For Quick Alerts
ALLOW NOTIFICATIONS  
For Daily Alerts

ಅಳುವುದರಿಂದಲೂ ಆರೋಗ್ಯಕ್ಕೆ ಸಿಕ್ಕಾಪಟ್ಟೆ ಲಾಭವಿದೆಯಂತೆ!

ಅಳುವುದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ದೇಹವು ಭಾವನೆಗಳಿಗೆ ಸ್ಪಂದಿಸುವಾಗ ಕಣ್ಣೀರಿನ ಗ್ರಂಥಿಯಿಂದ ಬರುವ ನೀರನ್ನು ಅಳುವುದು ಎಂದು ಕರೆಯುತ್ತೇವೆ...ಮುಂದೆ ಓದಿ...

By Hemanth
|

ತುಂಬಾ ಬೇಸರವಾದಾಗ, ದುಃಖವಾದಾಗ ಕಣ್ಣೀರು ಸುರಿಯುವುದು ಇದೆ. ಕೆಲವೊಮ್ಮೆ ಹೆಚ್ಚು ಸಂತೋಷವಾದಾಗಲೂ ಕಣ್ಣೀರು ಬರುವುದಿದೆ. ಇದನ್ನು ಆನಂದ ಬಾಷ್ಪವೆನ್ನುತ್ತಾರೆ. ಮನಸ್ಸಿನಲ್ಲಿರುವ ಭಾವನೆಗಳನ್ನು ಹತ್ತಿಕ್ಕಲು ಸಾಧ್ಯವಾಗದೆ ಇರುವಾಗ ಅದು ಕಣ್ಣೀರಿನ ರೂಪದಲ್ಲಿ ಹೊರಬರುತ್ತದೆ. ಅಳುವುದನ್ನು ನಕಾರಾತ್ಮಕವೆಂದು ಬಿಂಬಿಸಲಾಗಿದೆ.

ಇದರಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ ಎಂದು ನಿಮಗೆ ತಿಳಿದಿದೆಯಾ? ಹೌದು, ಅಳುವುದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ದೇಹವು ಭಾವನೆಗಳಿಗೆ ಸ್ಪಂದಿಸುವಾಗ ಕಣ್ಣೀರಿನ ಗ್ರಂಥಿಯಿಂದ ಬರುವ ನೀರನ್ನು ಅಳುವುದು ಎಂದು ಕರೆಯುತ್ತೇವೆ. ಕಣ್ಣೀರಿನ ಬಗ್ಗೆ ಕೆಲ ಸ್ವಾರಸ್ಯಕರ ಅಂಶಗಳ

ವೈಜ್ಞಾನಿಕವಾಗಿ ಅಳುವುದರಲ್ಲಿ ಹಲವಾರು ವಿಧಗಳಿವೆ. ನಿಧಾನವಾಗಿ ಅನಿಯಮಿತವಾಗಿ ಉಸಿರನ್ನು ಒಳಗೆ ತೆಗೆದುಕೊಳ್ಳುವುದು, ಸ್ನಾಯುವಿನ ನಡುಕ ಇತ್ಯಾದಿ. ಭಾವನೆಗಳಿಂದಾಗಿ ಬರುವ ಕಣ್ಣೀರಿನಲ್ಲಿ ಭಿನ್ನ ರೀತಿಯ ರಾಸಾಯನಿಕ ಸಂಯೋಜನೆಯಿರುತ್ತದೆ. ಕಣ್ಣು ನೋವು ಅಥವಾ ಸೋಂಕಿನಿಂದ ಬರುವ ಕಣ್ಣೀರಿಗಿಂತ ಇದು ಭಿನ್ನವಾಗಿರುತ್ತದೆ. ಭಾವನೆಗಳು ಮನಸ್ಸಿನಾಳದಿಂದ ಹೊರಬಂದಾಗ ಬರುವ ಕಣ್ಣೀರಿನಿಂದ ಯಾವ ಆರೋಗ್ಯ ಲಾಭಗಳು ಇದೆ ಎಂದು ಈ ಲೇಖನದಲ್ಲಿ ತಿಳಿದುಕೊಳ್ಳುವ....

ಒತ್ತಡ ಕಡಿಮೆ ಮಾಡುವುದು

ಒತ್ತಡ ಕಡಿಮೆ ಮಾಡುವುದು

ಮನಸ್ಸು ಹೋರಾಟ ಹಾಗೂ ಹಾರಾಟದ ಮಧ್ಯೆ ಗೊಂದಲದಲ್ಲಿ ಸಿಲುಕಿದ್ದಾಗ ಬರುವಂತಹ ಅಳು ದೈಹಿಕ ಹಾಗೂ ಮಾನಸಿಕವಾಗಿ ನಮ್ಮನ್ನು ಸಹಜ ಸ್ಥಿತಿಗೆ ತರುತ್ತದೆ. ಇದರಿಂದ ನಮಗೆ ಒತ್ತಡದಿಂದ ಸ್ವಲ್ಪ ವಿರಾಮ ಸಿಗುವುದು ಎಂದು ವೈಜ್ಞಾನಿಕ ಅಧ್ಯಯನಗಳು ಹೇಳಿವೆ.

ದೇಹವನ್ನು ನಿರ್ವಿಷಗೊಳಿಸುವುದು

ದೇಹವನ್ನು ನಿರ್ವಿಷಗೊಳಿಸುವುದು

ಕೆಲವೊಂದು ಸಂಶೋಧನೆಗಳ ಪ್ರಕಾರ ಭಾವನಾತ್ಮಕವಾಗಿ ಬರುವಂತಹ ಕಣ್ಣೀರಿನಲ್ಲಿ ಕೆಲವೊಂದು ವಿಷಕಾರಿ ಅಂಶಗಳು ಇರುತ್ತದೆ. ಇದು ದೇಹದಲ್ಲಿರುವ ಒತ್ತಡದ ಹಾರ್ಮೋನುಗಳ ಸಹ ಉತ್ಪನ್ನವಾಗಿದೆ. ಇದರಿಂದ ಅಳು ದೇಹದಲ್ಲಿರುವ ವಿಷವನ್ನು ಹೊರಹಾಕುತ್ತದೆ.

ನೈಸರ್ಗಿಕವಾಗಿ ಶುದ್ಧೀಕರಿಸುವುದು

ನೈಸರ್ಗಿಕವಾಗಿ ಶುದ್ಧೀಕರಿಸುವುದು

ಭಾವನಾತ್ಮಕವಾಗಿ ಬರುವಂತಹ ಕಣ್ಣೀರಿನಲ್ಲಿ ಲೈಸೋಝೈಂ ಎನ್ನುವಂತಹ ಕಿಣ್ವವಿದೆ. ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ನೈಸರ್ಗಿಕ ಶುದ್ಧೀಕರಣವಾಗಿ ಕೆಲಸ ಮಾಡುತ್ತವೆ.

ಒಣ ಕಣ್ಣುಗಳ ಚಿಕಿತ್ಸೆ

ಒಣ ಕಣ್ಣುಗಳ ಚಿಕಿತ್ಸೆ

ಅಳುವ ಮತ್ತೊಂದು ಆರೋಗ್ಯ ಲಾಭವೆಂದರೆ ಅದು ಕಣ್ಣಿಗೆ ತೇವಾಂಶವನ್ನು ನೀಡುತ್ತದೆ. ಅಳುವುದರಿಂದ ಕಣ್ಣು ಒಣಗುವುದು, ಕೆಂಪಾಗುವುದು ಮತ್ತು ತುರಿಕೆಯನ್ನು ತಡೆಯುವುದು.ಕಣ್ಣುಗಳೇ ನಮ್ಮ ಅಮೂಲ್ಯ ಸಂಪತ್ತು- ನಿರ್ಲಕ್ಷ್ಯ ಮಾಡದಿರಿ....

ಮನಸ್ಥಿತಿ ಸುಧಾರಣೆ

ಮನಸ್ಥಿತಿ ಸುಧಾರಣೆ

ಅಳುವುದರಿಂದ ಮೆದುಳಿನಲ್ಲಿ ಉತ್ಪತ್ತಿಯಾಗುವಂತಹ ಎಂಡೋರ್ಫಿನ್ ಅಥವಾ ಉತ್ತಮ ಭಾವನೆಯ ಹಾರ್ಮೋನುಗಳು ಮನಸ್ಸನ್ನು ಹಗುರಗೊಳಿಸಿ ಮನಸ್ಥಿತಿಯನ್ನು ಸುಧಾರಿಸುತ್ತದೆ.

ಖಿನ್ನತೆ ನಿವಾರಣೆ

ಖಿನ್ನತೆ ನಿವಾರಣೆ

ಅಳುವ ಮತ್ತೊಂದು ಆರೋಗ್ಯ ಲಾಭವೆಂದರೆ ಇದರಿಂದ ಖಿನ್ನತೆಯನ್ನು ನಿವಾರಿಸಬಹುದು. ಅಳುವುದರಿಂದ ನಕಾರಾತ್ಮಕ ಭಾವನೆಗಳು ಹೊರಹೋಗುವುದರಿಂದ ವ್ಯಕ್ತಿಗೆ ಮಾನಸಿಕವಾಗಿ ಪರಿಹಾರ ಸಿಗುವುದು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

English summary

Health Benefits Of Crying You Never Knew!

Crying can be described as the body's physical response to an emotional state, where a person sheds tears from the lacrimal gland or the tear duct. Technically, the act of crying has a number of variations. For instance, sobbing is a form of crying that is accompanied with symptoms like slow, erratic inhalation of breath, muscular tremors, etc.
X
Desktop Bottom Promotion