For Quick Alerts
ALLOW NOTIFICATIONS  
For Daily Alerts

  ಆರೋಗ್ಯ ವೃದ್ಧಿಸುವ ಜಾಯಿಕಾಯಿ, ಮನೆಯಲ್ಲಿದ್ದರೆ ಚೆನ್ನ..

  By Su.Ra
  |

  ಜಾಯಿಕಾಯಿಯನ್ನು ಶತಮಾನಗಳಿಂದ ನಮ್ಮ ಅಡುಗೆ ಮನೆಗಳಲ್ಲಿ ಮಸಾಲೆ ಪದಾರ್ಥಗಳಲ್ಲಿ ಬಳಕೆ ಮಾಡುವ ಪದ್ದತಿ ರೂಢಿಯಲ್ಲಿದೆ. ಅದ್ರ ವಿಶೇಷವಾದ ಪರಿಮಳ ಮತ್ತು ಗುಣಗಳಿಂದಾಗಿ ಯಾವಾಗ್ಲೂ ಕೂಡ ಆಯುರ್ವೇದದಲ್ಲಿ ಮಹತ್ವವನ್ನು ನೀಡಲಾಗಿದೆ. ಇದು ಪ್ರಪಂಚದ ಎಲ್ಲಾ ಭಾಗಗಳಲ್ಲೂ ಬಳಸುವ ಮಸಾಲೆ ಪದಾರ್ಥ ಎನಿಸಿಕೊಂಡಿದೆ..

  ಜಾಯಿಕಾಯಿಯಿಂದ ನಮ್ಮ ದೇಹಕ್ಕೆ ಹಲವು ನ್ಯೂಟ್ರಿಯಂಟ್ಸ್‌ಗಳು ದೊರಕುವುದರಿಂದಾಗಿ ಅದರ ಬಳಕೆ ಅಡುಗೆ ಮನೆಯಲ್ಲಿ ಯಾವಾಗ್ಲೂ ಚಾಲ್ತಿಯಲ್ಲಿರೋದು ಒಳಿತು. ಜಾಯಿಕಾಯಿಯ ಉಪಯೋಗಗಳೇನು ಅನ್ನೋದ್ರ ಡೀಟೈಲ್ಸ್ ಇಲ್ಲಿದೆ..ಮುಂದೆ ಓದಿ.

  ಜಾಯಿಕಾಯಿ ಹಸಿಯಾಗಿರುವಾಗ ಅದರ ಸಿಪ್ಪೆಯಿಂದಲೂ ತಂಬಳಿ, ಚಟ್ನಿಯಂತಹ ಖಾದ್ಯಗಳನ್ನು ತಯಾರಿಸಿಕೊಳ್ಳಬಹುದು. ಜಾಯಿಕಾಯಿ ಮಾತ್ರವಲ್ಲ, ಜಾಯಿಪತ್ರೆ ಮತ್ತು ಜಾಯಿಕಾಯಿಯ ಹೊರ ಭಾಗದ ಸಿಪ್ಪೆ ಕೂಡ ಈ ಎಲ್ಲಾ ಕೆಳಗಿನ ಗುಣಗಳನ್ನು ಹೊಂದಿರುತ್ತೆ. ಹಾಗಾಗಿ ಈ ಕಾಯಿಯ ತೃಣವೂ ಅಪ್ರಯೋಜಕವಲ್ಲ.ಬದಲಾಗಿ ಎಲ್ಲವೂ ಕೂಡ ಔಷಧೀಯ ಗುಣಗಳನ್ನು ಹೊಂದಿದೆ..

  ರೋಗ ತಡೆಗಟ್ಟುವ ಸಂಯುಕ್ತಗಳು

  ರೋಗ ತಡೆಗಟ್ಟುವ ಸಂಯುಕ್ತಗಳು

  ಜಾಯಿಕಾಯಿಯನ್ನು ಅಡುಗೆಯಲ್ಲಿ ಬಳಸೋದ್ರಿಂದ ರೋಗ ತಡೆಗಟ್ಟುವ ಸಂಯುಕ್ತಗಳು ಅದ್ರಲ್ಲಿ ಹೆಚ್ಚಾಗಿರೋದ್ರಿಂದ ರೋಗ ನಿರೋಧಕ ಶಕ್ತಿ ಅಧಿಕವಾಗಿರುತ್ತೆ.

  ಆಂಟಿ ಆಕ್ಸಿಡೆಂಟ್‌ (Oxidant) ಗುಣಗಳು

  ಆಂಟಿ ಆಕ್ಸಿಡೆಂಟ್‌ (Oxidant) ಗುಣಗಳು

  ದೇಹ ಆರೋಗ್ಯಯುತವಾಗಿ, ದೇಹದ ಚಟುವಟಿಕೆಗಳು ಸರಾಗವಾಗಿ ಕಾರ್ಯನಿರ್ವಹಿಸಲು ಌಂಟಿ ಆಕ್ಸಿಡೆಂಟ್‌ಗಳು ಬಹಳ ಮುಖ್ಯ.. ಜಾಯಿಕಾಯಿಯಿಂದ ಆ ಸಂಯುಕ್ತಗಳು ಲಭ್ಯವಾಗೋದ್ರಿಂದ ದೇಹದಲ್ಲಿ ಆಗುವ ಅನಗತ್ಯ ಪ್ರಕ್ರಿಯೆಗಳನ್ನು ತಡೆಗಟ್ಟಿ ದೇಹ ಚಟುವಟಿಕೆಯಿಂದ ಕೂಡಿರಲು ಇದು ಸಾಧ್ಯವಾಗುತ್ತೆ.

   ಕಾಮೋತ್ತೇಜಕ ಗುಣಗಳು

  ಕಾಮೋತ್ತೇಜಕ ಗುಣಗಳು

  ಹಾರ್ಮೋನುಗಳನ್ನು ಉತ್ತೇಜಿಸುವ ಗುಣಗಳನ್ನು ಜಾಯಿಕಾಯಿ ಹೊಂದಿರೋದ್ರಿಂದ ಇದು ಕಾಮೋತ್ತೇಜಕವಾಗಿ ವರ್ತಿಸುತ್ತೆ. ಇದೇ ಕಾರಣಕ್ಕೆ ಹಲವು ಶತಮಾನಗಳಿಂದಲೂ ಇವುಗಳ ಬಳಕೆ ಚಾಲ್ತಿಯಾಲ್ಲಿದೆ..

  ಹಲ್ಲುನೋವು ನಿವಾರಕವಾಗಿ ಜಾಯಿಕಾಯಿ

  ಹಲ್ಲುನೋವು ನಿವಾರಕವಾಗಿ ಜಾಯಿಕಾಯಿ

  ಜಾಯಿಕಾಯಿ ಎಣ್ಣೆ ಯುಜೆನೋಲ್‌ಗಳನ್ನು ಒಳಗೊಂಡಿರೋದ್ರಿಂದ ಹಲ್ಲುಗಳ ಟ್ರೀಟ್‌ಮೆಂಟ್‌ ಮತ್ತು ಹಲ್ಲಿನ ಔಷಧಿಗಳ ಬಳಕೆಯಲ್ಲಿ ಉಪಯೋಗಿಸಲಾಗಿದೆ. ಹಾಗಾಗಿ ಹಲ್ಲು ನೋವು ನಿವಾರಕವಾಗಿಯೂ ಇದು ಕೆಲ್ಸ ಮಾಡುತ್ತೆ.

  ವಾಕರಿಕೆ ಸಮಸ್ಯೆ ನಿವಾರಿಸುತ್ತೆ

  ವಾಕರಿಕೆ ಸಮಸ್ಯೆ ನಿವಾರಿಸುತ್ತೆ

  ಜಾಯಿಕಾಯಿಯನ್ನು ಜೇನುತುಪ್ಪದೊಂದಿಗೆ ಸೇವಿಸೋದ್ರಿಂದ ವಾಕರಿಕೆ ಸಮಸ್ಯೆ ನಿವಾರಣೆಯಾಗುತ್ತೆ..

   ಗ್ಯಾಸ್ಟ್ರಿಕ್‌ ಮತ್ತು ಅಜೀರ್ಣತೆ ಸಮಸ್ಯೆಗೆ ಪರಿಹಾರ

  ಗ್ಯಾಸ್ಟ್ರಿಕ್‌ ಮತ್ತು ಅಜೀರ್ಣತೆ ಸಮಸ್ಯೆಗೆ ಪರಿಹಾರ

  ಜಾಯಿಕಾಯಿ ಮತ್ತು ಅದ್ರ ಜೊತೆಗೆ ಇತರೆ ಕೆಲವು ಪದಾರ್ಥಗಳ ಮಿಶ್ರಣದಿಂದ ಗ್ಯಾಸ್ಟ್ರಿಕ್ ಮತ್ತು ಜೀರ್ಣಕ್ರಿಯೆಯ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.ದೇಹದಲ್ಲಿ ಮೆಟಬಾಲಿಕ್ ರಿಯಾಕ್ಷನ್ ಅಧಿಕಗೊಳಿಸಿ ದೇಹ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುತ್ತೆ.

  ನರಮಂಡಲದ ಆರೋಗ್ಯ

  ನರಮಂಡಲದ ಆರೋಗ್ಯ

  ಜಾಯಿಕಾಯಿ ಎಣ್ಣೆಯನ್ನು ಜೀರ್ಣಕ್ರಿಯೆ ಸಮಸ್ಯೆಗೆ ಹೆಚ್ಚಾಗಿ ಬಳಸಲಾಗುತ್ತೆ. ಆದ್ರೆ ಇದು ನರವ್ಯೂಹ ಸರಿಯಾಗಿ ಕಾರ್ಯ ನಿರ್ವಗಿಸುವಂತೆಯೂ ನೋಡಿಕೊಳ್ಳುತ್ತೆ. ಹಾಗಾಗಿ ದೇಹದ ಡಯಟ್‌ ಸಿಸ್ಟಮ್‌ ಸರಿಯಾಗಿರುವಂತೆಯೂ ನೋಡಿಕೊಳ್ಳುತ್ತೆ.

  Most Read:ಹಾವಿನ ಶಾಪ ಅಂತಲೇ ಹೇಳಲಾಗುವ ಸರ್ಪ ಸುತ್ತಿನ ಲಕ್ಷಣಗಳು ಹಾಗೂ ಚಿಕಿತ್ಸೆ

  ಕೆಂಪು ರಕ್ತಕಣಗಳು ಅಧಿಕವಾಗುವಂತೆ ನೋಡಿಕೊಳ್ಳುತ್ತೆ

  ಕೆಂಪು ರಕ್ತಕಣಗಳು ಅಧಿಕವಾಗುವಂತೆ ನೋಡಿಕೊಳ್ಳುತ್ತೆ

  ಜಾಯಿಕಾಯಿಯಲ್ಲಿರುವ ಕಬ್ಬಿಣದ ಅಂಶ ದೇಹದಲ್ಲಿ ಕೆಂಪು ರಕ್ತಗಳನ್ನು ಅಧಿಕಗೊಳಿಸಿ, ರಕ್ತಸಂಚಾರ ಸುಗಮಗೊಳ್ಳುವಂತೆ ನೋಡಿಕೊಳ್ಳುತ್ತೆ.

  Most Read:ನೋಡಿ ಈ ಆರು ರಾಶಿಯವರು ತುಂಬಾನೇ 'ಬುದ್ಧಿವಂತರಂತೆ'!

  ರಕ್ತದೊತ್ತಡ ಸಮಸ್ಯೆಗೆ ಪರಿಹಾರ

  ರಕ್ತದೊತ್ತಡ ಸಮಸ್ಯೆಗೆ ಪರಿಹಾರ

  ಹೃದಯದ ಆರೋಗ್ಯ ಕಾಪಾಡುವಲ್ಲಿ ಕೂಡ ಜಾಯಿಕಾಯಿ ಸಹಾಯ ಮಾಡಲಿದೆ.. ಇದ್ರಲ್ಲಿ ಕಾಪರ್ ಅಂಶ ರಕ್ತದೊತ್ತಡ ನಿಯಂತ್ರಣದಲ್ಲಿರುವಂತೆ ನೋಡಿಕೊಳ್ಳುತ್ತೆ.

   ಮೊಡವೆಗಳ ನಿಯಂತ್ರಣಕ್ಕೂ ಸಹಕಾರಿ

  ಮೊಡವೆಗಳ ನಿಯಂತ್ರಣಕ್ಕೂ ಸಹಕಾರಿ

  ಆರೋಗ್ಯಯುತವಾಗ ಸ್ಮೂತ್‌ ಚರ್ಮವನ್ನು ಪಡೀಬೇಕು ಅಂತ ನಿಮ್ಗೆ ಆಸೆ ಇದ್ದಲ್ಲಿ ನೀವು ಜಾಯಿಕಾಯಿಯನ್ನು ಬಳಕೆ ಮಾಡ್ಬಹುದು. ಜಾಯಿಕಾಯಿಯನ್ನು ಪುಡಿಮಾಡಿ ಸ್ಕ್ರಬ್‌ ರೀತಿಯಲ್ಲಿಯೂ ಬಳಕೆ ಮಾಡ್ಬಹುದು.ಲೋಷನ್‌, ಸ್ಕ್ರಬ್, ಕ್ರೀಮ್‌‌ಗಳ ಬಳಕೆಯಲ್ಲಿಯೂ ಕೂಡ ಜಾಯಿಕಾಯಿಯನ್ನು ಉಪಯೋಗಿಸಲಾಗುತ್ತೆ. ಅಷ್ಟೇ ಅಲ್ಲ ಸ್ಕಿನ್ ಇನ್ಫೆಕ್ಷನ್‌ನ್ನೂ ಕೂಡ ತಡೆಯಲು ಇದು ಸಹಕಾರಿ..

  ಕೂದಲಿನ ಆರೋಗ್ಯಕ್ಕಾಗಿ ಜಾಯಿಕಾಯಿ

  ಕೂದಲಿನ ಆರೋಗ್ಯಕ್ಕಾಗಿ ಜಾಯಿಕಾಯಿ

  ಜಾಯಿಕಾಯಿ ಎಣ್ಣೆಯನ್ನು ಕೂದಲಿಗೆ ಅಪ್ಲೈ ಮಾಡೋದ್ರಿಂದ ಕೂದಲುದುರುವಿಕೆ ಸಮಸ್ಯೆ ನಿವಾರಣೆಯಾಗುತ್ತೆ. ಇದು ತಲೆಯಲ್ಲಿ ಬ್ಲಡ್‌ ಸರ್ಕ್ಯೂಲೇಷನ್ ಅಧಿಕಗೊಳಿಸಿ,ಸಿಲ್ಕಿ ಮತ್ತು ಶೈನಿ ಕೂದಲನ್ನು ಪಡೆಯಲು ನೆರವಾಗುತ್ತೆ. ಶತಮಾನಗಳಿಂದಲೂ ಹಿರಿಯರು ಬಳಸುತ್ತಿರುವ ಜಾಯಿಕಾಯಿಯ ಉಪಯೋಗ ತಿಳಿದು ಆದಷ್ಟು ನಿಮ್ಮ ಅಡುಗೆ ಮನೆಯಲ್ಲಿ ಬಳಕೆ ಮಾಡೋದನ್ನು ಮರೀಬೇಡಿ..

   

  English summary

  Amazing Health Benefits of Nutmeg

  Nutmeg is one of two spices that grow on an evergreen tree with the scientific classification Myristica fragrans, also known as common nutmeg. It is native to islands near Indonesia, but is now a globally used spice. These trees bear nutmeg, which is the seed of the tree, as well as mace, a less common spice derived from the dried reddish shell of the seed.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more