Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಎಚ್ಚರ: ಮನೆಯಲ್ಲಿರುವ ಅಲರ್ಜಿ ಬಗ್ಗೆ ಅಲರ್ಟ್ ಆಗಿರಿ!
ಮನೆಯು ಸಹ ವಿವರಿಸಲಾಸಾಧ್ಯವಾದಷ್ಟು ಅಲರ್ಜಿಗಳನ್ನು ಉಂಟು ಮಾಡುತ್ತದೆ ಎಂಬ ವಿಚಾರ ನಂಬಲಾಸಾಧ್ಯವಾದರು ಸತ್ಯ. ಮನೆಯಲ್ಲಿಯೂ ಸಹ ನಿಮಗೆ ಅಲರ್ಜಿಗಳನ್ನು ಉಂಟು ಮಾಡುವ ನೂರಾರು ಅಂಶಗಳು ಇರುತ್ತವೆ. ಧೂಳಿನ ಕ್ರಿಮಿಗಳನ್ನು ನಿವಾರಿಸುವ ಮೂಲಕ ನಿಮ್ಮ ಮನೆಯನ್ನು ಅಲರ್ಜಿ ಮುಕ್ತವನ್ನಾಗಿಸುವ ಕೆಲಸ ಆರಂಭಗೊಳ್ಳುತ್ತದೆ. ಧೂಳಿನ ಕ್ರಿಮಿಗಳು ಸಾಮಾನ್ಯವಾಗಿ ಎಲ್ಲರಿಗು ಅಲರ್ಜಿಯನ್ನುಂಟು ಮಾಡುತ್ತಿರುತ್ತದೆ.
ಸಾಮಾನ್ಯವಾಗಿ ಈ ಕ್ರಿಮಿಗಳು ಧೂಳಿನಲ್ಲಿ ಬದುಕುತ್ತವೆ. ಇದನ್ನು ನೀವು ನಿಮ್ಮ ಮನೆಯ ಪ್ರತಿಮೂಲೆಯಲ್ಲಿಯೂ ಹುಡುಕಿ ತೆಗೆಯಬಹುದು. ನಂತರದ ಸ್ಥಾನದಲ್ಲಿರುವ ಅತಿ ಹೆಚ್ಚು ಅಲರ್ಜಿ ಕಾರಕ ಅಂಶವೆಂದರೆ ಅದು, ಪ್ರಾಣಿಗಳ ಚರ್ಮದ ಕೋಶಗಳು. ಇದು ತೀರಾ ಸಣ್ಣ ಪ್ರಮಾಣದಲ್ಲಿರುತ್ತವೆ, ಇದನ್ನು ಏರ್ ಕಂಡೀಶನರ್ ಕಿಂಡಿಗಳಲ್ಲಿ, ಕಂಫೋರ್ಟರ್‌ಗಳಲ್ಲಿ, ಪೀಠೋಪಕರಣಗಳಲ್ಲಿ, ಕಿಟಕಿಯ ಪರದೆಗಳಲ್ಲಿ ಮತ್ತು ಕಾರ್ಪೆಟ್‌ಗಳಲ್ಲಿ ನಾವು ನೋಡಬಹುದು. ಮನೆಯಲ್ಲಿ ಉಂಟಾಗುವ ಅಲರ್ಜಿಯನ್ನು ತಪ್ಪಿಸಲು ಸಲಹೆಗಳು
ನಿಮ್ಮ ಮನೆಯನ್ನು ನೀವು ಅಲರ್ಜಿ ಮುಕ್ತಗೊಳಿಸಲು ಆಲೋಚಿಸಿದಲ್ಲಿ, ನೀವು ಮೊದಲು ನಿಮ್ಮ ಮನೆಯ ಮೋಲ್ಡ್‌ನಿಂದ ಇದನ್ನು ಆರಂಭಿಸಬೇಕು. ಅದರಲ್ಲೂ ತೇವಾಂಶವಿರುವ ಜಾಗದಲ್ಲಿ ಅಲರ್ಜಿಕಾರಕ ಅಂಶಗಳು ಹೆಚ್ಚು ಬೆಳವಣಿಗೆಯಾಗುತ್ತವೆ. ಆದ್ದರಿಂದ ನೀರು ಅಥವಾ ಜೌಗು ಭಾಗಗಳು ನಿಮ್ಮ ಮನೆಯಲ್ಲಿ ಇರದಂತೆ ನೋಡಿಕೊಳ್ಳಿ. ಬನ್ನಿ ನಿಮ್ಮ ಮನೆಯನ್ನು ಅಲರ್ಜಿ ಮುಕ್ತವಾಗಿಸಲು ಕೋಣೆಗಳ ಪ್ರಕಾರ ನಾವು ನಿಮಗೆ ಕೆಲವೊಂದು ಸಲಹೆಗಳನ್ನು ನೀಡುತ್ತಿದ್ದೇವೆ. ಮುಂದೆ ಓದಿ

ಬೆಡ್‍ರೂಮ್
ಅಲರ್ಜಿಗಳನ್ನು ನಿವಾರಣೆ ಮಾಡಲು ಮೊದಲು ಬೆಡ್ ಕವರ್‌ಗಳಲ್ಲಿ ಧೂಳಿನ ಕ್ರಿಮಿಗಳು ಕೂರದಂತೆ ಮಾಡಿ. ಹಾಸಿಗೆ ಮೇಲೆ ಹೊದಿಸುವ ಈ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ಒಗೆಯುವ ಮೂಲಕ ನಿವಾರಿಸಿಕೊಳ್ಳಬಹುದು. ಬೆಡ್‍ರೂಮ್‍ಗಳಲ್ಲಿ ಕಾರ್ಪೆಟ್ ಬಳಸಲು ಹೋಗಬೇಡಿ. ಒಗೆಯಲು ಸುಲಭವಾದ ಬಣ್ಣಗಳು ಇದ್ದಷ್ಟು ಒಳ್ಳೆಯದು. ಸ್ವಚ್ಛ ಮಾಡಲು ಸುಲಭವಾದ ಪೀಠೋಪಕರಣಗಳು ಇದ್ದರೆ ಒಳ್ಳೆಯದು.
ಲಿವಿಂಗ್ ರೂಮ್
ಕಾರ್ಪೆಟ್ ಹಾಕಲು ಲಿವಿಂಗ್ ರೂಮ್ ಸರಿಯಾದ ಸ್ಥಳವಾಗಿರುವುದಿಲ್ಲ. ಸಣ್ಣ ರಗ್‌ಗಳು ಮತ್ತು ಫ್ಲೋರ್ ಮ್ಯಾಟ್‌ಗಳನ್ನು ನಿಯಮಿತವಾದ ಶಾಂಪೂ ಹಾಕಿ ಸ್ವಚ್ಛ ಮಾಡುತ್ತ ಇರಬೇಕಾಗುತ್ತದೆ. ಗಿಡಗಳನ್ನು ಮತ್ತು ಅಕ್ವೇರಿಯಂ ಅನ್ನು ಮನೆಯಿಂದ ಹೊರಗೆ ಸಾಗಿಸಿ. ಬೆಂಕಿ ಉರಿಸಲು ಸ್ಥಳವಿದ್ದರೆ ಅದನ್ನು ಬಳಸಲು ಹೋಗಬೇಡಿ. ಇವುಗಳಿಂದ ನಿಮಗೆ ಉಸಿರಾಟದ ಸಮಸ್ಯೆಯನ್ನುಂಟು ಮಾಡುವ ಅಲರ್ಜಿಗಳು ಬರುವುದು. ನಿಮ್ಮ ಮನೆಯನ್ನು ಅಲರ್ಜಿ ಮುಕ್ತವನ್ನಾಗಿಸಬೇಕೆಂದರೆ, ಈ ಅಂಶಗಳನ್ನು ಮರೆಯಬಾರದು.
ಅಡುಗೆ ಮನೆ
ಅಡುಗೆ ಮನೆಯಲ್ಲಿ ಯಾವುದೇ ಆಹಾರ ಪದಾರ್ಥಗಳು ಅಸ್ತ ವ್ಯಸ್ತವಾಗಿ ಬಿದ್ದಿರದಂತೆ ನೋಡಿಕೊಳ್ಳಿ. ಇದರಿಂದ ಜಿರಳೆಗಳು ಬರಬಹುದು. ಪಾತ್ರೆಗಳನ್ನು ಪ್ರತಿ ದಿನ ತೊಳೆದು, ಶುದ್ಧವಾಗಿ ಇರಿಸಿರಿ. ಒಲೆ ಮತ್ತು ಎಕ್ಸಾಸ್ಟ್‌ನಲ್ಲಿ ಸಿಕ್ಕಿಕೊಂಡಿರುವ ಆಹಾರದ ಸೋರಿಕೆಗಳನ್ನು ಸ್ವಚ್ಛಗೊಳಿಸಿ. ಆಹಾರವನ್ನು ಸಂಗ್ರಹ ಮಾಡಲು ಸೀಲ್ ಮಾಡಲಾದ ಪಾತ್ರೆಗಳನ್ನು ಬಳಸಿ. ಕಸವನ್ನು ಇರಿಸಲು ಹೋಗಬೇಡಿ, ಅದನ್ನು ಪ್ರತಿದಿನ ಖಾಲಿ ಮಾಡಿ. ಈ ಸಲಹೆಗಳನ್ನು ಬಳಸುವ ಮೂಲಕ ಅಡುಗೆ ಮನೆಯನ್ನು ಅಲರ್ಜಿ ಮುಕ್ತಗೊಳಿಸಬಹುದು.
ಬಾತ್‍ರೂಮ್
ಬಾತ್‌ರೂಮ್‌ನಲ್ಲಿ ಅಲರ್ಜಿಯನ್ನು ನಿವಾರಿಸಲು ಅದರ ಕಿಟಕಿಗಳು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ. ಗಾಳಿ ಬೆಳಕು ಸರಿಯಾಗಿ ಬರುತ್ತಿರುವಂತೆ ನಿಮ್ಮ ಬಾತ್ ರೂಮ್ ಇರಿಸಿಕೊಳ್ಳಿ. ಒಗೆಯುವಂತಹ ರಗ್‌ಗಳನ್ನು ಇರಿಸಿಕೊಳ್ಳಿ. ವಾಲ್ ಪೇಪರ್ ಬದಲಿಗೆ ಬಾತ್‌ರೂಮಿಗೆ ಟೈಲ್ಸ್ ಅಳವಡಿಸಿಕೊಳ್ಳಿ. ಜೊತೆಗೆ ಮೌಲ್ಡ್ ರೆಸಿಸ್ಟೆಂಟ್ ಎನಾಮೆಲ್ ಪೈಂಟ್ ಬಳಸಬಹುದು. ಇಲ್ಲಿಯೂ ಸಹ ನೀರು ನಿಲ್ಲದಂತೆ ಎಚ್ಚರವಹಿಸಿ. ಟಬ್‌ಗಳು ಒಣಗಿರುವಂತೆ ಕಾಪಾಡಿಕೊಳ್ಳಿ.
ಬೇಸ್‌ಮೆಂಟ್
ಜೌಗನ್ನು ನಿವಾರಿಸಲು ಡಿಹ್ಯೂಮಿಡಿಫೈಯರನ್ನು ಬಳಸಿ. ಏಕೆಂದರೆ ಇಲ್ಲಿ ಜೌಗು ಅತಿ ಹೆಚ್ಚಾಗಿ ಕಂಡುಬರುತ್ತದೆ. ಚರ್ಮ, ಮರ, ಲೋಹ ಅಥವಾ ಪ್ಲಾಸ್ಟಿಕ್‌ನಿಂದ ಮಾಡಿದ ಪೀಠೋಪಕರಣಗಳನ್ನು ಇಲ್ಲಿಂದ ತೆಗೆಯಿರಿ. ಮತ್ತೊಂದು ಸಲಹೆ ಏನಪ್ಪ ಎಂದರೆ ವಸ್ತುಗಳನ್ನು ಸಂಗ್ರಹ ಮಾಡುವಾಗ ಪ್ಲಾಸ್ಟಿಕ್‍ನಿಂದ ಸುತ್ತಿಡಿ. ಇದರಿಂದ ಅಲರ್ಜಿ ನಿಮ್ಮನ್ನು ಕಾಡುವುದಿಲ್ಲ. ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ಇದಕ್ಕಾಗಿ ಬಳಸಿಕೊಳ್ಳಿ. ಈ ಸಲಹೆಗಳನ್ನು ಪಾಲಿಸಿ, ನಿಮ್ಮ ಮನೆಯನ್ನು ಅಲರ್ಜಿ ಮಾಡಿಕೊಳ್ಳಿ.



Click it and Unblock the Notifications



