For Quick Alerts
ALLOW NOTIFICATIONS  
For Daily Alerts

ಅತಿಯಾದ ಕೆಂಪು ಮಾಂಸದ ಸೇವನೆ-ಅಪಾಯ ಕಟ್ಟಿಟ್ಟ ಬುತ್ತಿ!

By Vani Naik
|

ಪ್ರಾಣಿಗಳಿಂದ ತಯಾರಾದ ಸಂಸ್ಕರಿಸಿದ ಅಥವಾ ಸಂಸ್ಕರಿಸದ ಮಾಂಸ, ಮೊಟ್ಟೆಯ ಅತಿ ಹೆಚ್ಚು ಸೇವನೆ (ಪ್ರೋಟೀನ್), ಅದರಲ್ಲೂ ಅನಾರೋಗ್ಯಕರ ಜೀವನ ನಡೆಸುವವರಿಗೆ ಅಂದರೆ ಬೊಜ್ಜು ಅಥವಾ ಕಡಿಮೆ ತೂಕ ಇರುವವರಿಗೆ ಬೇಗ ಮರಣ ಹೊಂದುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಇದು ಅಧ್ಯಯನದಿಂದ ತಿಳಿದು ಬಂದಿದೆ. ಹಾಗೆಯೇ ಆರೋಗ್ಯಕರ ಜೀವನ ನಡೆಸುವವರಲ್ಲಿ ಈ ಸಮಸ್ಯೆ ಅಷ್ಟಾಗಿ ಕಂಡು ಬಂದಿಲ್ಲ. ಬ್ರೆಡ್, ಧಾನ್ಯಗಳು, ಪಾಸ್ತಾ, ಬೀನ್ಸ್, ಬೀಜಗಳು, ಕಾಳುಗಳು ಇವೆಲ್ಲವೂ, ನಮಗೆ ಸಸ್ಯಗಳಿಂದ ಸಿಗುವ ಪ್ರೋಟೀನ್ ಗಳು. ಇವುಗಳ ಸೇವನೆಯಿಂದ, ಬೇಗ ಮರಣ ಹೊಂದುವ ಸಾಧ್ಯತೆ ಕಡಿಮೆ ಇರುತ್ತದೆ. ಹಾಗೆಯೇ ಪ್ರಾಣಿಗಳಿಂದ ತಯಾರಾದ ಮಾಂಸ, ಮೊಟ್ಟೆಯಲ್ಲಿರುವ, ಹೈನು ಉತ್ಪನ್ನಗಳಲ್ಲಿರುವ ಪ್ರೋಟೀನ್ಗಳ ಸೇವನೆಯಿಂದ ಬೇಗ ಮರಣ ಹೊಂದುವ ಸಾಧ್ಯತೆ ಹೆಚ್ಚಿರುತ್ತದೆ.

Excess Of Red Meat, Eggs May Up Mortality Risk

ಇದರ ಜೊತೆಗೆ, ಮದ್ಯ ಸೇವನೆ ಮಾಡುವವರು, ಧೂಮಪಾನ ಮಾಡುವವರು, ದೈಹಿಕ ಚಟುವಟಿಕೆ ಇಲ್ಲದೇ ಜೀವನ ನಡೆಸುತ್ತಿರುವವರಲ್ಲಿಯೂ ಕೂಡ ಬೇಗ ಮರಣ ಹೊಂದುವ ಪ್ರಮಾಣ ಹೆಚ್ಚಾಗಿ ಕಂಡುಬಂದಿತ್ತು ಎಂದು ಹೇಳಲಾಗಿದೆ.

ಮೆಸಾಚುಸೆಟ್ ಜನರಲ್ ಆಸ್ಪತ್ರೆಯ ಸಂಶೋಧನಾ ವಿದ್ಯಾರ್ಥಿ ಮಿಂಗ್ಯಾಂಗ್ ಸಾಂಗ್ ಅವರು, ಪ್ರೋಟೀನ್ ಒಳಗೊಂಡ ಸಮತೋಲನ ಆಹಾರ ಪದ್ಧತಿಯನ್ನು ಪಾಲಿಸಿದರೆ ಧೀರ್ಘ ಕಾಲದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಕಂಡುಕೊಳ್ಳಲಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಸಾರ್ವಜನಿಕವಾಗಿ ಆರೋಗ್ಯದ ಮೇಲಾಗುವ ಪರಿಣಾಮಗಳನ್ನೂ ಸಹ ಸಂಶೋಧನೆಗಳು ತಿಳಿಸುವುದರಿಂದ, ಈ ಮುಖೇನ ಇನ್ನಷ್ಟು ಪ್ರೋಟೀನ್ ಒಳಗೊಂಡ ಉತ್ತಮವಾದ ಆಹಾರ ಪದ್ಧತಿಯನ್ನು ಸೂಚಿಸಬಹುದು ಹಾಗು ಕೇವಲ ಪ್ರೋಟೀನ್ ಸೇವನೆಯಷ್ಟೇ ಮುಖ್ಯವಾಗಿರದೇ, ಯಾವ ಆಹಾರದ ಮೂಲದಿಂದ ದೊರೆಯುತ್ತದೆ ಅದೂ ಕೂಡ ಧೀರ್ಘ ಕಾಲದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮುಖ್ಯ ಪಾತ್ರ ವಹಿಸುತ್ತದೆ ಎಂದು ಸಾಂಗ್ ಹೇಳಿದ್ದಾರೆ.

ಸಂಶೋಧನೆಗಳ ಪ್ರಕಾರ ಜನರು ಪ್ರಾಣಿಮೂಲಗಳಿಂದ ಸಿಗುವ ಪ್ರೋಟೀನ್ಗಳಿಗಿಂತ ಸಸ್ಯಗಳ ಮೂಲಗಳಿಂದ ಸಿಗುವ ಪ್ರೋಟೀನ್ ಗಳನ್ನೇ ಹೆಚ್ಚು ಬಳಸಬೇಕು ಎಂದು ಹೇಳಲಾಗಿದೆ. ಒಂದು ವೇಳೆ ಪ್ರಾಣಿಮೂಲಗಳ ಆಹಾರವನ್ನೇ ಬಳಸಲು ಇಚ್ಛಿಸಿದಾಗ ಕೆಂಪು ಮಾಂಸಕ್ಕಿಂತ, ಮೀನು ಮತ್ತು ಚಿಕನ್ ಅನ್ನು ಬಳಸುವುದು ಹೆಚ್ಚು ಸೂಕ್ತ ಎಂದು ಸಂಶೋಧನೆಗಳು ಸೂಚಿಸುತ್ತದೆ.

ಈ ಅಧ್ಯಯನದಲ್ಲಿ, 1980 ರಿಂದ ಭಾಗವಹಿಸಿದ್ದ ಸುಮಾರು 1,70,000 ಜನರನ್ನು ಪರಿಶೀಲಿಸಲಾಯಿತು ಎಂದು ಜಾಮಾ ಇಂಟರ್ನಲ್ ಮೆಡಿಸಿನ್ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. ಈ ಅವಧಿಯಲ್ಲಿ ಭಾಗವಹಿಸಿದವರ ಪೈಕಿ ಸುಮಾರು 36,000ಕ್ಕೂ ಹೆಚ್ಚು ಸಾವುಗಳು ದಾಖಲಾಗಿತ್ತು. ಅದರಲ್ಲಿ ಹೃದ್ರೋಗದಿಂದ 9000 ಜನ, ಕ್ಯಾನ್ಸರ್ ಯಿಂದ 13,000 ಜನ ಹಾಗು ಇತರ ಕಾರಣಗಳಿಂದ 14,000 ಜನರು ಮೃತಪಟ್ಟಿದ್ದರು.

ಐಎಎನ್ಎಸ್ ವರದಿ

English summary

Excess Of Red Meat, Eggs May Up Mortality Risk

A higher intake of proteins from animal sources like processed and unprocessed red meats, eggs, etc., can lead to an increase in mortality rates in people living an unhealthy lifestyle and who are obese or underweight, says a study.
Story first published: Saturday, August 6, 2016, 10:27 [IST]
X
Desktop Bottom Promotion