Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನೆನಪಿಡಿ- ವಾಂತಿಯಾದ ಬಳಿಕ ಈ ಆಹಾರಗಳಿಂದ ದೂರವಿರಿ
ಅತ್ಯಂತ ಅಹಿತಕರ ಅನುಭವ ಎಂದರೆ ವಾಕರಿಕೆ ಮತ್ತು ವಾಂತಿಯ ಬಳಿಕ ಆಗುವ ಅನುಭವ. ಸಾಮಾನ್ಯವಾಗಿ ಹೊಟ್ಟೆಯಲ್ಲಿ ಆಮ್ಲೀಯತೆಯುಂಟಾದರೆ ಎದುರಾಗುವ ಎದೆಯುರಿ ತೀಕ್ಷ್ಣವಾದ ಉರಿಯನ್ನು ಉಂಟುಮಾಡುತ್ತದೆ.
ವಾಕರಿಕೆಯಾಗಲು ಪರಸ್ಪರ ಹೊಂದಿಕೊಳ್ಳದ ಆಹಾರಗಳನ್ನು ಸೇವಿಸುವುದು ಪ್ರಮುಖ ಕಾರಣವಾಗಿದೆ. ಏಕೆಂದರೆ ಕೆಲವು ಆಹಾರಗಳ ಸಂಯೋಜನೆ ಹೊಟ್ಟೆಯಲ್ಲಿ ಆಮ್ಲೀಯತೆ ಅಥವಾ ಕ್ಷಾರೀಯತೆ ಹೆಚ್ಚಿಸುತ್ತದೆ.
ಇವುಗಳು ಹೊಟ್ಟೆಯಲ್ಲಿಯೇ ಕೆಲವಾರು ಅನಿಲಗಳನ್ನು ನೊರೆಯಂತೆ ಉತ್ಪತ್ತಿ ಮಾಡುತ್ತದೆ. ಈ ನೊರೆ ಹೊಟ್ಟೆಯಿಂದ ಹೊರಹೋಗುವ ಪ್ರಯತ್ನದಲ್ಲಿ ಅನ್ನನಾಳಕ್ಕೆ ಪ್ರಚೋದನೆ ನೀಡುತ್ತದೆ. ಇದೇ ವಾಕರಿಕೆ.
ಇದು ಹೆಚ್ಚುತ್ತಿದ್ದಂತೆಯೇ ಅನ್ನನಾಳದ ಒತ್ತಡ ಮೀರಿ ಪಿಚಕಾರಿಯಂತೆ ಬಾಯಿಯ ಮೂಲಕ ಹೊರಬರುತ್ತದೆ. ಇದೇ ವಾಂತಿ. ಆಹಾರ ತಜ್ಞರು ಈ ಸ್ಥಿತಿಗೆ ಕೆಲವಾರು ಆಹಾರಗಳ ಸಂಯೋಜನೆಯನ್ನು ಕಂಡುಕೊಂಡಿದ್ದು ಇವುಗಳನ್ನು ಅನುಸರಿಸದಿರಲು ಸಲಹೆ ನೀಡುತ್ತಾರೆ. ಬನ್ನಿ, ಈ ವಿಧಾನಗಳನ್ನು ಮುಂದೆ ಓದಿ.....

ಅಧಿಕ ಪ್ರಮಾಣದ ನೀರು
ವಾಂತಿಯಾದ ಬಳಿಕ ನೀರು ಕುಡಿಯುವಂತೆ ಹೆಚ್ಚಿನವರು ಸಲಹೆ ನೀಡುತ್ತಾರೆ. ಆದರೆ ವಾಂತಿಯ ಬಳಿಕ ಕೊಂಚವೇ ನೀರು ಕುಡಿದರೆ ಸಾಕು. ಹೆಚ್ಚಿನ ನೀರು ಕುಡಿದರೆ ಹೊಟ್ಟೆಯಲ್ಲಿ ಉಳಿದಿದ್ದ ಅಜೀರ್ಣವಾದ ಆಹಾರ ಮತ್ತೊಮ್ಮೆ ಹೊಟ್ಟೆ ತುಂಬಿ ವಾಂತಿಯಾಗುವ ಸಂಭವವಿರುತ್ತದೆ.

ಅಧಿಕ ಪ್ರಮಾಣದ ನೀರು
ಆದ್ದರಿಂದ ಅರ್ಧ ಲೋಟಕ್ಕೂ ಕಡಿಮೆ ನೀರು ಅಥವಾ ಸಾಧ್ಯವಾದರೆ ಚಿಕ್ಕ ಐಸ್ ತುಂಡೊಂದನ್ನು ಬಾಯಿಯಲ್ಲಿಟ್ಟು ಕರಗಿದ ನೀರನ್ನು ಕುಡಿಯುವುದೇ ಉತ್ತಮ.

ಹಸಿ ತರಕಾರಿ ಅಥವಾ ಸ್ಮೂಥಿಗಳು
ವಾಂತಿಯ ಬಳಿಕ ನಾರಿನ ಪ್ರಮಾಣ ಹೆಚ್ಚಿರುವ ತರಕಾರಿಗಳು ಅಥವಾ ಇವುಗಳಿಂದ ತಯಾರಿಸಿದ ಸ್ಮೂಥಿ ದ್ರವಗಳನ್ನು ಕುಡಿಯುವ ಮೂಲಕ ಇದು ಮತ್ತೊಮ್ಮೆ ಹೊಟ್ಟೆಯನ್ನು ಪ್ರಚೋದಿಸಿ ವಾಂತಿಗೆ ಕಾರಣವಾಗಬಹುದು.

ಟೀ ಅಥವಾ ಕಾಫಿ
ವಾಂತಿಯಾದ ಬಳಿಕ ಟೀ ಕಾಫಿಗಳನ್ನು ಸರ್ವಥಾ ಸೇವಿಸಬಾರದು. ಅಷ್ಟೇ ಅಲ್ಲ, ವಾಂತಿಯಾದ ದಿನವಿಡೀ ಕಾಫಿ ಟೀಗಳನ್ನು ಸೇವಿಸದೇ ಇರುವುದೇ ಉತ್ತಮ. ಏಕೆಂದರೆ ಕಾಫಿ ಮತ್ತು ಟೀಯಲ್ಲಿರುವ ಕೆಫೀನ್ ಮತ್ತೊಮ್ಮೆ ಹೊಟ್ಟೆಯಲ್ಲಿ ಪ್ರಚೋದನೆ ನೀಡುವ ಸಾಧ್ಯತೆಯಿದೆ. ಇದು ಇನ್ನೊಮ್ಮೆ ವಾಂತಿಯಾಗಲು ಕಾರಣವಾಗುತ್ತದೆ.

ಖಾರವಾದ ಆಹಾರಗಳು
ಮಸಾಲೆ ವಸ್ತುಗಳಿರುವ ಯಾವುದೇ ಆಹಾರವನ್ನು ವಾಂತಿಯಾದ ಬಳಿಕ ಸೇವಿಸಬಾರದು. ಕೆಲವು ಘಂಟೆಗಳ ಬಳಿಕವೂ! ಏಕೆಂದರೆ ಮಸಾಲೆ ವಸ್ತುಗಳು ಸುಲಭವಾಗಿ ಜೀರ್ಣವಾಗುವುದಿಲ್ಲ ಮತ್ತು ಹೊಟ್ಟೆಯಲ್ಲಿ ಮತ್ತೊಮ್ಮೆ ಆಮ್ಲೀಯತೆಯುಂಟುಮಾಡುತ್ತದೆ. ಇದರಿಂದ ಮತ್ತೊಮ್ಮೆ ವಾಂತಿಯಾಗುವ ಸಾಧ್ಯತೆಯಿದೆ.

ಉಪ್ಪಿನ ಮತ್ತು ಎಣ್ಣೆಯ ಜ್ಜಿಡ್ಡಿನ ಆಹಾರಗಳು
ಸಾಮಾನ್ಯವಾಗಿ ವಾಂತಿಯಾದ ಕೆಲವು ಘಂಟೆಗಳ ಬಳಿಕ ಹಸಿವಾಗಲು ಪ್ರಾರಂಭವಾಗುತ್ತದೆ. ಈ ಹಸಿವು ಸಾಮಾನ್ಯವಾಗಿ ಉಪ್ಪಿನ ಅಥವಾ ಖಾರದ ವಸ್ತುಗಳನ್ನೇ ಬಯಸುತ್ತದೆ. ಆದರೆ ಈ ಆಹಾರಗಳು ಹೊಟ್ಟೆಯಲ್ಲಿ ಮತ್ತೊಮ್ಮೆ ಪ್ರಚೋದನೆ ನೀಡುತ್ತದೆ. ಇದು ವಾಕರಿಕೆಗೆ ಕಾರಣವಾಗುತ್ತದೆ. ವಾಕರಿಕೆ ಹೆಚ್ಚಾದರೆ ಮತ್ತೊಮ್ಮೆ ವಾಂತಿಯಾಗುವ ಸಂಭವವಿದೆ. ಆದ್ದರಿಂದ ಎಣ್ಣೆಯಲ್ಲಿ ಕರಿದ, ಹುರಿದ, ಉಪ್ಪಿನ ಅಂಶವಿರುವ ಯಾವುದೇ ಆಹಾರವನ್ನು ಆ ದಿನ ಸೇವಿಸದಿರುವುದೇ ಹಿತಕರ.

ಬುರುಗು ಬರುವ ಲಘು ಪಾನೀಯಗಳು
ವಾಂತಿಯಾದ ಅಳಿಕ ಬುರುಗು ಬರುವ ಯಾವುದೇ ಲಘು ಪಾನೀಯ ಕುಡಿದರೆ ಇದು ತಕ್ಷಣವೇ ಹೊಟ್ಟೆಯಲ್ಲಿ ಭಾರೀ ಪ್ರಮಾಣದ ಬುರುಗು ಮೂಡಿಸಲು ಕಾರಣವಾಗುತ್ತದೆ.

ಬುರುಗು ಬರುವ ಲಘು ಪಾನೀಯಗಳು
ಏಕೆಂದರೆ ಬುರುಗು ಮೂಡಿಸಲು ಬಳಸಲಾಗಿರುವ ಕೆಫೀನ್ ಹೊಟ್ಟೆಯ ಒಳಭಾಗವನ್ನು ಪ್ರಚೋದಿಸಿ ಇನ್ನಷ್ಟು ವಾಕರಿಕೆಗೆ ಕಾರಣವಾಗುತ್ತದೆ. ಆದ್ದರಿಂದ ಎಷ್ಟೇ ಆಕರ್ಷಣೆ ಒಡ್ಡಿದರೂ ಲಘು ಪಾನೀಯ ವಾಂತಿಯಾದ ದಿನ ಬೇಡವೇ ಬೇಡ.



Click it and Unblock the Notifications
