Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ರಿಂಗ್‌ವರ್ಮ್ ಸಮಸ್ಯೆ: ನೀವು ತಿಳಿದಿರಬೇಕಾದ ಸತ್ಯಾಸತ್ಯತೆಗಳು
ತಾಮರೆ ಎಂದು ಕನ್ನಡದಲ್ಲಿ ಕರೆಯಲ್ಪಡುವ, ಆಂಗ್ಲ ಭಾಷೆಯಲ್ಲಿ ರಿಂಗ್‌ವರ್ಮ್ ಎಂದು ಕರೆಯುವ ಈ ಚರ್ಮ ಸಮಸ್ಯೆಯು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಒಂದು ಇನ್‌ಫೆಕ್ಷನ್ ಆಗಿರುತ್ತದೆ. ಇದನ್ನು ಅಧ್ಯಯನಕಾರರು ಡರ್ಮಟೊಫೈಟೊಸಿಸ್ ಎಂದು ಕರೆಯುತ್ತಾರೆ. ಇದು ಉಗುರು, ಪಾದ, ತಲೆ ಕೂದಲಿನ ಭಾಗ ಮತ್ತು ದೇಹದ ಇತರೆ ಭಾಗದ ತ್ವಚೆಯ ಮೇಲೆ ಕಾಣಿಸಿಕೊಳ್ಳುತ್ತದೆ.

ವೃತ್ತಾಕಾರಕವಾಗಿ ಕೆಂಪಗೆ ಕಾಣಿಸುವ ಈ ಸಮಸ್ಯೆಯು ಇನ್‌ಫೆಕ್ಷನ್ ಮೂಲಕ ನಮಗೆ ಬರುತ್ತದೆ. ಇದರ ನಿವಾರಣೆಗೆ ಹೆಚ್ಚು ಅಧ್ಯಯನಗಳು ನಡೆಯುತ್ತಿವೆ. ಈ ಇನ್‍ಫೆಕ್ಷನ್ ಒಂದು ಬಗೆಯ ಫಂಗಲ್ ಇನ್‌ಫೆಕ್ಷನ್ ಆಗಿದ್ದು, ಇದನ್ನು ಸರಿಯಾಗಿ ನಿವಾರಣೆ ಮಾಡದಿದ್ದಲ್ಲಿ, ಇದು ದೈಹಿಕ ಮತ್ತು ಮನೋವೈಜ್ಞಾನಿಕ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಬನ್ನಿ ರಿಂಗ್‌ವರ್ಮ್ ಇನ್‍ಫೆಕ್ಷನ್ ಮನುಷ್ಯರಲ್ಲಿ ಹೇಗೆ ಕಾಣಿಸಿಕೊಳ್ಳುತ್ತದೆ ನೋಡೋಣ. ಸಾಮಾನ್ಯವಾಗಿ ಈ ಇನ್‍ಫೆಕ್ಷನ್ ವೃತ್ತಾಕಾರವಾಗಿರುತ್ತದೆ.
ಯಾವುದೇ ವಯಸ್ಸಿನ ಭೇದವಿಲ್ಲದೆ ಇದು ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಚಿಕ್ಕ ವಯಸ್ಸಿನ ಮಕ್ಕಳಿಗೆ ಮತ್ತು ಯುವ ಜನರಲ್ಲಿ ಇದು ಹೆಚ್ಚು ಕಾಣಿಸಿಕೊಳ್ಳುತ್ತದೆ. ತುರಿಕೆಯು ಇದರಿಂದ ಉಂಟಾಗುವ ಪ್ರಮುಖ ಕಿರಿಕಿರಿಯಾಗಿರುತ್ತದೆ. ಸರಿಯಾಗಿ ಆರೈಕೆ ಮಾಡದಿದ್ದಲ್ಲಿ ಇದು ವ್ಯಾಪಿಸುವ ಸಂಭವನೀಯತೆ ಹೆಚ್ಚಾಗಿರುತ್ತದೆ. ಅಂದ ಹಾಗೆ ವೃತ್ತಾಕಾರವಾದ ಕಲೆಗಳೇನಾದರು ತ್ವಚೆಯ ಮೇಲೆ ಕಂಡು ಬಂದರೆ ಅದು ರಿಂಗ್‌ವರ್ಮ್ ಆಗಿರುತ್ತದೆ ಎಂದು ಭಾವಿಸುವುದು ತಪ್ಪಾಗುತ್ತದೆ.
ತ್ವಚೆಯ ಫಂಗೈ ಈ ಸಮಸ್ಯೆಗೆ ಮೂಲ ಕಾರಣವಾಗಿರುತ್ತದೆ. ಇದು ಯೀಸ್ಟ್, ಮೋಲ್ಡ್‌ಗಳು ಮತ್ತು ಫಂಗೈ ನಿಂದ ಬರುತ್ತದೆ. ಇನ್ನೂ ಕುತೂಹಲಕಾರಿ ಸಂಗತಿಯೆಂದರೆ ಈ ರಿಂಗ್‌ವರ್ಮ್‌ಕಾರಕ ಫಂಗೈ ತ್ವಚೆಯ ನಿರ್ಜೀವ ಪದರದ ಕೆಳಗೆ ಅಡಗಿ ಕುಳಿತಿರುತ್ತದೆ. ಈ ಭಾಗವು ಕೆರಟಿನ್ ಪ್ರೋಟಿನ್ ಅನ್ನು ಹೊಂದಿರುತ್ತದೆ. ಈ ತ್ವಚೆಯ ಫಂಗೈ ಮನುಷ್ಯರಿಂದ ಮನುಷ್ಯರಿಗೆ, ಪ್ರಾಣಿಗಳಿಂದ ಪ್ರಾಣಿಗಳಿಗೆ ವರ್ಗಾವಣೆಗೊಳ್ಳುತ್ತದೆ. ಆದ್ದರಿಂಡ ಸಮಸ್ಯೆ ಇರುವ ವ್ಯಕ್ತಿ ಮತ್ತು ಪ್ರಾಣಿಗಳಿಂದ ದೂರವಿರಿ.
ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳುವುದು ಸುಲಭ. ಇದಕ್ಕಾಗಿ ಔಷಧಿ ಅಂಗಡಿಗಳಲ್ಲಿ ಮತ್ತು ಆಸ್ಪತ್ರೆಗಳಲ್ಲಿ ಒಂದು ಆಂಟಿ-ಫಂಗಲ್ ಮುಲಾಮನ್ನು ನೀಡುತ್ತಾರೆ. ಇದನ್ನು ಬಳಸಿದರೆ ಈ ಸಮಸ್ಯೆ ದೂರವಾಗುತ್ತದೆ. ಈ ಸಮಸ್ಯೆಯು ಗುಣಮುಖವಾದ ಮೇಲೂ ಮತ್ತೆ ಮತ್ತೆ ಕಾಣಿಸಿಕೊಳ್ಳಬಹುದು. ಅದಕ್ಕಾಗಿ ಫಂಗೈ ಇರುವ ತ್ವಚೆಯ ಜೊತೆಗೆ ಸಂಪರ್ಕವನ್ನು ಹೊಂದುವುದನ್ನು ಕಡಿಮೆ ಮಾಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications



