Latest Updates
-
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ -
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ! -
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು?
ಎಲೆಮರೆ ಕಾಯಿ 'ಶೇಂಗಾ ಎಣ್ಣೆ' ಆರೋಗ್ಯದ ಕೀಲಿಕೈ...
ಒಳ್ಳೆಣ್ಣೆ ಎಂದೇ ಹೆಚ್ಚು ಜನಪ್ರಿಯವಾಗಿರುವ ಶೇಂಗಾ ಎಣ್ಣೆ ಕೊಂಚ ರುಚಿಯಾದ ಮತ್ತು ಅಡುಗೆಗೆ ಸೂಕ್ತವಾದ ಎಣ್ಣೆಯಾಗಿದೆ. ನಸು ಹಳದಿ ಬಣ್ಣದ ಮತ್ತು ರುಚಿಯಲ್ಲಿ ತಟಸ್ಥ ರುಚಿ ಹೊಂದಿದೆ. ಈ ಎಣ್ಣೆಯನ್ನು ಶೇಂಗಾ ಬೀಜಗಳನ್ನು ಹಿಂಡುವ ಮೂಲಕ ಲಭ್ಯವಾಗುತ್ತದೆ. ಹಿಂದೆ ಎಣ್ಣೆಯನ್ನು ಗಾಣದಲ್ಲಿ ಹಿಂಡಿ ತೆಗೆಯಲಾಗುತ್ತಿತ್ತು. ಇಂದು ಆಧುನಿಕ ವಿಧಾನಗಳಿಂದ ತೆಗೆಯಲಾಗುತ್ತದೆ. ಈ ಎಣ್ಣೆಯನ್ನು ಹಾಗೇ ಸೇವಿಸಲು ಸಾಧ್ಯ. ಹುರಿಯಲು, ಕರಿಯಲು, ಒಗ್ಗರಣೆ, ಅನ್ನದೊಡನೆ ಕಲಸಿ ತಿನ್ನಲು ಯೋಗ್ಯವಾಗಿದೆ.
ಇದರಲ್ಲಿ ಅಸಂತುಲಿತ ಕೊಬ್ಬು, ವಿಟಮಿನ್ ಎ, ಡಿ. ಇ ಉತ್ತಮ ಪ್ರಮಾಣದಲ್ಲಿದ್ದು ವಿಶ್ವದಾದ್ಯಂತ ಶೇಂಗಾಎಣ್ಣೆಯನ್ನು ಅಡುಗೆಗೆ ಬಳಸುತ್ತಾ ಬರಲಾಗಿದೆ. ಅಲ್ಲದೇ ಇದರಲ್ಲಿ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟುಗಳು, ಒಮೆಗಾ 3 ಕೊಬ್ಬಿನ ತೈಲಗಳು, ಫೈಟೋ ಸ್ಟೆರಾಲ್ ಮತ್ತು ಇತರ ಪೋಷಕಾಂಶಗಳಿದ್ದು ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತವೆ. ಅಲ್ಲದೇ ಹೃದಯದ ತೊಂದರೆಗಳು, ಕ್ಯಾನ್ಸರ್ ಮತ್ತು ಬೇಗನೇ ವೃದ್ಧಾಪ್ಯ ಆವರಿಸುವ ಮೊದಲಾದ ತೊಂದರೆಗಳಿಂದ ರಕ್ಷಿಸುತ್ತದೆ.
ಅಲ್ಲದೆ ಇದರಲ್ಲಿ resveratrol ಎಂಬ ಪೋಷಕಾಂಶವೂ ಇದ್ದು ಇದೊಂದು ಉತ್ತಮ ಶಿಲೀಂಧ್ರ ನಿವಾರಕವಾಗಿರುವ ಕಾರಣ ದೇಹದವನ್ನು ವಿವಿಧ ಸೋಂಕುಗಳಿಂದ ರಕ್ಷಿಸುತ್ತದೆ. ಇದರ ವಿಶೇಷತೆ ಎಂದರೆ ಅತಿ ಹೆಚ್ಚು ಬಿಸಿಯಾದ ಬಳಿಕವೇ ಇದರಿಂದ ಹೊಗೆ ಬರಲು ತೊಡಗುತ್ತದೆ. ಪರಿಣಾಮವಾಗಿ ಹೆಚ್ಚು ಹುರಿಯಬೇಕಾದ ಅಡುಗೆಗಳು ಹೊಗೆ ಹಿಡಿಯದೇ ರುಚಿಕರವಾಗಿರುತ್ತವೆ. ಬನ್ನಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ...

ಹೃದಯಕ್ಕೆ ಉತ್ತಮ
ಈ ಎಣ್ಣೆಯಲ್ಲಿರುವ ಉತ್ತಮ ಕೊಬ್ಬುಗಳು ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸಲು ಮತ್ತು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ನೆರವಾಗುತ್ತದೆ. ಇದರಿಂದ ಹೃದಯದ ಸ್ತಂಭನ ಮತ್ತು ಆಘಾತಗಳಿಂದ ರಕ್ಷಣೆ ದೊರಕುತ್ತದೆ.

ರಕ್ತಸಂಚಾರ ಉತ್ತಮಗೊಳಿಸುತ್ತದೆ
ಈ ಎಣ್ಣೆಯಲ್ಲಿರುವ ಪೋಷಕಾಂಶಗಳು ರಕ್ತನಾಳಗಳನ್ನು ಸಡಿಲಗೊಳಿಸಲು ನೆರವಾಗುತ್ತವೆ. ರಕ್ತನಾಳದ ಗೋಡೆಗಳು ಸೆಳೆತದಿಂದ ಸಡಿಲಗೊಳ್ಳುವ ಮೂಲಕ ರಕ್ತಸಂಚಾರ ಸುಲಭವಾಗುತ್ತದೆ. ಉತ್ತಮ ರಕ್ತಸಂಚಾರದ ಮೂಲಕ ಮನದ ಉದ್ವೇಗ, ಖಿನ್ನತೆ ಮೊದಲಾದ ಮಾನಸಿಕ ತೊಂದರೆಗಳು ಸಹಾ ಕಡಿಮೆಯಾಗುತ್ತದೆ.

ಕ್ಯಾನ್ಸರ್ ಬರದಂತೆ ತಡೆಗಟ್ಟುತ್ತದೆ
ಇದರಲ್ಲಿರುವ ಆಂಟ್ ಆಕ್ಸಿಡೆಂಟುಗಳು ಕ್ಯಾನ್ಸರ್ ಬರದಂತೆ ತಡೆಯುತ್ತವೆ. ಆಂಟಿ ಆಕ್ಸಿಡೆಂಟುಗಳು ಹೆಚ್ಚಾಗಿರುವ ಹಣ್ಣುಗಳು, ತರಕಾರಿಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವ ಮೂಲಕ ಕ್ಯಾನ್ಸರ್ ತಡೆಗಟ್ಟುವ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಬಹುದು.

ತೀವ್ರ ಗತಿಯ ಉರಿಯೂತವನ್ನು ಕಡಿಮೆಗೊಳಿಸುತ್ತದೆ
ಉರಿಯೂತವೇ ದೇಹವನ್ನು ಒಳಗಿನಿಂದ ಬಹಳಷ್ಟು ಬಾಧಿಸುತ್ತದೆ. ಅದರಲ್ಲೂ ತೀವ್ರ ಗತಿಯ ಉರಿಯೂತ ದೇಹದ ಒಳಗಣ ಅಂಗಾಂಶ ಮತ್ತು ಪ್ರಮುಖ ಅಂಗಗಳನ್ನು ಘಾಸಿಗೊಳಿಸಬಹುದು. ಇದರ ಪರಿಣಾಮದಿಂದ ಹೃದಯದ ತೊಂದರೆ, ಮಧುಮೇಹ ಮತ್ತು ಸ್ಥೂಲಕಾಯಗಳಂತಹ ತೊಂದರೆಗಳು ಎದುರಾಗಬಹುದು. ಆಹಾರದಲ್ಲಿ ನಿಯಮಿತವಾಗಿ ಶೇಂಗಾ ಎಣ್ಣೆಯನ್ನು ಸೇರಿಸಿಕೊಳ್ಳುವ ಮೂಲಕ ಈ ತೊಂದರೆ ಬರದಂತೆ ತಡೆಗಟ್ಟಬಹುದು.

ದೇಹಕ್ಕೆ ಶಕ್ತಿ ನೀಡುತ್ತದೆ
ಈ ಎಣ್ಣೆಯಲ್ಲಿರುವ ಕೊಬ್ಬುಗಳು ದೇಹದ ಹಲವು ವಿಧದ ಚಟುವಟಿಕೆಗಳಿಗೆ ಅಗತ್ಯವಾದ ಶಕ್ತಿಯನ್ನು ನೀಡುತ್ತವೆ. ಅಲ್ಲದೇ ಇದು ಜೀರ್ಣಗೊಳ್ಳಲು ಸಂಗ್ರಹಗೊಂಡಿದ್ದ ಕೊಬ್ಬು ಬಳಕೆಯಾಗುವ ಕಾರಣ ತೂಕ ಇಳಿಸಲೂ ನೆರವಾಗುತ್ತದೆ.



Click it and Unblock the Notifications









