For Quick Alerts
ALLOW NOTIFICATIONS  
For Daily Alerts

ದೀರ್ಘಕಾಲದ ನೋವು ಒಪಿಯಾಡ್‌ಗೆ ಕಾರಣವಾಗಬಹುದು

By Hemanth
|

ದೀರ್ಘಕಾಲದಿಂದ ಮಧ್ಯಮ ಅಥವಾ ತೀವ್ರ ನೋವಿನಿಂದ ಬಳಲುತ್ತಿರುವ ಜನರು ಲಿಖಿತ ಒಪಿಯಾಡ್ ಅಸ್ವಸ್ಥತೆಗೆ ಒಳಗಾಗುವ ಅಪಾಯ ಶೇ.41ಕ್ಕಿಂತಲೂ ಹೆಚ್ಚಾಗಿರುತ್ತದೆ ಎಂದು ಅಧ್ಯಯನಗಳು ಹೇಳಿವೆ. ಪುರುಷರು ಮತ್ತು ಯುವಕರು ಲಿಖಿತ ಒಪಿಯಾಡ್ ಅಸ್ವಸ್ಥತೆಗೆ ಒಳಗಾಗುವ ಅಪಾಯ ಹೆಚ್ಚಾಗಿರುತ್ತದೆ.

ಮಹಿಳೆಯರು ಮತ್ತು ವಯಸ್ಸಾದವರು ನೋವನ್ನು ಅನುಭವಿಸುತ್ತಾರೆ ಎಂದು ಅಧ್ಯಯನವು ತಿಳಿಸಿದೆ. ಮೂರು ವರ್ಷಗಳಲ್ಲಿ ಎರಡು ವಿಭಿನ್ನ ಪ್ರದೇಶದಲ್ಲಿ ಆಲ್ಕೋಹಾಲ್ ಮತ್ತು ಇತರ ಮಾದಕ ವಸ್ತುಗಳನ್ನು ಸೇವಿಸುವ ಸುಮಾರು 34,000 ಮಂದಿಯನ್ನು ಸರ್ವೇ ಮಾಡಿದ ರಾಷ್ಟ್ರೀಯ ಸರ್ವೇಯ ಅಂಕಿಅಂಶಗಳನ್ನು ಅಧ್ಯಯನಗಳು ವಿಶ್ಲೇಷಿಸಿದೆ.

ಈ ಹಂತದಲ್ಲಿ ಲಿಖಿತ ಒಪಿಯಾಡ್ ಅಸ್ವಸ್ಥತೆ, ವಯಸ್ಸು, ಲಿಂಗ, ಆತಂಕ, ಭಾವನೆ ಬದಲಾಗುವುದು ಮತ್ತು ಕುಟುಂಬದವರು ಡ್ರಗ್ಸ್, ಆಲ್ಕೋಹಾಲ್ ಚಟಕ್ಕೆ ಒಳಗಾಗಿರುವುದು ಮತ್ತು ಮನೋಖಿನ್ನತೆಯ ಸಮಸ್ಯಗೆ ಒಳಗಾಗಿರುವುದನ್ನು ಈ ವೇಳೆ ಗುರುತಿಸಿದ್ದಾರೆ.

Chronic Pain Increases Risk Of Opioid Addiction

ಅಧ್ಯಯನಗಳಿಂದ ಕಂಡುಬಂದ ವಿಷಯವೆಂದರೆ ಮಧ್ಯಮ ಅಥವಾ ತೀವ್ರ ನೋವಿನಿಂದ ಬಳಲುತ್ತಿರುವ ಪುರುಷರು ಲಿಖಿತ ಒಪಿಯಾಡ್ ಗೆ ಬಲಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಅಮೆರಿಕಾದ ಕೊಲಂಬಿಯಾ ಯೂನಿರ್ವಸಿಟಿಯ ವೈದ್ಯಕೀಯ ವಿಭಾಗದ ಪ್ರೊಪೆಸರ್ ಮಾರ್ಕ್ ಒಲ್ಫಸನ್ ತಿಳಿಸಿದರು.

ಲಿಖಿತ ಒಪಿಯಾಡ್ ಅಸ್ವಸ್ಥತೆಯನ್ನು ಹೇಳಿಕೊಳ್ಳುವಂತವರು ಇತರ ಸಮಸ್ಯೆಗಳಾದ ಭಾವನೆಗಳ ಬದಲಾವಣೆ, ಆತಂಕ ಅಥವಾ ಕುಟುಂಬದವರು ಆಲ್ಕೋಹಾಲ್ ಸೇವಿಸುತ್ತಿದ್ದರೆಂದು ಹೇಳಿದ್ದಾರೆ.

ನೋವನ್ನು ಗುಣಪಡಿಸುವಂತಹ ವೈದ್ಯರು ವಯಸ್ಸು, ಲಿಂಗ, ಡ್ರಗ್ಸ್‌ಗೆ ಬಲಿಯಾಗಿರುವ ವ್ಯಕ್ತಿ ಮತ್ತು ಆತನ ಕುಟುಂಬದ ಇತಿಹಾಸವನ್ನು ಸರಿಯಾಗಿ ತಿಳಿದುಕೊಳ್ಳಬೇಕು ಎಂದು ಅಮೆರಿಕಾದ ಸೈಕಿಯಾರ್ಟಿ ಜರ್ನಲ್ ನಲ್ಲಿ ಪ್ರಕಟನೆಯಾದ ಅಧ್ಯಯನ ಲೇಖನದಲ್ಲಿ ಒಲ್ಫಸನ್ ಬರೆದಿದ್ದಾರೆ. ಒಪಿಯಾಡ್ ಕಂಡುಬಂದರೆ ಆಸ್ಪತ್ರೆಗಳು ಒಪಿಯಾಡ್‌ನ ಎಚ್ಚರಿಕೆಯ ಲಕ್ಷಣಗಳನ್ನು ಬೇಗನೆ ಗುರುತಿಸಬೇಕು ಎಂದು ಅಧ್ಯಯನಗಳು ಹೇಳಿವೆ.

English summary

Chronic Pain Increases Risk Of Opioid Addiction

People with moderate or more severe chronic pain are at a 41% higher risk of developing prescription opioid use disorders, according to a study.
Story first published: Thursday, July 28, 2016, 20:08 [IST]
X
Desktop Bottom Promotion