Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಕೊತ್ತಂಬರಿ ಸೊಪ್ಪಿನಲ್ಲಿದೆ, ಲೆಕ್ಕಕ್ಕೆ ಸಿಗದಷ್ಟು ಗುಣಗಳು
ಕೊತ್ತಂಬರಿ ಸೊಪ್ಪನ್ನು ಅಡುಗೆಯಲ್ಲಿ ಸ್ವಾದ ಮತ್ತು ಕಂಪು ಹೆಚ್ಚಿಸಲು ಕೊನೆಯದಾಗಿ ಬಳಸಲಾಗುತ್ತದೆ. ಸಾಲಾಡ್, ಚಟ್ನಿ ಮೊದಲಾದವುಗಳಲ್ಲಿ ಕೊತ್ತಂಬರಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇದರ ಪ್ರಯೋಜನ ಕೇವಲ ಅಡುಗೆಯಲ್ಲಿ ಮಾತ್ರವಲ್ಲ, ದೇಹದ ಆರೈಕೆಗೂ ವ್ಯಾಪಿಸಿದೆ. ಎಷ್ಟೋ ತೊಂದರೆಗಳ ಚಿಕಿತ್ಸೆಗೆ ಸಾವಿರಾರು ರೂಪಾಯಿ ವೆಚ್ಚವಾಗುತ್ತಿದ್ದುದು ಕೊತ್ತಂಬರಿಯಿಂದ ಅಲ್ಪವೆಚ್ಚದಲ್ಲಿ ಗುಣವಾಗಿದೆ.
ಇದರಲ್ಲಿರುವ ವಿವಿಧ ಪೋಷಕಾಂಶಗಳು, ವಿಶೇಷವಾಗಿ ಪೊಟ್ಯಾಶಿಯಂ ಹಲವು ರೀತಿಯಲ್ಲಿ ದೇಹಕ್ಕೆ ಅನುಕೂಲಕರವಾಗಿದೆ. ಉಳುಕು, ಸುಟ್ಟಗಾಯ ಮೊದಲಾದವುಗಳಿಗೆ ದೇಹದ ಹೊರಗಿನಿಂದ ಆರೈಕೆ ನೀಡಿದರೆ ಆಹಾರದ ಮೂಲಕ ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮಗೊಳಿಸುವ ಮತ್ತು ಇನ್ನೂ ಹಲವಾರು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ...

ಕೂದಲು ಉದುರುವುದನ್ನು ತಪ್ಪಿಸುತ್ತದೆ
ಕೊತ್ತಂಬರಿಯಲ್ಲಿ ಅಧಿಕ ಪ್ರಮಾಣದಲ್ಲಿ ಪೊಟ್ಯಾಶಿಯಂ ಇದ್ದು ವಿಶೇಷವಾಗಿ ಕೂದಲ ಉದುರುವಿಕೆಗೆ ಕಾರಣವಾಗುವ ಕೂದಲ ಬುಡ ಸಡಿಲವಾಗುವುದನ್ನು ತಪ್ಪಿಸುತ್ತದೆ. ಇದಕ್ಕಾಗಿ ಒಂದು ಕಪ್ ಅಥವಾ ಉದ್ದ ಕೂದಲಿದ್ದರೆ ಇನ್ನೂ ಹೆಚ್ಚು ಕೊತ್ತಂಬರಿ ಎಲೆಗಳನ್ನು ಅರೆಯಿರಿ. ಇದರೊಂದಿಗೆ ಸಮಪ್ರಮಾಣದಲ್ಲಿ ನೆನೆಸಿಟ್ಟ ಮೆಂತೆ ಮತ್ತು ಈಗತಾನೇ ಹಿಂಡಿದ ತೆಂಗಿನ ಹಾಲನ್ನು ಮಿಶ್ರಣ ಮಾಡಿ ದಪ್ಪನೆಯ ಲೇಪನ ತಯಾರಿಸಿ. ಈ ಲೇಪನವನ್ನು ಕೂದಲ ಬುಡಕ್ಕೆ ತಗಲುವಂತೆ ನಯವಾಗಿ ಮಸಾಜ್ ಮಾಡುತ್ತಾ ಹಚ್ಚಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕೂದಲು ಉದುರುವುದನ್ನು ತಪ್ಪಿಸುತ್ತದೆ
ಅರ್ಧ ಗಂಟೆಯ ಬಳಿಕ ಸೌಮ್ಯ ಶಾಂಪೂ ಮತ್ತು ಉಗುರುಬೆಚ್ಚನೆಯ ನೀರು ಬಳಸಿ ಸ್ನಾನ ಮಾಡಿ. ವಾರಕ್ಕೆ ಎರಡು ಅಥವಾ ಮೂರು ಬಾರಿ ಈ ವಿಧಾನವನ್ನು ಅನುಸರಿಸಿ. ಕೆಲವೇ ದಿನಗಳಲ್ಲಿ ಕೂದಲು ಉದುರುವುದು ನಿಂತಿರುವುದೂ ಕೇಶ ಕಾಂತಿಯುಕ್ತವಾಗಿರುವುದನ್ನೂ ಗಮನಿಸಬಹುದು.

ಮೊಡವೆಗಳನ್ನು ಇಲ್ಲವಾಗಿಸುತ್ತದೆ
ಹದಿಹರೆಯದಲ್ಲಿ ಕಾಡುವ ಮೊಡವೆಗಳಿಗೆ ಕೊತ್ತಂಬರಿಯ ಬಳಿ ತಕ್ಕ ಪರಿಹಾರವಿದೆ. ದುಬಾರಿ ಪ್ರಸಾದನಗಳೂ ಕೊತ್ತಂಬರಿಯಷ್ಟು ಸಮರ್ಥವಾಗಿ ಮೊಡವೆಗಳನ್ನು ಕಲೆಯಿಲ್ಲದೇ ನಿವಾರಿಸಲಾರವು. ಇದಕ್ಕಾಗಿ ಕೊಂಚ ಕೊತ್ತಂಬರಿ ಎಲೆಗಳನ್ನು ದಂಟು ಸಹಿತ ನುಣ್ಣಗೆ ಅರೆಯಿರಿ. ಈ ಲೇಪನವನ್ನು ನೇರವಾಗಿ ಮೊಡವೆಗಳ ಮೇಲೆ ದಪ್ಪನಾಗಿ ಹಚ್ಚಿ. ಮೊಡವೆಗಳು ಹೆಚ್ಚಿದ್ದರೆ ಇಡಿಯ ಮುಖಕ್ಕೆ ಹಚ್ಚಿ. ಹದಿನೈದು ನಿಮಿಷಗಳವರೆಗೆ ಈ ಲೇಪನ ಒಣಗಲು ಬಿಡಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮೊಡವೆಗಳನ್ನು ಇಲ್ಲವಾಗಿಸುತ್ತದೆ
ಬಳಿಕ ತಣ್ಣೀರಿನಿಂದ ಅಥವಾ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಸರ್ವಥಾ ಸೋಪು ಹಚ್ಚಬೇಡಿ. ಉಗುರನ್ನಂತೂ ತಾಕಿಸಲೇ ಬಾರದು. ಮುಂದಿನ ದಿನಗಳಲ್ಲಿ ಮೊಡವೆ ಇನ್ನೂ ಕೆಂಪಗಾಗಿ ದೊಡ್ಡದಾಗುತ್ತದೆ. ಆದರೆ ನಿಧಾನವಾಗಿ ಕರಗುತ್ತಾ ಕಲೆಯಿಲ್ಲದೇ ಮಾಯವಾಗುತ್ತದೆ. ಈ ಭಾಗದ ಚರ್ಮ ಕಲೆಯಿಲ್ಲದಂತಿರುತ್ತದೆ. ಅಪ್ಪಿ ತಪ್ಪಿ ಎಲ್ಲಾದರೂ ಮೊಡವೆಯನ್ನು ಒಡೆದರೆ ಅಲ್ಲಿ ಶಾಶ್ವತವಾದ ಕಲೆ ಉಳಿಯುವ ಸಾಧ್ಯತೆಯಿದೆ.

ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ
ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ಇದೆ. ಈ ಊಟದ ಕೊನೆಯಲ್ಲಿ ಕೊತ್ತಂಬರಿ ಸೇರಿಸಿದ ಮಜ್ಜಿಗೆ ಸಹಾ ಇದೆ. ಏಕೆಂದರೆ ಜೀರ್ಣಕ್ರಿಯೆ ಉತ್ತಮಗೊಳಿಸಲು ಕೊತ್ತಂಬರಿ ಸಹಕಾರಿಯಾಗಿದೆ. ಆದರೆ ಮಜ್ಜಿಗೆಗಿಂತಲೂ ಕೊತ್ತಂಬರಿ ನೆನೆಸಿಟ್ಟ ನೀರು ಹೆಚ್ಚು ಪರಿಣಾಮಕಾರಿ. ಇದಕ್ಕಾಗಿ ಒಂದ್ ಜಗ್ ಭರ್ತಿ ನೀರು ತುಂಬಿಸಿ ಇದಕ್ಕೆ ಕೆಲವು ದಂಡು ಕೊತ್ತಂಬರಿ ಸೊಪ್ಪು ಮತ್ತು ಅಡ್ಡಲಾಗಿ ಕೊಯ್ದ ಲಿಂಬೆಹಣ್ಣಿನ ಬಿಲ್ಲೆಗಳನ್ನು ಸೇರಿಸಿ ಇಡಿಯ ರಾತ್ರಿ ನೆನೆಸಿಡಿ. ಈ ನೀರನ್ನು ಮರುದಿನ ಹಲವು ಬಾರಿ ಕುಡಿದು ಸಂಜೆಯ ಒಳಗೆ ಖಾಲಿ ಮಾಡಿ.

ರಕ್ತ ಹೆಪ್ಪುಗಟ್ಟಲು ಸಹಕರಿಸುತ್ತದೆ
ಕೊತ್ತಂಬರಿಯಲ್ಲಿ ಉತ್ತಮ ಪ್ರಮಾಣದ ಸಸ್ಯಜನ್ಯ ವಿಟಮಿನ್ ಕೆ1 ಇದ್ದು ರಕ್ತ ಹೆಪ್ಪುಗಟ್ಟಲು, ಮೂಳೆಗಳಲ್ಲಿ ದೃಢತೆ ಹೆಚ್ಚಿಸಲು, ನರಗಳ ದೃಢತೆ ಹೆಚ್ಚಿಸಲು, ತನ್ಮೂಲಕ ಹೃದಯದ ಕ್ಷಮತೆ ಹೆಚ್ಚಿಸಲು, ಕೆಲವು ವಿಧದ ಕ್ಯಾನ್ಸರ್ ತಡೆಗಟ್ಟಲು ನೆರವಾಗುತ್ತದೆ.

ವಿವಿಧ ರೀತಿಯಲ್ಲಿ ಆರೋಗ್ಯ ವೃದ್ಧಿಸುತ್ತದೆ
ಕೊತ್ತಂಬರಿಯ ನಿಯಮಿತ ಸೇವನೆಯಿಂದ ಒಟ್ಟಾರೆ ಆರೋಗ್ಯ ಉತ್ತಮಗೊಳ್ಳುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು, ಖನಿಜಗಳಾದ ಕಬ್ಬಿಣ, ಪೊಟ್ಯಾಶಿಯಂ, ಮೆಗ್ನೀಶಿಯಂ, ಮ್ಯಾಂಗನೀಸ್, ಕ್ಯಾಲ್ಸಿಯಂ ಇತ್ಯಾದಿಗಳು ಹಲವು ರೀತಿಯಲ್ಲಿ ಆರೋಗ್ಯಕ್ಕೆ ಉಪಕಾರಿಯಾಗಿವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ವಿವಿಧ ರೀತಿಯಲ್ಲಿ ಆರೋಗ್ಯ ವೃದ್ಧಿಸುತ್ತದೆ
ರಕ್ತದ ಒತ್ತಡ ಸೂಕ್ತಪ್ರಮಾಣದಲ್ಲಿರಿಸಲು, ಜೀರ್ಣಕ್ರಿಯೆ ಹೆಚ್ಚಿಸಲು, ಜೀರ್ಣಾಂಗಗಳಲ್ಲಿ ವಾಯುಪ್ರಕೋಪವಾಗದಂತೆ ತಡೆಯಲು, ಶಿಲೀಂಧ್ರಗಳ ಸೋಂಕಿನಿಂದ ರಕ್ಷಿಸಲು ಇದರ ಪೋಷಕಾಂಶಗಳು ನೆರವಾಗುತ್ತವೆ. ಕೊತ್ತಂಬರಿ ಉತ್ತಮ ಕಾಮೋತ್ತೇಜಕವೂ ಆಗಿದ್ದು ನಿತ್ಯವೂ ಕೊತ್ತಂಬರಿ ನೆನೆಸಿಟ್ಟ ನೀರನ್ನು ಕುಡಿಯುವುದರಿಂದ ಹಲವು ರೀತಿಯ ಲಾಭಗಳಿವೆ



Click it and Unblock the Notifications









