Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಲಿವರ್ ಸರಿಯಾಗಿ ಕಾರ್ಯ ನಿರ್ವಹಿಸಲು ಇರುವ ಆಹಾರಗಳು
ಮನುಷ್ಯ ಆರೋಗ್ಯಯುತವಾಗಿರಲು ಎಲ್ಲಾ ಅಂಗಾಂಗಳು ಸರಿಯಾದ ಕಾರ್ಯ ನಿರ್ವಹಿಸುವುದು ಅವಶ್ಯಕ. ಅದೇ ರೀತಿ ಪಿತ್ತಜನಕಾಂಗ (ಲಿವರ್). ದೇಹದ ಚಯಾಪಚಯ ಪ್ರಕ್ರಿಯೆಯಲ್ಲಿ ಮಹತ್ವದ ಅಂಗವಾಗಿರುವ ಲಿವರ್, ಸರಿಯಾಗಿ ಕಾರ್ಯ ನಿರ್ವಹಿಸದೇ ಇದ್ದ ಪಕ್ಷದಲ್ಲಿ ಅದು ಮನುಷ್ಯನ ದೇಹಕ್ಕೆ ಮಾರಣಾಂತಿಕ ತೊಂದರೆಯನ್ನೊಡುವುದರಲ್ಲಿ ಅನುಮಾನವಿಲ್ಲ.
ಹಾರ್ಮೋನ್ ಉತ್ಪಾದನೆ ಮತ್ತು ವಿಷದ ಅಂಶವನ್ನು ತೆಗೆದುಹಾಕುವುದು ಇತ್ಯಾದಿ ಅಸಂಖ್ಯಾತ ಕಾರ್ಯಗಳನ್ನು ನಿರ್ವಹಿಸುವ ಲಿವರ್ ಸಮಸ್ಯೆಗೆ ಮನೆಯಲ್ಲೇ ಹಲವು ರೀತಿಯಲ್ಲಿ ಪರಿಹಾರ ಕಂಡುಕೊಳ್ಳಬಹುದು. ದೇಹದ ಪ್ರಮುಖ ಅಂಗವಾಗಿರುವ ಲಿವರ್ ತೂಕ ವಯಸ್ಕರಿಗೆ 1.3 ಕೆಜಿಯಷ್ಟಿರಬೇಕು, ಅಷ್ಟಿದ್ದಲ್ಲಿ ಅದು ಆರೋಗ್ಯಕರ ಸಂಗತಿ. ಲಿವರ್ ರಸಗ್ರಂಥಿಯ ರೀತಿಯಲ್ಲಿ ಕೆಲಸ ಮಾಡಿ, ದೇಹದ ಇತರ ಅಂಗಾಂಗಳಿಂದ ಬರುವ ಕಲ್ಮಶಗಳನ್ನು ದೇಹದಿಂದ ವಿಸರ್ಜಿಸಲು ಸಹಾಯ ಮಾಡುತ್ತದೆ.
ದೇಹದ ಏಕೈಕ ಅವಯವ (ಆರ್ಗನ್) ಮತ್ತು ರಸಗ್ರಂಥಿ ಎಂದರೆ ಅದು ಲಿವರ್. ಆರೋಗ್ಯಕರವಾದ ಲಿವರ್ ರಕ್ತಸಂಚಾರ ಸರಿಯಾದ ರೀತಿಯಲ್ಲಿ ದೇಹದ ಇತರ ಭಾಗಕ್ಕೆ ಸಾಗಲು, ದೇಹಕ್ಕೆ ಮಾರಕವಾಗುವ ಕಲ್ಮಶಗಳನ್ನು ರಕ್ತದ ಅಂಶದಿಂದ ಹೊರಹಾಕಲು, ಕರಳಿನ ಭಾಗದಿಂದ ಜೀರ್ಣಿಸುವ ವೇಳೆ ಬರುವ ಪೌಷ್ಠಿಕಾಂಶಗಳನ್ನು ದೇಹಕ್ಕೆ ಪೂರಕವಾಗುವಂತೆ ಲಿವರ್ ಕೆಲಸ ಮಾಡುತ್ತದೆ.
ಕೆಲವೊಂದು ಆಹಾರಗಳು ಶುದ್ಧವಾದ, ಸರಿಯಾಗಿ ಜೀರ್ಣವಾಗುವ, ಕಲ್ಮಶ ಹೊರಹಾಕಲು ಲಿವರ್ ಗೆ ಸಹಾಯ ಮಾಡುತ್ತದೆ. ಇದರಿಂದಾಗಿ ಲಿವರ್ ಸರಿಯಾದ ರೀತಿಯಲ್ಲಿ ಕೆಲಸ ನಿರ್ವಹಿಸುವುದರಿಂದ ಆರೋಗ್ಯಕರವಾಗಿ ಜೀವನ ನಡೆಸಬಹುದಾಗಿದೆ. ಲಿವರ್ ನಲ್ಲಿರುವ ಜೈವಿಕ ಯೋಗವಾಹಕಗಳು ದೇಹದ ಕಲ್ಮಶಗಳನ್ನು ಹೊರಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಜೊತೆಗೆ, ಎರಡು ಅವಯವಗಳಾದ ಸೆಲೆನಿಯಂ ಮತ್ತು ಆಲಿಸಿನ್‌ಗಳು ಲಿವರ್ ಶುದ್ಧಗೊಳಿಸುವ ಭಾಗಗಳಾಗಿದ್ದು, ಕಲ್ಮಶ ಹೊರಹಾಕುವ ಪದ್ಧತಿಯಲ್ಲಿ ಲಿವರ್‌ಗೆ ತೊಂದರೆಯಾಗದಂತೆ ಈ ಎರಡು ಅಂಗಗಳು ಕಾರ್ಯ ನಿರ್ವಹಿಸುತ್ತದೆ. ಲಿವರ್ ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಉಪಯೋಗಿಸ ಬಹುದಾದ ಪದಾರ್ಥಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಮುಂದೆ ಓದಿ...

ಬೆಳ್ಳುಳ್ಳಿ
ಬೆಳ್ಳುಳ್ಳಿ ದೇಹದ ಕೊಬ್ಬಿನಾಂಶ ಮತ್ತು ರಕ್ತದೊತ್ತಡದ ಅಂಶವನ್ನು ಲೆವೆಲ್ ಮಾಡಲು ಇರುವ ಅತ್ಯುತ್ತಮ ಪದಾರ್ಥ. ಆದರೂ ಅತಿಹೆಚ್ಚು ಬೆಳ್ಳುಳ್ಳಿ ಲಿವರ್ ಸರಿಯಾಗಿ ಕಾರ್ಯನಿರ್ವಹಿಸಲು ಸೂಕ್ತವಲ್ಲ. ಲಿವರ್ ದೇಹಕ್ಕೆ ಸೂಕ್ತವಾಗಿ ಸ್ಪಂಧಿಸಲು ಕಚ್ಚಾ ಬೆಳ್ಳುಳಿ, ಸಣ್ಣಸಣ್ಣ ಚೂರುಗಳನ್ನಾಗಿ ಮಾಡಿರುವ ಬೆಳ್ಳುಳ್ಳಿ ಅಥವಾ ಬೆಳ್ಳುಳ್ಳಿ ಪೌಡರ್, ಲಿವರ್ ಸೂಕ್ತವಾಗಿ ಕಾರ್ಯ ನಿರ್ವಹಿಸಲು ಇರುವ ಅತ್ಯುತ್ತಮ ಪದಾರ್ಥಗಳಲ್ಲೊಂದು.

ದ್ರಾಕ್ಷಿ ಹಣ್ಣು
ವಿಟಮಿನ್ ಸಿ, ಶರ್ಕರ ಪಿಷ್ಟ (ಪೆಕ್ಟಿನ್), ಆಂಟಿಯೋಡ್ಯಾಂಟ್ಸ್ ಅಂಶ ಹೆಚ್ಚು ಇರುವುದರಿಂದ ದ್ರಾಕ್ಷಿಹಣ್ಣು ಲಿವರ್ ಉತ್ತಮವಾಗಿ ಕೆಲಸ ಮಾಡಲು ಇರುವ ಅತ್ಯುತ್ತಮ ಹಣ್ಣುಗಳಲ್ಲೊಂದು. ಇದಲ್ಲದೇ ಗ್ಲುಟತೋನ್, ಶಕ್ತಿಶಾಲಿ ಅಂಶವನ್ನು ಹೊಂದಿರುವ ಆಂಟಿಯೊಡೆಂಟ್, ಕೂಲಂಕುಷವಾಗಿ ಲಿವರ್ ಭಾಗಕ್ಕೆ ಸರಬರಾಜು ಆಗುತ್ತದೆ. ದ್ರಾಕ್ಷಿಹಣ್ಣಿನಲ್ಲಿರುವ ಕೆಲವೊಂದು ಅಂಶಗಳಿಂದ ಇದು ಕೊಬ್ಬಿನಾಂಶ ಕಡಿಮೆ ಮಾಡಲೂ ಸಹಾಯಕಾರಿ.

ಬೀಟ್ರೂಟ್
ಲಿವರ್ ಸೂಕ್ತವಾಗಿ ಕಾರ್ಯ ನಿರ್ವಹಿಸಲು ಬೀಟ್ರೂಟ್ ಕೂಡಾ ಒಂದು ಒಳ್ಳೆಯ ತರಕಾರಿ. ಭೂಮಿಯ ಕೆಳಗೆ ಬೆಳೆಯುವ ಗೆಡ್ಡೆಗೆಣಸು ಇದಾಗಿರುವುದರಿಂದ ಕ್ರೋಟೀನ್ ಅಂಶ ಇದರಲ್ಲಿ ಹೆಚ್ಚಿರುತ್ತದೆ, ಬೀಟ್ರೂಟ್ ಒಟ್ಟಾರೆಯಾಗಿ ಲಿವರ್ ಉತ್ತಮವಾಗಿ ಕಾರ್ಯ ನಿರ್ವಹಿಸಲು ಉತ್ತಮ ತರಕಾರಿಯಲ್ಲೊಂದು.

ಲಿಂಬೆಹಣ್ಣು
ಆಂಟಿಯೊಡೆಂಟ್ - ಡಿಲಿಮೊನೆನ್ಸ್ ಅಂಶವನ್ನು ತಡೆಗಟ್ಟಲು ಲಿಂಬೆಹಣ್ಣು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದರಿಂದ ಜೈವಿಕ ಯೋಗವಾಹಕ ಪ್ರಕ್ರಿಯೆಗಳು ಲಿವರ್ ನಲ್ಲಿ ಸರಾಗವಾಗಿವಾಗುತ್ತದೆ. ಲಿಂಬೆಹಣ್ಣಿನಲ್ಲಿರುವ ಉಚ್ಚ ವಿಟಮಿನ್ ಸಿ ಅಂಶ ಜೀರ್ಣ ಪ್ರಕ್ರಿಯೆ ಸರಿಯಾಗಿ ಸಾಗಿ ಲಿವರ್ ಗೆ ಸಹಾಯ ಮಾಡುತ್ತದೆ.

ಹಸಿರು ಟೀ
ಹಸಿರು ಟೀಯನ್ನು (ಗ್ರೀನ್ ಟೀ) ದಿನಾ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡರೆ ದೇಹದಲ್ಲಿರುವ ಕಲ್ಮಶ ಮತ್ತು ಕೊಬ್ಬಿನಾಂಶ ಹೊರಹೋಗುವ ಸಮಯದಲ್ಲಿ ಉತ್ವತ್ತಿಯಾಗುವ ಹೈಡ್ರೇಶನ್ ತಾಪದ ಪರಿಣಾಮದಿಂದ ಹೊರಬರಬಹುದು. 2002ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಹಸಿರು ಟೀನಲ್ಲಿರುವ ಕ್ಯಾಚಿನ್ಸ್ 2002ರ ಅಧ್ಯಯನವೊಂದು ಹಸಿರು ಚಹಾದಲ್ಲಿರುವ ಕ್ಯಾಟ್ಚಿನ್ಸ್ ಯಕೃತ್ತು ಲಿಪಿಡ್ ನ ಅಪಚಯ ಕ್ರಿಯೆಗೆ ಸಹಾಯ ಮಾಡುತ್ತದೆ ಎಂದು ಕಂಡುಹಿಡಿದರು. ಇದು ಲಿವರ್ ನಲ್ಲಿರುವ ಕೊಬ್ಬಿನಾಂಶ ಶೇಖರವಾಗುವುದನ್ನು ತಡೆಗಟ್ಟುತ್ತದೆ. ಈ ಆರೋಗ್ಯದಾಯಕ ಪಾನೀಯ ದೇಹದಲ್ಲಿರುವ ಕಲ್ಮಶಗಳನ್ನು ಮತ್ತು ಮದ್ಯಪಾನ ಮುಂತಾದವುಗಳಿಂದಾಗುವ ದುಷ್ಪರಿಣಾಮಗಳಿಂದ ಹೊರಬರಲು ಸಹಾಯ ಮಾಡುತ್ತದೆ.

ಹಸಿರು ಟೀ
2009ರಲ್ಲಿನ ಅಧ್ಯಯನದ ಪ್ರಕಾರ ಗ್ರೀನ್ ಟೀ (ಹಸಿರು ಚಹಾ) ಲಿವರ್ ಸಂಬಂಧಿ ಕಾಯಿಲೆಯಿಂದ ದೂರವಿರಲು ಪರಿಹಾರ ನೀಡುತ್ತದೆ. ಗ್ರೀನ್ ಟೀ ಕುಡಿಯುವ ಅಭ್ಯಾಸವಿರುವವರು ಲಿವರ್ ಕ್ಯಾನ್ಸರ್ ಸಂಬಂಧಿ ಕಾಯಿಲೆಯಿಂದ ಬಳಲುವ ಸಾಧ್ಯತೆ ಕಡಿಮೆ. ನಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಹಾಗಾಗಿ, ಮೇಲೆ ಹೇಳಿರುವ ಆರೋಗ್ಯ ಸಂಬಂಧಿ ಪದಾರ್ಥಗಳನ್ನು ಹೆಚ್ಚುಹೆಚ್ಚು ಬಳಸಿ, ಇದರಿಂದ ಲಿವರ್ ಕಾರ್ಯ ಸೂಕ್ತವಾಗಿ/ ಸರಾಗವಾಗಿ ನಡೆಯುತ್ತದೆ.



Click it and Unblock the Notifications
