Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತೂಕ ಇಳಿಸಿಕೊಳ್ಳುವ ಬಯಕೆಯೇ? ಸಿಹಿ ಗೆಣಸು ಸೇವಿಸಿ
ನೀವು ದೇಹದ ತೂಕವನ್ನು ಇಳಿಸಿಕೊಳ್ಳಬೇಕು ಎಂದು ಪಾಡು ಪಡುತ್ತಿದ್ದೀರಾ, ಯಾವ ಆಹಾರವನ್ನು ಸೇವಿಸುವುದು, ಯಾವುದು ಬಿಡುವುದು ಎಂಬುದು ನಿಮ್ಮ ಚಿಂತೆಯೇ? ಚಿಂತೆ ಎಲ್ಲಾ ಬಿಡಿ, ನಿಮ್ಮ ದೇಹಕ್ಕೆ ಕಡಿಮೆ ಕ್ಯಾಲೋರಿಗಳು ಇರುವ ಆಹಾರ ಒಳ್ಳೆಯದು. ಅಂತಹ ಆಹಾರಗಳಲ್ಲಿ ಒಂದಾದ ಸಿಹಿ ಗೆಣಸನ್ನು ಸೇವಿಸಿ, ಅದರ ಮೂಲಕ ತೂಕವನ್ನು ಇಳಿಸಿಕೊಳ್ಳಬಹುದು. ಜೊತೆಗೆ ಇದು ನಿಮಗೆ ಹೊಟ್ಟೆ ತುಂಬಿದ ಅನುಭವವನ್ನು ಸಹ ನೀಡುತ್ತದೆ. ಬನ್ನಿ ಅದು ಹೇಗೆ ಎಂದು ತಿಳಿದುಕೊಂಡು ಬರೋಣ: ಏನಾಶ್ಚರ್ಯ, ಸಿಹಿ ಗೆಣಸಿನಿಂದ ಸೌಂದರ್ಯ ವೃದ್ಧಿ..!

ಸಿಹಿ ಗೆಣಸಿನಲ್ಲಿ ನಾರಿನಂಶ ಹೆಚ್ಚಾಗಿರುತ್ತವೆ
ಸಿಹಿ ಗೆಣಸುಗಳಲ್ಲಿ ನಾರಿನಂಶವು ಅಧಿಕವಾಗಿರುತ್ತವೆ ಹಾಗು ಇದರಿಂದಾಗಿ ಇವು ನಿಮ್ಮ ಹೊಟ್ಟೆ ಹಸಿವನ್ನು ತಣಿಸುತ್ತವೆ. ಈ ನಾರಿನಂಶವು ನಿಮಗೆ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ ಮತ್ತು ಹೊಟ್ಟೆ ಹಸಿಯುವಿಕೆಯನ್ನು ನಿಯಂತ್ರಣದಲ್ಲಿಡುತ್ತದೆ. ಒಂದು ಮಧ್ಯಮ ಗಾತ್ರದ ಸಿಹಿಗೆಣಸಿನಲ್ಲಿ, ನಾಲ್ಕು ಗ್ರಾಂ ನಾರಿನಂಶ ಇರುತ್ತದೆ.
ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತವೆ
ಅಲ್ಲದೆ ಯಂತ್ರಣದಲ್ಲಿರುವ ರಕ್ತದ ಸಕ್ಕರೆ ಪ್ರಮಾಣವು ದೇಹವು ಹೊಟ್ಟೆ ಹಸಿಯದಂತೆ ನೋಡಿಕೊಳ್ಳುತ್ತದೆ ಮತ್ತು ಅದನ್ನು ನಿಯಂತ್ರಿಸುತ್ತದೆ. ಜೊತೆಗೆ ಇದರ ಗ್ಲಿಸೆಮಿಕ್ ಇಂಡೆಕ್ಸ್ 50 ಆಗಿರುವುದರಿಂದಾಗಿ, ನಿಮಗೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುವ ಭೀತಿ ಇರುವುದಿಲ್ಲ. ಆದರೂ ನೀವು ಸಿಹಿಗೆಣಸುಗಳನ್ನು ಸುಟ್ಟುಕೊಂಡು ಅಥವಾ ಕರಿದು ತಿನ್ನುವ ಬದಲಿಗೆ ಬೇಯಿಸಿ ತಿನ್ನುವುದು ಉತ್ತಮ. ಸಿಹಿ ಗೆಣಸು ಮಧುಮೇಹಿ ರೋಗಿಗಳ ಪಾಲಿಗೆ ಸಂಜೀವಿನಿ
ಇವುಗಳು ಸ್ವಾಭಾವಿಕ ಸಿಹಿಕಾರಕಗಳು
ಸಿಹಿ ಗೆಣಸುಗಳಲ್ಲಿ ಸ್ವಾಭಾವಿಕ ಸಿಹಿ ಅಂಶಗಳು ಇರುತ್ತವೆ ಮತ್ತು ಇವು ನಿಮಗೆ ಅದ್ಭುತವಾದ ಕಡಿಮೆ ಕ್ಯಾಲೊರಿ ಆಹಾರ ಪದಾರ್ಥವಾಗಿರುತ್ತದೆ. ಹೆಲ್ತಿಫೈ ಮಿ ಪ್ರಕಾರ, ಒಂದು ಮಧ್ಯಮ ಗಾತ್ರದ ಸಿಹಿ ಗೆಣಸು ಕೇವಲ 30 ಕ್ಯಾಲೋರಿಗಳನ್ನು ಮಾತ್ರ ಹೊಂದಿರುತ್ತದೆ. ನಿಮ್ಮ ಹೊಟ್ಟೆ ಹಸಿವನ್ನು ನಿವಾರಿಸಿಕೊಳ್ಳಲು ನೀವು ಸಿಹಿ ಗೆಣಸಿನ ಕಸ್ಟರ್ಡ್ ಅನ್ನು ನಿರಾಳವಾಗಿ ಸೇವಿಸಬಹುದು. ಅವುಗಳು ನಿಮ್ಮ ಹೊಟ್ಟೆಯನ್ನು ಕರಗಿಸಲು ಸಹ ನೆರವಾಗುತ್ತವೆ. ಇವುಗಳಲ್ಲಿ ವಿಟಮಿನ್ ಎ ಅಧಿಕ ಪ್ರಮಾಣದಲ್ಲಿರುತ್ತವೆ ಮತ್ತು ಇವು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಹಾಗು ಕಣ್ಣು, ತ್ವಚೆ ಮತ್ತು ಮೂಳೆಗಳ ಆರೋಗ್ಯವನ್ನು ಸಹ ಹೆಚ್ಚಿಸುತ್ತವೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications



