For Quick Alerts
ALLOW NOTIFICATIONS  
For Daily Alerts

ಹೊಟ್ಟೆ ಉಬ್ಬರ-ಚಿಟಿಕೆ ಹೊಡೆದಷ್ಟು ಸುಲಭವಾಗಿ ಪರಿಹಾರ!

By Manorama Hejmadi
|

ಕೆಲವೊಮ್ಮೆ ಉಬ್ಬರಿಸಿಕೊಳ್ಳುವ ಹೊಟ್ಟೆಯು ನಮ್ಮ ದಿನಚರಿಯನ್ನೆ ಹಾಳುಗೆಡವಬಲ್ಲುದು. ನಮ್ಮ ಅಂದಿನ ವೇಳಾಪಟ್ಟಿಯಲ್ಲಿ ಮಾಡಬೇಕಾದ ಅದೆಷ್ಟೋ ಕೆಲಸಗಳನ್ನು ಮುಂದೂಡಬೇಕಾದ ಅನಿವಾರ್ಯತೆ ಬರುವುದು ಇಂತಹ ವೇಳೆಯಲ್ಲೆ. ಅಷ್ಟೊಂದು ಜಡತ್ವ , ಮಂಕುತನ ಈ ಹೊಟ್ಟೆ ಉಬ್ಬರಿಕೆಯಿಂದ.

Eat These Foods Today To De-bloat Tomorrow

ಹೊಟ್ಟೆ ಉಬ್ಬರಿಸುವುದಕ್ಕೆ ಅನೇಕ ಕಾರಣಗಳಿರಬಹುದು. ಇದರ ಸರಿಯಾದ ಜಾಡು ಸ್ಪಷ್ಟವಾಗಿ ತಿಳಿಯುವುದು ಕುಟುಂಬ ವೈದ್ಯರಿಗೆ ಮಾತ್ರ. ಆದರೂ, ಹೊಟ್ಟೆ ಉಬ್ಬರಿಕೆ ಸರ್ವೇ ಸಾಮಾನ್ಯ. ವಾಯುವಿನಿಂದ ಕೂಡಿದ ಆಹಾರವನ್ನು ಸೇವಿಸಿದ ಕೂಡಲೇ ಹೊಟ್ಟೆ ಉಬ್ಬೇರಿ ಕೊಳ್ಳುತ್ತದೆ. ದೀರ್ಘವಾದ ತೇಗು ಬಂದರೆ ಹೊಟ್ಟೆ ಸ್ವಲ್ಪ ಹಗುರಾಗುತ್ತದೆ. ಹೊಟ್ಟೆ ಉಬ್ಬರಕ್ಕೆ ತಕ್ಷಣದ ಪರಿಹಾರ

ಅವಸರದಲ್ಲಿ ಊಟ ಮಾಡಿದಾಗಲೂ ಹೀಗೆ ಆಗುವ ಸಾಧ್ಯತೆ ಇದೆ. ಮಹಿಳೆಯರ ಋತುಚಕ್ರಕ್ಕೆ ಮೊದಲ ಕೆಲವು ದಿನಗಳಲ್ಲೂ ಹೀಗಾಗುವುದಿದೆ. ಶರೀರದಲ್ಲಿ ನೀರಿನ ಅಂಶ ಕಡಿಮೆ ಆದಾಗಲೂ ಈ ಸಮಸ್ಯೆ ತಲೆದೋರುವುದು.

ಚಿಕ್ಕ ಮಕ್ಕಳಿಗೆ ಹೊಟ್ಟೆ ಉಬ್ಬರಿಸಿದಾಗ, ಓಮದ ಕಷಾಯ ಮಾಡಿ ಸೋಸಿ, ಒಂದು ಚಮಚ ಕುಡಿಸಿದರೆ, ಕೂಡಲೇ ಮಕ್ಕಳು ನಿರಾಳವಾಗುವುದನ್ನು ನೋಡುತ್ತೇವೆ. ಸ್ವಲ್ಪ ದೊಡ್ಡವರಾದರೆ, ಒಂದು ವೀಳ್ಯದ ಎಲೆಯಲ್ಲಿ ಅರ್ಧ ಚಮಚ ಓಮ ಹಾಕಿ ಮಡಸಿ, ತಿನ್ನಲು ಕೊಡಬಹುದು.

ಶುಂಠಿಯನ್ನು ನೇರವಾಗಿ ಜಗಿದು ತಿನ್ನ ಬಹುದು... ಚಹ ತಯಾರಿಸುವಾಗ ಒಂದು ಹೆಬ್ಬೆರಳಿನಷ್ಟು ದೊಡ್ಡ ಶುಂಠಿ ಯನ್ನು ಜಜ್ಜಿ ಹಾಕಿ, ಚಹ ತಯಾರಿಸಿ ಕುಡಿಯಬಹುದು.ಚಹ ಆಹ್ಲಾದಕರವಾಗಿರುತ್ತದೆ. ಅಡುಗೆಯಲ್ಲಿ ಶುಂಠಿ ಬಳಸಿಕೊಳ್ಳಲೂ ಬಹುದಾಗಿದೆ. ಶುಂಠಿ ಜೀರ್ಣಕಾರಿ ಮತ್ತು ಉಬ್ಬರಿಕೆಗೆ ರಾಮಬಾಣ!

ಹೋಟೇಲುಗಳಲ್ಲಿ ಊಟದ ಅನಂತರ ಬಿಲ್ಲಿನೊಂದಿಗೆ ನೀಡುವ ಸೋಂಪು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಹೊಟ್ಟೆ ಉಬ್ಬರಿಸದಂತೆ ತಡೆಯುತ್ತದೆ.(ಇದ್ದರೆ ನಿವಾರಿಸುತ್ತದೆ.) ಕೆಲವರು ಊಟದ ನಂತರ ಬಾಳೆಯ ಹಣ್ಣನ್ನು ತಿನ್ನದೇ ಇರುವುದೇ ಇಲ್ಲ! ಇದು ಒಳ್ಳೆಯ ಅಭ್ಯಾಸ. ಬಾಳೆಯ ಹಣ್ಣಿನಲ್ಲಿರುವ ಪೊಟ್ಯಾಶಿಯಂ ಹೊಟ್ಟೆ ಉಬ್ಬರಿಸಲು ಕಾರಣವಾಗುವ ಸೋಡಿಯಂ ಅನ್ನು ನಿಗ್ರಹಿಸುತ್ತದೆ.

ಊಟದ ಕೊನೆಗೆ ಮೊಸರನ್ನ ಸೇವನೆ ನಮ್ಮಲ್ಲಿ ವಾಡಿಕೆ. ಮೊಸರು ಜೀರ್ಣಕಾರಿ ಮತ್ತು ಹೊಟ್ಟಿ ಉಬ್ಬರಿಕೆಗೆ ವಿರೋಧಿ! ನಮ್ಮ ಮಸಾಲೆ ಅಡುಗೆಯಲ್ಲಿ ಬಳಕೆಯಾಗುವ ಕೊತ್ತಂಬರಿ, ಜೀರಿಗೆ, ಒಣ ಮೆಣಸು ಇತ್ಯಾದಿಗಳು ಸಹ ಜೀರ್ಣಕ್ರಿಯೆಗೆ ಅವಶ್ಯವಿರುವ ಕಿಣ್ವಗಳನ್ನು ಹೆಚ್ಚಿಸುವ ಮೂಲಕ ಕರುಳಿನ ಸ್ನೇಹಿತರೆನಿಸಿವೆ. ಇವು ಹೊಟ್ಟೆ ಉಬ್ಬರಿಕೆಯನ್ನು ತಡೆಗಟ್ಟುತ್ತವೆ.

ಗಮನಿಸಿ, ನಮ್ಮ ಪೂರ್ವಜರ ಸಾಂಪ್ರದಾಯಿಕ ಅಡುಗೆಗಳಲ್ಲಿ ಮೇಲೆ ತಿಳಿಸಿದ ಹೆಚ್ಚಿನೆಲ್ಲ ವಸ್ತುಗಳೂ ಬಳಕೆಯಾಗುತ್ತಿದ್ದವು. (ಈಗಿನ ಫಾಸ್ಟ್ ಫುಡ್ಡಿನಂತಲ್ಲ!) ಊಟದ ಅನಂತರ ಮೆಲ್ಲುತ್ತಿದ್ದ ತಾಂಬೂಲವೂ ಜೀರ್ಣಕ್ಕೆ ಸಹಕಾರಿ ಮತ್ತು ಅದು ಉಬ್ಬರಿಕೆಯನ್ನು ನಿಗ್ರಹಿಸುವ ಒಂದು ಪ್ರಬಲ ಅಸ್ತ್ರವಾಗಿರುತ್ತಿತ್ತು!

English summary

Eat These Foods Today To De-bloat Tomorrow

Bloating can be very annoying, but it is something that we all have to deal with at some point of time or another. Bloating is occasionally accompanied by belching. Although unpleasant, belching helps to release trapped air in the intestine, thus providing some relief from bloating. Bloating can occur for a number of reasons. The main reason behind bloating after eating though is the diet. Not spending enough time to eat meals suitably can cause bloating. Menstruation can also be a contributing factor in women suffering from bloating. Dehydration also causes bloating.
Story first published: Monday, August 1, 2016, 20:01 [IST]
X
Desktop Bottom Promotion