Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಉಸಿರಾಟದ ಸಮಸ್ಯೆಯನ್ನು ಅಪ್ಪಿತಪ್ಪಿಯೂ ಕಡೆಗಣಿಸಬೇಡಿ
ನಿತ್ಯಜೀವನದ ಚಟುವಟಿಕೆಗಳಿಗೆ ಸಾಮಾನ್ಯ ಉಸಿರಾಟವೇ ಸಾಕಾಗುವುದರಿಂದ ಈ ಸ್ಥಿತಿಗೆ ಒಳಗಾಗಿರುವ ವ್ಯಕ್ತಿಗಳಿಗೆ ತಮಗೆ ಈ ತೊಂದರೆ ಇದೆ ಎಂಬುವುದೇ ಗೊತ್ತಿರುವುದಿಲ್ಲ. ಇದು ಗೊತ್ತಾಗಬೇಕಾದರೆ ಒಮ್ಮೆ ಅನಿವಾರ್ಯವಾಗಿ ಕೊಂಚ ದೂರ ಓಡಿ ನಿಂತ ಬಳಿಕ ಉಸಿರು
ಆಧುನಿಕ ಜೀವನಶೈಲಿ ಹಾಗೂ ಸರಿಯಾದ ವ್ಯಾಯಾಮವಿಲ್ಲದೆ ಇರುವ ಕಾರಣದಿಂದಾಗಿ ವಯಸ್ಸಾಗುತ್ತಾ ಇರುವಂತೆ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಉಸಿರಾಟದ ಸಮಸ್ಯೆ ವಯಸ್ಸಾಗುತ್ತಾ ಇರುವಂತೆ ಹಲವರನ್ನು ಕಾಡುವುದು. ಉಸಿರಾಡಲು ಕಷ್ಟವಾಗುವುದು ಯಾವುದೋ ಒಂದು ರೋಗವಾಗಿದೆ. ಅಚ್ಚರಿ ಆದರೂ ಸತ್ಯ- ಉಸಿರಾಟದ ಮೂಲಕ ಆರೋಗ್ಯವೃದ್ಧಿಸಿ!
ಇದರಿಂದ ನೀವು ವೈದ್ಯರನ್ನು ಭೇಟಿಯಾಗಿ ಅವರಿಂದ ಚಿಕಿತ್ಸೆ ಪಡೆದುಕೊಳ್ಳಲು ಹೋದರೆ ನಿಮಗೆ ಯಾವೆಲ್ಲಾ ರೀತಿಯ ಸಮಸ್ಯೆಗಳು ಆಗುತ್ತಾ ಇರುತ್ತದೆ ಎಂದು ಕೇಳುತ್ತಾರೆ. ಇದನ್ನು ಪರಿಶೀಲಿಸಿ ಅವರು ನಿಮಗೆ ಔಷಧಿ ಸೂಚಿಸುತ್ತಾರೆ. ಉಸಿರಾಡಲು ಕಷ್ಟಪಡುವುದರಿಂದ ಉಂಟಾಗುವ ಕೆಲವೊಂದು ಆರೋಗ್ಯ ಸಮಸ್ಯೆಗಳ ಬಗ್ಗೆ ವಿವರ ನೀಡಲಾಗಿದೆ. ಇದನ್ನು ತಿಳಿದುಕೊಳ್ಳಿ ಮತ್ತು ಇಂತಹ ಸಮಸ್ಯೆ ಯಾರನ್ನಾದರೂ ಕಾಡಿದರೆ ಅವರಿಗೆ ಇದರ ಬಗ್ಗೆ ತಿಳಿಸಿ.....

ಕೆಮ್ಮುವಾಗ ಉಸಿರು ಕಟ್ಟುವುದು
ನಿಮಗೆ ಕೆಮ್ಮುವಾಗ ಉಸಿರು ಕಟ್ಟಿದಂತೆ ಆಗುತ್ತಾ ಇದ್ದರೆ ಆಗ ನೀವು ದೀರ್ಘಕಾಲದ ಪ್ರತಿಬಂಧಕ ಶ್ವಾಸಕೋಶ ರೋಗ(ಸಿಒಪಿಡಿ)ದಿಂದ ಬಳಲುತ್ತಿದ್ದೀರಿ ಎಂದು ತಿಳಿದುಕೊಳ್ಳಬೇಕು. ಇದು ಸಾಮಾನ್ಯ ಕೆಮ್ಮಿಗಿಂತ ತುಂಬಾ ಅಪಾಯಕಾರಿ. ಇದರಿಂದ ಬಳಲುತ್ತಿರುವಾಗ ಉರಿಯೂತ ಹಾಗೂ ಶ್ವಾಸಕೋಶದ ನಾಳಗಳಲ್ಲಿ ಕಫ ತುಂಬಿರುತ್ತದೆ. ಧೂಮಪಾನ, ವಾಯುಮಾಲಿನ್ಯ ಮತ್ತು ವಿಷಕಾರಿ ರಾಸಾಯನಿಕಗಳು ಇದಕ್ಕೆ ಪ್ರಮುಖ ಕಾರಣವಾಗಿದೆ. ಈ ಕಾಯಿಲೆಯಿಂದ ಬಳಲುತ್ತಾ ಇರುವವರ ಪಾದ ಹಾಗೂ ಕಾಲುಗಳು ಊದಿಕೊಳ್ಳುವುದು.

ಬೇಗ ಆಯಾಸವಾಗುವುದು
ನೀವು ತುಂಬಾ ಚಟುವಟಿಕೆಯಿಂದ ಇದ್ದರೂ ದೇಹವು ಅತೀ ಬೇಗನೆ ಆಯಾಸಗೊಳ್ಳುವುದಕ್ಕೆ ಹಲವಾರು ರೀತಿಯ ಪೋಷಕಾಂಶಗಳ ಕೊರತೆ ಕಾರಣವಾಗಿದೆ. ದೇಹಕ್ಕೆ ಸಂಪೂರ್ಣವಾಗಿ ರಕ್ತ ಸಂಚಾರವನ್ನು ಮಾಡಲು ಕಬ್ಬಿನಾಂಶವು ಅತೀ ಅಗತ್ಯವಾಗಿರುತ್ತದೆ. ಕಬ್ಬಿನಾಂಶದ ಕೊರತೆಯಿದ್ದರೆ ಉಸಿರು ಕಟ್ಟುವುದು ಮತ್ತು ಎದೆಯಲ್ಲಿ ನೋವು ಕಾಣಿಸುವುದು. ಇಂತಹ ಸಮಸ್ಯೆ ನಿಮ್ಮಲ್ಲಿ ಇದ್ದರೆ ಕಬ್ಬಿನಾಂಶವಿರುವ ಆಹಾರವನ್ನು ಸೇವಿಸಿ.

ಅತಿಯಾಗಿ ಉಸಿರಾಡುವುದು
ನಿಮಗೆ ತುಂಬಾ ಆತಂಕ ಕಾಡುತ್ತಾ ಇದ್ದರೆ ಆಗ ನೀವು ಸಾಮಾನ್ಯಕ್ಕಿಂತ ಹೆಚ್ಚಿಗೆ ಉಸಿರಾಡುತ್ತೀರಿ. ಸಮಸ್ಯೆ ಹೀಗೆ ಮುಂದುವರಿದರೆ ಆಗ ಇದನ್ನು ಹೈಪರ್ವೆಂಟಿಲೇಶನ್ ಎಂದು ಕರೆಯಲಾಗುತ್ತದೆ. ಒತ್ತಡವನ್ನು ಸರಿಯಾಗಿ ನಿಭಾಯಿಸುವುದು ತುಂಬಾ ಮುಖ್ಯ. ಇದಕ್ಕೆ ನೀವು ವೈದ್ಯರ ನೆರವು ಪಡೆಯಬಹುದು.

ಹಠಾತ್ ಉಸಿರುಕಟ್ಟುವಿಕೆ
ನಿಮ್ಮ ಚಟುವಟಿಕೆಗಳು ಸರಿಯಾಗಿ ಸಾಗುತ್ತಾ ಇರುವಾಗ ಹಠಾತ್ ಆಗಿ ಉಸಿರುಕಟ್ಟಿದಂತೆ ಆದರೆ ಉಸಿರಾಟದ ನಾಳ ಅಥವಾ ಹೃದಯದಲ್ಲಿ ಏನಾದರೊಂದು ಸಮಸ್ಯೆಯಿರಬಹುದು. ಉಸಿರಾಟದಲ್ಲಿ ತೊಂದರೆಯಾಗುವುದು ಹೃದಯದ ಬಡಿತ ಮತ್ತು ಅದು ಎಷ್ಟು ರಕ್ತವನ್ನು ಹೊರಹಾಕುತ್ತದೆ ಎನ್ನುವುದನ್ನು ತೋರಿಸುತ್ತದೆ. ಈ ಸಮಸ್ಯೆಯಿದ್ದರೆ ತಕ್ಷಣ ವೈದ್ಯರನ್ನು ಭೇಟಿಯಾಗಿದೆ.

ಉಸಿರಾಟದ ವೇಳೆ ಶಬ್ದ ಬರುವುದು
ಉಸಿರಾಟದ ವೇಳೆ ಶಬ್ದ ಬರುತ್ತಾ ಇದ್ದರೆ ಉಸಿರಾಟದ ನಾಳಗಳು ಕುಗ್ಗಿವೆ ಎಂದು ತಿಳಿಯಬೇಕು. ಅಸ್ತಮಾ ಅಥವಾ ಯಾವುದೇ ರೀತಿಯ ಅಲರ್ಜಿಯು ಇದಕ್ಕೆ ಕಾರಣವಾಗಿರಬಹುದು. ಇದರ ಬಗ್ಗೆ ತಕ್ಷಣ ವೈದ್ಯರಿಂದ ಚಿಕಿತ್ಸೆ ಪಡೆಯುವುದು ಒಳ್ಳೆಯದು.



Click it and Unblock the Notifications