Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಅತಿಯಾಗಿ ಸೆಲ್ಫಿ ತೆಗೆದುಕೊಂಡ್ರೂ ಆರೋಗ್ಯಕ್ಕೆ ಎಫೆಕ್ಟ್...
ಸೆಲ್ಫಿ ಪೋಟೋ ಇತ್ತೀಚೆಗೆ ಎಲ್ಲರ ಕ್ರೇಝ್ ಆಗ್ಬಿಟ್ಟಿದೆ. ತಮ್ಮ ಫೋಟೋ ತಾವೇ ಕ್ಲಿಕ್ಕಿಸಿಕೊಳ್ಳೋದು ಮತ್ತು ಅದನ್ನು ಇಂಟರ್ನೆಟ್ ವೆಬ್‌ಸೈಟ್‌ಗಳಲ್ಲಿ ಅಪ್‌ಲೋಡ್ ಮಾಡೋದು ಮಾಮೂಲಿ. ನಮ್ಗೆ ನಿಮ್ಗೆ ಸೆಲ್ಫಿ ಅಂದ್ರೆ ಗೊತ್ತು. ಆದ್ರೆ ಸೆಲ್ಫಿ ಬಗ್ಗೆ ಏನೂ ಗೊತ್ತಿಲ್ಲದವರಿಗೆ ಮೊದಲು ಸೆಲ್ಫಿ ಅಂದ್ರೆ ಏನು ಅಂತ ಹೇಳ್ತೀವಿ ಕೇಳಿ..
ಸೆಲ್ಫಿ ಅಂದ್ರೆ ತಮ್ಮ ಮತ್ತು ತಮ್ಮ ಬಳಗದ ಫೋಟೋವನ್ನು ತಾವೇ ಕ್ಲಿಕ್ಕಿಸಿಕೊಳ್ಳೋದು..ಮೊಬೈಲ್ ನ ಮುಂಭಾಗದಲ್ಲಿ ಬರುವ ಕ್ಯಾಮರಾ ಬಳಸೋದು ಇದಕ್ಕೆ ಮಾಮೂಲು,. ಈ ಸೆಲ್ಫಿ ಅನ್ನೋ ಫೋಟೋ ಇತ್ತಿಚೆಗಿನ ಎಂಗ್ ಜನರೇಷನ್ ಹುಡುಗ ಹುಡುಗಿಯರ ಫ್ಯಾಷನ್ ಸ್ಟೇಟ್ ಮೆಂಟ್ ಆಗ್ಬಿಟ್ಟಿದೆ. ಅದೆಷ್ಟೋ ಮಂದಿ ದಿನಕ್ಕೆ ಅದೆಷ್ಟು ಬಾರಿ ಫೋಟೋ ಕ್ಲಿಕ್ಕಿಸಿಕೊಳ್ತಾರೋ ಗೊತ್ತಿಲ್ಲ. ನಿಂತಾಗ ಒಂದು ಫೋಟೋ, ಕೂತಾಗ ಒಂದು ಫೋಟೋ, ಬಟ್ಟೆ ತೊಟ್ಟಾಗ ಒಂದು, ಬದಲಿಸಿದಾಗ ಇನ್ನೊಂದು. ಹಾಸಿಗೆ ಬಳಿ ಮೊಬೈಲ್ ಇಟ್ಟುಕೊಂಡರೆ ಅಪಾಯ ಗ್ಯಾರೆಂಟಿ..
ಹೀಗೆ ಆಗಾಗ ಮೊಬೈಲ್ ಹಿಡಿದು ಫೋಟೋ ಕ್ಲಿಕ್ಕಿಸಿಕೊಳ್ಳೋದು ಅದನ್ನು ಅಂತರ್ಜಾಲದಲ್ಲಿ ಶೇರ್ ಮಾಡೋದು ಹವ್ಯಾಸವಾಗಿ ಬಿಟ್ಟಿದೆ.ಆದ್ರೆ ಈ ಸೆಲ್ಫಿ ಫೋಟೋ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಅಂದ್ರೆ ನೀವು ನಂಬ್ತೀರಾ? ನಂಬ್ಲೇಬೇಕು.. ಯಾಕಂದ್ರೆ ಇತ್ತೀಚೆಗೆ ನಡೆದ ಹೊಸ ಅಧ್ಯಯನವೊಂದು ಇದನ್ನು ಸಾಬೀತು ಪಡಿಸಿದೆ. ಹಾಗಾದ್ರೆ ಸೆಲ್ಫಿ ಫೋಟೋ ಕ್ಲಿಕ್ಕಿಸಿಕೊಳ್ಳೋದ್ರಿಂದ ಏನು ಸಮಸ್ಯೆ ಆಗುತ್ತೆ ಅಂತೀರಾ? ಮುಂದೆ ಓದಿ..

ಅನಗತ್ಯ ಮಾನಸಿಕ ಒತ್ತಡ
ಸೆಲ್ಫಿ ಅದೆಷ್ಟೋ ಸಂದರ್ಬದಲ್ಲಿ ಅನಗತ್ಯ ಮಾನಸಿಕ ಒತ್ತಡ ಕ್ರಿಯೇಟ್ ಮಾಡುತ್ತೆ. ಕೆಲವರಿಗೆ ತಮ್ಮ ಫೋಟೋ ಬಗ್ಗೆ ಗಿಲ್ಟಿ ಇರಬಹುದು. ಮತ್ತೆ ಕೆಲವರಿಗೆ ಅವರ ಪ್ರೀತಿಪಾತ್ರರು ತಮ್ಮ ಪೋಟೋ ಲೈಕ್ ಮಾಡಿಲ್ವಲ್ಲ ಅನ್ನೋ ಫೀಲ್ ಆಗ್ಬಹುದು,. ಇಂತಹ ಸಿಲ್ಲಿ ಥಿಂಗ್ಸ್ ಸೂಕ್ಷ್ಮ ಮನಸ್ಸಿರುವವರಿಗೆ ಪ್ರಾಬ್ಲಮ್ ಮಾಡ್ಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅನಗತ್ಯ ಮಾನಸಿಕ ಒತ್ತಡ
ಅಷ್ಟೇ ಅಲ್ಲ ತಮ್ಮ ಫೋಟೋ ಯಾಕೆ ಚೆಂದ ಬರಲಿಲ್ಲ ಅಂತ ಇನ್ನೊಂದು ಮತ್ತೊಂದು ಅಂತ ಕ್ಲಿಕ್ಕಿಸುತ್ತಲೇ ಇದ್ದು ಅದು ಅವ್ರ ಸೌಂದರ್ಯ ಪ್ರಜ್ಞೆಯ ಮೇಲೆ ಅತಿಯಾದ ಒತ್ತಡ ಕ್ರಿಯೇಟ್ ಮಾಡಬಹುದು. ನಾನು ಹೀಗಿದ್ದೀನಲ್ಲ, ಹೀಗಿರಬಾರದಿತ್ತು, ಅವಳ ಹಾಗೋ ಅಥವಾ ಅವನ ಹಾಗೋ ಇರಬೇಕಿತ್ತು ಅನ್ನುವ ವಿಚಿತ್ರ ಕಲ್ಪನೆಗಳಿಗೆ ಮುಂದಾಗುತ್ತಾರೆ ಸೆಲ್ಫಿ ಗೀಳಿರುವವರು ಅನ್ನೋದು ಸಂಶೋಧಕರ ಅಭಿಪ್ರಾಯ.

ದುರುಪಯೋಗ ಆಗಬಹುದು
ಒಮ್ಮೆ ನೀವು ಫೋಟೋ ಇಂಟರ್‌ನೆಟ್‌ನಲ್ಲಿ ಅಪ್‌ಲೋಡ್ ಮಾಡಿದ ಮೇಲೆ ಅದು ನಿಮ್ಮದಾಗಿರೋದಿಲ್ಲ ಅನ್ನೋದು ನೆನಪಿರಲಿ. ನಿಮ್ಮ ಫೋಟೋವನ್ನು ಅಪರಿಚಿತರು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇರುತ್ತೆ. ಎಚ್ಚರ. ಇದು ನಿಮಗೇ ಗೊತ್ತಿಲ್ಲದೇ ಆಗುವ ತೊಂದರೆ, ನೀವು ನಿಮಗೇ ತಿಳಿಯದಂತೆ ಮಾಡಿಕೊಳ್ಳುವ ಈ ಸಮಸ್ಯೆ ಮುಂದೆ ಯಾವ ಪರಿಣಾಮ ಬೀರುತ್ತೆ ಹೇಳೋದಕ್ಕೆ ಆಗೋದಿಲ್ಲ. ದುರುಪಯೋಗ ಆಗಿದೆ ಅಂತ ತಿಳಿದಾಗ ಆಗುವ ಆಘಾತಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.

ಗಾಸಿಪ್‌ಗೆ ಕಾರಣವಾಗುತ್ತೆ
ನೀವು ಹಾಕಿರೋ ಫೋಟೋ ಬಗ್ಗೆ ಇತರರಿಗೆ ಯಾವ ಭಾವನೆ ಬರುತ್ತೆ ಹೇಳೋಕೆ ಆಗಲ್ಲ. ನಿಮ್ಮ ಸಂಬಂಧಿಗಳಲ್ಲೇ ಇಲ್ಲವೇ ನಿಮ್ಮ ಸ್ನೇಹಿತರ ವಲಯದಲ್ಲಿ ಅನಗತ್ಯ ಗಾಸಿಪ್‌ಗಳು ನಿಮ್ಮ ಸೆಲ್ಫಿಯಿಂದ ಉದ್ಭವಿಸಬಹುದು...ಅದು ನಿಮ್ಮನ್ನ ಒತ್ತಡಕ್ಕೆ ಇಲ್ಲವೇ ನಿಮ್ಮ ಮನಸ್ಸಿನ ಆಘಾತಕ್ಕೆ ಕಾರಣವಾಗ್ಬಹುದು.

ಸಂಬಂಧಗಳು ಹಾಳಾಗ್ಬಹುದು
ನಿಮ್ಮ ಸಂಬಂಧಗಳ ನಡುವೆ ಬಿರುಕಿಗೂ ಇದು ಕಾರಣವಾಗ್ಬಹುದು. ನಿಮ್ಮ ಸೆಲ್ಫಿಯನ್ನು ಕ್ಯಾಷುವಲ್ ಆಗಿ ತೆಗೆದುಕೊಳ್ಳುವವರ ಜೊತೆ ನಿಮ್ಮ ಸಂಬಂಧವಿದ್ರೆ ಓಕೆ...ಆದ್ರೆ ಸೆಲ್ಫಿಯಿಂದ ಸಮಸ್ಯೆಯಾಗಿ ಅದು ನಿಮ್ಮ ಸಂಬಂಧದ ಮೇಲೆ ದುಷ್ಪರಿಣಾಮ ಬೀರಬಹುದು ಬಿ ಕೇರ್‌ಫುಲ್.

ಫೋಟೋ ಕ್ಲಿಕ್ಕಿಸೋದು ಚಟವಾಗಬಹುದು
ಒಂಥರಾ ಚಟ ಅಂತಾರಲ್ಲ ಹಾಗೆ ಸೆಲ್ಫಿ ಫೋಟೋ ಕ್ಲಿಕ್ ಮಾಡೋದು ಕೂಡ ನಿಮಗೊಂದು ಚಟವಾಗಿಬಿಡ್ಬಹುದು... ಪದೇ ಪದೇ ಫೋಟೋ ಕ್ಲಿಕ್ ಮಾಡ್ಕೊಬೇಕು. ನಾನು ಹೇಗಿದ್ದೀನಿ ಅಂತ ನೋಡ್ಕೋಬೇಕು ಅಥ್ವಾ ನನ್ನ ಫೋಟೋವನ್ನು ಇತರರಿಗೆ ಕಳಿಸ್ಬೇಕು ಅಥ್ವಾ ಇತರರು ನೋಡ್ಬೇಕು ಅನ್ನೋ ಮನಸ್ಥಿತಿಯ ಪರಿಣಾಮವಾಗಿ ಅದು ಚಟವಾಗಿಬಿಡ್ಬಹುದು..
ಒಟ್ಟಿನಲ್ಲಿ ಸೆಲ್ಫಿ ಕಂಪ್ಲೀಟ್ಲಿ ಕೆಟ್ಟದ್ದು ಅಂತ ನಾವ್ ಹೇಳ್ತಿಲ್ಲ. ಆದ್ರೆ ಸೆಲ್ಫಿ ಪೋಟೋ ಕ್ಲಿಕ್ಕಿಸಿಕೊಳ್ಳೋದು ಸಮಸ್ಯೆಯಾಗಿ ಅದು ನಿಮ್ಮ ಜೀವನಕ್ಕೆ ಸಮಸ್ಯೆಯಾಗದಂತೆ ನೋಡಿಕೊಳ್ಳಿ. ಕ್ಯಾಷುವಲ್ ಸೆಲ್ಫಿ ಕ್ಲಿಕ್
ಸಮಸ್ಯೆಯಾಗಲಾರದು. ಆದ್ರೆ ಅತಿಯಾದ್ರೆ ಅಮೃತ ಕೂಡ ವಿಷ ಅಲ್ವಾ?..



Click it and Unblock the Notifications