Latest Updates
-
ಪೊಲೀಸ್ ಕಿರುಕುಳದಿಂದ ಬೇಸತ್ತಿದ್ದೀರಾ? ಪ್ರೇಮಿಗಳಿಗೆ ರಕ್ಷಣೆ ನೀಡಲು ಹೈಕೋರ್ಟ್ ಕೊಟ್ಟಿದೆ ಬಿಗ್ ರಿಲೀಫ್! -
ಬಿಸಿಲ ಬೇಗೆಯಿಂದ ತತ್ತರಿಸಿದೆಯೇ? ನಿಮ್ಮ ಮನೆ ಮತ್ತು ಗಿಡಗಳನ್ನು ತಂಪಾಗಿರಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಸರಳ ಟಿಪ್ಸ್ ಪಾಲಿಸಿ: ಸುಡುವ ಬಿಸಿಲಿನಲ್ಲಿ ಆರೋಗ್ಯವಾಗಿರುವುದು ಹೇಗೆ? -
ಸುಡುವ ಬಿಸಿಲಿಗೆ ಸುಸ್ತಾದ್ರಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ಕೂಲಿಂಗ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿಯ ಅಬ್ಬರ: ನಿಮ್ಮ ವರ್ಕೌಟ್ ರೂಟೀನ್ ಬದಲಾಯಿಸದಿದ್ದರೆ ಕಾದಿದೆ ದೊಡ್ಡ ಅಪಾಯ! -
ಸಲಿಂಗ ಜೋಡಿಗಳಿಗೆ ಸಿಕ್ತು ಭದ್ರತೆ: ಹೈಕೋರ್ಟ್ನ ಈ ತೀರ್ಪು ನಿಮ್ಮ ಬದುಕನ್ನೇ ಬದಲಿಸಬಹುದು! -
ಸುಡುವ ಬಿಸಿಲಿಗೆ ಸುಸ್ತಾದ್ರಾ? ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ನಕಲಿ ಜಿಮ್ ಸಪ್ಲಿಮೆಂಟ್ ಬಳಸುತ್ತಿದ್ದೀರಾ? ದೆಹಲಿಯ ಈ ದಾಳಿ ನಿಮ್ಮ ಕಣ್ಣು ತೆರೆಸುತ್ತದೆ! -
40 ಡಿಗ್ರಿ ಬಿಸಿಲಲ್ಲೂ ಫ್ರೆಶ್ ಆಗಿರಬೇಕಾ? ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ! -
ಹೀಟ್ವೇವ್ ಅಲರ್ಟ್: ಬಿಸಿಲ ಬೇಗೆಯಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಅಲರ್ಜಿಯ ಸಮಸ್ಯೆಯೇ? ಚಿಂತೆ ಬಿಡಿ ಅಂಗೈಯಲ್ಲಿದೆ ಮದ್ದು!
ಭೂಮಿ ಮೇಲಿರುವ ಪ್ರತಿಯೊಬ್ಬರ ದೇಹರಚನೆಯು ಒಂದೇ ರೀತಿಯಲ್ಲಿ ಇರುವುದಿಲ್ಲ. ಒಬ್ಬರದ್ದು ಒಂದೊಂದು ರೀತಿಯಾಗಿರುತ್ತದೆ. ಅದರಲ್ಲೂ ಕೆಲವು ಮಂದಿಗೆ ತಂಪಾಗಿರುವುದನ್ನು ತಿಂದರೆ ಆಗುವುದಿಲ್ಲ, ಇನ್ನು ಕೆಲವರಿಗೆ ಧೂಳು, ಹೊಗೆ, ವಾಸನೆ, ಪ್ರಾಣಿಗಳಿಂದ ಅಲರ್ಜಿಯಾಗುತ್ತದೆ. ಅಲರ್ಜಿ ನಿವಾರಣೆಗೆ ಇಲ್ಲಿವೆ ಸೂಪರ್ ಮನೆಮದ್ದು
ಅಲರ್ಜಿಯಿಂದ ಕೆಲವರಿಗೆ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಕಷ್ಟವಾಗಬಹುದು. ಮೂಗಿನಿಂದ ನೀರು ಬರುತ್ತಲೇ ಇರುವುದು, ಚರ್ಮದಲ್ಲಿ ತುರಿಕೆ, ಉಸಿರಾಟದ ತೊಂದರೆ ಮತ್ತು ಕಿರಿಕಿರಿ. ಇದು ಸಾಮಾನ್ಯವಾಗಿರುವಂತಹ ಕೆಲವೊಂದು ಅಲರ್ಜಿಗಳು. ಆದರೆ ಇಂತಹ ಸಮಸ್ಯೆಗಳು ಖಂಡಿತವಾಗಿಯೂ ಸಹಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಮನಸ್ಸಿನ ನೆಮ್ಮದಿ ಕೆಡುವುದರಲ್ಲಿ ಸಂಶಯವೇ ಇಲ್ಲ.
ಅಲರ್ಜಿಗೆ ಹಲವಾರು ರೀತಿಯ ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಇದನ್ನು ಒಮ್ಮೆ ತೆಗೆದುಕೊಂಡರೆ ಅದಕ್ಕೆ ಹೊಂದಿಕೊಳ್ಳಬೇಕು ಮತ್ತು ದೇಹಕ್ಕೂ ಇದು ಒಳ್ಳೆಯದಲ್ಲ. ಇದಕ್ಕೆ ಬದಲಿಗೆ ನೈಸರ್ಗಿಕವಾಗಿ ಸಿಗುವ ಕೆಲವೊಂದು ವಸ್ತುಗಳಿಂದ ಅಲರ್ಜಿಯನ್ನು ಹೋಗಲಾಡಿಸಬಹುದಾಗಿದೆ. ಇದು ಹೇಗೆಂದು ತಿಳಿಯಲು ಮುಂದಕ್ಕೆ ಓದುತ್ತಾ ಹೋಗಿ. ಎಚ್ಚರ: ಮನೆಯಲ್ಲಿರುವ ಅಲರ್ಜಿ ಬಗ್ಗೆ ಅಲರ್ಟ್ ಆಗಿರಿ!

ಬೆಳ್ಳುಳ್ಳಿ
ಬೆಳ್ಳುಳ್ಳಿಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಸಮೃದ್ಧವಾಗಿದೆ. ಇದು ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಾತ್ರೆಯಂತೆ ಒಂದು ತುಂಡು ಬೆಳ್ಳುಳ್ಳಿ ತಿಂದರೆ ಇದರಿಂದ ಹಲವಾರು ರೀತಿಯ ಸೋಂಕು ನಿವಾರಣೆಯಾಗುತ್ತದೆ.

ಅರಿಶಿನ
ಅರಿಶಿನವನ್ನು ಪದಾರ್ಥಗಳಿಗೆ ಬಳಸುವುದು ಮಾತ್ರವಲ್ಲ, ಅಲರ್ಜಿಯನ್ನು ನಿವಾರಿಸುವಂತಹ ಹಲವಾರು ರೀತಿಯ ಅಂಶಗಳು ಅರಶಿನದಲ್ಲಿದೆ. ಇದರಲ್ಲಿ ಉರಿಯೂತ ಶಮನಕಾರಿ ಗುಣಗಳಿವೆ. ತಿನ್ನುವ ಆಹಾರಕ್ಕೆ ಅರಿಶಿನ ಹುಡಿಯನ್ನು ಸಿಂಪಡಿಸಿ.

ಮೊಸರು
ಇದರಲ್ಲಿನ ಒಳ್ಳೆಯ ಬ್ಯಾಕ್ಟೀರಿಯಾವು ಅಲರ್ಜಿಯನ್ನು ಕಡಿಮೆ ಮಾಡುತ್ತದೆ. ನಿಯಮಿತವಾಗಿ ಮೊಸರನ್ನು ಸೇವನೆ ಮಾಡುವವರು ಉರಿಯೂತದ ಸಮಸ್ಯೆಯನ್ನು ತಗ್ಗಿಸಬಲ್ಲದು ಎಂದು ಅಧ್ಯಯನಗಳು ಹೇಳಿವೆ.

ಮೀನು
ಮೀನಿನ ಕೊಬ್ಬು ಉರಿಯೂತವನ್ನು ಕಡಿಮೆ ಮಾಡಬಲ್ಲದು. ಅಲರ್ಜಿ ಕಡಿಮೆ ಮಾಡಿಕೊಳ್ಳಲು ವಾರದಲ್ಲಿ ಒಂದು ಸಲ ಒಮೆಗಾ 3 ಕೊಬ್ಬಿನ ಆಮ್ಲವಿರುವ ಮೀನಿನ ಸೇವನೆ ಮಾಡಿ.

ವಿಟಮಿನ್ ಸಿ
ವಿಟಮಿನ್ ಸಿ ಎರಡು ರೀತಿಯಿಂದ ನಿಮಗೆ ನೆರವಾಗಬಲ್ಲದು. ಇದು ಪ್ರತಿರೋಧಕ ಶಕ್ತಿ ಹೆಚ್ಚಿಸಿ ಕೆಲವೊಂದು ವಿಧದ ಅಲರ್ಜಿಯನ್ನು ತಡೆಯುವುದು. ಕಿತ್ತಳೆ ಅಥವಾ ನಿಂಬೆಜ್ಯೂಸ್ ನ್ನು ನಿಯಮಿತವಾಗಿ ಕುಡಿಯಿರಿ.

ಈರುಳ್ಳಿ
ಈರುಳ್ಳಿಯಲ್ಲಿರುವಂತಹ ಕ್ವೆರ್ಸಿಟಿನ್ ಎನ್ನುವ ಅಂಶವು ಅಲರ್ಜಿಯನ್ನು ತಗ್ಗಿಸುತ್ತದೆ. ಈರುಳ್ಳಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿ ಉರಿಯೂತವನ್ನು ಕಡಿಮೆ ಮಾಡುವುದು.

ವಿಟಮಿನ್ ಇ
ಆವಕಾಡೊನಂತಹ (ಬೆಣ್ಣೆ ಹಣ್ಣು) ಹಣ್ಣಿನಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ. ಇದನ್ನು ತಿನ್ನುವುದರಿಂದ ಕೆಲವೊಂದು ವಿಧದ ಅಲರ್ಜಿ ಕಡಿಮೆ ಮಾಡಿಕೊಳ್ಳಬಹುದು. ಹಸಿರು ತರಕಾರಿ ಕಾಯಿಗಳು ಮತ್ತು ಆವಕಾಡೊ ಸೇವನೆ ಮಾಡಿ.



Click it and Unblock the Notifications