Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ಏಳು ಹಣ್ಣುಗಳ ಜ್ಯೂಸ್ ಆರೋಗ್ಯಕ್ಕೆ ಬಹಳ ಒಳ್ಳೆಯದು
ಆರೋಗ್ಯಕ್ಕಾಗಿ ಹಣ್ಣುಗಳ ರಸ ಕುಡಿಯುವುದು ಎಷ್ಟು ಉತ್ತಮ ಎಂದು ಎಲ್ಲರೂ ಅರಿತಿದ್ದಾರೆ. ಅಂತೆಯೇ ಲಾಭಕೋರರೂ ಈ ಮನಃಸ್ಥಿತಿಯನ್ನು ಅರಿತು ಮಾರುಕಟ್ಟೆಯಲ್ಲಿ ಹಣ್ಣಿನ ಸ್ವಾದವಿರುವ ಕೃತಕ ರಸಗಳ ಪಾನೀಯಗಳನ್ನು ಭಾರೀ ಪ್ರಮಾಣದಲ್ಲಿ ಬಿಡುಗಡೆ ಮಾಡಿದ್ದಾರೆ. ಅಬ್ಬರದ ಪ್ರಚಾರ ಮತ್ತು ಸುಲಭವಾಗಿ ಲಭ್ಯವಾಗುವ ಕಾರಣ ಗ್ರಾಹಕರು ನಿಜವಾದ ಹಣ್ಣಿನ ರಸ ಎಂದೇ ಈ ಪಾನೀಯಗಳನ್ನು ಕುಡಿಯುತ್ತಾರೆ.
ಆದರೆ ವಾಸ್ತವವಾಗಿ ಇವುಗಳಲ್ಲಿ ಹಣ್ಣಿನ ರಸದ ಪ್ರಮಾಣ ಅತ್ಯಲ್ಪವಾಗಿದ್ದು ಉಳಿದಂತೆ ಸಂರಕ್ಷಕ, ಕೃತಕ ಸ್ವಾದ ಮತ್ತು ರುಚಿಗಾಗಿ ಸೇರಿಸಿದ ಸಕ್ಕರೆಯ ಪ್ರಮಾಣವೇ ಹೆಚ್ಚಿರುವುದರಿಂದ ಆರೋಗ್ಯಕ್ಕೆ ಹಾನಿಕಾರಕ ಆದರೆ ಮನೆಯಲ್ಲಿಯೇ ತಯಾರಿಸುವುದಾದರೆ ಯಾವ ಜ್ಯೂಸ್ ಉತ್ತಮ? ಇದಕ್ಕೆ ಬರೆಯ ಬಾಳೆ, ಕಿತ್ತಳೆ ಎಂಬ ಉತ್ತರ ನೀಡಿದರೆ ಆಕಳಿಕೆ ಬರಬಹುದು.
ಬದಲಿಗೆ ಕೊಂಚ ಶುಂಠಿ ಸೇರಿಸಿ ಎರಡು ಮೂರು ಹಣ್ಣುಗಳನ್ನು ಬೆರೆಸಿ ಮಾಡುವ ಪೇಯ ಅತ್ಯಂತ ಆರೋಗ್ಯಕರವೂ, ಭಿನ್ನ ರುಚಿಯಿಂದ ಕೂಡಿದ್ದು ಆಸಕ್ತಿ ಕೆರಳಿಸುವಂತಹದ್ದೂ, ಸೋಮಾರಿತನವನ್ನು ಓಡಿಸುವ ಹುರುಪನ್ನೂ ನೀಡುತ್ತದೆ. ಬನ್ನಿ ಇಂತಹ ಏಳು ಬಗೆಯ ಜ್ಯೂಸ್‌ಗಳ ಬಗ್ಗೆ ಮುಂದೆ ಓದಿ...

ಕ್ಯಾರೆಟ್+ಶುಂಠಿ+ ಸೇಬು
ಇದು ಕೊಂಚ ಖಾರ ಸಿಹಿ ಮಿಶ್ರಣದ ರಸವಾಗಿದ್ದು ಇದರ ಸೇವನೆಯಿಂದ ಹೊಟ್ಟೆ ಮತ್ತು ಜಠರಗಳನ್ನು ಸ್ವಚ್ಛಗೊಳಿಸಲು ಸಾಧ್ಯವಾಗುತ್ತದೆ. ಇದಕ್ಕಾಗಿ ವಾರಕ್ಕೊಂದು ಬಾರಿಯಾದರೂ ಈ ಸಂಯೋಜನೆಯ ರಸವನ್ನು ಕುಡಿದು ಲಾಭವನ್ನು ಪಡೆಯಿರಿ.

ಟೊಮೇಟೊ+ಕ್ಯಾರೆಟ್+ಸೇಬು
ಉಸಿರಾಟದ ದುರ್ವಾಸನೆಯನ್ನು ತಡೆಯಲು ಈ ಸಂಯೋಜನೆ ಅತ್ಯುತ್ತಮವಾಗಿದೆ. ಅಲ್ಲದೇ ನಿಯಮಿತವಾಗಿ ಕುಡಿದಾಗ ಚರ್ಮಕ್ಕೂ ಉತ್ತಮವಾಗಿದ್ದು ಕಾಂತಿ ಹೆಚ್ಚುತ್ತದೆ.

ಸೇಬು + ಸೌತೆ + ಸೆಲೆರಿ ಎಲೆಗಳು
ಒಂದು ವೇಳೆ ಅತೀವ ತಲೆನೋವು ಅಥವಾ ಹೊಟ್ಟೆನೋವು ಬಾಧಿಸುತ್ತಿದ್ದರೆ ಈ ವಿಧಾನ ಹೆಚ್ಚು ಸೂಕ್ತವಾಗಿದೆ. ಅಲ್ಲದೇ ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ನಿವಾರಿಸಲು ಮತ್ತು ಕೆಲವು ಬಗೆಯ ಕ್ಯಾನ್ಸರ್ ಬರುವುದನ್ನು ತಡೆಗಟ್ಟಲೂ ಈ ಪೇಯ ಅತ್ಯುತ್ತಮವಾಗಿದೆ.

ಅನಾನಸು + ಸೇಬು + ಕಲ್ಲಂಗಡಿ
ಈ ಸಂಯೋಜನೆ ಉತ್ತಮವಾದ ಮೂತ್ರವರ್ಧಕ ಗುಣಗಳನ್ನು ಹೊಂದಿದ್ದು ಮೂತ್ರಪಿಂಡಗಳು, ಮೂತ್ರಕೋಶ ಮತ್ತು ಮೂತ್ರನಾಳಗಳನ್ನು ಸ್ವಚ್ಛಗೊಳಿಸಲು ನೆರವಾಗುತ್ತದೆ. ಅಲ್ಲದೇ ಸಂಗ್ರಹಗೊಂಡಿದ್ದ ವಿಷಕಾರಿ ವಸ್ತುಗಳನ್ನು ಸುಲಭವಾಗಿ ವಿಸರ್ಜಿಸಲು ನೆರವಾಗುತ್ತದೆ.

ಹಾಗಲಕಾಯಿ + ಸೇಬು + ಹಾಲು
ಒಂದು ವೇಳೆ ಬಿಸಿಲಿನ ತಾಪದಿಂದ ಮೈ ಬಿಸಿ ಏರಿದ್ದು ಸುಸ್ತು ಆವರಿಸಿದ್ದರೆ ಈ ಸಂಯೋಜನೆ ಅತ್ಯುತ್ತಮವಾದ ಪರಿಹಾರ ನೀಡಬಲ್ಲದು.

ಬಾಳೆ + ಅನಾನಸು + ಹಾಲು
ಮಲಬದ್ಧತೆಯ ತೊಂದರೆಗೆ ಒಳಗಾಗಿದ್ದರೆ ಈ ಸಂಯೋಜನೆ ಅತ್ಯುತ್ತಮ ಆಯ್ಕೆಯಾಗಿದೆ. ಅಲ್ಲದೇ ಇದರಲ್ಲಿರುವ ಪೋಷಕಾಂಶಗಳು ದೇಹಕ್ಕೆ ಚೈತನ್ಯ ನೀಡುವ ಜೊತೆಗೇ ಜೀರ್ಣಶಕ್ತಿಯನ್ನೂ ಉತ್ತಮಗೊಳಿಸುತ್ತದೆ.

ಕ್ಯಾರೆಟ್ + ಸೇಬು + ಮರಸೇಬು + ಮಾವು
ಒಂದು ವೇಳೆ ಅಧಿಕ ರಕ್ತದೊತ್ತಡ ಬಾಧಿಸುತ್ತಿದ್ದರೆ ಮತ್ತು ಬಿಸಿಲಿನ ಝಳದಿಂದ ಸುಸ್ತು ಆವರಿಸಿದ್ದರೆ ಈ ಸಂಯೋಜನೆ ಅತ್ಯುತ್ತಮ ಆಯ್ಕೆಯಾಗಿದೆ. ಅಲ್ಲದೇ ದೇಹದ ವಿಷಕಾರಿ ವಸ್ತುಗಳನ್ನು ವಿಸರ್ಜಿಸಲೂ ನೆರವಾಗುತ್ತದೆ.



Click it and Unblock the Notifications