Latest Updates
-
ದೀಪಾವಳಿ ಹಬ್ಬದ ಡ್ರಾಮಾ ತಪ್ಪಿಸಿ: ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಪ್ಲಾನ್ ಮತ್ತು ಮೆಸೇಜ್ ಟಿಪ್ಸ್ -
ದೀಪಾವಳಿ ಪಾರ್ಟಿ ಜೋರಾಗಿದೆಯಾ? ₹30ರೊಳಗೆ ಸಿಗುವ 12 ಆರೋಗ್ಯಕರ ಹೈ-ಪ್ರೋಟೀನ್ ಸ್ನ್ಯಾಕ್ಸ್ ಇಲ್ಲಿದೆ! -
ಧನ್ತೇರಸ್ ಮುನ್ನವೇ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ: ಇಂದೇ ಖರೀದಿಸಬೇಕಾ ಅಥವಾ ನಾಳೆ ಕಾಯಬೇಕಾ? -
IND vs NZ 2nd ODI: ಪಂದ್ಯದ ದಿನ ಬೆಳಿಗ್ಗೆ ಫ್ರೆಶ್ ಆಗಿರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಎನ್ಆರ್ಐಗಳೇ ಎಚ್ಚರ! ವಿದೇಶಿ ವಿಚ್ಛೇದನ ಭಾರತದಲ್ಲಿ ಸಿಂಧುವಲ್ಲ: ದ್ವಿವಿವಾಹದ ಅಪಾಯ ತಪ್ಪಿಸಿಕೊಳ್ಳುವುದು ಹೇಗೆ? -
ದೀಪಾವಳಿ ಸಿಹಿ ಕೊಳ್ಳುವ ಮುನ್ನ ಎಚ್ಚರ! ಕಲಬರಕೆ ಪತ್ತೆ ಹಚ್ಚುವುದು ಹೇಗೆ? -
IND vs NZ 1st ODI: ಈಡನ್ ಪಾರ್ಕ್ನಲ್ಲಿ ಸಿಕ್ಸರ್ಗಳ ಸುರಿಮಳೆ, ಫ್ಯಾಂಟಸಿ ಟೀಮ್ಗೆ ಯಾರನ್ನು ಆರಿಸಬೇಕು? -
ದೆಹಲಿ-ಎನ್ಸಿಆರ್ನಲ್ಲಿ ತೀವ್ರ ವಾಯು ಮಾಲಿನ್ಯ: ನಿಮ್ಮ ಶ್ವಾಸಕೋಶವನ್ನು ರಕ್ಷಿಸಿಕೊಳ್ಳಲು ಇಲ್ಲಿದೆ ತ್ವರಿತ ಗೈಡ್ -
ದೆಹಲಿ ಮಾಲಿನ್ಯದ ಹೊಡೆತ: ಶ್ವಾಸಕೋಶದ ಆರೋಗ್ಯ ಕಾಪಾಡಲು ಇಂದೇ ನಿಮ್ಮ ಆಹಾರದಲ್ಲಿ ಈ ಬದಲಾವಣೆ ಮಾಡಿ! -
ಧನ್ತೇರಸ್ ಶಾಪಿಂಗ್: ಬಂಗಾರ ಖರೀದಿಸುವ ಮುನ್ನ ಈ 5 ವಿಷಯ ಮರೆಯದಿರಿ, ಇಲ್ಲವಾದರೆ ಮೋಸ ಹೋಗ್ತೀರಾ!
ಬೊಜ್ಜು ನಿಯಂತ್ರಿಸುವ ಶಕ್ತಿ- ಹಸಿರು ತರಕಾರಿಗಳಲ್ಲಿದೆ
ಸೊಂಟದ ವಿಷ್ಯ ಬೇಡವೋ ಶಿಷ್ಯ ಎನ್ನುವ ಹಾಡೊಂದನ್ನು ನಾವು ಕೇಳಿದ್ದೇವೆ. ಆದರೆ ಸೊಂಟದ ವಿಷ್ಯವನ್ನು ಹಾಗೆ ಬಿಟ್ಟುಬಿಡಲು ಆಗುವುದಿಲ್ಲ. ಯಾಕೆಂದರೆ ಸೊಂಟದ ಬೊಜ್ಜು ದೇಹದಲ್ಲಿ ತುಂಬಾ ತೊಂದರೆಯನ್ನು ಉಂಟುಮಾಡುತ್ತಿರುತ್ತದೆ. ಸೊಂಟದ ಬೊಜ್ಜಿನಿಂದಾಗಿ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆದರೆ ನಾವು ಉಪಯೋಗಿಸುವಂತಹ ಹಸಿರು ತರಕಾರಿಗಳನ್ನು ಬಳಸಿಕೊಂಡು ಸೊಂಟದ ಬೊಜ್ಜನ್ನು ಕರಗಿಸಬಹುದು. ನಿಮಗೂ ಇಂತಹ ಹೊಟ್ಟೆಯ ಬೊಜ್ಜಿನ ಸಮಸ್ಯೆಗಳಿವೆಯೇ?
ಹಸಿರು ತರಕಾರಿಗಳನ್ನು ಪ್ರತಿನಿತ್ಯ ಸೇವಿಸುವುದರಿಂದ ಶೇ. 90ರಷ್ಟು ಚಯಾಪಚಯಾ ಕ್ರಿಯೆ ಹೆಚ್ಚುತ್ತದೆ. ಶೇ.93ರಷ್ಟು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ. ಇಂತಹ ಹಸಿರು ತರಕಾರಿಗಳಲ್ಲಿ ಯಾವುದೇ ಕ್ಯಾಲರಿಗಳು ಇಲ್ಲದೆ ಇರುವ ಕಾರಣ ಇದು ತೂಕ ಕಳೆದುಕೊಳ್ಳಲು ಪ್ರಮುಖ ಆಹಾರ. ತೂಕ ಹೆಚ್ಚಿರುವವರು ಹಸಿರು ತರಕಾರಿಗಳನ್ನು ಆಹಾರ ಕ್ರಮದಲ್ಲಿ ಪ್ರತಿನಿತ್ಯ ತೆಗೆದುಕೊಂಡರೆ ಅವರ ತೂಕ ಕಡಿಮೆಯಾಗುವುದು ಮಾತ್ರವಲ್ಲದೆ ದೇಹಕ್ಕೆ ಬೇಕಿರುವ ಪೋಷಕಾಂಶಗಳು ಮತ್ತು ಶಕ್ತಿ ಲಭ್ಯವಾಗುತ್ತದೆ. ಐದೇ ದಿನದಲ್ಲಿ ಬೊಜ್ಜು ನಿಯಂತ್ರಣಕ್ಕೆ! ಈ ಟಿಪ್ಸ್ ಪಾಲಿಸಿ
ದೇಹದಲ್ಲಿನ ಕ್ಯಾಲರಿ ದಹಿಸಿದಾಗ ಈ ತರಕಾರಿಗಳಲ್ಲಿರುವ ಪೋಷಕಾಂಶಗಳು ದೇಹಕ್ಕೆ ಶಕ್ತಿ ಒದಗಿಸುತ್ತದೆ. ಸೊಂಟದ ಬೊಜ್ಜನ್ನು ಕಡಿಮೆ ಮಾಡಬಲ್ಲ ಏಳು ಹಸಿರು ತರಕಾರಿಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಈ ಹಸಿರು ತರಕಾರಿಗಳನ್ನು ತಿನ್ನುವುದರೊಂದಿಗೆ ದಿನದಲ್ಲಿ 20 ನಿಮಿಷ ಕಾಲ ನಡಿಗೆ, ಓಟ ಅಥವಾ ಹಗುರ ವ್ಯಾಯಾಮ ಮಾಡಿದರೆ ಸೊಂಟದ ಬೊಜ್ಜು ಕೆಲವೇ ವಾರಗಳಲ್ಲಿ ಮಾಯವಾಗಲಿದೆ.

ಹಸಿರು ಮೆಣಸು
ಹಸಿರು ಮೆಣಸು ಅಥವಾ ಕ್ಯಾಪ್ಸಿಕಂನಲ್ಲಿ ಉನ್ನತ ಮಟ್ಟದ ಆರೋಗ್ಯಕರ ಪೋಷಕಾಂಶಗಳಿವೆ. ಇದರಲ್ಲಿ ವಿಟಮಿನ್ ಸಿ ಹೆಚ್ಚಿದ್ದು, ಇದು ಕೊಬ್ಬನ್ನು ಕರಗಿಸಲು ನೆರವಾಗುತ್ತದೆ.

ಹಸಿರು ಸೇಬು
ಆರೋಗ್ಯಕ್ಕೆ ಕೆಂಪು ಸೇಬು ಮಾತ್ರ ಒಳ್ಳೆಯದು ಎಂದು ಭಾವಿಸಿದ್ದರೆ ಅದು ಖಂಡಿತವಾಗಿಯೂ ತಪ್ಪು. ಹಸಿರು ಸೇಬಿನಲ್ಲಿ ಕ್ಯಾಲರಿ ಕಡಿಮೆಯಿದೆ ಮತ್ತು ನಾರಿನಾಂಶ ಜಾಸ್ತಿಯಿರುವ ಕಾರಣ ತೂಕ ಕಳೆದುಕೊಳ್ಳಲು ಇದು ನೆರವಾಗುತ್ತದೆ.

ಮೆಣಸು
ಖಾರ ದೇಹಕ್ಕೆ ಒಳ್ಳೆಯದು. ಹೆಚ್ಚು ಹೆಚ್ಚು ಖಾರ ಸೇವಿಸಿದಷ್ಟು ನೀವು ಹೆಚ್ಚು ತೂಕ ಕಳೆದುಕೊಳ್ಳಲಿದ್ದೀರಿ. ಮೆಣಸನ್ನು ಒಳಗೊಂಡಿರುವ ಖಾರದ ಆಹಾರಗಳಿಂದ ನಿಮ್ಮ ಚಯಾಪಚಯ ಕ್ರಿಯೆ ಉತ್ತಮಗೊಳ್ಳುತ್ತದೆ. ಇದು ಸೊಂಟದಲ್ಲಿ ಜಮೆಯಾಗಿರುವ ಕೊಬ್ಬನ್ನು ಕರಗಿಸಲು ತುಂಬಾ ನೆರವಾಗಲಿದೆ.

ಬೀನ್ಸ್
ಕಡಿಮೆ ಕ್ಯಾಲರಿ ಮತ್ತು ಹೆಚ್ಚು ನಾರಿನಾಂಶವನ್ನು ಹೊಂದಿರುವ ಬೀನ್ಸ್ ಗಳನ್ನು ವಾರದಲ್ಲಿ ಎರಡು ಸಲ ಸೇವನೆ ಮಾಡಿದರೆ ತೂಕ ಕಳೆದುಕೊಳ್ಳಬಹುದು. ಬೇಯಿಸಿದ ಕಾಳುಗಳು ತೂಕ ಕಳೆದುಕೊಳ್ಳಲು ಮತ್ತಷ್ಟು ಒಳ್ಳೆಯದು.

ಬ್ರೂಕೋಲಿ
ವಿಟಮಿನ್ ಕೆ ಯನ್ನು ಹೊಂದಿರುವ ಬ್ರಾಕೋಲಿಯನ್ನು ಹೆಚ್ಚಿನವರು ಇಷ್ಟಪಡುವುದಿಲ್ಲ. ಆದರೆ ತೂಕ ಕಳೆದುಕೊಳ್ಳಲು ಇದು ಆರೋಗ್ಯಕರ ಮತ್ತು ವೇಗದ ತರಕಾರಿಯಾಗಿದೆ. ಬ್ರಾಕೋಲಿ ಚಯಾಪಚಯಾ ಕ್ರಿಯೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಕ್ಯಾನ್ಸರ್ ನ್ನು ದೂರವಿರಿಸುತ್ತದೆ.

ಬಸಳೆ
ಇದು ಪ್ರೋಟೀನ್ ಮತ್ತು ವಿಟಮಿನ್ ನಿಂದ ಸಮೃದ್ಧವಾಗಿರುವ ತರಕಾರಿ. ಇದರಲ್ಲಿ ಕಡಿಮೆ ಕ್ಯಾಲರಿ ಮತ್ತು ಉನ್ನತ ಮಟ್ಟದ ನಾರಿನಾಂಶ ಮತ್ತು ಶಕ್ತಿ ಒಳಗೊಂಡಿದೆ. ಇದು ತೂಕ ಕಳೆದುಕೊಳ್ಳಲು ಪ್ರಮುಖ ಆಹಾರವಾಗಿದೆ.

ಕ್ಯಾಬೇಜ್
ನಿಮಗೆ ಆದಷ್ಟು ಬೇಗೆ ತೂಕ ಕಳೆದುಕೊಳ್ಳಬೇಕು ಎಂದಿದೆಯಾ? ಹಾಗಾದರೆ ನೀವು ವಾರದಲ್ಲಿ ಎರಡು ಬಾರಿ ಕ್ಯಾಬೇಜ್ ಸೂಪ್ ಮಾಡಿ ಕುಡಿಯಿರಿ. ಈ ಸೂಪ್ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು ಮತ್ತು ಆರೋಗ್ಯವನ್ನು ಕಾಪಾಡುವುದು. ತೂಕವಿಳಿಸಬೇಕೆ? ಎಲೆಕೋಸು ಸೂಪ್ ಕುಡಿಯಿರಿ



Click it and Unblock the Notifications
