೊಂದರೆಗಳ ನಿವಾರಣೆ

ಮುಟ್ಟಿನ ತೊಂದರೆಗಳ ನಿವಾರಣೆ

ಹೇಗೂ ಇದು ಬೇಸಿಗೆ. ಮುಟ್ಟಿನ ಸೆಳೆತ ಮತ್ತು ನೋವು ನಿಮ್ಮನ್ನು ಹೆಚ್ಚು ಕಿರಿಕಿರಿಯನ್ನುಂಟು ಮಾಡುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಪುದೀನಾ ಬೆರೆಸಿನ ನೀರನ್ನು ಆಗಾಗ್ಗೆ ಸೇವಿಸುತ್ತಿರಿ. ಅಂತೆಯೇ ಪುದೀನಾ ಚಹಾವನ್ನು ಕೂಡ ಸಿದ್ಧಪಡಿಸಿ ನಿಮಗೆ ಸೇವಿಸಬಹುದು.

ರೋಗನಿರೋಧಕ ಶಕ್ತಿ ವರ್ಧನೆ

ರೋಗನಿರೋಧಕ ಶಕ್ತಿ ವರ್ಧನೆ

ರೋಗಗಳಿಗೆ ಬೇಸಿಗೆ ತಾಣವಾಗಿದೆ. ಜಂಕ್ ಫುಡ್ಸ್, ರಸ್ತೆಬದಿಯ ಹಣ್ಣಿನ ರಸ ಮತ್ತು ತಂಪು ಪಾನೀಯಗಳು ರೋಗಗಳನ್ನು ಹೆಚ್ಚಾಗಿಸುತ್ತವೆ. ಬೆಳಗ್ಗಿನ ಹೊತ್ತು ಒಂದು ಲೋಟದಷ್ಟು ಪುದೀನಾ ರಸವನ್ನು ಸೇವಿಸುವುದು ನಿಮ್ಮ ರೋಗನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ ಮತ್ತು ರಕ್ಷಣಾ ಕವಚವನ್ನು ಏರ್ಪಡಿಸುತ್ತದೆ. ವಿಟಮಿನ್‌ಗಳು ಮತ್ತು ಮಿನರಲ್‌ಗಳು ರೋಗನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ ಮತ್ತು ಯಾವುದೇ ರೀತಿಯ ಸೋಂಕನ್ನು ಹೋಗಲಾಡಿಸುತ್ತದೆ.

ಖಿನ್ನತೆ ಮತ್ತು ಒತ್ತಡದ ವಿರುದ್ಧ ಹೋರಾಡಲು

ಖಿನ್ನತೆ ಮತ್ತು ಒತ್ತಡದ ವಿರುದ್ಧ ಹೋರಾಡಲು

ಬೇಸಿಗೆಯಲ್ಲಿ ಪುದೀನಾ ರಸವನ್ನು ಸೇವಿಸುವುದರ ಕುರಿತಾದ ಆರೋಗ್ಯ ಪ್ರಯೋಜನಗಳನ್ನು ಎದುರು ನೋಡುತ್ತಿದ್ದೀರಾ? ಹಾಗಿದ್ದರೆ ಇಲ್ಲಿದೆ ಪ್ರಯೋಜನ. ನಿಮ್ಮ ಮೂಡ್ ಅನ್ನು ಸರಿಪಡಿಸುವ ಅದ್ಭುತ ಶಕ್ತಿಯನ್ನು ಪುದೀನಾ ಹೊಂದಿದೆ. ಪುದೀನಾ ಎಲೆಗಳೊಂದಿಗೆ ನೀರನ್ನು ಕುದಿಸಿಕೊಳ್ಳಿ ಮತ್ತು ಆವಿಯನ್ನು ತೆಗೆದುಕೊಳ್ಳಿ. ನಿಮ್ಮನ್ನು ಒತ್ತಡರಹಿತವಾಗಿರಿಸುವ ಸಿರೊಟಿನ್ ಹಾರ್ಮೊನು ಅನ್ನು ಇದು ಬಿಡುಗಡೆ ಮಾಡುತ್ತದೆ.

ತೂಕ ಇಳಿಸಲು

ತೂಕ ಇಳಿಸಲು

ವೇಗವಾಗಿ ತೂಕ ಇಳಿಸಲು ಬೇಸಿಗೆ ಅತ್ಯುತ್ತಮ ಕಾಲವಾಗಿದೆ. ಪುದೀನಾ ನೀರನ್ನು ನೀವು ಹೊಂದಿದ್ದೀರಿ ಎಂದಾದಲ್ಲಿ, ನಿಮ್ಮ ಗುರಿಯನ್ನು ನೀವು ತ್ವರಿತವಾಗಿ ತಲುಪಬಹುದಾಗಿದೆ. ಉತ್ತೇಜಕವಾಗಿರುವ ಪುದೀನಾ ಆಹಾರಗಳಿಂದ ಪೋಷಕಾಂಶಗಳನ್ನು ಹೀರಿಕೊಳ್ಳುತ್ತದೆ ಮತ್ತು ಕೊಬ್ಬನ್ನು ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ಪುದೀನಾ ಬಳಸಿ ತೂಕವನ್ನು ವೇಗವಾಗಿ ಕಡಿಮೆ ಮಾಡಿಕೊಳ್ಳಬಹುದಾಗಿದೆ.

ದಂತ ಮತ್ತು ಹಲ್ಲುಗಳ ಸಮಸ್ಯೆ

ದಂತ ಮತ್ತು ಹಲ್ಲುಗಳ ಸಮಸ್ಯೆ

ಆಂಟಿಬ್ಯಾಕ್ಟೀರಿಯಲ್ ಮತ್ತು ಉರಿಯೂತ ನಿರೋಧಕ ಗುಣಲಕ್ಷಣಗಳನ್ನು ಪುದೀನಾ ಒಳಗೊಂಡಿರುವುದರಿಂದ ಯಾವುದೇ ಬಾಯಿಯ ಸಮಸ್ಯೆಗಳನ್ನು ಹೋಗಲಾಡಿಸುವಲ್ಲಿ ಇದು ಎತ್ತಿದ ಕೈ ಎಂದೆನಿಸಿದೆ. ನಿಮ್ಮ ಉಸಿರಾಟವನ್ನು ಪುದೀನಾ ನೀರು ತಾಜಾಗೊಳಿಸುತ್ತದೆ ಅಂತೆಯೇ ಯಾವುದೇ ರೀತಿಯ ಬ್ಯಾಕ್ಟೀರಿಯ ಬೆಳವಣಿಗೆಯನ್ನು ನಿಲ್ಲಿಸುತ್ತದೆ.

 ಜ್ವರವನ್ನು ಹೋಗಲಾಡಿಸುತ್ತದೆ

ಜ್ವರವನ್ನು ಹೋಗಲಾಡಿಸುತ್ತದೆ

ಪುದೀನಾ ನೀರನ್ನು ಕುಡಿಯುವುದರ ಆರೋಗ್ಯ ಪ್ರಯೋಜನಗಳನ್ನು ನೋಡಿದರೆ ಖಂಡಿತ ಇದನ್ನು ನೀವು ಸೇವಿಸದೇ ಇರಲಾರಿರಿ. ಬೇಸಿಗೆಯ ಸೋಂಕುಗಳು ನಿಮ್ಮನ್ನು ಕಾಡುತ್ತಿದೆ ಎಂದಾದಲ್ಲಿ ಪುದೀನಾ ನೀರು ಅತ್ಯುತ್ತಮ ಎಂದೆನಿಸಿದೆ. ಕಾಲೋಚಿತ ಅಲರ್ಜಿಗಳು ಮತ್ತು ಜ್ವರಕ್ಕೆ ಕಾರಣವಾದ ಹಿಸ್ಟಮಿನ್ ಬಿಡುಗಡೆಯನ್ನು ಪುದೀನಾ ತಡೆಯುತ್ತದೆ.

English summary

Health Benefits of Drinking Mint Water In Summer

The days of summer are long and tiring. The scorching sun and the hot wind drain all your energy. But you can’t stay at home too. Therefore, sweating and burning in the sun is a regular issue. Does that mean you can’t stay fit and fresh in summer? Yes, you can. You just need proper tips to stay fresh in summer. Mint is an ingredient that helps you to stay cool in summer. What are the benefits of drinking mint water in summer?
Story first published: Tuesday, April 12, 2016, 12:40 [IST]
X
Desktop Bottom Promotion