Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೆನ್ನೇರಿ ಕಾಡುವ ತಲೆನೋವಿಗೆ ಸಾಂತ್ವನ ನೀಡುವ ಎಣ್ಣೆಗಳು
ತಲೆನೋವು ಏಕೆ ಬರುತ್ತದೆ ಎಂಬುದಕ್ಕೆ ಸೂಕ್ತ ಉತ್ತರವನ್ನು ಇನ್ನೂ ಕಂಡುಕೊಳ್ಳಲಾಗಿಲ್ಲ. ಸಾಮಾನ್ಯ ಕಾರಣಗಳೆಂದರೆ ಸೈನಸ್ ಅಥವಾ ಕುಹರ (ಮೂಗಿನ ಮೇಲೆ, ಎರಡು ಕಣ್ಣುಗಳ ನಡುವೆ ತಲೆಬುರುಡೆಯಲ್ಲಿರುವ ಟೊಳ್ಳು ಭಾಗ) ದಲ್ಲಿ ಸೋಂಕು, ಕಣ್ಣಿನ ದೃಷ್ಟಿಯಲ್ಲಿ ಏರುಪೇರು, ಕೆಲವು ವಿಶಿಷ್ಟ ಕಂಪನದ ಸದ್ದು, ಕೆಲವು ಔಷಧಿಗಳ ಅಡ್ಡಪರಿಣಾಮಗಳು, ಸೂರ್ಯನ ಬೆಳಕಿನೊಂದಿಗೆ ಹೆಚ್ಚು ಕಡಿಮೆಯಾಗುವ ತಲೆನೋವು ಇತ್ಯಾದಿ. ಯಾವುದೇ ತಲೆನೋವನ್ನು ಕಡಿಮೆಗೊಳಿಸಲು ಇದು ಪ್ರಾರಂಭವಾದ ತಕ್ಷಣ ತೆಗೆದುಕೊಂಡರೆ ಮಾತ್ರ ಸುಲಭವಾಗುತ್ತದೆಯೇ ವಿನಃ ಒಮ್ಮೆ ತೀವ್ರಗತಿಗೆ ಏರಿತೋ, ಆಗ ಇದನ್ನು ಪೂರ್ಣ ಅನುಭವಿಸಿಯೇ ತೀರಬೇಕು.
ಅದರಲ್ಲೂ ತಲೆನೋವಿನ ಅತ್ಯುಗ್ರ ರೂಪವಾದ ಮೈಗ್ರೇನ್ ತಲೆನೋವನ್ನು ಅನುಭವಿಸಿದವರಿಗೇ ಇದರ ಪ್ರಭಾವವೇನೆಂದು ಗೊತ್ತು. ಇದಕ್ಕೆ ಒಂದು ಉತ್ತಮ ಪರಿಹಾರವೆಂದರೆ ಮೆದುಳಿಗೆ ರಕ್ತ ಹರಿಯುವ ನರಗಳನ್ನು ಪ್ರಚೋದಿಸಿ ರಕ್ತಸಂಚಾರ ಹೆಚ್ಚುವಂತೆ ಮಾಡುವುದು. ಅಮೃತಾಂಜನ, ಟೈಗರ್ ಬಾಮ್ ಮೊದಲಾದುವೆಲ್ಲಾ ಮಾಡುವುದೇ ಇದು. ಈ ನಿಟ್ಟಿನಲ್ಲಿ ಕೆಲವು ಅವಶ್ಯಕ ತೈಲ (essential oil) ಗಳೂ ತಲೆನೋವು ಕಡಿಮೆ ಮಾಡುವಲ್ಲಿ ಸಮರ್ಥವಾಗಿವೆ. ಇದೂ ಸಹಾ ತಲೆನೋವು ಪ್ರಾರಂಭವಾದ ಕ್ಷಣಗಳಲ್ಲಿಯೇ ಅನುಸರಿಸಿದರೆ ಉತ್ತಮ ಪರಿಣಾಮ ಬೀರುವ ಕಾರಣ ತಲೆನೋವಿನ ತೊಂದರೆ ಇರುವವರು ತಮಗೆ ಸೂಕ್ತವಾದ ಪ್ರಮಾಣವನ್ನು ಸದಾ ತಮ್ಮೊಂದಿಗೆ ಇರುವಂತೆ ನೋಡಿಕೊಳ್ಳುವುದು ಅವಶ್ಯವಾಗಿದೆ.
ಈ ಅವಶ್ಯಕ ತೈಲಗಳ ಸುವಾಸನೆ ತಲೆನೋವಿನಿಂದ ವ್ಯಗ್ರಗೊಂಡಿದ್ದ ಮನಸ್ಸನ್ನು ನಿರಾಳಗೊಳಿಸಲೂ ನೆರವಾಗುವ ಮೂಲಕ ತಲೆನೋವು ಮತ್ತು ಇದರ ಪರಿಣಾಮದಿಂದ ಬಳಲಿದ್ದ ಮನಕ್ಕೂ ಶಾಂತಿ ದೊರಕುತ್ತದೆ. ಇವನ್ನು ಆರೋಮಾಥೆರಪಿಯಲ್ಲಿ ಬಳಸಲಾಗುವ ಡಿಫ್ಯೂಸರ್ (diffuser) ಎಂಬ ಉಪಕರಣ ಬಳಸಿ ಅಥವಾ ಇನ್ ಹೇಲರ್ ಬಳಸಿ ನೇರವಾಗಿ ಮೂಗಿನ ಮೂಲಕ ಆಘ್ರಾಣಿಸುವ ಮೂಲಕ ಅಥವಾ ನೇರವಾಗಿ ಹಣೆ ಮತ್ತು ಕಿವಿಯ ಹಿಂಭಾಗಕ್ಕೆ ಹಚ್ಚುವ ಮೂಲಕ ತಲೆನೋವಿಗೆ ಚಿಕಿತ್ಸೆ ನೀಡಬಹುದು. ಬನ್ನಿ, ಈ ಅವಶ್ಯಕ ತೈಲಗಳು ಯಾವುವು ಎಂಬ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ...

ಲ್ಯಾವೆಂಡರ್
ಮಲ್ಲಿಗೆಯಂತಹ ಸುವಾಸನೆ ಹೊಂದಿರುವ ಲ್ಯಾವೆಂಡರ್ ಹೂವಿನ ತೈಲದಲ್ಲಿ linalyl acetate ester ಎಂಬ ಪೋಷಕಾಂಶಗಳಿದ್ದು ಇವು ಅತ್ಯುತ್ತಮವಾದ ಉರಿಯೂತ ನಿವಾರಕಗಳಾಗಿವೆ. ಇವು ನರಗಳ ಮೂಲಕ ಹಾದುಹೋಗುವಾಗ ನೋವಿನ ಪ್ರಭಾವವನ್ನು ಕಡಿಮೆಗೊಳಿಸುವ ಕಡಿಮೆಗೊಳಿಸುವ (sedative) ಗುಣವನ್ನು ಹೊಂದಿದ್ದು ತಲೆನೋವನ್ನೂ ಕಡಿಮೆಮಾಡಲು ನೆರವಾಗುತ್ತವೆ.

ನೀಲಗಿರಿ ಎಣ್ಣೆ
ವಿಶೇಷವಾಗಿ ಸೈನಸ್ ಸೋಂಕಿನಿಂದ ತಲೆನೋವು ಉಂಟಾಗಿದ್ದರೆ ನೀಲಗಿರಿ ಎಣ್ಣೆ ಅತ್ಯುತ್ತಮವಾದ ಆಯ್ಕೆಯಾಗಿದೆ. ಈ ಎಣ್ಣೆಯ ಕೆಲವು ತೊಟ್ಟುಗಳಿಂದ ಹಣೆ, ಹಣೆಯ ಪಕ್ಕದ ಭಾಗ (ಕಿವಿಯ ಮುಂದೆ, ಕನ್ನಡಕ ತೊಟ್ಟಾಗ ಪಟ್ಟಿ ತಾಕುವ ಭಾಗ) ಮತ್ತು ಕಿವಿಯ ಹಿಂಭಾಗದ ಮೂಳೆ ಇರುವಲ್ಲಿ ಹಚ್ಚಿದರೆ ಅತ್ಯುತ್ತಮ ಪರಿಹಾರವನ್ನು ಪಡೆಯಬಹುದು. ಆದರೆ ಈ ಎಣ್ಣೆ ಕಣ್ಣಿಗೆ ಹೋದರೆ ಭಾರೀ ಉರಿ ತರಿಸುವ ಕಾರಣ ಕಣ್ಣಿಗೆ ಹೋಗದಂತೆ ಅತಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು.

ಹೆಲಿಕ್ರೈಸಮ್ (Helichrysum)
ಈ ಎಣ್ಣೆಯನ್ನು ಆಘ್ರಾಣಿಸಲು ಡಿಫ್ಯೂಸರ್ ಯಂತ್ರದ ಅವಶ್ಯಕತೆ ಇದೆ. ಈ ಎಣ್ಣೆಯ ಸುವಾಸನೆಯನ್ನು ಸೇವಿಸಿದಾಗ ಇದರ ಚಿಕಿತ್ಸಕ ಗುಣಗಳ ಕಾರಣ ನರಗಳು ಸಡಿಲಗೊಂಡು ಮೆದುಳಿಗೆ ಹೆಚ್ಚಿನ ರಕ್ತಸಂಚಾರ ಒದಗಿಸಲು ನೆರವಾಗುವ ಮೂಲಕ ತಲೆನೋವು ಕಡಿಮೆಗೊಳ್ಳಲು ಸಾಧ್ಯವಾಗುತ್ತದೆ. ಇದು ಅಲರ್ಜಿಕಾರಕವೂ ಅಲ್ಲ, ವಿಷಕಾರಿಯೂ ಅಲ್ಲದ ಕಾರಣ ಎಲ್ಲರಿಗೂ ಉತ್ತಮವಾದರೂ ಮನೆಯಲ್ಲಿ ಗರ್ಭಿಣಿಯರು ಇದ್ದರೆ ಮಾತ್ರ ಇದರ ಬಳಕೆ ಸಲ್ಲದು.

ರೋಮನ್ ಕ್ಯಾಮೋಮೈಲ್ (Roman Chamomile)
ಈ ಎಣ್ಣೆಯ ಕೆಲವು ಬಿಂದುಗಳನ್ನು ನೀವು ಸ್ನಾನ ಮಾಡುವ ನೀರಿನಲ್ಲಿ ಹಾಕಿ ಈ ನೀರಿನಿಂದ ಸ್ನಾನ ಮಾಡಿಕೊಂಡರೆ ಸೂರ್ಯನ ಬೆಳಕಿನ ಮೂಲಕ ಬರುವ ತಲೆನೋವು ಕಡಿಮೆಯಾಗುತ್ತದೆ. ಪರ್ಯಾಯವಾಗಿ ಕೊಂಚ ಎಣ್ಣೆಯನ್ನು ಉಗುರುಬೆಚ್ಚಗೆ ಬಿಸಿಮಾಡಿ ಹಣೆಯ ಪಕ್ಕದ ಭಾಗಕ್ಕೆ ಮಸಾಜ್ ಸಹಾ ಮಾಡಬಹುದು.

ಪುದೀನಾ ಎಣ್ಣೆ
ಒಂದು ವೇಳೆ ಮಾನಸಿಕ ಒತ್ತಡದಿಂದ ತಲೆನೋವು ಉಂಟಾಗಿದ್ದರೆ ಇದಕ್ಕೆ ಪುದೀನಾ ಎಣ್ಣೆ ಅತ್ಯುತ್ತಮ ಪರಿಹಾರ ನೀಡುತ್ತದೆ. ಅಷ್ಟೇ ಅಲ್ಲ ಇದರ ಕಾರಣ ಉಂಟಾಗಿದ್ದ ಸೆಳೆತ ಹಾಗೂ ಮೈಕೈನೋವಿಗೂ ಉತ್ತಮ ಪರಿಹಾರ ದೊರಕುತ್ತದೆ. ಈ ಎಣ್ಣೆಯನ್ನು ತಲೆಗೂ ಹಚ್ಚಬಹುದು, ಇನ್ ಹೇಲರ್ ಮೂಲಕ ಸೆಳೆದುಕೊಳ್ಳಬಹುದು ಅಥವಾ ಮಂದ ಉರಿಯ ಮೇಲೆ ಬಿಸಿಯಾಗಿಸಿ ಇದರ ಸುವಾಸನೆಯನ್ನೂ ಆಘ್ರಾಣಿಸಬಹುದು.

ಸ್ಪಿಯರ್ ಮಿಂಟ್ (Spearmint)
ಒಂದು ವೇಳೆ ಪುದೀನಾ ಎಣ್ಣೆ ಬಹಳ ಗಾಢವಾಯಿತು ಅನ್ನಿಸಿದರೆ ಸ್ಪಿಯರ್ ಮಿಂಟ್ ಎಣ್ಣೆಯನ್ನು ಬಳಸಬಹುದು. ಇದು ತಿಳಿಹಸಿರು ಬಣ್ಣದ ಎಣ್ಣೆಯಾಗಿದ್ದು ಗಾಳಿಯಲ್ಲಿ ಸಿಹಿಯಾದ ವಾಸನೆಯನ್ನು ಪಸರಿಸುತ್ತದೆ. ಇದನ್ನು ಕೊಂಚವೇ ಬಿಸಿಮಾಡಿ ಹಣೆ ಮತ್ತು ಹಣೆಯ ಪಕ್ಕದ ಭಾಗಗಳಿಗೆ ಹಚ್ಚುವ ಮೂಲಕ ತಲೆನೋವು ಕಡಿಮೆಯಾಗುತ್ತದೆ.



Click it and Unblock the Notifications









