Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಧ್ಯಯನ ವರದಿ: ನ್ಯುಮೋನಿಯಾ ತಡೆಗೆ ದಂತಪರೀಕ್ಷೆ ಅತ್ಯಗತ್ಯ!
ವೈದ್ಯಕೀಯ ಅಧ್ಯಯನಗಳ ಪ್ರಕಾರ ನಿಯಮಿತವಾಗಿ ದಂತ ಪರೀಕ್ಷೆಯನ್ನು ಮಾಡಿಸಿಕೊಂಡವರು ಹಲ್ಲುಗಳ ಆರೋಗ್ಯವನ್ನು ಪಡೆದುಕೊಳ್ಳುವುದರ ಜೊತೆಗೆ ನ್ಯುಮೋನಿಯಾಗೆ ಕಾರಣವಾಗಿರುವ ಬ್ಯಾಕ್ಟೀರಿಯಾಗಳನ್ನು ತೊಡೆದು ಹಾಕಬಹುದಾಗಿದೆಯಂತೆ....
ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿರುವ ಹೊಸದೊಂದು ಮಾಹಿತಿ ಖಂಡಿತ ನಿಮ್ಮನ್ನು ಆಶ್ವರ್ಯಚಕಿತಗೊಳಿಸಲಿದೆ. ಹೌದು ಹೊಸದಾದ ವೈದ್ಯಕೀಯ ಅಧ್ಯಯನಗಳ ಪ್ರಕಾರ ನಿಯಮಿತವಾಗಿ ದಂತ ಪರೀಕ್ಷೆಯನ್ನು ಮಾಡಿಸಿಕೊಂಡವರು ಹಲ್ಲುಗಳ ಆರೋಗ್ಯವನ್ನು ಪಡೆದುಕೊಳ್ಳುವುದರ ಜೊತೆಗೆ ಉತ್ತಮ ಶ್ವಾಸಕೋಶಗಳನ್ನು ಹೊಂದಬಹುದಾಗಿದೆಯಂತೆ.

ವರದಿಗಳು ತಿಳಿಸಿರುವಂತೆ, ದಂತ ವೈದ್ಯರು ನಿಮ್ಮ ಹಲ್ಲುಗಳನ್ನು ನಿಯಮಿತವಾಗಿ ಪರಿಶೀಲನೆ ಮಾಡುವ ಸಮಯದಲ್ಲಿ ನಿಮ್ಮ ಶ್ವಾಸಕೋಶಗಳನ್ನು ಆವರಿಸುವ ನ್ಯುಮೋನಿಯಾಗೆ ಕಾರಣವಾಗಿರುವ ಬ್ಯಾಕ್ಟೀರಿಯಾಗಳನ್ನು ತೊಡೆದು ಹಾಕಬಹುದಾಗಿದೆ. ದಂತಕುಳಿಯ ಸಮಸ್ಯೆ ಇದ್ದಾಗ, ಹಲ್ಲುಗಳ ಸ್ವಚ್ಛತೆಯ ಸಮಯದಲ್ಲಿ ನೀವು ಬಾಯಿಯನ್ನು ದೊಡ್ಡದಾಗಿ ತೆರೆಯುತ್ತೀರಿ ಮತ್ತು ಇದು ನಿಮಗೆ ವೇದನೆಯನ್ನು ಉಂಟುಮಾಡುತ್ತದೆ.
ಆದರೆ ಈ ವೇದನೆ ಕೂಡ ನಿಮ್ಮ ಶ್ವಾಸಕೋಶಗಳನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಹಿರಿಯರು ಮತ್ತು ಮಕ್ಕಳಲ್ಲಿ ಕಂಡುಬರುವ ಗಂಭೀರ ಶ್ವಾಸಕೋಶ ಸಮಸ್ಯೆಗಳಿಗೆ ಇದು ಪರಿಹಾರಕವಾಗಿದೆ. ದಂತವೈದ್ಯರಲ್ಲಿಗೆ ಹೋಗದೇ ಇರುವ 86 ಶೇಕಡಾ ಜನರು ಶ್ವಾಸಕೋಶ ಸಂಬಂಧಿ ರೋಗಗಳಿಗೆ ತುತ್ತಾಗಲಿದ್ದು, ವರ್ಷಕ್ಕೆ ಎರಡು ಬಾರಿ ದಂತಪರೀಕ್ಷೆಯನ್ನು ಮಾಡಿಸಿಕೊಂಡವರಲ್ಲಿ ಈ ಬಗೆಯ ಸಮಸ್ಯೆಗಳು ಕಂಡುಬಂದಿಲ್ಲ. ದಂತಕುಳಿ ಸಮಸ್ಯೆ: ತ್ವರಿತವಾಗಿ ಶಮನಗೊಳಿಸುವ ಮನೆಮದ್ದುಗಳು
ಈ ಅಧ್ಯಯನವನ್ನು ಕೈಗೊಂಡ ಪರೀಕ್ಷಕರು ಹೇಳಿರುವಂತೆ ಬಾಯಿಯ ಆರೋಗ್ಯ ಮತ್ತು ನ್ಯುಮೋನಿಯಾಗೆ ಸಂಬಂಧವಿದೆ ಎಂದಾಗಿದೆ. ಬಾಯಿಯನ್ನು ಬ್ಯಾಕ್ಟೀರಿಯಾ ರಹಿತವಾಗಿ ಮಾಡದೇ ಇದ್ದಲ್ಲಿ, ಇದು ನ್ಯುಮೋನಿಯಾದಂತಹ ಶ್ವಾಸಕೋಶಿ ಸಂಬಂಧಿ ರೋಗಗಳಿಗೆ ಕಾರಣವಾಗಲಿದೆ.
ಆದ್ದರಿಂದ ಶುದ್ಧವಾದ ಬಾಯಿಯ ಸ್ವಚ್ಛತೆಯನ್ನು ಮಾಡಬೇಕು ಇದರಿಂದ ಬ್ಯಾಕ್ಟೀರಿಯಾ ಉತ್ಪಾದನೆಯನ್ನು ತಡೆಯಬಹುದು ಎಂದಾಗಿದೆ. ಬಾಯಿಯ ಸ್ವಚ್ಛತೆ ಉತ್ತಮವಾಗಿದ್ದರೆ ಮಾತ್ರ ಸಂಪೂರ್ಣ ಆರೋಗ್ಯವನ್ನು ಪಡೆಯಬಹುದಾಗಿದೆ.
ಗಂಟಲು ಮತ್ತು ಬಾಯಿಯಿಂದ ಮಾಡುವ ಉಸಿರಾಟದಲ್ಲಿ ಏರುಪೇರುಗಳುಂಟಾದಾಗ ಹೃದಯದಲ್ಲಿ ಬ್ಯಾಕ್ಟೀರಿಯಾ ಇನ್ಫೆಕ್ಶನ್ಕಂ ಡುಬರುತ್ತದೆ. ಇದರಿಂದ ಶ್ವಾಸಕೋಶಗಳಿಗೆ ತೊಂದರೆಯುಂಟಾಗಲಿದೆ. ದಂತಕುಳಿ ಸಮಸ್ಯೆ ಇದ್ದವರಿಗೆ ನ್ಯುಮೋನಿಯಾ ಅಭಿವೃದ್ಧಿಯಾದಂತೆ ಎಂದಾಗಿದೆ.
ಇದು ಒಬ್ಬರಿಂದ ಇನ್ನೊಬ್ಬರಿಗೆ ಬಾಯಿ ಮತ್ತು ಮೂಗಿನ ಮೂಲಕ ಉಸಿರಾಡುವಾಗ ಹರಡಲಿದ್ದು, ಶ್ವಾಸಕೋಶಕ್ಕೆ ಹಾನಿಯನ್ನು ಮಾಡಲಿದೆ ಎಂಬುದಾಗಿ ವೈದ್ಯರುಗಳು ಎಚ್ಚರಿಸಿದ್ದಾರೆ.
ಜಾಗರೂಕತೆ ಹೇಗೆ?
ನಿಯಮಿತವಾಗಿ ದಂತಪರೀಕ್ಷೆ ಮಾಡಿಸಿಕೊಳ್ಳುವುದು ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಣೆ ಮಾಡಲಿದೆ
ಫ್ಲೋರೈಟ್ ಟೂತ್ಪೇಸ್ಟ್ನಲ್ಲಿ ದಿನಕ್ಕೆರಡು ಬಾರಿ ಹಲ್ಲುಜ್ಜಿ. ಹಲ್ಲುಗಳ ಸಂದಿ ಮತ್ತು ಒಳಭಾಗವನ್ನು ಶುದ್ಧ ಮಾಡಿ. ಆಹಾರ ಸೇವಿಸಿದ ಪ್ರತೀಬಾರಿ ಬಾಯಿ ಮುಕ್ಕಳಿಸುವುದನ್ನು ಮರೆಯದಿರಿ. ಅದರಲ್ಲೂ ಸಿಹಿ ತಿಂದ ನಂತರ ಬಾಯಿ ಮುಕ್ಕಳಿಸಲು ಮರೆಯದಿರಿ. ನ್ಯುಮೋನಿಯಾವನ್ನು ಮೊಳಕೆಯಲ್ಲೇ ಚಿವುಟಿ ಹಾಕಲು ನಿಯಮಿತ ದಂತವೈದ್ಯ ಪರೀಕ್ಷೆ ಸಹಕಾರಿಯಾಗಲಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


