Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬಳಲಿದ ಕಣ್ಣುಗಳ ಆರೈಕೆಗೆ ಒಂದಿಷ್ಟು ಸರಳ ಟ್ರಿಕ್ಸ್
ಸ್ನಾಯುಗಳಿಗೆ ಆಯಾಸವಾದರೆ ನೋವಿನ ರೂಪದಲ್ಲಿ ಪ್ರಕಟಿಸುತ್ತವೆ. ಕಣ್ಣುಗಳಿಗೆ ಆಯಾಸವಾದರೆ? ಇದು ಮೆದುಳು ನಿದ್ದೆ ಮಾಡುವಂತೆ ಕಣ್ಣುರೆಪ್ಪೆಗಳನ್ನು ಬಲವಂತವಾಗಿ ಮುಚ್ಚಲು ಪ್ರಯತ್ನಿಸುತ್ತದೆ. ಆಯಾಸಗೊಂಡ ಕಣ್ಣುಗಳಿಗೆ ಬರೆಯ ಕಣ್ಣು ಮುಚ್ಚಿಕೊಳ್ಳುವುದರಿಂದ ಪರಿಹಾರ ಸಿಗುವುದಿಲ್ಲ. ಇದಕ್ಕಾಗಿ ಕೆಲವು ಸುಲಭ ಉಪಾಯಗಳಿವೆ. ಇದರಿಂದ ಊದಿಕೊಂಡ, ಕಂಪಗಾದ ಅಥವಾ ನೀರು ಸುರಿಯುತ್ತಿರುವ ಕಣ್ಣುಗಳಿಗೆ ಬಹುವಾದ ಆರಾಮ ದೊರಕುತ್ತದೆ.

ಹಸ್ತದ ಬೆಚ್ಚನೆಯ ಸ್ಪರ್ಶ
ಅತ್ಯಂತ ಸುಲಭವಾದ ಮತ್ತು ತಕ್ಷಣ, ಯಾವುದೇ ಸ್ಥಳದಲ್ಲಿ ನೀಡಬಹುದಾದ ಆರೈಕೆಯಿಂದರೆ ಹಸ್ತದ ಬೆಚ್ಚನೆಯ ಸ್ಪರ್ಶ. ಇದಕ್ಕಾಗಿ ಎರಡೂ ಹಸ್ತಗಳನ್ನು ಗಸಗಸನೇ ಉಜ್ಜಿಕೊಂಡು ಬಿಸಿಯಾದ ಬೆರಳುಗಳಿಂದ ಮುಚ್ಚಿರುವ ಕಣ್ಣುಗುಡ್ಡೆಗಳ ಮೇಲೆ ಹೆಚ್ಚಿನ ಒತ್ತಡವಿಲ್ಲದೇ ಇರಿಸಿ. ಖ್ಯಾತ ನೇತ್ರತಜ್ಞ ಡಾ. ಬೇಟ್ಸ್ ರವರ ಪ್ರಕಾರ ಈ ವಿಧಾನ ಕಣ್ಣುಗಳನ್ನು ಆರೋಗ್ಯಕರವಾಗಿಡಲು ನೆರವಾಗುತ್ತದೆ. ಆದರೆ ಇದು ಆಲಸಿತನದಿಂದ ಮುಚ್ಚಿದ ಕಣ್ಣುಗಳಿಗೆ ತರವಲ್ಲ. ಇದನ್ನು ಅನುಸರಿಸುವಾಗ ಬಗ್ಗಿರಬಾರದು ಅಥವಾ ಮಲಗಿರಬಾರದು. ನೆಟ್ಟಗೆ ಕುಳಿತ ಭಂಗಿಯಲ್ಲಿ ಅನುಸರಿಸಬೇಕು.

ಬೆರಳುಗಳ ಬೋಗುಣಿ
ವಿಶೇಷವಾಗಿ ಹೆಚ್ಚಿನ ಸಮಯ ಕಂಪ್ಯೂಟರ್ ಮಾನಿಟರ್ ಗಳನ್ನು ವೀಕ್ಷಿಸುವ ಉದ್ಯೋಗಸ್ಥರಿಗೆ ಈ ವಿಧಾನ ಸೂಕ್ತವಾಗಿದೆ. ಆಯಾಸಗೊಂಡ ಕಣ್ಣುಗಳ ಮೇಲೆ ಎರಡೂ ಕೈಗಳ ಬೆರಳುಗಳನ್ನು ವೃತ್ತಾಕಾರದಲ್ಲಿ ಮಡಚಿ ಚಿಕ್ಕ ಬೋಗುಣಿಯಾಕಾರದಲ್ಲಿ ಎರಡೂ ಮುಚ್ಚಿದ ಕಣ್ಣುಗಳನ್ನು ಆವರಿಸಿ. ಒಂದರಿಂದ ಎರಡು ನಿಮಿಷ ಹೀಗೇ ಬಿಡಿ. ಬಳಿಕ ನಿಧಾನವಾಗಿ ಕಣ್ಣುಬಿಟ್ಟು ದೂರದ ವಸ್ತುವಿಗೆ ದೃಷ್ಟಿ ಹರಿಸಿ ಅದು ಸ್ಪಷ್ಟವಾದ ಬಳಿಕ ಕೆಲಸ ಮುಂದುವರೆಸಿ. ಇದರಿಂದ ಕಂಪ್ಯೂಟರ್ ನೋಡಿ ನೋಡೀ ಆಯಾಸವಾಗಿದ್ದ ಕಣ್ಣುಗಳಿಗೆ ಸೂಕ್ತ ಉಪಶಮನ ದೊರಕುತ್ತದೆ. ಆದರೆ ಮುಚ್ಚಿದ್ದ ಕಣ್ಣುಗಳ ಪಾಪೆಗಳು ವಿಶಾಲವಾಗಿ ತೆರೆದಿರುವ ಕಾರಣ ಕಣ್ಣು ಬಿಟ್ಟಾಕ್ಷಣ ಪ್ರಖರ ಬೆಳಕನ್ನು ಎಂದೂ ನೋಡಬೇಡಿ.

ತಣ್ಣನೆಯ ಚಮಚ
ಕೊಂಚ ವಿಚಿತ್ರ ಮತ್ತು ಅಸಂಭವ ಎನಿಸುವ ಈ ವಿಧಾನವೂ ಆಯಾಸಗೊಂಡ ಕಣ್ಣುಗಳಿಗೆ ತಕ್ಷಣವೇ ಆರಾಮ ನೀಡುತ್ತದೆ. ವಿಶೇಷವಾಗಿ ಕಣ್ಣುಗಳ ಕೆಳಭಾಗ ಉಬ್ಬಿಕೊಂಡಿದ್ದರೆ ಮತ್ತು ಬಲುಹೊತ್ತಿನಿಂದ ದಿಟ್ಟಿಸಿ ನೋಡಿ ಆಯಾಸವಾಗಿದ್ದರೆ ಈ ವಿಧಾನ ಸೂಕ್ತವಾಗಿದೆ. ಇದಕ್ಕಾಗಿ ನಮ್ಮ ಕಣ್ಣುಗಳನ್ನು ಆವರಿಸುವಂತಹ ಗಾತ್ರದ, ವೃತ್ತಾಕಾರವಾದರೆ ಉತ್ತಮ, ಒಂದು ಚಮಚಚವನ್ನು ಫ್ರಿಜ್ ನಲ್ಲಿ ಹತ್ತು ನಿಮಿಷ ಇರಿಸಿ. ಬಳಿಕ ಹೊರತೆಗೆದು ತಲೆಯನ್ನು ಹಿಂದಕ್ಕೆ ವಾಲಿಸಿ ಈ ಚಮಚವನ್ನು ಕಣ್ಣುಗಳ ಮೇಲಿರಿಸಿ ಸಾಮಾನ್ಯ ತಾಪಮಾನಕ್ಕೆ ಬರುವವರೆಗೂ ಹಾಗೇ ಇರಿಸಿ. ಇದರಿಂದ ಕಣ್ಣುಗಳು ಬೇಗನೇ ಚೇತರಿಸಿಕೊಳ್ಳುತ್ತವೆ.

ತಣ್ಣೀರು
ಬಿಸಿನೀರು ದೇಹವನ್ನು ಹೇಗೆ ಉಲ್ಲಾಸಮಯವಾಗಿಸುತ್ತದೆಯೋ ಅಂತೆಯೇ ಕಣ್ಣುಗಳಿಗೆ ತಣ್ಣೀರು ಆರೈಕೆ ನೀಡುತ್ತದೆ. ಫ್ರಿಜ್ಜಿನ ತಣ್ಣೀರು ಉತ್ತಮ. ಆದರೆ ಇಷ್ಟು ತಣ್ಣಗಿನ ನೀರು ಇಲ್ಲದಿದ್ದರೆ ಸಾಮಾನ್ಯ ತಾಪಮಾನದ ನೀರೂ ಸರಿ. ಈ ನೀರನಿಂದ ಮುಚ್ಚಿದ ಕಣ್ಣುಗಳಿಗೆ ಕೊಂಚಕಾಲ ನಿರಂತರವಾಗಿ ಪ್ರೋಕ್ಷಳಿಸಿಕೊಳ್ಳುತ್ತಿರಿ. ಕೊಂಚ ಕಣ್ಣುಗಳು ತಣ್ಣಗಾದ ಬಳಿಕ ತಲೆಯನ್ನು ಹಿಂದಕ್ಕೆ ವಾಲಿಸಿ ನಿಧಾನವಾಗಿ ತೆರೆದು ನೀರು ಒಳಬರಲು ಅನುವುಮಾಡಿ. ಇದರಿಂದ ಕಣ್ಣುಗಳ ಒಳಭಾಗದ ನರಗಳೂ ತಂಪಾಗಿ ಕಣ್ಣುಗಳಿಗೆ ಆಹ್ಲಾದ ನೀಡುತ್ತದೆ.

ನಿಸರ್ಗದ ಬಣ್ಣಗಳನ್ನು ಗಮನಿಸಿ
ಕಣ್ಣುಗಳು ವಿವಿಧ ಬಣ್ಣಗಳಿಗೆ ಭಿನ್ನವಾಗಿ ಪ್ರತಿಕ್ರಿಯಿಸುತ್ತದೆ. ಕೆಂಪು ಬಣ್ಣ ಕಣ್ಣಿನ ಆಯಾಸವನ್ನು ಹೆಚ್ಚಿಸಿದರೆ ಹಸಿರುಬಣ್ಣ ತಗ್ಗಿಸುತ್ತದೆ. ಅಂತೆಯೇ ಬಿಳಿ, ನೀರಿನ ಕಾರಂಜಿ, ಮೊದಲಾದ ಬಣ್ಣಗಳೂ ಕಣ್ಣಿನ ಆಯಾಸ ಕಡಿಮೆ ಮಾಡುತ್ತವೆ. ನಿಮ್ಮ ಸುತ್ತ ಮುತ್ತಲಿರುವ ಹಸಿರು ಮತ್ತು ತಿಳಿಬಣ್ಣಗಳನ್ನು ಹೆಚ್ಚು ಗಮನಿಸಿ. ಇದರಿಂದ ಮನಸ್ಸಿನಲ್ಲಿ ಧನಾತ್ಮಕ ಭಾವ ಮೂಡುತ್ತಾ ಕಣ್ಣುಗಳಿಗೂ ಹಿತಕರವಾಗಿರುತ್ತದೆ.



Click it and Unblock the Notifications
