Latest Updates
-
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು! -
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ನಿಮ್ಮ ಚಟುವಟಿಕೆಗಳಿಗೆ ವಯಸ್ಸು ತಡೆಯಾಗದಿರಲಿ...
ಒಬ್ಬಳು ಹೆಣ್ಣಾಗಿ ನನ್ನ ವೃತ್ತಿ ಮತ್ತು ಖಾಸಗಿ ಜೀವನವನ್ನು ನಾನು ಸಮತೋಲನ ಮಾಡಿಕೊಂಡು ಹೋಗುತ್ತಿದ್ದೇನೆ, ಈ ವಿಷಯದಲ್ಲಿ ನನಗೆ ಹೆಮ್ಮೆ ಅಂತೆಯೇ ಇದನ್ನು ಹೇಳಿಕೊಳ್ಳಲೂ ನಾನು ಉತ್ಸುಕಳು. ಕಳೆದ 2 ವರ್ಷದಿಂದ ಸಂಪಾದಕಳಾಗಿ ಆನ್‌ಲೈನ್ ನಿಯತಕಾಲಿಕೆಯಲ್ಲಿ ನಾನು ಕಾರ್ಯನಿರ್ವಹಿಸುತ್ತಿದ್ದೇನೆ. ಅಂತೆಯೇ ಒಬ್ಬ ಗೃಹಿಣಿಯಾಗಿ ಪ್ರೀತಿಪಾತ್ರ ಮಡಿದಿಯಾಗಿ, ವಾತ್ಸಲ್ಯಮಯಿ ತಾಯಿಯಾಗಿ ಕೂಡ ಆನಂದದ ಜೀವನವನ್ನು ಅನುಭವಿಸುತ್ತಿದ್ದೇನೆ. ಎರಡೂ ಜಗತ್ತುಗಳ ಮೇಲೆ ನಾನು ಸಾಧಿಸಿದ್ದೇನೆ ಎಂಬುದಾಗಿ ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ.
ನನ್ನನ್ನು ಆರೋಗ್ಯವಂತಳನ್ನಾಗಿಸುವ ಹಲವಾರು ವಿಧಾನಗಳನ್ನು ನಾನು ಕಂಡುಕೊಂಡಿದ್ದು ಹೆಚ್ಚು ಚಟುವಟಿಕೆಯಿಂದ ನಾನು ಕಾರ್ಯನಿರ್ವಹಿಸುತ್ತಿದ್ದೇನೆ. 30ರ ಗ್ಯಾಂಗ್ ಅನ್ನು ನಾನು ಈಗ ತಾನೇ ಸೇರ್ಪಡೆಗೊಂಡಿದ್ದು ಹೆಚ್ಚಿನ ಚಟುವಟಿಕೆಗಳ ಜೊತೆಗೆ ಕೂಡ ಡ್ಯಾನ್ಸ್ ಮಾಡುವುದನ್ನೂ ನನ್ನ ವ್ಯಾಯಮದ ಭಾಗವನ್ನಾಗಿಸಿಕೊಂಡು ಹೆಚ್ಚು ಕ್ರಿಯಾತ್ಮಕಳಾಗಿ ನಾನು ಕಾರ್ಯನಿರ್ವಹಿಸುತ್ತಿದ್ದೇನೆ.
ಈಗ ನಾನು, ನನ್ನ 10ರ ಹರೆಯದ ಮಗಳೊಂದಿಗೆ ನಾನು ತರಗತಿಗೆ ಸೇರಿಕೊಂಡಿದ್ದೇನೆ ಇದು ನನಗೆ ಹೆಚ್ಚು ಆಸಕ್ತಿಕರ ವಿಷಯವಾಗಿದೆ. ಇನ್ನೂ ಹೆಚ್ಚು ಸಂತೋಷ ತರುವ ವಿಷಯವೆಂದರೆ ನನ್ನೆಲ್ಲಾ ನಿರ್ಧಾರಗಳಿಗೆ ನನ್ನ ಪತಿ ಬೆಂಬಲಿಸುತ್ತಿರುವುದು.ಅದಾಗ್ಯೂ ನನ್ನ ಕುಟುಂಬದ ಬೆನ್ನುಲುಬು ನಾನಾಗಿರುವುದರಿಂದ ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಕಾಳಜಿಯನ್ನು ವಹಿಸಿಕೊಳ್ಳಬೇಕಾಗಿದೆ.

ಕಚೇರಿ, ಉದ್ಯೋಗ ಮತ್ತು ಮನೆಯ ಕೆಲಸಗಳೊಂದಿಗೆ ಆರೋಗ್ಯವಂತಳಾಗಿ ಇರುವುದಕ್ಕೆ ಸ್ಫೂರ್ತಿಯಾಗಿರುವುದು ನನ್ನ ತಾಯಿಯಾಗಿದ್ದಾರೆ. ದೈಹಿಕ ಚಟುವಟಿಕೆಗಳನ್ನು ಮಾಡಲು ನನಗೆ ಪ್ರೇರಣೆಯಾಗಿರುವುದೇ ಆಕೆ. ಕುಟುಂಬ ವೈದ್ಯರೊಂದಿಗೆ ಸಮಾಲೋಚಿಸಿದಾಗ ಮೂಳೆಗಳ ಆರೋಗ್ಯದ ಮಹತ್ವವನ್ನು ಆಕೆ ತಿಳಿಸಿದರು ಅದರಲ್ಲೂ 30 ರ ಹರೆಯದ ನಂತರ ಮೂಳೆಗಳ ಆರೋಗ್ಯದ ಕಡೆಗೆ ನಾವು ಹೆಚ್ಚಿನ ಗಮನ ನೀಡಬೇಕು.
ವಯಸ್ಸಾಗುವಿಕೆ ಸಂದರ್ಭದಲ್ಲಿ ಮೂಳೆಗಳ ಅನಾರೋಗ್ಯ ಸಾಮಾನ್ಯ ವಿಷಯವೆಂದೇ ನಾನು ತಿಳಿದುಕೊಂಡಿದ್ದೆ. ಮೂಳೆಗಳು ನಮ್ಮ ದೇಹದ ಪ್ರಮುಖ ಆಧಾರ ಸ್ತಂಭಗಳಾಗಿದ್ದು ಮೂಳೆಗಳ ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡಬೇಕಾಗಿರುವುದು ಅತ್ಯಗತ್ಯವಾಗಿದೆ. ಆದ್ದರಿಂದ ಮೂಳೆಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿಯೇ ಡ್ಯಾನ್ಸ್/ಫಿಟ್‌ನೆಸ್ ತರಗತಿಗಳಿಗೆ ಹೋಗುವುದನ್ನು ನಾನು ಅಭ್ಯಾಸ ಮಾಡಿಕೊಂಡಿದ್ದೇನೆ. ಜೊತೆಗೆ ಸಮತೋಲಿತ ಆಹಾರವನ್ನು ಸೇವಿಸಿ ಮೂಳೆಗಳ ಆರೋಗ್ಯಕ್ಕೆ ಗಮನ ನೀಡುತ್ತಿದ್ದೇನೆ.
ಇದೀಗ ನನ್ನ ಕುಟುಂಬ ಅದರಲ್ಲೂ ತಾಯಿ ನನ್ನ ನಿರ್ಧಾರದಿಂದ ಹೆಚ್ಚು ಸಂತುಷ್ಟಗೊಂಡಿದ್ದಾರೆ. ವ್ಯಾಯಾಮವು ನನ್ನ ಜೀವನ ಶೈಲಿಯನ್ನೇ ಬದಲಾಯಿಸಿದ್ದು ನನ್ನ ಸಂಪೂರ್ಣ ಆರೋಗ್ಯವನ್ನೇ ಈ ಮೂಲಕ ನಾನು ಬದಲಾಯಿಸಿಕೊಂಡಿದ್ದೇನೆ. ನನ್ನ ಈ ನಿರ್ಧಾರ ನಿಮ್ಮಲ್ಲೂ ಬದಲಾವಣೆಗಳನ್ನು ತಂದಿದೆಯೇ? ಹಾಗಿದ್ದರೆ ನೀವು ಮಾಡಬೇಕೆಂದಿರುವ ಚಟುವಟಿಕೆಗಳನ್ನು ಇಂದೇ ಮಾಡಿ. ನೆನಪಿಡಿ ವಯಸ್ಸು ನಿಮ್ಮ ನಿರ್ಧಾರಗಳಿಗೆ ಸಾಧನೆಗಳಿಗೆ ಹೊರೆಯಾಗುವುದಿಲ್ಲ. ಸಾಧಿಸುವ ಛಲವನ್ನು ಮಾತ್ರವೇ ನಿಮ್ಮಲ್ಲಿ ನೀವು ಬೆಳೆಸಿಕೊಳ್ಳಿ. ಹಾಗಾದರೆ ತಡವೇತಕ್ಕೆ, ಬನ್ನಿ Facebook ಹಾಗೂ Twitter ನಲ್ಲಿ #STRONGTOTHEBONE ನೊಂದಿಗೆ ಕೈ ಜೋಡಿಸಿ...
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications