For Quick Alerts
ALLOW NOTIFICATIONS  
For Daily Alerts

ಬದನೆಕಾಯಿ ಇಷ್ಟಪಡದೇ ಇದ್ದವರು ಒಮ್ಮೆ ಈ ಲೇಖನ ತಪ್ಪದೇ ಓದಿ...

ಬದನೆಯೆಂದರೆ ನಂಜು ಮತ್ತು ಅದರ ಸೇವನೆಯೆಂದರೆ ಮೂಗು ಮುರಿಯುವವರೇ ಹೆಚ್ಚು. ಅದಾಗ್ಯೂ ಪೃಕೃತಿಯ ಅದ್ಭುತ ಕೊಡುಗೆಗಳಲ್ಲಿ ಬದನೆ ಮಾತ್ರ ನಮ್ಮ ಆರೋಗ್ಯಕ್ಕೆ ಸಂಜೀವಿನಿಯಿದ್ದಂತೆ. ಬನ್ನಿ ಅದು ಹೇಗೆ ಎಂಬುದನ್ನು ಇಂದಿಲ್ಲಿ ಕಂಡುಕೊಳ್ಳೋಣ...

|

ನಮ್ಮ ದೇಹ ಒಂದು ಆಲಯವಿದ್ದಂತೆ. ಆಲಯವನ್ನು ನಿತ್ಯವೂ ಶುಚಿಯಾಗಿರಿಸಿಕೊಂಡಲ್ಲಿ ನಮ್ಮ ದೈನಂದಿನ ಚಟುವಟಿಕೆಯಲ್ಲಿ ಯಾವುದೇ ತೊಡಕುಗಳು ಉಂಟಾಗುವುದಿಲ್ಲ. ಇಲ್ಲಿ ಶುಚಿ ಎಂದರೆ ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದಾಗಿದೆ. ಬೇಕಾಬಿಟ್ಟಿಯಾಗಿ ಆಹಾರವನ್ನು ಸೇವಿಸದೇ ನಮಗೆ ಏನು ಅವಶ್ಯಕವೋ ಅದನ್ನು ಮಾತ್ರವೇ ಸೇವಿಸಿ ದೇಹದ ಸೌಂದರ್ಯದ ಜೊತೆಗೆ ಕುಂದುಕೊರತೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ.

ನಮ್ಮ ಹಿರಿಯರು ಪರಿಸರದಿಂದ ದೊರೆತ ಉತ್ಪನ್ನಗಳಿಂದಲೇ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ ಅವರ ಆರೋಗ್ಯದ ಗುಟ್ಟು ಸಸ್ಯಜನ್ಯ ವಸ್ತುಗಳಾಗಿವೆ ಎಂದರೆ ಖಂಡಿತ ನೀವು ನಂಬಲಾರಿರಿ. ಮನೆಯ ಹಿತ್ತಲಿನಲ್ಲಿಯೇ ಬೆಳೆದ ತರಕಾರಿಗಳ ಸೇವನೆ, ಹೊಲದಲ್ಲಿ ಬೆಳೆದ ಅಕ್ಕಿಯಿಂದ ಊಟ, ಹೀಗೆ ಅವರುಗಳು ಹೊರಗಿನ ವಸ್ತುಗಳನ್ನು ಸೇವಿಸುತ್ತಿದ್ದುದೇ ಅತಿ ಕಡಿಮೆ ಎಂದೆನ್ನಬಹುದು.

ಆದರೆ ಇಂದಿನ ಆರೋಗ್ಯ ಮತ್ತು ಆಹಾರ ವ್ಯವಸ್ಥೆ ಹದಗೆಡುತ್ತಿದ್ದರೂ ಬಹುತೇಕ ಜನರು ಇಂದು ತಮ್ಮ ದೇಹದ ರೋಗ ರುಜಿನಗಳಿಗೆ ಭಯಗೊಂಡು ಸಸ್ಯಗಳು ಮತ್ತು ತರಕಾರಿಗಳ ಸೇವನೆಯನ್ನೇ ಮಾಡುತ್ತಿದ್ದಾರೆ. ಇಂದಿನ ಲೇಖನದಲ್ಲಿ ಕೂಡ ನಿಮ್ಮ ಉತ್ತಮ ಡಯೆಟ್‌ಗೆ ಸಹಕಾರಿ ಎಂದೆನಿಸಿರುವ ಅದ್ಭುತ ತರಕಾರಿಯ ಪ್ರಯೋಜನಗಳನ್ನು ತಿಳಿಸಿಕೊಡುತ್ತಿದ್ದು ನೀವು ಇದನ್ನು ಇಷ್ಟಪಡದೇ ಇದ್ದರೂ ಈ ಲೇಖನವನ್ನು ಓದಿದ ಬಳಿಕ ಅದನ್ನು ಕಷ್ಟಪಟ್ಟಾದರೂ ತಿನ್ನುತ್ತೀರಿ ಎಂಬುದಂತೂ ನಿಜ. ಆ ತರಕಾರಿ ಬೇರಾವುದಾಗಿರದೇ ಬದನೆಯಾಗಿದೆ.

ಬದನೆಯೆಂದರೆ ನಂಜು ಮತ್ತು ಅದರ ಸೇವನೆಯೆಂದರೆ ಮೂಗು ಮುರಿಯುವವರೇ ಹೆಚ್ಚು. ಅದಾಗ್ಯೂ ಪೃಕೃತಿಯ ಅದ್ಭುತ ಕೊಡುಗೆಗಳಲ್ಲಿ ಬದನೆ ಮಾತ್ರ ನಮ್ಮ ಆರೋಗ್ಯಕ್ಕೆ ಸಂಜೀವಿನಿಯಿದ್ದಂತೆ. ಬನ್ನಿ ಅದು ಹೇಗೆ ಎಂಬುದನ್ನು ಇಂದಿಲ್ಲಿ ಕಂಡುಕೊಳ್ಳೋಣ...

ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ

ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ

ಹೌದು ಬದನೆಕಾಯಿ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ಇದರಲ್ಲಿ ವಿಟಮಿನ್ ಕೆ ಮತ್ತು ಜೈವಿಕ ಫ್ಲೇವನಾಯ್ಡ್ ಅಂಶಗಳಿದ್ದು ಇದು ರಕ್ತದ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ.

ಕೊಲೆಸ್ಟ್ರಾಲ್ ಪ್ರಮಾಣವನ್ನು ಇಳಿಸುತ್ತದೆ

ಕೊಲೆಸ್ಟ್ರಾಲ್ ಪ್ರಮಾಣವನ್ನು ಇಳಿಸುತ್ತದೆ

ಬದನೆಯನ್ನು ಚೆನ್ನಾಗಿ ಬೇಯಿಸಿದ್ದರೆ, ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತಗ್ಗಿಸುತ್ತದೆ. ಇದನ್ನು ಹುರಿದು ಬಳಸುವುದಕ್ಕಿಂತ ಬೇಯಿಸಿ ಸೇವಿಸುವುದೇ ಉತ್ತಮವಾಗಿದೆ.

ಜೀರ್ಣಕ್ರಿಯೆ ವ್ಯವಸ್ಥೆಯನ್ನು ಸಂರಕ್ಷಿಸುತ್ತದೆ

ಜೀರ್ಣಕ್ರಿಯೆ ವ್ಯವಸ್ಥೆಯನ್ನು ಸಂರಕ್ಷಿಸುತ್ತದೆ

ಉತ್ತಮ ಪ್ರಮಾಣದ ಫೈಬರ್ ಅನ್ನು ಬದನೆಯು ಒಳಗೊಂಡಿದ್ದು, ಜೀರ್ಣಕ್ರಿಯೆ ವ್ಯವಸ್ಥೆಯನ್ನು ಇದು ರಕ್ಷಿಸುತ್ತದೆ. ಬದನೆಯ ಅತ್ಯುತ್ತಮ ಆರೋಗ್ಯಕಾರಿ ಗುಣಗಳಲ್ಲಿ ಇದೂ ಒಂದಾಗಿದೆ.

ರಕ್ತ ಸಂಚಾರವನ್ನು ವೃದ್ಧಿಸುತ್ತದೆ

ರಕ್ತ ಸಂಚಾರವನ್ನು ವೃದ್ಧಿಸುತ್ತದೆ

ಬದನೆಯ ಇನ್ನೊಂದು ಪರಿಣಾಮಕಾರಿ ಅಂಶವೆಂದರೆ ಇದು ರಕ್ತಸಂಚಾರವನ್ನು ವೃದ್ಧಿಸುತ್ತದೆ ಎನ್ನುವುದಾಗಿದೆ. ದಿನವೂ ಬದನೆಕಾಯಿಯನ್ನು ಸೇವಿಸುವುದು ಮೆದುಳನ್ನು ಸಮೃದ್ಧಗೊಳಿಸುತ್ತದೆ ಏಕೆಂದರೆ ಇದರಲ್ಲಿ ಫೈಟೋನ್ಯೂಟ್ರಿಯೆಂಟ್ಸ್ ಇದೆ.

ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ

ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ

ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಬದನೆ ಸಹಕಾರಿಯಾಗಿದೆ. ಇದು ಮಧುಮೇಹವನ್ನು ನಿಯಂತ್ರಿಸುತ್ತದೆ, ಇದರಲ್ಲಿ ಕಡಿಮೆ ಕಾರ್ಬೋಹೈಡ್ರೇಟ್‌ಗಳಿದ್ದು, ಕರಗುವ ನಾರಿನಂಶ ಇದೆ.

ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ

ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ

ಹೆಚ್ಚಿನ ಫ್ಲೇವನಾಯ್ಡ್ ಅಂಶವನ್ನು ಇದು ಒಳಗೊಂಡಿದ್ದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

ನ್ಯೂಟ್ರಿಶಿಯನ್ ಇದೆ

ನ್ಯೂಟ್ರಿಶಿಯನ್ ಇದೆ

ಬದನೆಯಲ್ಲಿ ಉತ್ತಮ ಪ್ರಮಾಣದ ಕಬ್ಬಿಣದ ಸತ್ವವಿದ್ದು, ಇತರ ಆರೋಗ್ಯಕಾರಿ ಮಿನರಲ್‌ಗಳನ್ನು ಈ ತರಕಾರಿ ಪಡೆದುಕೊಂಡಿದೆ ಇದು ನಮ್ಮ ದೇಹಕ್ಕೆ ಅಗತ್ಯವಾದುದಾಗಿದೆ.

ತೂಕ ಇಳಿಸುತ್ತದೆ

ತೂಕ ಇಳಿಸುತ್ತದೆ

ಬದನೆಯಲ್ಲಿ ಕ್ಯಾಲೋರಿ ಇಲ್ಲವೇ ಇಲ್ಲ. ಇದು ಕೊಬ್ಬು ರಹಿತವಾಗಿದ್ದು ಫೈಬರ್ ಪ್ರಮಾಣ ಅಧಿಕವಾಗಿದೆ. ಬದನೆಯ ಪ್ರಯೋಜನಕಾರಿ ಅಂಶಗಳಲ್ಲಿ ಇದೂ ಕೂಡ ಒಂದಾಗಿದೆ.

English summary

Excellent Reasons Why You Need To Include Brinjal In Your Diet

Brinjal, also known as egg plant all over the world, should be consumed every day, according to nutritionists. This is due to its rich nutrient content, which includes vitamins, minerals as well as fibre, nasunin and chlorogenic acid. So, if you're thinking whether brinjal is good for the health or not, then here are the answers.
X
Desktop Bottom Promotion