Latest Updates
-
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ!
ಹಲ್ಲುಗಳ ಆರೋಗ್ಯಕ್ಕೆ ಸಿಂಪಲ್ ಟಿಪ್ಸ್-ತಪ್ಪದೇ ಅನುಸರಿಸಿ
ಮುತ್ತುಗಳಂತೆ ಪೋಣಿಸಿಟ್ಟ ಹಲ್ಲುಗಳಿದ್ದರೆ ಅಂತವರ ಮುಖದ ಸೌಂದರ್ಯಕ್ಕೆ ಬೇರೇನೂ ಬೇಕಿಲ್ಲ. ಯಾಕೆಂದರೆ ಮುಖದ ಸೌಂದರ್ಯದಲ್ಲಿ ಹಲ್ಲುಗಳ ಪಾತ್ರವೂ ಇದೆ. ಅದರಲ್ಲೂ ಬಿಳಿಯ ಹಲ್ಲುಗಳು ನಗುವಿನ ಹೊಳಪಿಗೆ ಕಾರಣ. ಹಲ್ಲುಗಳ ಸಂರಕ್ಷಣೆಗಾಗಿ ದಿನಾ ಬೆಳಗ್ಗೆ ಎದ್ದು ಹಲ್ಲುಜ್ಜುತ್ತೇವೆ. ರಾತ್ರಿ ಮಲಗುವ ಮೊದಲು ಮತ್ತೆ ಹಲ್ಲುಜ್ಜುತ್ತೇವೆ.

ಇದು ಒಸಡು ಹಾಗೂ ಹಲ್ಲುಗಳನ್ನು ಕಾಡುವಂತಹ ಹಲವಾರು ರೋಗಗಳನ್ನು ತಡೆಯಲು ಸಹಕಾರಿ. ಹಲ್ಲುನೋವು, ಒಸಡಿನಿಂದ ರಕ್ತ ಬರುವುದು, ರೂಟ್ ಕ್ಯಾನಲ್ ಮತ್ತು ಇತರ ಕೆಲವೊಂದು ರೋಗಗಳನ್ನು ಇದು ತಡೆಯುತ್ತದೆ. ಹಲ್ಲುಗಳ ಬಗ್ಗೆ ಸರಿಯಾದ ಜಾಗ್ರತೆ ವಹಿಸಿದರೆ ಹಲವಾರು ಸಮಸ್ಯೆಗಳನ್ನು ನಿಭಾಯಿಸಬಹುದಾಗಿದೆ. ನಿದ್ದೆ ಕೆಡಿಸುವ ಹಲ್ಲು ನೋವಿಗೆ, ಪವರ್ ಫುಲ್ ಮನೆಮದ್ದು
*ಟೂತ್ ಬ್ರಶ್ ಅನ್ನು ಆಗಾಗ ಬದಲಾಯಿಸುತ್ತಾ ಇರಿ. ಕೇವಲ ಮುಂದಿನ ಹಲ್ಲುಗಳನ್ನು ಮಾತ್ರ ಉಜ್ಜುವುದಲ್ಲದೆ ಎಲ್ಲಾ ಹಲ್ಲುಗಳನ್ನು ಉಜ್ಜಿರಿ. ಟೂಥ್ ಬ್ರಶ್ ಮತ್ತು ಟೂಥ್ ಪೇಸ್ಟ್ ಅನ್ನು ನಿಮ್ಮ ಕೆಲಸದ ಕಡೆ ಅಥವಾ ಶಾಲೆಗೆ ತೆಗೆದುಕೊಂಡು ಹೋಗಿ. ಮಧ್ಯಾಹ್ನ ಊಟದ ಬಳಿಕ ಹಲ್ಲುಜ್ಜಿ. ಯಾವಾಗಲೂ ಮೌತ್ ವಾಶ್ ನ್ನು ಬಳಸುವುದರಿಂದ ಹಲ್ಲುಗಳಲ್ಲಿ ಉಳಿದಿರುವ ಆಹಾರವು ಹೊರಹೋಗುವುದು.
*ಕ್ಯಾಲ್ಸಿಯಂ ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರವನ್ನು ತಿನ್ನಿ. ಕರಿದ ತಿಂಡಿಗಳಿಂದ ದೂರವಿರಿ. ಅನಾರೋಗ್ಯಕರ ಆಹಾರದ ಬಗ್ಗೆ ಹೆಚ್ಚಿನವರಿಗೆ ತಿಳಿದಿದೆ. ಆದರೆ ಕೆಲವರು ತರಕಾರಿ ಸಲಾಡ್ ತಿಂದ ಬಳಿಕ ತಂಪು ಪಾನೀಯವನ್ನು ಕುಡಿಯುತ್ತಾರೆ. ಇದು ಸರಿಯಲ್ಲ, ಸಿಹಿಯಿಂದ ಆದಷ್ಟು ದೂರವಿರಿ. ಊಟವಾದ ಬಳಿಕ ತಂಪು ಪಾನೀಯ ಬದಲು ನೀರು ಕುಡಿಯಿರಿ. ಹಳದಿ ಹಲ್ಲಿನ ಸಮಸ್ಯೆಗೆ, ಪವರ್ ಫುಲ್ ಮನೆಮದ್ದು
*ಕ್ಯಾಂಡಿ, ಬಿಸ್ಕಿಟ್, ಪೇಸ್ಟ್ರೀಯಂತಹ ಸಿಹಿ ತಿಂಡಿಗಳು ನಿಮ್ಮ ಆರೋಗ್ಯಕಾರಿ ಹಲ್ಲುಗಳ ಶತ್ರುಗಳು. ಊಟದ ಮಧ್ಯೆ ತಿಂಡಿ ತಿನ್ನಲು ಬಯಸಿದಾಗ ಏನಾದರೂ ತರಕಾರಿ ಅಥವಾ ಕಡಿಮೆ ಸಕ್ಕರೆ, ಕಡಿಮೆ ಉಪ್ಪು ಇರುವ ತಿಂಡಿಗಳನ್ನು ತಿನ್ನಿ.
*ಹಳದಿ ಹಲ್ಲುಗಳು ನೋಡಲು ಕೆಟ್ಟದಾಗಿ ಕಾಣಿಸುತ್ತದೆ. ಹಲ್ಲುಗಳಲ್ಲಿ ಇರುವ ಕಲೆಗಳು ನಿಮ್ಮ ಮುಖದ ಸೌಂದರ್ಯ ಕೆಡಿಸಬಹುದು. ಇಂತಹ ಸಮಸ್ಯೆಯನ್ನು ಕಡಿಮೆ ಮಾಡಲು ಬೇಕಿಂಗ್ ಪೌಡರ್‌ನಿಂದ ಹಲ್ಲುಜ್ಜಿ, ಟೂತ್ ಪೇಸ್ಟ್‌ಗೆ ಬದಲು ನೀವು ಉಪ್ಪನ್ನು ಬಳಸಬಹುದು. ಬ್ಯೂಟಿ ಟಿಪ್ಸ್: ಹಲ್ಲಿನ ಹೊಳಪಿಗೆ ಎಣ್ಣೆ-ಉಪ್ಪು ಬಳಸಿ ನೋಡಿ!
*ಹಲ್ಲುಗಳನ್ನು ಸ್ವಚ್ಛಗೊಳಿಸಲು ವರ್ಷದಲ್ಲಿ ಒಂದು ಸಲ ಅಥವಾ ಎರಡು ಸಲವಾದರೂ ಹಲ್ಲಿನ ವೈದ್ಯರನ್ನು ಭೇಟಿಯಾಗಿ ಹಲ್ಲಿನ ಆರೋಗ್ಯವನ್ನು ಪರೀಕ್ಷಿಸಿ. ಇದರಿಂದ ನಿಮ್ಮ ಒಸಡು ಮತ್ತು ಹಲ್ಲುಗಳ ಸಮಸ್ಯೆಯನ್ನು ತಿಳಿದುಕೊಳ್ಳಬಹುದು. ಹಲ್ಲುಗಳಿಗೆ ಪಾಲಿಶ್ ಮಾಡುವುದರಿಂದ ಅವುಗಳು ಮುತ್ತಗಳಂತೆ ಹೊಳೆಯುವುದು. ಹಲ್ಲುಗಳ ಆರೋಗ್ಯಕ್ಕೆ ಸರಳ ಸೂತ್ರ-ತಪ್ಪದೇ ಅನುಸರಿಸಿ
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


