Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹದಿಹರೆಯದಲ್ಲಿ ಮದ್ಯ ಸೇವನೆ- ಮುಂದೆ ಚಟವಾಗಿ ಬಿಡಬಹುದು!
ಅಧ್ಯಯನದ ಪ್ರಕಾರ, ಯಾರ ಮನೆಯಲ್ಲಿ ಹದಿಹರೆಯದವರಿಗೆ, ನಿಷಿದ್ಧ ಔಷಧಿ (ಡ್ರಗ್ಸ್) ಮತ್ತು ಮದ್ಯದ ಲಭ್ಯವಿರುತ್ತದೆಯೋ ಅವರು ಇಪ್ಪತ್ತರ ನಂತರ ಅವುಗಳ ಸೇವನೆಯನ್ನು ಚಟವಾಗಿ ಮಾಡಿಕೊಳ್ಳುತ್ತಾರೆ.
ತರುಣಾವಸ್ಥೆಯಲ್ಲಿ ಯಾರು ಇಂತಹ ನಿಷಿದ್ಧ ವಸ್ತುಗಳಿರುವ ಪರಿಸರದಲ್ಲಿ ತಮ್ಮನ್ನು ಒಡ್ಡುಕೊಂಡಿರುತ್ತಾರೋ, ಅಂತಹವರು ವಯಸ್ಕರಾದ ಮೇಲೆ ಇದನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ. ಅಧ್ಯಯನದ ಪ್ರಕಾರ ಇದು ಬಿಳಿಯರಲ್ಲಿ ಅದರಲ್ಲೂ ಹೆಚ್ಚಾಗಿ ಗಂಡಸರಲ್ಲಿ ಕಂಡು ಬಂದಿದೆ ಎಂದು ಅಧ್ಯಯನ ಹೇಳುತ್ತದೆ.

ಯಾವ ಪೋಷಕರು ಇದನ್ನು ಬಳಸುತ್ತಿರುತ್ತಾರೋ ಅಂತಹವರ ಮಕ್ಕಳಲ್ಲಿಯೂ ಕೂಡ ಈ ಅಭ್ಯಾಸ ರೂಢಿಗೊಂಡಿರುತ್ತದೆ ಎಂದು ಹೇಳಲು ಸಾಕಷ್ಟು ಅಧ್ಯಯನಗಳು ನಡೆದಿವೆ. ಮನೆಯಲ್ಲಿ ಮದ್ಯ, ನಿಷಿದ್ಧ ಔಷಧಿಗಳು ಲಭ್ಯವದ್ದರೆ ಅದು ಭವಿಷ್ಯದಲ್ಲಿ ಆ ಮನೆಯ ಮಕ್ಕಳ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂಬ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆಗಳು ಆಗಿಲ್ಲ ಎಂದು ಮಿಚಿಗನ್ ಸ್ಟೇಟ್ ವಿಶ್ವವಿದ್ಯಾಲಯದ ಪ್ರೊಫೆಸರ್ ಆದ ಕ್ಲಿಫ್ ಬ್ರೊಮನ್, ಚೈಲ್ಡ್ ಅಡೋಲೆಸೆಂಟ್ ಸಬ್ಸಟೆನ್ಸ್ ಅಬ್ಯೂಸ್ ಎಂಬ ಪತ್ರಿಕೆಯಲ್ಲಿ ಹೇಳಿದ್ದಾರೆ. ಪುರುಷರೇ ವಯಸ್ಸು ಮೂವತ್ತಾಯಿತೇ?, ಮದ್ಯಪಾನ ಬಿಟ್ಟು ಬಿಡಿ!
ನ್ಯಾಷನಲ್ ಲಾಂಗಿಟ್ಯೂಡಿನಲ್ ಸ್ಟಡಿ ಆಫ್ ಅಡೋಲೆಸೆಂಟ್ ಹೆಲ್ತ್ ನಡೆಸಿದ ಸಮೇಕ್ಷೆಯಲ್ಲಿ, ಸಂಶೋಧನೆಕಾರರು, ಭಾಗವಹಿಸಿದ ಸುಮಾರು 15000 ಜನರ ಮಾಹಿತಿಯನ್ನು ಪರಿಶೀಲಿಸಿದರು. ಇದರಲ್ಲಿ ಭಾಗವಹಿಸಿದವರ ಪೈಕಿ, 16, 22 ಮತ್ತು 29 ವಯಸ್ಸಿನವರು ಆಗಿದ್ದರು.
ಸಾಮಾನ್ಯವಾಗಿ, ಭಾಗವಹಿಸಿದ್ದ ಜನರ ಪೈಕಿ ಯಾರಿಗೆ, ತರುಣಾವಸ್ಥೆಯಲ್ಲಿ ನಿಷಿದ್ಧ ಔಷಧಿ ಹಾಗು ಮದ್ಯ ಸುಲಭವಾಗಿ ಲಭಿಸುತ್ತಿತ್ತೋ, ಅವರು ಅವುಗಳನ್ನು ಸಣ್ಣ ವಯಸ್ಸಿನಲ್ಲೇ ರೂಢಿಸಿಕೊಂಡಿದ್ದರು ಹಾಗು ಅವುಗಳ ಬಳಕೆ 22 ರಿಂದ 29 ವಯಸ್ಸಿನಲ್ಲಿ ಹೆಚ್ಚಾಗಿತ್ತು.
ಅಧ್ಯಯನದ ಪ್ರಕಾರ, ಭಾಗವಹಿಸಿದವರ ಪೈಕಿ, ತರುಣಾವಸ್ಥೆಯಲ್ಲಿ ಯಾರಿಗೆ ಸುಲಭವಾಗಿ ಮದ್ಯ ಮತ್ತು ಡ್ರಗ್‌ಗಳು ದೊರೆಯುತ್ತಿತ್ತೋ, ಅಂತಹವರಲ್ಲಿ ಹೆಂಗಸರಿಗಿಂತ ಗಂಡಸರೇ ವಯಸ್ಕರಾದಾಗ ಅವುಗಳ ಸೇವನೆಯನ್ನು ಚಟವಾಗಿ ಮಾಡಿಕೊಂಡಿದ್ದರು.
ಜನಾಂಗೀಯ ದೃಷ್ಟಿಕೋನದಿಂದ ನೋಡಿದಾಗ, ವಯಸ್ಕರಾದ ಮೇಲೆ ಕರಿಯರು, ಸ್ಪ್ಯಾನಿಷ್ ರು ಮತ್ತು ಏಷ್ಯನ್ನರನ್ನು ಬಿಳಿಯರಿಗೆ ಹೋಲಿಸಿದಾಗ, ಬಿಳಿಯರೇ ಅಧಿಕವಾಗಿ ಮದ್ಯ ಮತ್ತು ಡ್ರಗ್ ಗಳ ಸೇವನೆಯನ್ನು ಮಾಡುತ್ತಿದ್ದರು. ಅಧ್ಯಯನದ ಪ್ರಕಾರ, ಬಿಳಿಯರಂತೆ, ಉಳಿದವರಿಗೂ ಕೂಡ ಮದ್ಯ ಮತ್ತು ಡ್ರಗ್ ಗಳು ತರುಣಾವಸ್ಥೆಯಲ್ಲಿದ್ದಾಗ ಸುಲಭವಾಗಿ ಲಭ್ಯವಿತ್ತು. ಇದನ್ನು ಹೊರತುಪಡಿಸಿಯೂ ಕೂಡ ಬಿಳಿಯರ ಮದ್ಯ ಹಾಗು ಡ್ರಗ್ ಗಳ ಸೇವನೆ ಹೆಚ್ಚಾಗಿತ್ತು. ಮದ್ಯಪಾನ ಬಿಟ್ಟ ಬಳಿಕ, ಆರೋಗ್ಯ ಹೇಗಿರುತ್ತೆ ನೋಡಿ....
ಕಂಡುಕೊಂಡ ಎಲ್ಲಾ ಅಂಶಗಳನ್ನು ಪರಿಶೀಲಿಸಿದಾಗ, ಯಾರ ಮನೆಯಲ್ಲಿ ಮದ್ಯ ಮತ್ತು ನಿಷಿದ್ಧ ಔಷಧಿಗಳು ಸುಲಭವಾಗಿ ಲಭ್ಯವಿರುತ್ತದೆಯೋ ಅಂತಹವರ ಮನೆಯಲ್ಲಿನ ಮಕ್ಕಳು ತರುಣಾವಸ್ಥೆಲ್ಲಿ ಹಾಗು ವಯಸ್ಕರಾದ ಮೇಲೂ ಇವುಗಳನ್ನು ಹೆಚ್ಚು ಸೇವಿಸುತ್ತರೆಂದು ತಿಳಿದು ಬಂದಿದೆ ಎಂದು ಬ್ರೊಮನ್ ಹೇಳಿದರು.
ಐಎಎನ್ಎಸ್ ವರದಿ
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


