For Quick Alerts
ALLOW NOTIFICATIONS  
For Daily Alerts

ಮುಂಜಾನೆಯ ವ್ಯಾಯಮ-ಇಡಿ ದಿನದ ಲವಲವಿಕೆಗೆ ಕಾರಣ

By Manu
|

ಸಾಮಾನ್ಯವಾಗಿ ಜನರಿಂದ ಗಿಜಿಗುಡುವ ಸ್ಥಳ ಮುಂಜಾನೆ ಬಿಕೋ ಎನ್ನಲು ಕಾರಣವೇನು ಗೊತ್ತೇ? ಏಕೆಂದರೆ ಈ ಹೊತ್ತಿನ ನಿದ್ದೆ ಅತ್ಯಂತ ಸವಿಯಾಗಿರುವುದು. ಇದನ್ನು ಕಳೆದುಕೊಳ್ಳಲು ಯಾರೂ ಇಷ್ಟಪಡುವುದಿಲ್ಲ. ಆದರೆ ಈ ಹೊತ್ತಿನ ವ್ಯಾಯಮ ಆರೋಗ್ಯಕರ ಹಾಗೂ ಇಡಿಯ ದಿನ ಲವಲವಿಕೆಯಿಂದಿರಿಸಲು ನೆರವಾಗುತ್ತದೆ ಎಂಬುದು ಈಗಾಗಲೇ ಸಾಬೀತಯಾಗಿದೆ.

ಮುಂಜಾನೆಯ ವ್ಯಾಯಮದ ಅತಿ ಕಷ್ಟಕರ ಭಾಗವೆಂದರೆ ಎಚ್ಚರಾಗುವುದು. ಒಂದು ವೇಳೆ ಎಚ್ಚರಾಗಿ ವ್ಯಾಯಮ ಪ್ರಾರಂಭಮಾಡಿದರೆ ನಿಧಾನವಾಗಿ ದೇಹದಲ್ಲಿ ಶಕ್ತಿ ತುಂಬುತ್ತಾ ಬರುತ್ತದೆ. ಮೊದಲು ನಿಧಾನಗತಿಯ ಅಂದರೆ ಜಾಗಿಂಗ್ ಮೊದಲಾದ ವ್ಯಾಯಮಗಳನ್ನು ಪ್ರಾರಂಭಿಸಿ ಬಳಿಕ ಕೊಂಚ ಹೆಚ್ಚಿನ ಶಕ್ತಿ ವ್ಯಯವಾಗುವ ವ್ಯಾಯಾಮಗಳನ್ನು ಅನುಸರಿಸುವ ಮೂಲಕ ಶರೀರ ಅತಿಹೆಚ್ಚಿನ ಪ್ರಯೋಜನ ಪಡೆಯುತ್ತದೆ. ಮುಂಜಾನೆಯ ವಾತಾವರಣ ಮತ್ತು ಶಾರೀರಿಕ ಚಟುವಟಿಕೆ

*ಇಡಿಯ ದಿನ ಲವಲವಿಕೆಯಿಂದಿರಲು ನೆರವಾಗುತ್ತದೆ
ಆದರೆ ವ್ಯಾಯಾಮವನ್ನು ಹೇಗೆ ಮಾಡಬೇಕು ಎಂದು ಅನುಮಾನ ಕಾಡುತ್ತಿದ್ದರೆ ಕೆಳಗಿನ ಸ್ಲೈಡ್ ಶೋ ನಿಮ್ಮ ನೆರವಿಗೆ ಬರಲಿದೆ. ಆದರೆ ಯಾವುದೇ ವ್ಯಾಯಾಮ ಪ್ರಾರಂಭಿಸುವ ಮೊದಲು ಪೂರ್ಣವಾಗಿ ಎಚ್ಚರಗೊಳ್ಳಬೇಕು ಹಾಗೂ ಪ್ರಾತಃವಿಧಿಗಳನ್ನು ಪೂರೈಸಿಕೊಳ್ಳಬೇಕು. ಪ್ರಥಮ ಆಹಾರವಾಗಿ ಒಂದು ಲೋಟ ತಣ್ಣೀರು ಕುಡಿದೇ ಬಳಿಕ ವ್ಯಾಯಮ ಪ್ರಾರಂಭಿಸಬೇಕು.

Early morning stretching exercise to keep you energetic

*ಮೊದಲ ಪ್ರಾರಂಭಿಕ ವ್ಯಾಯಾಮ
ಮೊದಲು ನೆಟ್ಟಗೆ ನಿಂತು ಭುಜಗಳಿಗೆ ಅನುಸಾರವಾಗಿ ಎರಡೂ ಪಾದಗಳನ್ನು ಅಗಲಿಸಿ.
ಉಸಿರು ಮೇಲೆಳೆದುಕೊಳ್ಳುತ್ತಾ ಎರಡೂ ಕೈಗಳನ್ನು ಪಕ್ಕದಿಂದ ತಲೆಯ ಮೇಲೆ ಬರುವಂತೆ ಮಾಡಿ. ಉಸಿರು ಪೂರ್ಣ ಎಳೆದುಕೊಂಡಾಗ ಹಸ್ತಗಳು ತಲೆಯ ಮೇಲಿರಬೇಕು.
ಈಗ ಉಸಿರನ್ನು ಬಿಗಿಹಿಡಿದು ಎರಡೂ ಕೈಗಳು ನೆಲಕ್ಕೆ ತಾಕುವಂತೆ ನಿಧಾನವಾಗಿ ಮುಂದೆ ಬಗ್ಗಿ.
ಒಂದೆರಡು ಸೆಕೆಂಡ್ ಬಗ್ಗಿದ್ದು ನಿಧಾನವಾಗಿ ಉಸಿರು ಬಿಡುತ್ತಾ ಮೊದಲ ಸ್ಥಾನಕ್ಕೆ ಬನ್ನಿ.
ಈ ವಿಧಾನವನ್ನು ಸುಮಾರು ಹತ್ತು ಸಲ ಪುನರಾವರ್ತಿಸಿ. ದಿನಗಳೆದಂತೆ ಹೆಚ್ಚಿಸಬಹುದು. ಈ ವ್ಯಾಯಾಮದಿಂದ ಶರೀರ ಸಡಿಲವಾಗಿ ಮುಂದಿನ ವ್ಯಾಯಮಗಳು ಸುಲಭವಾಗುವಂತೆ ಮಾಡುತ್ತವೆ.

*ಎರಡನೆಯ ಪ್ರಾರಂಭಿಕ ವ್ಯಾಯಾಮ
ಮೊದಲು ನೆಟ್ಟಗೆ ನಿಂತು ಭುಜಗಳಿಗೆ ಅನುಸಾರವಾಗಿ ಎರಡೂ ಪಾದಗಳನ್ನು ಅಗಲಿಸಿ.
ಉಸಿರು ಪೂರ್ಣವಾಗಿ ಎಳೆದುಕೊಳ್ಳುತ್ತಾ ಕೈಗಳನ್ನು ಮುಂದೆ ಚಾಚಿ ಮುಂದೆ ಬಗ್ಗಿ.
ಈಗ ಕೈಗಳು ಮುಂದೆ ಇದ್ದಂತೆಯೇ ಮೊಣಕಾಲನ್ನು ನಿಧಾನವಾಗಿ ಮಡಚುತ್ತಾ ಮುಂದೆ ನಡೆಯುತ್ತಾ ಹೋಗಿ (ಕೋಳಿ ಹಿಡಿಯುವ ಹಾಗೆ)
ಸುಮಾರು ಹತ್ತು ಅಡಿ ಮುಂದೆ ಹೋದ ಬಳಿಕ ನೆಟ್ಟಗೆ ನಿಂತು ಬಂದಂತೆಯೇ ಹಿಂದೆ ನಡೆಯುತ್ತಾ ಬನ್ನಿ. ಬಳಿಕ ಉಸಿರು ಬಿಡಿ.
ನಂತರ ಕೈಯನ್ನು ಸೊಂಟದ ಮೇಲಿಟ್ಟು ಒಂದು ಕಾಲನ್ನು ಕೊಂಚವೇ ಮೇಲೆತ್ತಿ ಬಲಪಾದವನ್ನು ವೃತ್ತಾಕಾರದಲ್ಲಿ ಕೆಲವು ಬಾರಿ ತಿರುಗಿಸಿ. ಬಳಿಕ ಎಡಪಾದ, ಬಳಿಕ ಬಲಪಾದ, ಈ ಬಾರಿ ವಿರುದ್ದ ದಿಕ್ಕಿನಲ್ಲಿ ತಿರುಗಿಸಿ ನಂತರ ಎಡಪಾದ ಹೀಗೇ ಸುಮಾರು ಹತ್ತು ಬಾರಿ ಪುನರಾವರ್ತಿಸಿ. ಒಂದೊಂದು ಪಾದ ತಿರುಗಿಸುವಾಗಲೂ ಪೂರ್ಣವಾಗಿ ಉಸಿರು ಎಳೆದುಕೊಳ್ಳಿ. ಕೆಲದಿನಗಳ ಅಭ್ಯಾಸದ ಬಳಿಕ ಒಂದು ಕಾಲನ್ನು ಕೊಂಚ ಮಡಚಿ (ಅಂದರೆ ಕೊಂಚವೇ ಬಗ್ಗಿ) ಇನ್ನೊಂದು ಕಾಲಿನ ಪಾದವನ್ನು ತಿರುಗಿಸಿ. ಬಳಿಕ ಕಾಲು ಬದಲಿಸಿ.

ಈ ವ್ಯಾಯಾಮದ ಬಳಿಕ ಕಾಲುಗಳನ್ನು ಕೊಂಚ ಹೆಚ್ಚು ಅಗಲಿಸಿ ಎರಡೂ ಕೈಗಳನ್ನು ಸೊಂಟದ ಮೇಲಿಟ್ಟು ಉಸಿರು ಪೂರ್ತಿಯಾಗಿ ಒಳಗೆಳೆದುಕೊಂಡು ಮೊದಲು ಬಲಪಕ್ಕಕ್ಕೆ ಬಾಗಿ ಕೆಲವು ಸೆಕೆಂಡು ಹಾಗೇ ಇದ್ದು ಬಳಿಕ ಮೊದಲಿನ ಸ್ಥಿತಿಗೆ ಬಂದು ಉಸಿರು ಬಿಡಿ. ಬಳಿಕ ಎಡಭಾಗಕ್ಕೆ ಬಗ್ಗಿ. ಈ ವಿಧಾನವನ್ನು ಹತ್ತು ಬಾರಿ ಪುನರವರ್ತಿಸಿ.

*ಮೂರನೆಯ ಪ್ರಾರಂಭಿಕ ವ್ಯಾಯಾಮ
ನೆಲದ ಮೇಲೆ ಚಾಪೆ ಅಥವಾ ಹೊದಿಕೆಯನ್ನು ಹಾಸಿ ಇಡಿಯ ಮೊಣಕೈ ಭೂಮಿಯ ಮೇಲೆ ಇರುವಂತೆ, ಹಸ್ತ ನೆಲಕ್ಕೆ ತಾಕುವಂತೆ ಇರಿಸಿ. ಪಾದಗಳನ್ನು ಎಷ್ಟು ಸಾಧ್ಯವೋ ಅಷ್ಟು ಹಿಂದೆ ಸರಿಸಿ ಹೆಬ್ಬೆರಳುಗಳಿಂದ ನೆಲವನ್ನು ಒತ್ತಿ. ಈ ಭಂಗಿಯಲ್ಲಿ ದೇಹವನ್ನು ಮುಂದಕ್ಕೆ ಮತ್ತು ಹಿಂದಕ್ಕೆ ಚಲಿಸಲು ಯತ್ನಿಸಿ. ಪ್ರತಿಬಾರಿ ಚಲಿಸಲು ಯತ್ನಿಸುವಾಗ ಪೂರ್ಣವಾಗಿ ಉಸಿರು ಎಳೆದುಕೊಳ್ಳಿ. ಈ ವಿಧಾನವನ್ನು ಐದು ಬಾರಿ ಪುನರಾವರ್ತಿಸಿ. ಈಗ ಸೊಂಟವನ್ನು ಕೆಳಕ್ಕೆ ಬಗ್ಗಿಸಿ ಹೊಟ್ಟೆ ನೆಲತಾಕುವಂತೆ ಮಾಡಿ, ಮುಖವನ್ನು ಸಾಧ್ಯವಾದಷ್ಟು ಮೇಲೆತ್ತಿ. ಇದು ಸೂರ್ಯ ನಮಸ್ಕಾರದ ಭಂಗಿಯಾಗಿದ್ದು ಬೆನ್ನಿಗೆ ಹೆಚ್ಚಿನ ಸೆಳೆತ ನೀಡುತ್ತದೆ. ಈ ಭಂಗಿಯಲ್ಲಿ ಉಸಿರು ಬಿಗಿ ಹಿಡಿದು ಮೂವತ್ತು ಸೆಕೆಂಡ್ ಹಾಗೇ ಇರಲು ಯತ್ನಿಸಿ. ಮೊದಮೊದಲು ಸಾಧ್ಯವಾಗದೇ ಇದ್ದರೂ ಕ್ರಮೇಣ ಇದು ಸಾಧ್ಯವಾಗುತ್ತದೆ.

*ನಾಲ್ಕನೆಯ ಪ್ರಾರಂಭಿಕ ವ್ಯಾಯಾಮ
ಈಗ ಮೊಣಕಾಲುಗಳ ಮೇಲೆ ಕುಳಿತುಕೊಳ್ಳಿ ಹಾಗೂ ಪಾದಗಳ ಮೇಲ್ಭಾಗ ನೆಲಕ್ಕೆ ಚಾಚಿಕೊಂಡಿರಲಿ. ಕಾಲ ಬೆರಳುಗಳು ಸಾಧ್ಯವಾದಷ್ಟು ಹಿಂದಕ್ಕೆ ನೆಟ್ಟಗಿರಲಿ. ಈ ಭಂಗಿಯಲ್ಲಿ ಪೂರ್ಣವಾಗಿ ಉಸಿರೆಳೆದುಕೊಳ್ಳುತ್ತಾ ತಲೆಯನ್ನು ಮುಂದೆ ಬಾಗಿಸುತ್ತಾ ಹಣೆಯನ್ನು ನೆಲಕ್ಕೆ ತಾಗಿಸಲು ಯತ್ನಿಸಿ. ಹಸ್ತಗಳು ಸಾಧ್ಯವಾದಷ್ಟು ಮುಂದೆ ಚಾಚಿ ನೆಲಕ್ಕೆ ತಾಗಿದಂತಿರಲಿ. ಈ ಭಂಗಿಯಲ್ಲಿ ಉಸಿರು ಬಿಗಿಹಿಡಿದು ಸಾಧ್ಯವಾದಷ್ಟು ಹೊತ್ತು ಹಾಗೇ ಇರಿ. ಬಳಿಕ ನಿಧಾನವಾಗಿ ಉಸಿರು ಬಿಡುತ್ತಾ ಮೊದಲ ಸ್ಥಾನಕ್ಕೆ ಹಿಂದಿರುಗಿ. ಈ ವ್ಯಾಯಾಮವನ್ನು ಐದರಿಂದ ಹತ್ತು ಬಾರಿ ಪುನರಾವರ್ತಿಸಿ. ಈ ನಾಲ್ಕು ವ್ಯಾಯಾಮಗಳ ಬಳಿಕ ಹೆಚ್ಚಿನ ವ್ಯಾಯಾಮ ಅಥವಾ ಮುಂಜಾನೆಯ ತಂಪು ವಾತಾವರಣದಲ್ಲಿ ಹೊರಗೆ ಜಾಗಿಂಗ್ ಅಥವಾ ನಡೆದಾಡುವ ಮೂಲಕ ಇಡಿಯ ದಿನ ಲವಲವಿಕೆಯಿಂದಿರಲು ಸಾಧ್ಯವಾಗುತ್ತದೆ.

English summary

Early morning stretching exercise to keep you energetic

Do you end up postponing your early morning workout to the evening just because you are not feeling energetic? Early morning exercise is undoubtedly beneficial but is it easy to start running the moment you wake up? Your body needs some warm up exercise and some stretches before it becomes energetic to continue with your daily fitness routine or workout. Here are some simple stretches that help you feel energetic and geared up for a busy day:
Story first published: Thursday, February 18, 2016, 9:54 [IST]
X
Desktop Bottom Promotion